Udayavni Special

ಹಸಿದವರಿಗೆ ಅನ್ನ ನೀಡಲು ಕಮ್ಯೂನಿಟಿ ಫ್ರಿಡ್ಜ್


Team Udayavani, Oct 14, 2019, 3:05 AM IST

hasidavarige

ಬೆಂಗಳೂರು: “ತುತ್ತು ಅನ್ನಕ್ಕಾಗಿ ಅಂಗಾಲಾಚುವ ಜನ ಒಂದಡೆ ಇದ್ದರೆ, ತಿಂದು ತೇಗಿ ಸಾಕಾದ ಮೇಲೆ ಅನ್ನ ಚೆಲ್ಲುವ ಜನ ಮತ್ತೂಂಡೆ ಇದ್ದಾರೆ. ಆದರೆ, ಒಂದು ತುತ್ತು ಅನ್ನವೂ ನಿರುಪಯುಕ್ತವಾಗದೇ ಹಸಿದ ಹೊಟ್ಟೆಗೆ ಹೋಗಬೇಕು ಎಂಬ ಕಲ್ಪನೆಯೊಂದಿಗೆ ಸ್ವಯಂ ಸೇವಾ ಸಂಸ್ಥೆಯೊಂದು ನಗರದಲ್ಲಿ ಕೆಲಸ ಮಾಡುತ್ತಿದೆ.

“ಜನ ಹಸಿದಿದ್ದಾರೆ ಆಹಾರ ಪಾದರ್ಥಗಳನ್ನು ಕಸದ ಬುಟ್ಟಿಗೆ ಹಾಕಬೇಡಿ’ ಎಂಬ ಘೋಷ ವಾಕ್ಯದೊಂದಿಗೆ “ಇಸ್ಲಾಮಿ ಮಾಹಿತಿ ಕೇಂದ್ರ’ ಹಾಗೂ “365 ಸ್ಟೈಲೀಸ್‌’ ಸ್ವಯಂ ಸೇವಾ ಸಂಸ್ಥೆ ಜಂಟಿಯಾಗಿ ಅಭಿಯಾನ ಆರಂಭಿಸಿವೆ. ಹೋಟೆಲ್‌, ಮದುವೆ ಇನ್ನಿತರ ಸಭೆ-ಸಮಾರಂಭಗಳಲ್ಲಿ ಉಳಿಯುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ದೊಡ್ಡ-ದೊಡ್ಡ ಫ್ರಿಡ್ಜ್ಗಳಲ್ಲಿ ಸಂರಕ್ಷಿಸಿ ಅದನ್ನು ಅವಶ್ಯಕತೆ ಇರುವವರಿಗೆ ಪೂರೈಸುವುದು ಈ ಅಭಿಯಾನದ ಉದ್ದೇಶ.

“ಸಮುದಾಯ ಫ್ರಿಡ್ಜ್’ ಹೆಸರಲ್ಲಿ ಹೋಟೆಲ್‌, ಶಾದಿಮಹಲ್‌ ಸೇರಿದಂತೆ ಊಟದ ವ್ಯವಸ್ಥೆ ಮಾಡುವ ಸಭೆ-ಸಮಾರಂಭ ನಡೆಯುವ ಕೇಂದ್ರಗಳ ಮುಂಭಾಗದಲ್ಲಿ ಈ ಸ್ವಯಂಸೇವಾ ಸಂಸ್ಥೆಯವರು ದಾನಿಗಳಿಂದ ದೇಣಿಗೆ ಪಡೆದು ಫ್ರಿಡ್ಜ್ಗಳನ್ನು ಖರೀದಿಸಿ ಇಡುತ್ತಾರೆ. ಹೋಟೆಲ್‌ಗೆ ಊಟ ಮಾಡಲು ಬರುವವರು ತಾವು ಊಟ ಮಾಡಿದ ಬಳಿಕ ಉಳಿದ ಆಹಾರ ಪದಾರ್ಥಗಳನ್ನು ಚೆಲ್ಲದೇ ಫ್ರಿಡ್ಜ್ನಲ್ಲಿ ಇಡಬೇಕು.

ಅದೇ ರೀತಿ ಹೊಟೇಲ್‌ನವರು ಸಹ ತಮ್ಮಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಈ ಫ್ರಿಡ್ಜ್ಗಳಲ್ಲಿ ಇಡುತ್ತಾರೆ. ಮದುವೆ ಇನ್ನಿತರ ಸಮಾರಂಭದಲ್ಲಿ ಉಳಿಯುವ ಊಟವನ್ನು ಸಹ ಕಮ್ಯೂನಿಟಿ ಫ್ರಿಡ್ಜ್ಗಳಲ್ಲಿ ಇರಿಸಲಾಗುತ್ತದೆ. ಈ ಫ್ರಿಡ್ಜ್ಗಳಲ್ಲಿ ಇರಿಸಲಾಗುವ ಆಹಾರ ಪದಾರ್ಥಗಳನ್ನು ಮತ್ತೂಬ್ಬರು ತಿನ್ನಲು ಯೋಗ್ಯವಾಗುವ ರೀತಿಯಲ್ಲಿ ಸ್ವಚ್ಛಗೊಳಿಸಿ ಇಡಲಾಗುತ್ತದೆ. ಸಮುದಾಯ ಫ್ರಿಡ್ಜ್ಗಳ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ. ಅಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ಮಾಡಲಾಗುತ್ತದೆ.

ಈಗಾಗಲೇ ನಗರದಲ್ಲಿ ಹಲವು ಕಡೆ ಈ ಸಮುದಾಯ ಫ್ರಿಡ್ಜ್ಗಳನ್ನು ಇಡಲಾಗಿದ್ದು, ಭಾನುವಾರ ಕಲಾಸಿಪಾಳ್ಯ ಮುಖರಸ್ತೆಯ ಕಬಾಬ್‌ ಮ್ಯಾಜಿಕ್‌ ಹೋಟೆಲ್‌ ಮುಂದೆ ಹೊಸದಾಗಿ ಫ್ರಿಡ್ಜ್ ಇರಿಸಲಾಯಿತು. ಚಿಕ್ಕಪೇಟೆ ಶಾಸಕ ಡಾ. ಉದಯ ಗರುಡಾಚಾರ್‌ ಇದಕ್ಕೆ ಚಾಲನೆ ನೀಡಿದರು. ಶಾಸಕ ಎನ್‌.ಎ. ಹ್ಯಾರಿಸ್‌, ಪಾಲಿಕೆ ಸದಸ್ಯೆ ಪ್ರತಿಭಾ ಧನರಾಜ್‌ ಮತ್ತಿತರರು ಉಪಸ್ಥಿತರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ನೆರವು: ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಕರೆ

ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ನೆರವು: ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಕರೆ

15780dd2-103b-47a0-9b30-d9e092cc567b

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

covid-19

ಚಾಮರಾಜನಗರ: ಇಂದು 64 ಜನರಿಗೆ ಕೋವಿಡ್ ದೃಢ: 27 ಮಂದಿ ಗುಣಮುಖ

love

ಗಡ್ಡಧಾರಿಯಾಗಿ ಡಾರ್ಲಿಂಗ್ ಕೃಷ್ಣ: ಲವ್ ಮಾಕ್ಟೇಲ್-2 ಚಿತ್ರದ ಫಸ್ಟ್ ಲುಕ್ ಔಟ್

ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.

ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.

tiktok-facebook-‘

ಟಿಕ್ ಟಾಕ್ ಮಾದರಿಯ ಫೀಚರ್ ಹೊರತಂದ ಫೇಸ್ ಬುಕ್: ಬಳಕೆ ಹೇಗೆ ?

ಗೃಹ ಸಚಿವರ ಬಗ್ಗೆ ಏಕವಚನ ಬಳಕೆಗೆ ವಿಷಾದ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್

ಗೃಹ ಸಚಿವರ ವಿರುದ್ಧ ಏಕವಚನ ಬಳಕೆಗೆ ವಿಷಾದ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೃಹ ಸಚಿವರ ಬಗ್ಗೆ ಏಕವಚನ ಬಳಕೆಗೆ ವಿಷಾದ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್

ಗೃಹ ಸಚಿವರ ವಿರುದ್ಧ ಏಕವಚನ ಬಳಕೆಗೆ ವಿಷಾದ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್

ಆಸ್ತಿ ತೆರಿಗೆ ಬಾಕಿ ಮೊತ್ತವೇ 1,211 ಕೋಟಿ ರೂಪಾಯಿ

ಆಸ್ತಿ ತೆರಿಗೆ ಬಾಕಿ ಮೊತ್ತವೇ 1,211 ಕೋಟಿ ರೂಪಾಯಿ

ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು  ನೀಡಲು ಸೂಚನೆ

ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲು ಸೂಚನೆ

ಕಾಲಮಿತಿಯಲಿ ಕಾಮಗಾರಿ ಪೂರ್ಣಗೊಳಿಸಿ: ಅಶ್ವತ ನಾರಾಯಣ

ಕಾಲಮಿತಿಯಲಿ ಕಾಮಗಾರಿ ಪೂರ್ಣಗೊಳಿಸಿ: ಅಶ್ವತ ನಾರಾಯಣ

ಏರ್‌ಪೋರ್ಟ್‌ ಕಾರ್ಗೊ ಶೇ. 15.3 ಪ್ರಗತಿ

ಏರ್‌ಪೋರ್ಟ್‌ ಕಾರ್ಗೊ ಶೇ. 15.3 ಪ್ರಗತಿ

MUST WATCH

udayavani youtube

ಬೆಂಗಳೂರು ಗಲಭೆ: ಹತ್ತಾರು ಪ್ರಶ್ನೆಗಳು !

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naikಹೊಸ ಸೇರ್ಪಡೆ

ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ನೆರವು: ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಕರೆ

ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ನೆರವು: ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಕರೆ

15780dd2-103b-47a0-9b30-d9e092cc567b

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

covid-19

ಚಾಮರಾಜನಗರ: ಇಂದು 64 ಜನರಿಗೆ ಕೋವಿಡ್ ದೃಢ: 27 ಮಂದಿ ಗುಣಮುಖ

ಭದ್ರಾವತಿ: 54ಕ್ಕೂ ಅಧಿಕ ಮಂದಿಗೆ ಕೋವಿಡ್‌

ಭದ್ರಾವತಿ: 54ಕ್ಕೂ ಅಧಿಕ ಮಂದಿಗೆ ಕೋವಿಡ್‌

ರೈತನೇ ಸರ್ಟಿಫಿಕೇಟ್‌ ಕೊಡುವ ಕಾಲ ಬಂದಿದೆ

ರೈತನೇ ಸರ್ಟಿಫಿಕೇಟ್‌ ಕೊಡುವ ಕಾಲ ಬಂದಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.