Udayavni Special

ಸ್ವಚ್ಛತಾ ಸಿಬ್ಬಂದಿಗೆ ರಕ್ಷಣಾ ಸಾಮಗ್ರಿ ನೀಡದಿದ್ದರೆ “ದಂಡಾಸ್ತ್ರ’

2018ರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ದಂಡಾಸ್ತ್ರ ಗ್ರಾಪಂ, ತಾಪಂ, ಜಿಪಂಗಳಲ್ಲೂ ಜಾರಿ

Team Udayavani, Mar 1, 2021, 11:47 AM IST

Untitled-1

ಸಾಂದರ್ಭಿಕ ಚಿತ್ರ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ, ಶೌಚಗುಂಡಿ ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸ್ವಚ್ಛತಾ ಸಿಬ್ಬಂದಿಗಳಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳು ಮತ್ತು ಸುರ ಕ್ಷತಾ ಸಲಕರಣೆಗಳನ್ನು ಒದಗಿಸಲು ವಿಫ‌ಲರಾದವರ ವಿರುದ್ಧ “ದಂಡಾಸ್ತ್ರ’ ಪ್ರಯೋಗಿಸಲು ಸರ್ಕಾರ ಮುಂದಾಗಿದೆ.

ಸ್ವಚ್ಛತಾ ಸಿಬ್ಬಂದಿಗೆ ಅಗತ್ಯ ರಕ್ಷಣಾ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳನ್ನು ಒದಗಿಸಲು ವಿಫ‌ಲರಾಗುವ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಏಜೆನ್ಸಿಗಳು ಇನ್ನೂ ಮುಂದೆ ದಂಡ ತೆರಬೇಕಾಗುತ್ತದೆ. 2018ರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ದಂಡಾಸ್ತ್ರವನ್ನು ಇನ್ನು ಮುಂದೆ ಗ್ರಾಪಂ, ತಾಪಂ ಹಾಗೂ ಜಿಪಂಗಳಲ್ಲೂ ಜಾರಿಗೆ ತರಲಾಗುತ್ತಿದೆ.

ಜಿಪಂ, ತಾಪಂ ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೆ ಅಗತ್ಯ ರಕ್ಷಣಾ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳಿಲ್ಲದೆ ಶೌಚಾಲಯ, ಶೌಚ ಗುಂಡಿ ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ನಿಯೋಜಿಸಿದ್ದು ಕಂಡು ಬಂದ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಏಜೆನ್ಸಿಗಳಿಗೆ 50 ಸಾವಿರೂ ರೂ. ಹಾಗೂ ಸ್ವಚ್ಛತಾ ಕೆಲಸಗಾರರು, ಅಗತ್ಯ ಸುರಕ್ಷತಾ ಪರಿಕರಗಳಾದ ಹ್ಯಾಂಡ್‌ ಗ್ಲೌಸ್‌, ಗಮ್‌ ಬೂಟ್ಸ್‌, ಹೆಲ್ಮೆಟ್‌, ಗಾಗಲ್ಸ್‌, ಮಾಸ್ಕ್, ಸ್ಯಾನಿಟೈಸರ್‌ ಉಪಯೋಗಿಸದೇ ಕಾರ್ಯನಿರ್ವ ಹಿಸುತ್ತಿರುವ ಸ್ವಚ್ಛತಾ ಕಾರ್ಯಗಳ ವೈಫ‌ಲ್ಯ ಪ್ರಕರಣ ಗಳಲ್ಲಿ 10 ಸಾವಿರ ರೂ. ದಂಡ ವಿಧಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆದೇಶ ಹೊರಡಿಸಿದೆ.

ಇದಲ್ಲದೆ, ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಖಾಯಂ ಅಥವಾ ತಾತ್ಕಾಲಿಕವಾಗಿ ನೇಮಕಗೊಂಡಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳು ಮತ್ತು ಸುರಕ್ಷತಾ ಸಲಕರಣೆಗಳಿಲ್ಲದೆ ಕಾರ್ಯನಿರ್ವ ಹಿಸುತ್ತಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು. ಜೊತೆಗೆ ಈ ಅಂಶಗಳನ್ನು ಉಲ್ಲಂ ಸಿದರೆ “ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳ (ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ) ವೃತ್ತಿ ನಿಷೇಧ ಮತ್ತು ಅವರ ಪುನರ್‌ವಸತಿ ಕಾಯ್ದೆ-2013’ರಂತೆ ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ಕೊಟ್ಟಿದೆ. “ಮನುಷ್ಯರಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ವೃತ್ತಿ ನಿಷೇಧ ಮತ್ತು ಅವರ ಪುನರ್‌ವಸತಿ ಕಾಯ್ದೆ-2013ರನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಅದರಂತೆ, ರಾಜ್ಯದಲ್ಲಿ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದು 2014ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತು. ಕಾಯ್ದೆಯ ಸೆಕ್ಷನ್‌ 7ರಡಿ “ಯಾವುದೇ ವ್ಯಕ್ತಿ, ಸ್ಥಳೀಯ ಪ್ರಾಧಿಕಾರ ಅಥವಾ ಯಾವುದೇ ಸಂಸ್ಥೆ ಗಳು ವ್ಯಕ್ತಿಗಳನ್ನು ಸೆಪ್ಟಿಕ್‌ ಟ್ಯಾಂಕ್‌ ಮತ್ತು ಚರಂಡಿಯಂತಹ ಅಪಾಯಕಾರಿ ಸ್ಥಳಗಳನ್ನು ಸ್ವತ್ಛಗೊಳಿಸುವ ಕಾರ್ಯಕ್ಕೆ ದೈಹಿಕವಾಗಿ ತೊಡಗಿಸಿಕೊಳ್ಳಬಾರದು ಹಾಗೂ ನಿಯೋಜಿಸಿಕೊಳ್ಳಬಾರದು ಎಂದು ಹೇಳಲಾಗಿದೆ.

ಆದರೆ, ಒಂದೊಮ್ಮೆ ಈ ಕಾರ್ಯಕ್ಕೆ ಆಧುನಿಕ ಯಂತ್ರಗಳನ್ನು ಬಳಸುವ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮನುಷ್ಯರನ್ನು ನಿಯೋಜಿಸಬೇಕಾದರೆ ಅಂತಹವರಿಗೆ ಒದಗಿಸಬೇಕಾದ ಅಗತ್ಯ ರಕ್ಷಣಾ ಸಾಮಾಗ್ರಿಗಳು ಮತ್ತು ಸುರಕ್ಷತಾ ಸಲಕರಣೆಗಳನ್ನುಒದಗಿಸುವ ಹಾಗೂ ಸ್ವತ್ಛಗೊಳಿಸುವ ವಿಧಾನದಬಗ್ಗೆಯೂ ಕಾಯ್ದೆಯಲ್ಲಿ ವಿವರಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ. ಫೆ.19ಕ್ಕೆ ಇಲಾಖೆಯ ಪ್ರ.ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡು ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಕೋರ್ಟ್‌ ಚಾಟಿ ಬೀಸಿತ್ತು :

ರಾಜ್ಯದಲ್ಲಿ ಮನುಷ್ಯರಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ವೃತ್ತಿ ನಿಷೇಧ ಮತ್ತು ಅವರ ಪುನರ್‌ ವಸತಿ ಕಾಯ್ದೆ-2013ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ಕೋವಿಡ್‌-19 ಅವಧಿಯಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಕೋರಿ ಸಲ್ಲಿಸಲಾದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು.

ಸ್ವಚ್ಛತಾ ಸಿಬ್ಬಂದಿ ರಕ್ಷಣಾ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳಿಲ್ಲದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಕಂಡು ಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿ, ಗುತ್ತಿಗೆದಾರ ಅಥವಾ ಏಜೆನ್ಸಿಗಳಿಗೆ ದಂಡ ವಿಧಿಸುವ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌,ಆಯುಕ್ತರು, ಪಂಚಾಯತ್‌ರಾಜ್‌ ಆಯುಕ್ತಾಲಯ.

 

ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

yytyyt

2ನೇ ಮೀರಜ್‌ ಖ್ಯಾತಿ ಬಾಗಲಕೋಟೆಯಲ್ಲಿ ಆಕ್ಸಿಜನ್‌ ಆತಂಕ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಪರೀಕ್ಷೆ ವೇಳೆ ಕೋವಿಡ್ ಲಕ್ಷಣ ಇರುವವರಿಗೆ ಮಾತ್ರೆ ನೀಡುವಂತೆ ಅರೋಗ್ಯ ಇಲಾಖೆ ಸೂಚನೆ

yuyutu6

ತಂದೆ ಕಳೆದುಕೊಂಡ ಮರುದಿನವೇ ವೈದ್ಯ ಸೇವೆಗೆ ಹಾಜರ್‌

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರೀಕ್ಷೆ ವೇಳೆ ಕೋವಿಡ್ ಲಕ್ಷಣ ಇರುವವರಿಗೆ ಮಾತ್ರೆ ನೀಡುವಂತೆ ಅರೋಗ್ಯ ಇಲಾಖೆ ಸೂಚನೆ

huyuytuy

ರಾಜ್ಯದಲ್ಲಿಂದು 49058 ಕೋವಿಡ್ ಪ್ರಕರಣ ಪತ್ತೆ : 328 ಜನರ ಸಾವು

fyhtyt

ಖಾಸಗಿ ಮೆಡಿಕಲ್ ಕಾಲೇಜುಗಳಿಂದ 75% ರಷ್ಟು ಹಾಸಿಗೆ ಪಡೆಯಲಾಗುತ್ತಿದೆ : ಸಚಿವ ಡಾ.ಕೆ.ಸುಧಾಕರ್

Change of Minister in charge

ಉಸ್ತುವಾರಿ ಸಚಿವರ ಬದಲಾವಣೆ ಕೂಗು ಮತ್ತಷ್ಟು ತೀವ್ರ

cd-lady-

ಸಿಡಿ ಲೇಡಿಯಿಂದ ರಮೇಶ ವಿರುದ್ಧ ಹಣದ ಆಮಿಷದ ಆರೋಪ

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

6-22

ಆಮ್ಲಜನಕ ಲಭ್ಯತೆ ಸಮಸ್ಯೆ; ಶಾಸಕ ಹಾಲಪ್ಪ ಆತಂಕ

6-21

ಕೆಲ ಅಸಮಾಧಾನದ ಮಧ್ಯೆಯೂ ಜನಪರ ಕೆಲಸದ ಸಂತೃಪ್ತಿ ಇದೆ : ಹಕ್ರೆ

6-20

ಸೋಂಕು ತಡೆಗೆ ಎಲ್ಲ ವಾರ್ಡ್‌ಗಳಲ್ಲಿ ಸ್ಯಾನಿಟೈಸ್‌

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.