Udayavni Special

ಸಿಬಿಎಸ್‌ಇ ಫ‌ಲಿತಾಂಶ ವಿಳಂಬ: ವಿದ್ಯಾರ್ಥಿಗಳಲ್ಲಿ ಆತಂಕ

Team Udayavani, May 25, 2018, 6:45 AM IST

cbse.jpg

ಬೆಂಗಳೂರು: ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿ ಫ‌ಲಿತಾಂಶ ವಿಳಂಬದಿಂದ ಕಂಗೆಟ್ಟಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫ‌ಲಿತಾಂಶವನ್ನು ಯಾವಾಗ ಪ್ರಕಟಿಸಬೇಕೆಂಬ ಜಿಜ್ಞಾಸೆಗೆ ಒಳಗಾಗಿದ್ದಾರೆ.

ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟಿಗೆ ಪ್ರಾಧಿಕಾರವು ಏ.18ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿತ್ತು. ಸಿಇಟಿ ಬರೆದ ಎಲ್ಲ ಅಭ್ಯರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನವೂ ಪೂರ್ಣಗೊಂಡಿದೆ. ಆದರೆ, ಸಿಬಿಎಸ್‌ಇ 12ನೇ ತರಗತಿ ಫ‌ಲಿತಾಂಶ ಪ್ರಕಟವಾಗದೇ ಇರುವುದರಿಂದ ಸಿಇಟಿ ಫ‌ಲಿತಾಂಶವೂ ವಿಳಂಬವಾಗುತ್ತಿದೆ.

ಸಿಬಿಎಸ್‌ಇ ಶಾಲೆಗಳಲ್ಲಿ 12ನೇ ತರಗತಿ ಓದಿದ ಸುಮಾರು 5 ಸಾವಿರ ವಿದ್ಯಾರ್ಥಿಗಳು ಈ ಬಾರಿ ಸರ್ಕಾರಿ ಕೋಟಾದ ಎಂಜಿನಿಯರಿಂಗ್‌ ಮೊದಲಾದ ವೃತ್ತಿಪರ ಕೋರ್ಸ್‌ನ ಸೀಟಿಗೆ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಆ ವಿದ್ಯಾರ್ಥಿಗಳ ಫ‌ಲಿತಾಂಶ ಹೊರಬೀಳದೆ ಪ್ರಾಧಿಕಾರಕ್ಕೆ ರ್‍ಯಾಂಕ್‌ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ.

ಸಿಬಿಎಸ್‌ಇ ಫ‌ಲಿತಾಂಶ ಯಾವಾಗ ಪ್ರಕಟವಾಗುತ್ತದೆ ಎಂಬುದರ ಸ್ಪಷ್ಟ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿಲ್ಲ. ಮೇ 30ಕ್ಕೆ ಪ್ರಕಟವಾಗುವ ನಿರೀಕ್ಷೆಯಿದೆ. ಹೀಗಾಗಿ, ಜೂನ್‌ 1 ಅಥವಾ 2ರೊಳಗೆ ಸಿಇಟಿ ಫ‌ಲಿತಾಂಶ ಪ್ರಕಟಿಸಬೇಕೆಂಬ ನಿರ್ಧಾರಕ್ಕೆ ಪ್ರಾಧಿಕಾರದ ಅಧಿಕಾರಿಗಳು ಬಂದಿದ್ದಾರೆ.

ಒಂದು ವೇಳೆ, ಮೇ 30ಕ್ಕೆ ಸಿಬಿಎಸ್‌ಇ ಫ‌ಲಿತಾಂಶ ಪ್ರಕಟವಾಗದಿದ್ದರೆ ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ರ್‍ಯಾಂಕ್‌ ಘೋಷಣೆ ಮಾಡಲಾಗುತ್ತದೆ. ಸಿಇಟಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳು ಮತ್ತು ಸಿಬಿಎಸ್‌ಇ ವಿದ್ಯಾರ್ಥಿಗಳೆಂಬ ಎರಡು ವಿಭಾಗವಾಗಿ ರ್‍ಯಾಂಕ್‌ ಘೋಷಣೆ ಮಾಡಲಾಗುತ್ತದೆ.
ಪಿಯು ಫ‌ಲಿತಾಂಶ ಬಂದು 20ಕ್ಕೂ ಹೆಚ್ಚು ದಿನ ಕಳೆದಿದೆ. ಲಕ್ಷಾಂತರ ವಿದ್ಯಾರ್ಥಿಗಳು ಸಿಇಟಿ ಫ‌ಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಪಿಯು ನಂತರ ಬಿ.ಎ, ಬಿ.ಕಾಂ, ಬಿಬಿಎಂ, ಬಿಸಿಎ ಸೇರಿ ವಿವಿಧ ಪದವಿ ಕೋರ್ಸ್‌ ಸೇರುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಎಂಜಿನಿಯರಿಂಗ್‌ ಸೇರಿ ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾದ ಸೀಟು ಪಡೆದು ಕಾಲೇಜಿಗೆ ಸೇರಿಕೊಳ್ಳಬೇಕಾದ ವಿದ್ಯಾರ್ಥಿಗಳಿಗೆ ಸಿಇಟಿ ಕಡ್ಡಾಯ. ಹೀಗಾಗಿ ಅಂತಹ ವಿದ್ಯಾರ್ಥಿಗಳು ಅನಿವಾರ್ಯವಾಗಿ ಫ‌ಲಿತಾಂಶಕ್ಕೆ ಕಾಯಲೇಬೇಕು.

ನೀಟ್‌ ಫ‌ಲಿತಾಂಶವೂ ಅಗತ್ಯ:
ಸಿಇಟಿ ಬರೆದಿರುವ ಬಹುತೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಬರೆದಿದ್ದಾರೆ. ಕೆಲ ವಿದ್ಯಾರ್ಥಿಗಳು ನೀಟ್‌ ಮಾತ್ರ ಬರೆದಿದ್ದಾರೆ. ಮತ್ತೆ ಕೆಲವರು ಸಿಇಟಿಯನ್ನೂ ಬರೆದಿದ್ದಾರೆ. ಎರಡೂ ಪರೀಕ್ಷೆ ಬರೆದವರ ಅನುಕೂಲಕ್ಕಾಗಿ ನೀಟ್‌ ಫ‌ಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಸಿಟಿಇ ಫ‌ಲಿತಾಂಶ ಪ್ರಕಟಿಸಬೇಕಾಗುತ್ತದೆ.

ಅಭ್ಯರ್ಥಿಗಳಿಗೆ ಸೂಚನೆ:
ಸಿಬಿಎಸ್‌ಇ ಫ‌ಲಿತಾಂಶ ಪ್ರಕಟವಾದ ತಕ್ಷಣವೇ ಫ‌ಲಿತಾಂಶದ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಸಿಇಟಿ ಬರೆದಿರುವ ವಿದ್ಯಾರ್ಥಿಗಳಿಗೆ ಪ್ರಾಧಿಕಾರದಿಂದ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಫ‌ಲಿತಾಂಶದ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದ ನಂತರವೇ ಫ‌ಲಿತಾಂಶ ಪ್ರಕಟಿಸಲು ಸಾಧ್ಯ. ಇಲ್ಲವಾದರೆ, ಸಿಬಿಎಸ್‌ಇ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ವಿದ್ಯಾರ್ಥಿಗಳ ಫ‌ಲಿತಾಂಶ ಮಾತ್ರ ಹೊರಬೀಳಲಿದೆ.

ಸಿಬಿಎಸ್‌ಇ ಫ‌ಲಿತಾಂಶ ಇನ್ನೂ ಹೊರಬೀಳದೆ ಇರುವುದರಿಂದ ತಕ್ಷಣ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಾಸಾಂತ್ಯದವರೆಗೂ ಕಾಯುತ್ತೇವೆ. ಅಷ್ಟರೊಳಗೆ ಸಿಬಿಎಸ್‌ಇ ಫ‌ಲಿತಾಂಶ ಪ್ರಕಟವಾಗದೆ ಇದ್ದರೆ ಜೂನ್‌ 1 ಅಥವಾ 2ಕ್ಕೆ ಸಿಇಟಿ ಫ‌ಲಿತಾಂಶ ಪ್ರಕಟಿಸುತ್ತೇವೆ.
– ಗಂಗಾಧರಯ್ಯ, ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ

– ರಾಜು ಖಾರ್ವಿ ಕೊಡೇರಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

modi

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಯಾವಾಗ ಸಿಗಲಿದೆ ಹೆಚ್ಚಿನ ಮನ್ನಣೆ: ಪ್ರಧಾನಿ ಮೋದಿ ಖಡಕ್ ನುಡಿ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಕರ್ನಾಟಕ ಬಂದ್‌ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ

ಕರ್ನಾಟಕ ಬಂದ್‌ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ

kkr-srh

ಕೆಕೆಆರ್–ಹೈದರಾಬಾದ್ ಕಾದಾಟ: ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಾರ್ನರ್ ಪಡೆ

“ನಾನು ಕೇಳಿದ್ದ “ಮಾಲು” ಬೇರೆ! 5 ಗಂಟೆ ಕಾಲ ದೀಪಿಕಾ ಪಡುಕೋಣೆ ವಿಚಾರಣೆ

“ನಾನು ಕೇಳಿದ್ದ “ಮಾಲು” ಬೇರೆ! 5 ಗಂಟೆ ಕಾಲ ದೀಪಿಕಾ ಪಡುಕೋಣೆ ವಿಚಾರಣೆ

linked

LinkedIn ಪರಿಚಯಿಸುತ್ತಿದೆ ಹಲವು ಹೊಸ ಫೀಚರ್: ಏನಿದರ ವೈಶಿಷ್ಟ್ಯತೆ ?

ಮೈಸೂರು: ನಕಲಿ ಡಾಕ್ಟರೇಟ್ ಪದವಿ ಪ್ರದಾನ! ಡಿಸಿಪಿ ನೇತೃತ್ವದಲ್ಲಿ ದಾಳಿ, ಆಯೋಜಕರು ಪರಾರಿ

ಮೈಸೂರು: ನಕಲಿ ಡಾಕ್ಟರೇಟ್ ಪದವಿ ಪ್ರದಾನ! ಡಿಸಿಪಿ ನೇತೃತ್ವದಲ್ಲಿ ದಾಳಿ, ಆಯೋಜಕರು ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಮೈಸೂರು: ನಕಲಿ ಡಾಕ್ಟರೇಟ್ ಪದವಿ ಪ್ರದಾನ! ಡಿಸಿಪಿ ನೇತೃತ್ವದಲ್ಲಿ ದಾಳಿ, ಆಯೋಜಕರು ಪರಾರಿ

ಮೈಸೂರು: ನಕಲಿ ಡಾಕ್ಟರೇಟ್ ಪದವಿ ಪ್ರದಾನ! ಡಿಸಿಪಿ ನೇತೃತ್ವದಲ್ಲಿ ದಾಳಿ, ಆಯೋಜಕರು ಪರಾರಿ

ವಿಪಕ್ಷಗಳ ವಿರೋಧದ ನಡುವೆ ವಿಧಾನಸಭೆಯಲ್ಲಿ ಭೂಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರ

ವಿಪಕ್ಷಗಳ ವಿರೋಧದ ನಡುವೆ ವಿಧಾನಸಭೆಯಲ್ಲಿ ಭೂಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರ

Mallapura shree mutt

ರಾಯಚೂರು : ಭಾರೀ ಮಳೆಗೆ ಕುಸಿದು ಬಿದ್ದ ಮಲ್ಲಾಪುರದ ಶ್ರೀ ಮಠ

ಚಿಕ್ಕಮಗಳೂರು ; ಕಾಡಾನೆ ದಾಳಿಗೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳೇ ನಾಶ

ಚಿಕ್ಕಮಗಳೂರು ; ಕಾಡಾನೆ ದಾಳಿಗೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳೇ ನಾಶ

MUST WATCH

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕಹೊಸ ಸೇರ್ಪಡೆ

modi

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಯಾವಾಗ ಸಿಗಲಿದೆ ಹೆಚ್ಚಿನ ಮನ್ನಣೆ: ಪ್ರಧಾನಿ ಮೋದಿ ಖಡಕ್ ನುಡಿ

ಸುರಕ್ಷಾ ಸಾಧನ ಧರಿಸಲು ಸಫಾಯಿ ಕರ್ಮಚಾರಿಗಳಿಗೆ ಕರೆ

ಸುರಕ್ಷಾ ಸಾಧನ ಧರಿಸಲು ಸಫಾಯಿ ಕರ್ಮಚಾರಿಗಳಿಗೆ ಕರೆ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಕರ್ನಾಟಕ ಬಂದ್‌ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ

ಕರ್ನಾಟಕ ಬಂದ್‌ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ

ಐಎಎಸ್‌-ಐಪಿಎಸ್‌ ಪರೀಕ್ಷಾರ್ಥಿಗಳಿಗೆ ನೆರವು

ಐಎಎಸ್‌-ಐಪಿಎಸ್‌ ಪರೀಕ್ಷಾರ್ಥಿಗಳಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.