ಮೀನುಗಳ ಜತೆ ಗಾಂಜಾತರಿಸಿ ಮಾರುತ್ತಿದ್ದವರ ಸೆರೆ

Team Udayavani, Feb 15, 2018, 12:13 PM IST

ಬೆಂಗಳೂರು: ಒಡಿಶಾದಿಂದ ನಗರಕ್ಕೆ ಥರ್ಮಕೋಲ್‌ ಬಾಕ್ಸ್‌ನಲ್ಲಿ ಒಣ ಮೀನುಗಳ ಜತೆ ಗಾಂಜಾ ತರಿಸಿ ಮಾರಾಟ
ಮಾಡುತ್ತಿದ್ದ ಮೂವರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಗೋವಿಂದರಾಜು (29), ರಾಮನಗರದ ಬಸವರಾಜ್‌ (28), ಚಾಮರಾಜನಗರದ ಮಹೇಂದ್ರ (22) ಬಂಧಿತರು. ಆರೋಪಿಗಳಿಂದ 75 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹತ್ತು ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಆರೋಪಿಗಳು, ಪೇಟಿಂಗ್‌ ಕೆಲಸ ಮಾಡುತ್ತಿದ್ದರು. ಬಳಿಕ ಹೆಚ್ಚಿನ ಹಣ ಸಂಪಾದಿಸಲು ಈ ದಂಧೆಗೆ ಇಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಕೂಡ ಮಾದಕ ವಸ್ತು ವ್ಯಸನಿಗಳಾಗಿದ್ದು, ಈ ಮೊದಲು ನವೀನ್‌ ಎಂಬಾತನ ಮೂಲಕ ಗಾಂಜಾ ಖರೀದಿಸಿ ಸೇವಿಸುತ್ತಿದ್ದರು. ಆಗಾಗ್ಗ ಆರೋಪಿಗಳನ್ನು ಭೇಟಿಯಾಗುತ್ತಿದ್ದ ನವೀನ್‌, ಹೆಚ್ಚಿನ ಹಣ ಗಳಿಸಲು ದಂಧೆಗೆ ಇಳಿಯುವಂತೆ ಪ್ರೇರೆಪಿಸಿ, ತಾನು ದಂಧೆಯಿಂದ ದೂರವಾಗಿದ್ದ. ಆದರೆ, ಇದೇ ವೇಳೆ ಒಡಿಶಾ ಮೂಲದ ಗಾಂಜಾ ಮಾರಾಟಗಾರ ಸಂಪತ್‌ರಾಜ್‌ ಎಂಬಾತನನ್ನು ಆರೋಪಿಗಳಿಗೆ ಪರಿಚಯಸಿಕೊಟ್ಟಿದ್ದ. ಸಂಪತ್‌ರಾಜ್‌, ಬಂಧಿತರಿಗೆ ತನ್ನೊಂದಿಗೆ ಸೇರಿದರೆ ಲಕ್ಷಾಂತರ ರೂ. ಹಣ ನೀಡುವುದಾಗಿ
ಆಮಿಷವೊಡ್ಡಿದ್ದ. ಅಷ್ಟೇ ಅಲ್ಲದೆ, ಒಂದು ಲಕ್ಷ ರೂ. ಮುಂಗಡ ಹಣ ನೀಡಿ ಮೂವರಿಗೂ ಕೋಣನಕುಂಟೆಯಲ್ಲಿ ಬಾಡಿಗೆ ಮನೆ ಕೊಡಿಸಿದ್ದ. ಜತೆಗೆ ಪ್ರತಿ ತಿಂಗಳು ಬಾಡಿಗೆ ಸಹ ಆತನೇ ಪಾವತಿಸುತ್ತಿದ್ದು, ಮಾಸಿಕ ಸಂಬಳ ನಿಗದಿ ಮಾಡಿದ್ದ. ಇವರ ಮೂಲಕ ತನ್ನ ಗ್ರಾಹಕರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂದು ಡಿಸಿಪಿ ಬೋರಲಿಂಗಯ್ಯ ಹೇಳಿದರು. 

ಒಣ ಮೀನಿನಲ್ಲಿ ಗಾಂಜಾ!: ಸಂಪತ್‌ರಾಜ್‌ ಒಡಿಶಾದಿಂದಲೇ ಬಸ್‌ ಹಾಗೂ ಟ್ರಕ್‌ಗಳಲ್ಲಿ ಥರ್ಮಕೋಲ್‌ ಬಾಕ್ಸ್‌ಗಳಲ್ಲಿ ಒಣ ಮೀನು ಇಟ್ಟು ಅದರೊಳಗೆ ಕೆ.ಜಿಗಟ್ಟಲ್ಲೇ ಗಾಂಜಾ ಇಟ್ಟು, ಒಡಿಶಾದಿಂದ ವಿಶಾಖಾಪಟ್ಟಣಂ, ಡೆಂಕಣಿಕೋಟೆ ಮೂಲಕ ನಗರಕ್ಕೆ ಆಗಮಿಸುವ ಬಸ್‌ಗಳ ಮೂಲಕ ಕಳುಹಿಸುತ್ತಿದ್ದ. ಇದನ್ನು ಆರೋಪಿಗಳು ತಮ್ಮ ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟು, ಬಿಸಿನಲ್ಲಿ ಒಣಗಿಸುತ್ತಿದ್ದರು. ಗಾಂಜಾ ವಾಸನೆಯಿಂದ ಅನುಮಾನಗೊಂಡ ಪ್ರಶ್ನಿಸಿದ ಸ್ಥಳೀಯರಿಗೆ ಮೀನಿನ ವಾಸನೆ ಎಂದು ನಂಬಿಸುತ್ತಿದ್ದರು. ಬಳಿಕ ಹೋಟೆಲ್‌
ನಲ್ಲಿ ಚಪಾತಿಗಳನ್ನು ಪ್ಯಾಕ್‌ ಮಾಡುವ ರೀತಿಯಲ್ಲಿ ಗಾಂಜಾವನ್ನು ರೋಲ್‌ ಮಾಡಿ ಪ್ಯಾಕ್‌ ಮಾಡುತ್ತಿದ್ದರು. ಒಂದು ರೋಲ್‌ ಅನ್ನು 200-500 ರೂಪಾಯಿಗೆ ಸಾಫ್ಟ್‌ ವೇರ್‌ ಎಂಜಿಯರ್‌, ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಹಸಿಕಸ ಸಂಗ್ರಹ ಮಾಡುವ ಟೆಂಡರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದು ಮಾಡುವಂತೆ ಮೇಯರ್‌ ಎಂ.ಗೌತಮ್‌ಕುಮಾರ್‌...

  • ಬೆಂಗಳೂರು: ನಗರ ಜಿಲ್ಲಾ ಪಂಚಾಯಿತಿ ವ್ಯಪ್ತಿಯ 96 ಗ್ರಾ.ಪಂ.ಗಳಲ್ಲಿ ಮೂರು ತಿಂಗಳೊಳಗೆ ಆಸ್ತಿಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಳ್ಳಲಿದ್ದು, ಬಳಿಕ ಜಿ.ಪಂ ಬೊಕ್ಕಸಕ್ಕೆ...

  • ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆ ತಂದಿರುವ ಬೆನ್ನಲ್ಲೇ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಮಂಗಳವಾರ ವಿಶೇಷ ಸಭೆ ನಡೆಸಿ ಆತನ...

  • ಬೆಂಗಳೂರು: ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಮತ್ತು ಐಟಿ ದಾಳಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿದ್ದನ್ನು...

  • ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತಿ ಹಾಗೂ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಏ.8ರಂದು ನಡೆಯಲಿದೆ ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ತಿಳಿಸಿದ್ದಾರೆ....

ಹೊಸ ಸೇರ್ಪಡೆ