Udayavni Special

ಬಕ್ರೀದ್‌ ಆಚರಣೆಗೆ ನಗರ ಸಜ್ಜು


Team Udayavani, Aug 12, 2019, 3:00 AM IST

Udayavani Kannada Newspaper

ಬೆಂಗಳೂರು: ತ್ಯಾಗ, ಬಲಿದಾನಗಳ ಸಂಕೇತವಾಗಿರುವ ಬಕ್ರೀದ್‌ ಹಬ್ಬವನ್ನು ಆಚರಿಸಲು ನಗರದ ಮುಸ್ಲಿಂ ಸಮುದಾಯ ಸಜ್ಜಾಗಿದೆ. ಇಸ್ಲಾಮಿ ಚಂದ್ರಮಾನ ಕ್ಯಾಲೆಂಡರ್‌ನ ಕೊನೆಯ ತಿಂಗಳು “ದುಲ್‌ಹಜ್‌’ನ 10ನೇ ತಾರೀಕಿನಂದು ಪ್ರತಿ ವರ್ಷ ವಿಶ್ವಾದ್ಯಂತ ಮುಸ್ಲಿಮರು ಬಕ್ರೀದ್‌ ಆಚರಿಸುತ್ತಾರೆ. ಅದರಂತೆ ಆ.12ರಂದು (ಸೋಮವಾರ) ರಾಜ್ಯ, ರಾಜಧಾನಿಯಲ್ಲಿ ಮುಸ್ಲಿಮರು ಹಬ್ಬ ಆಚರಿಸುತ್ತಿದ್ದಾರೆ.

ಹಬ್ಬದ ಪ್ರಯುಕ್ತ ನಗರದ ಎಲ್ಲ ಈದ್ಗಾ ಮೈದಾನ ಹಾಗೂ ಪ್ರಮುಖ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಖುದ್ದೂಸ್‌ ಸಾಬ್‌ ಈದ್ಗಾ, ಮೈಸೂರು ರಸ್ತೆ, ಟ್ಯಾನರಿ ರಸ್ತೆ, ಜಯನಗರ, ಚಾಮರಾಜಪೇಟೆ ಈದ್ಗಾ ಮೈದಾನ ಸೇರಿದಂತೆ ಬನ್ನೇರುಘಟ್ಟ ರಸ್ತೆಯ ಬಿಲಾಲ್‌ ಮಸೀದಿ, ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿ, ಶಿವಾಜಿನಗರದ ಸುಲ್ತಾನ್‌ಷಾ ಮಸೀದಿ, ಛೋಟಾ ಮೈದಾನ್‌, ಫ್ರೆಜರ್‌ಟೌನ್‌ನ ಫ‌ುಟ್ಬಾಲ್‌ ಗ್ರೌಂಡ್‌ ಸೇರಿದಂತೆ ನಗರದ ಬಹುತೇಕ ಎಲ್ಲ ಮಸೀದಿಗಳು ಹಾಗೂ ಕೆಲ ಪ್ರಮುಖ ಸ್ಥಳಗಳಲ್ಲಿ ಪ್ರಾರ್ಥನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇಸ್ಲಾಮಿನ ಪ್ರವಾದಿ ಹಜ್ರತ್‌ ಇಬ್ರಾಹೀಮರು ತಮ್ಮ ಮಗನನ್ನು ದೇವ ಮಾರ್ಗದಲ್ಲಿ ಬಲಿ ಅರ್ಪಿಸಲು ಮುಂದಾದಾಗ ದೇವಾದೇಶದಂತೆ ಮಗನ ಜಾಗದಲ್ಲಿ ಪ್ರಾಣಿಯೊಂದು ಉದ್ಭವವಾದ ಐತಿಹ್ಯ ಪಾಲಿಸಲು ಮುಸ್ಲಿಮರು ಬಕ್ರೀದ್‌ ದಿನ ಪ್ರಾಣಿ ಬಲಿ ನೀಡುತ್ತಾರೆ. ಇದೇ ದುಲ್‌ಹಜ್‌ ಮಾಸದಲ್ಲಿ 1ರಿಂದ 10ನೇ ತಾರೀಕಿನವರೆಗೆ ವಿಶ್ವದ ಮುಸ್ಲಿಮರು ಮೆಕ್ಕಾ-ಮದೀನಾದಲ್ಲಿ ಹಜ್‌ ಕರ್ಮ ನಿರ್ವಹಿಸುತ್ತಾರೆ.

ಹಬ್ಬದ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಸಮುದಾಯ ರಾಜಕೀಯ ಮುಖಂಡರು, ಧಾರ್ಮಿಕ ವಿದ್ವಾಂಸರು ಹಾಗೂ ವಿವಿಧ ಸಂಘ-ಸಂಸ್ಥೆಗಳು ನಗರ ಪೊಲೀಸ್‌ ಆಯುಕ್ತರಿಗೆ ಈಗಾಗಲೇ ಮನವಿ ಸಲ್ಲಿಸಿದ್ದು, ಆಯುಕ್ತರು ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ. ಇದೇ ವೇಳೆ ಪ್ರಾಣಿ ಬಲಿ ನೀಡುವಾಗ ಪೊಲೀಸ್‌ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಮುದಾಯದ ಜನರಲ್ಲಿ ಮುಖಂಡರು ಮನವಿ ಮಾಡಿದ್ದಾರೆ.

ಬಕ್ರೀದ್‌ ಆಚರಣೆ ವೇಳೆ ಶಾಂತಿ-ಸೌಹಾರ್ದತೆ ಮುಖ್ಯ. ಇದಕ್ಕಾಗಿ ಮುಸ್ಲಿಮರು ಇತರ ಸಮುದಾಯಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ಕಾನೂನು ಕೈಗೆತ್ತಿಕೊಳ್ಳುವ ವ್ಯಕ್ತಿ ಮತ್ತು ಸಂಘಟನೆಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
-ಮಹಮ್ಮದ್‌ ಅಥರುಲ್ಲಾ ಶರೀಫ್, ರಾಜ್ಯ ಮುಸ್ಲಿಂ ಮುತ್ತಹಿದ ಮಹಾಜ್‌ ಜಂಟಿ ಸಂಚಾಲಕ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

india-austraklia

ಭಾರತ-ಆಸೀಸ್ ಸರಣಿ: ದಿನಾಂಕ ನಿಗದಿಪಡಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಇಲ್ಲಿದೆ ವೇಳಾಪಟ್ಟಿ !

ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ ! ಪ್ರವಾಸಿಗರ ಸಂಖ್ಯೆ ವಿರಳ 

ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ ! ಪ್ರವಾಸಿಗರ ಸಂಖ್ಯೆ ವಿರಳ 

srh

ಹಲವು ದಾಖಲೆಗಳಿಗೆ ಸಾಕ್ಷಿಯಾದ ಡೆಲ್ಲಿ-ಹೈದರಾಬಾದ್ ಪಂದ್ಯ: ರಬಾಡ ಅನನ್ಯ ಸಾಧನೆಯೇನು ಗೊತ್ತಾ?

covid19

ಕೋವಿಡ್ 2ನೇ ಅಲೆ, ಜನರ ಕೈಯಲ್ಲೇ ಆರೋಗ್ಯ: ಚಳಿಗಾಲದಲ್ಲಿ ವೈರಸ್‌ಗಳು ಶೇ.50ರಷ್ಟು ವೃದ್ಧಿ

bihar

ಬಿಹಾರ ಚುನಾವಣೆ: 71 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ, ಕಣದಲ್ಲಿ 1066 ಅಭ್ಯರ್ಥಿಗಳು

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

ಟ್ರಂಪ್‌ ಭರವಸೆಗಳ ಕಥೆಯೇನು?

ಟ್ರಂಪ್‌ ಭರವಸೆಗಳ ಕಥೆಯೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು:1.59 ಲಕ್ಷ ಜನರಿಂದ ಮಾಸ್ಕ್‌ ನಿಯಮ ಉಲ್ಲಂಘನೆ! 3.5 ಕೋಟಿ ರೂ. ದಂಡ ಸಂಗ್ರಹ

ಬೆಂಗಳೂರು:1.59 ಲಕ್ಷ ಜನರಿಂದ ಮಾಸ್ಕ್‌ ನಿಯಮ ಉಲ್ಲಂಘನೆ! 3.5 ಕೋಟಿ ರೂ. ದಂಡ ಸಂಗ್ರಹ

bng-tdy-4

ದಸರಾ ಹಬ್ಬದಲ್ಲಿ ಕಸ ಪ್ರಮಾಣ ಹೆಚ್ಚಳ

ಬ್ಲೇಡ್‌ ಕಂಪನಿಗಳಿಗೆ ಬೀಳುವುದೇ ಬ್ರೇಕ್‌?

ಬ್ಲೇಡ್‌ ಕಂಪನಿಗಳಿಗೆ ಬೀಳುವುದೇ ಬ್ರೇಕ್‌?

bng-tdy-2

ಕ್ಷೇತ್ರದ ಪ್ರಗತಿಗಾಗಿ ಕಾಂಗ್ರೆಸ್‌ ಬೆಂಬಲಿಸಿ

ಆರ್‌.ಆರ್‌. ನಗರದಲ್ಲಿ ಡಿ.ಕೆ.ಸುರೇಶ್‌ ಕಾರ್ಯತಂತ್ರ

ಆರ್‌.ಆರ್‌. ನಗರದಲ್ಲಿ ಡಿ.ಕೆ.ಸುರೇಶ್‌ ಕಾರ್ಯತಂತ್ರ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

india-austraklia

ಭಾರತ-ಆಸೀಸ್ ಸರಣಿ: ದಿನಾಂಕ ನಿಗದಿಪಡಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಇಲ್ಲಿದೆ ವೇಳಾಪಟ್ಟಿ !

ಅತಿವೃಷ್ಟಿಯಿಂದ 19 ಕೋಟಿ ರೂ. ನಷ್ಟ : 14 ಸಾವಿರ ಎಕರೆ ಬೆಳೆ ಹಾನಿ

ಅತಿವೃಷ್ಟಿಯಿಂದ 19 ಕೋಟಿ ರೂ. ನಷ್ಟ : 14 ಸಾವಿರ ಎಕರೆ ಬೆಳೆ ಹಾನಿ

ಮಳೆಗೆ ನೆಲ ಕಚ್ಚಿದ ಭತ್ತದ ಫಸಲು! ನಷ್ಟದಲ್ಲಿವೆ ಸಾವಿರಾರು ರೈತ ಕುಟುಂಬಗಳು

ಮಳೆಗೆ ನೆಲ ಕಚ್ಚಿದ ಭತ್ತದ ಫಸಲು! ನಷ್ಟದಲ್ಲಿವೆ ಸಾವಿರಾರು ರೈತ ಕುಟುಂಬಗಳು

ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ ! ಪ್ರವಾಸಿಗರ ಸಂಖ್ಯೆ ವಿರಳ 

ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ ! ಪ್ರವಾಸಿಗರ ಸಂಖ್ಯೆ ವಿರಳ 

srh

ಹಲವು ದಾಖಲೆಗಳಿಗೆ ಸಾಕ್ಷಿಯಾದ ಡೆಲ್ಲಿ-ಹೈದರಾಬಾದ್ ಪಂದ್ಯ: ರಬಾಡ ಅನನ್ಯ ಸಾಧನೆಯೇನು ಗೊತ್ತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.