ರಸ್ತೆ ಬದಿ ಶಾಲೆಗಳ ಮಕ್ಕಳು ಅಸುರಕ್ಷಿತ

Team Udayavani, Jan 17, 2020, 10:21 AM IST

ಸಾಂಧರ್ಬಿಕ ಚಿತ್ರ

ಬೆಂಗಳೂರು: ಹಲಸೂರಿನ ಮುಖ್ಯರಸ್ತೆಗಳಲ್ಲಿ ಅಡಿಗಡಿಗೂ ಶಾಲೆಗಳಿವೆ. ಮುಖ್ಯರಸ್ತೆಯಲ್ಲೇ ಇರುವ ನರ್ಸರಿ, ಪ್ರೈಮರಿ, ಪ್ರೌಢ ಶಾಲೆ ಹಾಗೂ ಕಾಲೇಜುಗಳಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ, ಈ ರಸ್ತೆಗಳಲ್ಲಿ ವಾಹನಗಳ ಸಂಚಾರ ವೇಗಕ್ಕೂ ಕಡಿವಾಣ ಹಾಕಿಲ್ಲ.

ಬಹುತೇಕ ಶಾಲೆಗಳು ರಸ್ತೆಗೆ ಅಂಟಿಕೊಂಡಂತಿವೆ. ವಾಹನ ಸಂಚಾರವೂ ಈ ಭಾಗದಲ್ಲಿ ಅಧಿಕವಾಗಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸೂಚನಾಫ‌ಲಕಗಳನ್ನು ಅಳವಡಿಸಲ್ಲಿ. ವಾಹನಗಳ ವೇಗಕ್ಕೆ ಕಡಿವಾಣ ಹಾಕಿಲ್ಲ. ವಿಚಿತ್ರವೆಂದರೆ ಇರುವ ಸೂಚನಾಫ ಲಕಗಳನ್ನೂ ಕಿಡಿಗೇಡಿಗಳು ತಿರುಚಿದ್ದಾರೆ!

ದೊಮ್ಮಲೂರು ಹಾಗೂ ಜೋಗುಪಾಳ್ಯ ವಾರ್ಡ್‌ನಲ್ಲಿ 15ಕ್ಕೂ ಹೆಚ್ಚು ಶಾಲೆ, ಕಾಲೇಜುಗಳಿವೆ. ಶ್ರೀ ಶಿರಡಿ ಸಾಯಿ ವಿದ್ಯಾಮಂದಿತ, ಟಿಎಲ್‌ಸಿ ಪ್ರೈಮರಿ ಶಾಲೆ, ದಿ ಈಸ್ಟ್‌ವುಡ್‌ ಪ್ರೌಢಶಾಲೆ, ಸೇಂಟ್‌ ಮೀರಾಸ್‌ ಶಾಲೆ, ಲೂದ್‌ ಪ್ರಾಥಮಿಕ ಮತ್ತು ಪ್ರೌಢಶಾಲೆ, ದಿ ಫ್ರಾಂಕ್‌ ಅಂಥೋನಿ ಪಬ್ಲಿಕ್‌ ಶಾಲೆ, ನ್ಯಾಷನಲ್‌ ಪಬ್ಲಿಕ್‌ ಶಾಲೆ ಹಾಗೂ ಬಾಲ್ಡ್‌ವಿನ್‌ ಕಿಡ್ಸ್‌ ಸೇರಿ ಹಲವು ಪ್ರಮುಖ ಶಾಲೆಗಳಿವೆ.

ಈ ಎಲ್ಲ ಶಾಲೆಗಳು ಮುಖ್ಯರಸ್ತೆಗೆ ಹೊಂದಿ  ಕೊಂಡಿವೆ. ಕೆಲವು ಶಾಲೆಗಳು ಎರಡು ರಸ್ತೆಗಳ ತಿರುವಿನಲ್ಲೇ ಇದ್ದು, ವಾಹನಗಳ ವೇಗ ನಿಯಂತ್ರಿಸುವ ನಿಟ್ಟಿನಲ್ಲಿ ಹಂಪ್‌ ನಿರ್ಮಾಣ, “ಶಾಲೆಗಳಿವೆ ನಿಧಾನವಾಗಿ ವಾಹನ ಚಾಲನೆ ಮಾಡಿ’ ಅಥವಾ “ಶಾಲಾ ವಲಯ’ ಎಂಬ ಯಾವುದೇ ಸೂಚನಾಫ‌ಲಕ ಅಳವಡಿಸಿಲ್ಲ. ವಿಚಿತ್ರವೆಂದರೆ ಈ ಭಾಗದಲ್ಲಿ ಸಂಚಾರ ಪೊಲೀಸರು ಅಳವಡಿಸಿರುವ ಸೂಚನಾ ಫ‌ಲಕದ ಕಂಬಗಳನ್ನು ಹಿಮ್ಮುಖವಾಗಿ ತಿರುಗಿಸಲಾಗಿದೆ. ಸಂಚಾರ ಪೊಲೀಸರೂ. ಆ ಫ‌ಲಕ ನೆಟ್ಟಗೆ ಮಾಡುವ ಗೋಜಿಗೆ ಹೋಗಿಲ್ಲ.

ಕೇಂದ್ರ ಬಿಂದುವಿನಲ್ಲಿರುವ ರಸ್ತೆಗಳು: ದೊಮ್ಮ ಲೂರು ಹಾಗೂ ಜೋಗುಪಾಳ್ಯ ವಾರ್ಡ್‌ ಭಾಗ  ದಲ್ಲಿನ ಬಹು ತೇಕ ಶಾಲೆ ಗಳನ್ನು ಸಂಪ ರ್ಕಿಸುವ ರಸ್ತೆಗಳಲ್ಲಿ ಮುಂದೆ ಏಕಕಾಲಕ್ಕೆ ಎರಡು ರಸ್ತೆಗಳಿಂದ ವಾಹನ ಗಳು ಹಾದು ಹೋಗುತ್ತವೆ. ಈ ವೇಳೆ ರಸ್ತೆ ಬದಿಯಲ್ಲಿ ಶಾಲಾ ವಾಹನಗಳು, ಪೋಷಕರ ವಾಹನಗಳನ್ನೂ ನಿಲ್ಲಿಸುವುದರಿಂದ ಪೀಕ್‌ ಅವರ್‌ಗಳಲ್ಲಿ ಸಂಚಾರ ದಟ್ಟಣೆಯೂ ಉಂಟಾ ಗುತ್ತಿದೆ. ಅಲ್ಲದೆ, ಶಾಲಾ ವಾಹನಗಳ ಚಾಲಕರಿಗೂ ಚಾಲನೆ ಸವಾಲಾಗಿ ಪರಿಣಮಿಸಿದೆ.

ಶಾಲೆಯ ಮುಂಭಾಗದ ರಸ್ತೆಗೆ ಏಕಕಾಲಕ್ಕೆ ಎರಡು ರಸ್ತೆಗಳಿಂದ ವಾಹನಗಳು ಬರುವುದರಿಂದ ಮಕ್ಕಳನ್ನು ಶಾಲಾ ವಾಹನದ ಒಳಗೆ ಬೇಗ ಕೂರಿಸಬೇಕು. ಇದೇ ವೇಳೆ ಕೆಲವು ಪೋಷಕರು ತಮ್ಮ ಮಕ್ಕಳನ್ನು ಅವರ ವಾಹನದಲ್ಲಿ, ಇನ್ನೂ ಕೆಲವರು ನಡೆಸಿಕೊಂಡು ಹೋಗುತ್ತಾರೆ.

ಎಷ್ಟು ಜಾಗರುಕತೆ ವಹಿಸಿದರೂ ಕಡಿಮೆಯೇ. ಹೀಗಾಗಿ, ಶಾಲೆ ಸುತ್ತಮುತ್ತಲಿನ ರಸ್ತೆಯಲ್ಲಿ ಸೂಚನಾ ಫ‌ಲಕಗಳನ್ನು ಅಳವಡಿಸಿದರೆ ಉತ್ತಮ ಎಂದು ಶಾಲಾ ವಾಹನದ ಚಾಲಕರು ಅಭಿಪ್ರಾಯಪಡುತ್ತಾರೆ.

ದುರಂತರದ ನಂತರವೂ ಪಾಠ ಕಲಿಯಲಿಲ್ಲ: ಶಾಲಾ ವಾಹನದಿಂದ ಕೆಳಗೆ ಇಳಿದು ನಡೆದುಕೊಂಡು ಹೋಗುತ್ತಿದ್ದ ಮಗುವಿನ ಮೇಲೆ ಅದೇ ಶಾಲೆಯ ವಾಹನ ಹರಿದು ಎಲ್‌ಕೆಜಿ ಓದುತ್ತಿದ್ದ 4 ವರ್ಷದ ದೀಕ್ಷಿತ್‌ ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇತ್ತೀಚೆಗೆ ನಗರದ ಕಮ್ಮ ಸಂದ್ರದಲ್ಲಿ ನಡೆದಿತ್ತು. ಮಗು ವಾಹನದ ಹಿಂದೆ ಇರುವುದನ್ನು ಗಮನಿಸದ ಚಾಲಕ ವಾಹನವನ್ನು ರಿವರ್ಸ್‌ ತೆಗೆಯುವಾಗ ವಾಹನದ ಚಕ್ರ ದೀಕ್ಷಿತ್‌ ಮೈಮೇಲೆ ಹರಿದಿತ್ತು!  ಈ ದುರಂತ ಸಂಭವಿಸಿದ ನಂತರವೂ ಜನಪ್ರತಿನಿಧಿಗಳು, ಶಾಲಾ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿಲ್ಲ.

3ವರ್ಷದಲ್ಲಿ 39 ಸಾವು :  ಕಳೆದ ಮೂರು ವರ್ಷಗಳಲ್ಲಿ ಹಲಸೂರು ಠಾಣಾ ವ್ಯಾಪ್ತಿಯಲ್ಲಿ 39 ಜನ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದು, 38 ಜನರಿಗೆ ರಸ್ತೆ ಅಪಘಾತಗಳಲ್ಲಿ ಮಾರಣಾಂತಿಕ ಗಾಯಗಳಾಗಿವೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

 

-ಹಿತೇಶ್‌ ವೈ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ