ಅನಾರೋಗ್ಯದ ಸುಳಿಯಲ್ಲಿ ಸ್ವಚ್ಛತಾ ಸಿಪಾಯಿಗಳು!


Team Udayavani, Dec 2, 2019, 11:14 AM IST

bng-tdy-1

ಸಿಲಿಕಾನ್‌ ಸಿಟಿಯ ತ್ಯಾಜ್ಯ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಈ ಸಮಸ್ಯೆ ಪರಿಹಾರಕ್ಕಾಗಿ ದೇಶವಿದೇಶಗಳ ತಂತ್ರಜ್ಞಾನಗಳ ಅಳವಡಿಕೆಗೆ ನೀತಿನಿರೂಪಕ ರಿಂದ ಚರ್ಚೆಗಳು ನಡೆದು, ಸಲಹೆ,ಸೂಚನೆಗೂ ಬರುತ್ತವೆ.

ಕೇವಲ ಎರಡು ದಿನ ಪೌರಕಾರ್ಮಿಕರು ಪ್ರತಿಭಟನೆಗಿಳಿದರೆ ಗಾರ್ಡನ್‌ ಸಿಟಿಗೆ ಗಾಬೇಜ್‌ ಸಿಟಿಹಣೆಪಟ್ಟಿಯೂ ಅಂಟಿಕೊಳ್ಳುತ್ತದೆ. ಮತ್ತೂಂದು ಕಡೆ ಇದೇ ತ್ಯಾಜ್ಯ ದೊಡ್ಡ ಮಟ್ಟದ ಆದಾಯ ತಂದುಕೊಡುವ ಉದ್ಯಮವೂ ಆಗಿದೆ. ಆದರೆ, ಮನೆಮನೆಗಳಿಂದ ಅದೇ ತ್ಯಾಜ್ಯ ಸಂಗ್ರಹಿಸುವವರ ಬಗ್ಗೆ ಇಷ್ಟೇ ಗಂಭೀರ ಚಿಂತನೆಗಳು ನಡೆಯುತ್ತಿವೆಯೇ? ಉತ್ತರಇಲ್ಲ. ನಿತ್ಯ ನಗರವನ್ನು ಸ್ವತ್ಛಗೊಳಿಸುವವರ ಆರೋಗ್ಯ ಅವರಿಗೆ ಅರಿವಿಲ್ಲದೆ ಕ್ಷೀಣಿಸುತ್ತಿದೆ. ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸಾಮಾನ್ಯರಿಗೆ ಹೋಲಿಸಿದರೆ ಅವರ ಜೀವಿತಾವಧಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ.

ಇತ್ತೀಚೆಗೆ ನಡೆಸಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ 600 ಪೌರ ಕಾರ್ಮಿಕರ ಪೈಕಿ 60 ಜನರಲ್ಲಿ ಶಂಕಿತ ಕ್ಯಾನ್ಸರ್‌ ಅಂಶಗಳು ಪತ್ತೆಯಾಗಿದ್ದು, ಆ ಕುಟುಂಬಗಳಿಗೆ ಆಘಾತ ಉಂಟುಮಾಡಿವೆ. ಕಸ ಮನೆಯಿಂದ ಹೊರ ಹೋದರೆ ಸಾಕು ಎನ್ನುವ ನಾವು, ಅದನ್ನು ಎತ್ತಿಕೊಂಡು ಸಂಸ್ಕರಣಾ ಘಟಕಕ್ಕೆ ತಲುಪಿಸುವ ವ್ಯಕ್ತಿಯ ಬಗ್ಗೆ ಯೋಚಿಸುವುದಿಲ್ಲ. ಆ ಕಸದಲ್ಲಿನ ಗಾಜು, ಕೊಳಕು, ಸೂಜಿ, ಔಷಧ ಬಾಟಲಿಗಳು, ಸ್ಯಾನಿಟರಿ ಪ್ಯಾಡ್‌ ಗಳು ಹೀಗೆ ಎಲ್ಲವನ್ನೂ ಒಗ್ಗೂಡಿಸಿ ತಂದು ಸುರಿಯುತ್ತೇವೆ. ಪೌರಕಾರ್ಮಿಕ ಅದನ್ನು ವಿಂಗಡಣೆ ಮಾಡುವಾಗ ಕೈಗೆ ಚುಚ್ಚಿ ಗಾಯ ಗಳಾಗುವುದು ಮಾಮೂಲು ಆಗಿದೆ. ಬಹುತೇಕರು ನಿತ್ಯ ವಿಲೇವಾರಿ ಮಾಡದೆ, ವಾರಕ್ಕೊಮ್ಮೆ ಸುರಿಯುತ್ತಾರೆ. ಆ ವಾಸನೆಯಿಂದ ತಪ್ಪಿಸಿಕೊಳ್ಳಲು ಗುಟ್ಕಾ, ತಂಬಾಕು ಉತ್ಪನ್ನಗಳು ಮತ್ತಿತರ ಚಟಗಳಿಗೆ ಮೊರೆಹೋಗುತ್ತಾರೆ. ಇಂತಹ ಘಟನೆಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ.

ಇನ್ನೊಂದೆಡೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಪೌರಕಾರ್ಮಿಕರಿಗೆ ಕೈಗವಸು, ಶೂ ಸೇರಿದಂತೆ ಸೂಕ್ತ ಸಲಕರಣೆಗಳು ಕೂಡ ದೊರೆಯುತ್ತಿಲ್ಲ. ಈ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ 5.25 ಲಕ್ಷ ರೂ. ದಂಡ ವಿಧಿಸಲಾಗಿದೆ. ಆದರೂ ಪೌರಕಾರ್ಮಿಕರ ಸ್ಥಿತಿ ಮಾತ್ರ ಸುಧಾರಣೆ ಆಗಿಲ್ಲ. ವಿಚಿತ್ರವೆಂದರೆ ಗುತ್ತಿಗೆದಾರರು ನೀಡುತ್ತಿರುವ ಕೈಗವಸುಗಳಿಂದ ಪೌರ ಕಾರ್ಮಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು! ಯಾಕೆಂದರೆ, ಆ ಗ್ಲೌಸ್‌ಗಳಿಂದ ಬೆವರು, ತುರಿಕೆ ಉಂಟಾಗುತ್ತಿದೆ. ಶೂಗಳನ್ನು ಹಾಕಿಕೊಳ್ಳುವುದಕ್ಕೆ ಆಗುವುದಿಲ್ಲ, ಹಾಕಿಕೊಂಡರೆ ಕಾಲು ನೋವು ಬರುತ್ತದೆ ಎಂದು ಬಹುತೇಕ ಪೌರಕಾರ್ಮಿಕರು ಅಲವತ್ತುಕೊಳ್ಳುತ್ತಾರೆ.

ಸಮಾಜ ಮತ್ತು ಅಧಿಕಾರಿಗಳು ಪೌರಕಾರ್ಮಿಕರನ್ನು ಸಂವೇದನೆ ಇಲ್ಲದೆ ನಡೆಸಿಕೊಳ್ಳುತ್ತಿದ್ದಾರೆ. ಈಗ ಅವರು ಎದುರಿಸುತ್ತಿರುವ ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ಈ ಧೋರಣೆ ಕೂಡಒಂದು ಕಾರಣಎಂದು ಸಂಶೋಧಕ ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಆರ್‌.ವಿ. ಚಂದ್ರಶೇಖರ್‌ ಅಭಿಪ್ರಾಯಪಡುತ್ತಾರೆ. “ತಂತ್ರಜ್ಞಾನಕ್ಕೆ ನೀಡುವ ಮಹತ್ವವನ್ನು ಪೌರಕಾರ್ಮಿಕರ ಜೀವಕ್ಕೆ ನೀಡುತ್ತಿಲ್ಲ. ಪ್ರತಿ ವರ್ಷತ್ಯಾಜ್ಯ ಸಮಸ್ಯೆಗಾಗಿಯೇ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೆ, ಪೌರಕಾರ್ಮಿಕರು ಇಂದಿಗೂ ಓಬೀರಾಯನಕಾಲದ ತಳ್ಳುವ ಗಾಡಿಗಳನ್ನೇ ಬಳಸುತ್ತಿದ್ದಾರೆ.

ಪೌರಕಾರ್ಮಿಕರಿಗೆ ನೀಡುತ್ತಿರುವ ಸಾಧನಗಳು ಅವೈಜ್ಞಾನಿಕವಾಗಿವೆ. ತಳ್ಳುವ ಗಾಡಿಗಳಿಂದಪೌರಕಾರ್ಮಿಕರಲ್ಲಿ ಗರ್ಭಕೋಶದ ಸಮಸ್ಯೆ ಉಂಟಾಗುತ್ತಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಉದ್ದನೆಯ ಪೊರಕೆಗಳನ್ನು ನೀಡಲಾಗುತ್ತಿದೆ. ಇದರಿಂದ ಅವರಲ್ಲಿ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

ಕೊಳಕು ಪ್ರದೇಶಗಳೇ ಇವರಿಗೆ ಪಾಲಿಕೆಯು ಆಹಾರ ನೀಡುತ್ತಿದೆ. ಆಹಾರ ನೀಡುವಮುನ್ನ ಅವರು ಕೈ, ಕಾಲುಗಳನ್ನು ಸ್ವಚ್ಛ ವಾಗಿ ತೊಳೆದುಕೊಳ್ಳುವುದಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಬಹುತೇಕ ಕಡೆ ಶೌಚಾಲಯ ವ್ಯವಸ್ಥೆಯೂ ಇಲ್ಲ.ಹೀಗಾಗಿ, ಕೊಳಕಿನ ಅಂಶಗಳು ನೇರವಾಗಿ ಅವರ ದೇಹವನ್ನು ಸೇರುತ್ತಿದೆ. ಇನ್ನು ಪೌರಕಾರ್ಮಿಕರಮಕ್ಕಳಿಗೆ ವಿಶೇಷವಿದ್ಯಾರ್ಥಿ ವೇತನಗಳಿದ್ದು, ಅದರ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ಸರ್ಕಾರಗಳು ಇವರಿಗೆ ಬಜೆಟ್‌ನಲ್ಲಿ ವಿಶೇಷ ಸೌಲಭ್ಯ ನೀಡಬೇಕು ಎಂದು ಡಾ.ಚಂದ್ರ ಶೇಖರ್‌ ಒತ್ತಾಯಿಸುತ್ತಾರೆ.

ಕಾಫಿ ವಿತ್‌ ಪೌರಕಾರ್ಮಿಕ: ಈ ಹಿಂದೆ ಕಾಫಿ ವಿತ್‌ ಪೌರಕಾರ್ಮಿಕ ಎಂಬ ಪ್ರಯೋಗವೊಂದು ನಡೆದಿತ್ತು. ಪೌರಕಾರ್ಮಿಕರ ಸಮಸ್ಯೆಗಳನ್ನು ಅರಿಯುವ ಜತೆಗೆ ಅವರೊಂದಿಗೆ ಆತ್ಮೀಯವಾಗಿ ಬೆರೆಯಲು ಇದು ಉತ್ತಮ ವೇದಿಕೆ ಆಗಿತ್ತು. ಇದರಡಿ ವಾರದ ಒಂದು ದಿನ ಪೌರಕಾರ್ಮಿರೊಂದಿಗೆಚಹಾ ಸೇವಿಸಿ, ಅವರ ಕುಂದುಕೊರತೆಗಳನ್ನುಕೇಳಲಾಗುತ್ತಿತ್ತು. ಖುದ್ದು, ಆಯುಕ್ತರೇ ಪೌರಕಾರ್ಮಿಕರೊಂದಿಗೆ ಮಾತನಾಡುತ್ತಿದ್ದರಿಂದ ಆಡಳಿತ ಯಂತ್ರದಲ್ಲಿನಅಧಿಕಾರಿಗಳು ಪೌರಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಈ ಕಾರ್ಯಕ್ರಮವನ್ನು ಪಾಲಿಕೆ ಆಯುಕ್ತರು ಮತ್ತೆ ಆರಂಭವಾದರೆ ಅವರ ಸಮಸ್ಯೆಗಳು ಕಡಿಮೆ ಆಗಬಹುದು.

ಶ್ವಾಸಕೋಶ, ಗರ್ಭಕೋಶ ಸಮಸ್ಯೆ ಹೆಚ್ಚು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಇತ್ತೀಚೆಗೆ 600 ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ ಮಾಡಿತ್ತು. ಇದರಲ್ಲಿ 60 ಮಂದಿಗೆ ಕ್ಯಾನ್ಸರ್‌ ಇರುವ ಶಂಕೆ ವ್ಯಕ್ತವಾಗಿದ್ದು, ಕಿದ್ವಾಯಿ ಈ ಬಗ್ಗೆಹೆಚ್ಚುವರಿ ತಪಾಸಣೆ ನಡೆಸುತ್ತಿದೆ. ಶ್ವಾಸಕೋಶ, ಗರ್ಭಕೋಶ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಪೌರಕಾರ್ಮಿಕರಲ್ಲಿ ಹೆಚ್ಚುಕಂಡು ಬರುತ್ತಿದ್ದು,ಶುಚಿತ್ವದ ಕೊರತೆಯೇ ಇದಕ್ಕೆ ಮೂಲ ಕಾರಣ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ 15,300 ಪೌರಕಾರ್ಮಿಕರು ಕೆಲಸ ಮಾಡುತ್ತಿ¨ªಾರೆ. ಇವರಲ್ಲಿ ಎಷ್ಟು ಜನರಿಗೆ ಇಎಸ್‌ಐ ಸೌಲಭ್ಯ ನೀಡಲಾಗಿದೆ ಎನ್ನುವ ವಿವರ ಕೂಡಪಾಲಿಕೆ ಬಳಿ ಲಭ್ಯವಿಲ್ಲ. ಇನ್ನು ಕೆಲವರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ.

ಸಾರ್ವಜನಿಕರ ನಿರ್ಲಕ್ಷ್ಯ ಧೋರಣೆ: ನಗರದ ಕೆಲ ನಾಗರಿಕೆ ನಿರ್ಲಕ್ಷ್ಯ ಧೋರಣೆಯಿಂದ ಪೌರಕಾರ್ಮಿಕರು ಪರೋಕ್ಷವಾಗಿ ಅನಾರೋಗ್ಯ ಸಮಸ್ಯೆಗಳಿಗೆ ಹತ್ತಿರವಾಗುತ್ತಿದ್ದಾರೆ. ಮುಟ್ಟಿನ ಬಟ್ಟೆಗಳು (ಸ್ಯಾನಿಟರಿ), ಗಾಜಿನ ಚೂರು, ಬ್ಲೇಡ್‌ ಮತ್ತು ಸೂಜಿ ಸೇರಿದಂತೆ ರಾಸಾಯನಿಕ ಅಂಶ ಒಳಗೊಂಡ ವಸ್ತುಗಳನ್ನು ಕೆಲವರು ತ್ಯಾಜ್ಯದೊಂದಿಗೆ ಎಸೆಯುತ್ತಾರೆ. ಇದರಿಂದ ಪೌರಕಾರ್ಮಿಕರು ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಕುಗ್ಗುತ್ತಿದೆ ಕಾರ್ಮಿಕರ ಜೀವಿತಾವಧಿ: ಸಾಮಾನ್ಯರಿಗೆ ಹೋಲಿಸಿದರೆ, ಪೌರಕಾರ್ಮಿಕರ ಜೀವಿತಾವಧಿ ಕಡಿಮೆ ಆಗುತ್ತಿರುವ ಆತಂಕಕಾರಿ ಅಂಶ ಕೂಡ ಇತ್ತೀಚೆಗೆ ಬೆಳಕಿಗೆಬಂದಿದೆ. ನಗರದಲ್ಲಿ ಸಾಮಾನ್ಯವಾಗಿ ಜನರಜೀವಿತಾವಧಿ ಅಂದಾಜು 65-70 ವರ್ಷ ಇದೆ. ಪೌರಕಾರ್ಮಿಕರು 50ರಿಂದ 60 ವರ್ಷ ಬದುಕುವುದೇ ಹೆಚ್ಚು. ಈ ನಿಟ್ಟಿನಲ್ಲಿ ಅವರ ಜೀವಿತಾವಧಿ ತುಂಬಾ ಕಡಿಮೆ ಎನ್ನುತ್ತಾರೆ ಪೌರಕಾರ್ಮಿಕರ ಬಗ್ಗೆ ಐದು ವರ್ಷ ಅಧ್ಯಯನ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ದು. ಸರಸ್ವತಿ. ಪೌರಕಾರ್ಮಿಕರು ತಾವು ದುಡಿದ ಬಹುತೇಕ ಹಣ ಆರೋಗ್ಯಸಮಸ್ಯೆಗಳಿಗೇ ವೆಚ್ಚ ಆಗುತ್ತದೆ. ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದು, ವಾರಕ್ಕೆ ಒಂದೇ ಒಂದು ರಜೆಯೂ ಇಲ್ಲ ಎಂದು ಸರಸ್ವತಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ಅಗತ್ಯ: ಪೌರಕಾರ್ಮಿಕರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎನ್ನುತ್ತಾರೆ ಕಿದ್ವಾಯಿ ಸ್ಮಾರಕಗಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ. ಪೌರಕಾರ್ಮಿಕರು ತಂಬಾಕು, ಗುಟ್ಕಾ ಬಳಸುವುದರಿಂದ ಬಾಯಿ ಕ್ಯಾನ್ಸರ್‌, ಶ್ವಾಸಕೋಶದ ಸಮಸ್ಯೆ ಪ್ರಕರಣಗಳುಹೆಚ್ಚಾಗುತ್ತಿವೆ. ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದರಿಂದ ಹೊಟ್ಟೆ ನೋವಿಗೆ ಸಂಬಂಧಿಸಿದ ರೋಗಗಳು ಬರುತ್ತಿವೆ. ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದರಿಂದ ಗರ್ಭಕೋಶದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದೂ ಇದೆ ಅವರು ಹೇಳುತ್ತಾರೆ.

 

-ಹಿತೇಶ್‌ ವೈ

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.