ಮೆಟ್ರೊ ರೈಲಿನಲ್ಲಿ ಯುವತಿಫೋಟೋ ತೆಗೆದವನ ಸೆರೆ
Team Udayavani, Jul 21, 2018, 10:31 AM IST
ಬೆಂಗಳೂರು: ಮೆಟ್ರೋ ರೈಲಿನಲ್ಲಿ ಯುವತಿಯ ಫೋಟೋ ತೆಗೆದ ಯುವಕನನ್ನು ಪ್ರಯಾಣಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ನಾಗಸಂದ್ರದ ರಾಮಚಂದ್ರ (35) ಎಂಬಾತನನ್ನು ಬಂಧಿಸಲಾಗಿದೆ. ಜು.17ರಂದು ಸಂಜೆ 6 ಗಂಟೆಗೆ ಹೆಸರುಘಟ್ಟದ 24 ವರ್ಷದ ಯುವತಿ ನಾಗಸಂದ್ರದಿಂದ ಮೆಜೆಸ್ಟಿಕ್ ಕಡೆ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ರೈಲಿನಲ್ಲಿದ್ದ ಖಾಸಗಿ ಸಂಸ್ಥೆ ಸೆಕ್ಯೂರಿಟಿ ಗಾರ್ಡ್ ರಾಮಚಂದ್ರ, ತನ್ನ ಮೊಬೈಲ್ನಲ್ಲಿ ಯುವತಿಯ ಫೋಟೋ ಸೆರೆ ಹಿಡಿದಿದ್ದಾನೆ.
ಮೊಬೈಲ್ನ ಫ್ಲ್ಯಾಶ್ ಲೈಟ್ ಬಂದಿದ್ದರಿಂದ ಅನುಮಾನಗೊಂಡ ಯುವತಿ, ಮೊಬೈಲ್ ಕಸಿದುಕೊಂಡು ಪರಿಶೀಲಿಸಿದಾಗ ತನ್ನ ಫೋಟೋ ತೆಗೆದಿರುವುದು ಪತ್ತೆಯಾಗಿದೆ. ಈ ವೇಳೆ ಸಹ ಪ್ರಯಾಣಿಕರು ರಾಮಚಂದ್ರಗೆ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ