Udayavni Special

ಮೈತ್ರಿ ಸರ್ಕಾರಕ್ಕೆ ಮೊದಲ ಆಘಾತ


Team Udayavani, Mar 5, 2019, 12:30 AM IST

mla-umesh-jadhav-resigns.jpg

ಬೆಂಗಳೂರು: ಕಾಂಗ್ರೆಸ್‌ನ ಶಾಸಕ ಉಮೇಶ್‌ ಜಾಧವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಗೊಂದಲ ಸೋಮವಾರ ಇತ್ಯರ್ಥವಾಗಿದೆ. ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿ ಜಾಧವ್‌ ಪಕ್ಷ ದ್ರೋಹ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ.

ವಿಧಾನಸಭೆ ಸ್ಪೀಕರ್‌ ರಮೇಶ್‌ಕುಮಾರ್‌ ಅವರನ್ನು   ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಅಡ್ಡಗಲ್‌ ನಿವಾಸದಲ್ಲಿ ಚಿಂಚೋಳಿ ಶಾಸಕ ಉಮೇಶ್‌ ಜಾಧವ್‌ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ವಿವರಿಸಿ, ತ್ಯಾಗಪತ್ರ ಸಲ್ಲಿಸಿದ್ದಾರೆ. ಜತೆಗೆ ರಮೇಶ್‌ಕುಮಾರ್‌ ದಂಪತಿ ಜತೆಗೇ ಉಪಾಹಾರ ಸ್ವೀಕರಿಸಿದ್ದಾರೆ. ಸ್ಪೀಕರ್‌ ಅವರನ್ನು ಭೇಟಿಯಾದ ಬಳಿಕ ಪ್ರತಿಕ್ರಿಯೆ ನೀಡಿದ ಉಮೇಶ್‌ ಜಾಧವ್‌,  “ಕಾಂಗ್ರೆಸ್‌ ಮುಖಂಡರಿಂದ ಅನ್ಯಾಯವಾಗಿದೆ. ಹೀಗಾಗಿ  ಪಕ್ಷ ಬಿಡಲು ನಿರ್ಧರಿಸಿದ್ದೇನೆ. ಕ್ಷೇತ್ರದ ಜನರ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಹೇಳಿದ್ದಾರೆ. 

ರಾಜೀನಾಮೆ ಬಗ್ಗೆ ಚುಟುಕಾಗಿ ಮಾತನಾಡಿದ ಸ್ಪೀಕರ್‌ ಅಂಗೀಕಾರದ ಬಗ್ಗೆ ಬೆಂಗಳೂರಿನಲ್ಲಿಯೇ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದ್ದಾರೆ.

ಜಾಧವ್‌ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 117 ಕ್ಕೆ ಕುಸಿದಿದೆ. ಪಕ್ಷೇತರ ಸದಸ್ಯ ನಾಗೇಶ್‌ ಮತ್ತೆ ಕಾಂಗ್ರೆಸ್‌ ಸಹ ಸದಸ್ಯನಾಗಿರುವುದರಿಂದ 118 ಯಥಾಸ್ಥಿತಿ ಕಾಯ್ದುಕೊಂಡಂತಾಗಿದೆ. ಹೀಗಾಗಿ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ಭಾದಕವಿಲ್ಲ.

ಕಾಂಗ್ರೆಸ್‌ ಆಕ್ರೋಶ: ರಾಜೀನಾಮೆ ನೀಡಿದ ವಿಚಾರ ಗೊತ್ತಾಗುತ್ತಲೇ ಜಾಧವ್‌ ಪಕ್ಷ ದ್ರೋಹ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಜಾಧವ್‌ ಸೇರಿ ನಾಲ್ವರು ಶಾಸಕರ ಅನರ್ಹತೆಗೆ ಸ್ಪೀಕರ್‌ಗೆ ಸಲ್ಲಿಸಿದ್ದ ಮನವಿಗೆ ಮತ್ತೆ ಜೀವ ತುಂಬಲು ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ ಜಾಧವ್‌ಗೆ ಕಾಂಗ್ರೆಸ್‌ನಿಂದಾಗಿ ಸ್ಥಾನಮಾನ ಸಿಕ್ಕಿತ್ತು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಲು ನಮ್ಮ ಪಕ್ಷ ಸಹಾಯ ಮಾಡಿತ್ತು.  ಅವರು ಪಕ್ಷಕ್ಕೆ ಮೋಸ ಮಾಡಿದ್ದಾರೆ. ಸ್ವಂತ ಸ್ವಾರ್ಥಕ್ಕೆ ಬಿಕರಿಯಾಗಿದ್ದಾರೆ ಎಂದು ಟೀಕಿಸಿದರು.

ಜಾಧವ್‌  ತಮ್ಮ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ. ಸ್ಪೀಕರ್‌ ಬಳಿ ನಮ್ಮ ಶಾಸಕಾಂಗ ಪಕ್ಷದ ನಾಯಕರು ಕೊಟ್ಟ ಅನರ್ಹತೆ ದೂರು ಇದೆ. ಅವರು ಅದರ ಬಗ್ಗೆ ಗಮನ ಹರಿಸುತ್ತಾರೆ. ಪಕ್ಷಕ್ಕೆ ಚೂರಿ ಹಾಕುವವರು ಬಿಟ್ಟು ಹೋದರೆ ಒಳ್ಳೆಯದು ಎಂದರು.

ಜಾಧವ್‌ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿರುವ ಗುಲ್ಬರ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದನ್ನು ತಪ್ಪಿಸಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಲಿದೆ ಎನ್ನಲಾಗಿದೆ. ಸ್ಪೀಕರ್‌ ಮುಂದಿರುವ ಅನರ್ಹತೆ ವಿಚಾರ ಇತ್ಯರ್ಥಕ್ಕಾಗಿ ಸ್ಪೀಕರ್‌ ಮೊರೆ ಹೋಗಲು ಹಾಗೂ ಅಗತ್ಯವಾದರೆ ನ್ಯಾಯಾಲಯದಲ್ಲಿ ಹೋರಾಟ ಮಾಡಲೂ  ಕಾಂಗ್ರೆಸ್‌ ತೀರ್ಮಾನಿಸಿದೆ.

ಇತ್ತೀಚೆಗೆ ಮುಕ್ತಾಯವಾದ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ನಡೆದಿದ್ದ “ಆಪರೇಷನ್‌ ಕಮಲ’ ಅಡಿಯಲ್ಲಿ ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್‌ ಜಾಧವ್‌ ಬಿಜೆಪಿ ಸೇರ್ಪಡೆಗೆ ಸಿದ್ಧವಾಗಿದ್ದರು.

ಸಭೆಯಲ್ಲಿ ಪ್ರಸ್ತಾಪ
ಸಮನ್ವಯ ಸಮಿತಿ ಸಭೆಯಲ್ಲೂ ಶಾಸಕ ಉಮೇಶ್‌ ಜಾಧವ್‌ ರಾಜೀನಾಮೆ ಪ್ರಸ್ತಾಪವಾಯಿತು. ಸಿದ್ದರಾಮಯ್ಯ ಅವರು, ಉಮೇಶ್‌ ಜಾಧವ್‌ ರಾಜೀನಾಮೆ ನೀಡೋದು ಗೊತ್ತಿತ್ತು. ಆದರೆ, ಉಳಿದ ಮೂವರು ಏನು ಮಾಡ್ತಾರೆ ಎಂಬುದರ ಬಗ್ಗೆ ನಾವು ಗಂಭೀರವಾಗಿ ಪರಿಗಣಿಸಬೇಕು ಎಂದರು. ಅದಕ್ಕೆ ಧ್ವನಿಗೂಡಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಹೌದು, ನನ್ನ ಗಮನಕ್ಕೂ ಇದು ಬಂದಿತ್ತು. ಜಾಧವ್‌ ರಾಜೀನಾಮೆ ಕೊಟ್ಟರೆ ಸಮಸ್ಯೆಯೇನಿಲ್ಲ. ಉಳಿದವರು ಕೊಟ್ಟರೆ ಸ್ವಲ್ಪ ಕಷ್ಟವಾಗಬಹುದು. ನಾವು ಮುನ್ನಚ್ಚರಿಕೆ ವಹಿಸಬೇಕು ಎಂದು ಹೇಳಿದರು ಎನ್ನಲಾಗಿದೆ.

ಉಮೇಶ್‌ ಜಾಧವ್‌ ಸ್ಪೀಕರ್‌ಗೆ ರಾಜಿನಾಮೆ ಕೊಟ್ಟ ವಿಚಾರ ಗಮನಕ್ಕೆ ಬಂದಿದೆ. ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ಮನವಿ ಸಹ ಕೊಟ್ಟಿದ್ದೇವೆ. ಅವರು ಕಾನೂನಾತ್ಮಕವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡುತ್ತೇವೆ.
– ಡಾ. ಜಿ. ಪರಮೇಶ್ವರ್‌, ಉಪಮುಖ್ಯಮಂತ್ರಿ.

ಜಾಧವ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರೀಕ್ಷಿತ. ಅವರ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ರಮೇಶ್‌ಜಾರಕಿಹೊಳಿ, ನಾಗೇಂದ್ರ, ಮಹೇಶ್‌ ಕುಮಟಳ್ಳಿ ರಾಜೀನಾಮೆ ನೀಡುವುದಿಲ್ಲ. 
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಉಮೇಶ್‌ ಜಾಧವ್‌ ರಾಜೀನಾಮೆ ಕೊಟ್ಟಿದ್ದಾರೆ.  ಜಾಧವ್‌ ಮೇಲೆ ನಾನು ಈಗಾಗಲೇ ಸ್ಪೀಕರ್‌ಗೆ ಪಿಟಿಷನ್‌ ಕೊಟ್ಟಿದ್ದೇನೆ. ಪೂರಕ ದಾಖಲೆಗಳನ್ನೆಲ್ಲಾ ಹಿಂದೆಯೇ ಕೊಟ್ಟಿದ್ದೇನೆ. ಸ್ಪರ್ಧೆ ಮಾಡ್ತೀವಿ ಅನ್ನೋರಿಗೆ ಬೇಡ  ಎನ್ನೋಕಾಗುತ್ತಾ? 
– ಸಿದ್ದರಾಮಯ್ಯ

ಟಾಪ್ ನ್ಯೂಸ್

virat kohli k l rahul ishan kishan

ಇಶಾನ್, ರಾಹುಲ್, ವಿರಾಟ್: ಟಿ20 ವಿಶ್ವಕಪ್ ನಲ್ಲಿ ಭಾರತದ ಆರಂಭಿಕ ಆಟಗಾರ ಯಾರು?

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸಟೇಬಲ್ ಅನ್ನೇ ಅಪಹರಿಸಿದ!

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸ್ ಟೇಬಲ್ ಅನ್ನೇ ಅಪಹರಿಸಿದ!

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

ghfghftyyht

ಬಾಲಿವುಡ್ ನಟಿ ಯುವಿಕಾ ಚೌಧರಿಗೆ ಮಧ್ಯಂತರ ಜಾಮೀನು ಮಂಜೂರು

ms dhoni and n srinivasan

ಎಂ.ಎಸ್.ಧೋನಿ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲ: ಶ್ರೀನಿವಾಸನ್

hjghjgjy

ಪ್ರಜ್ಞಾವಂತ ಮತದಾರರು ಬಿಜೆಪಿಯನ್ನೇ ಗೆಲ್ಲಿಸ್ತಾರೆ : ಸಚಿವ ಕೆ.ಸುಧಾಕರ

Untitled-2

45ರ ವ್ಯಕ್ತಿ, 25ರ ಯುವತಿ ನಡುವೆ ವಿವಾಹ; ಏನಿದು ವೈರಲ್ ಫೋಟೋ ಹಿಂದಿನ ಕಹಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prabhu chauhan

ಕಾಲುಬಾಯಿ ರೋಗಕ್ಕೆ ಕೇಂದ್ರದಿಂದ 50 ಲಕ್ಷ ಡೋಸ್ ಲಸಿಕೆ ಪೂರೈಕೆ : ಸಚಿವ ಪ್ರಭು ಚವ್ಹಾಣ್

Untitled-2

45ರ ವ್ಯಕ್ತಿ, 25ರ ಯುವತಿ ನಡುವೆ ವಿವಾಹ; ಏನಿದು ವೈರಲ್ ಫೋಟೋ ಹಿಂದಿನ ಕಹಾನಿ

“ಸಿದ್ದರಾಮಯ್ಯನವರೇ, ಕಿಸ್ ಕಾ ಸಾತ್ ಕಿಸ್ ಕಾ ವಿಕಾಸ್?”: ಮುಂದುವರಿದ ಟ್ವೀಟ್ ವಾರ್

“ಸಿದ್ದರಾಮಯ್ಯನವರೇ, ಕಿಸ್ ಕಾ ಸಾತ್ ಕಿಸ್ ಕಾ ವಿಕಾಸ್?”: ಮುಂದುವರಿದ ಟ್ವೀಟ್ ವಾರ್

giyuytrewq

ಕನ್ನಡ ರಾಜ್ಯೋತ್ಸವ ; ಪರಭಾಷಿಕರು 100 ಕನ್ನಡ ಪದ ಬಳಸುವಂತೆ ಸುನಿಲ್ ಕುಮಾರ್ ಮನವಿ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

MUST WATCH

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

udayavani youtube

ದಾಂಡೇಲಿ ನಗರ ಸಭೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ಉಲ್ಲಂಘನೆ ಅಕ್ರಂ ಖಾನ್ ಆರೋಪ

udayavani youtube

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

ಹೊಸ ಸೇರ್ಪಡೆ

ಚಿತ್ರದುರ್ಗದಲ್ಲಿ ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣ

ಚಿತ್ರದುರ್ಗದಲ್ಲಿ ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣ

ಶಾಂತಿ ಸೌಹಾರ್ದತೆಯ ಸಂಕೇತವೇ ಪೈಗಂಬರ್ ಜಯಂತಿ: ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ .

ಶಾಂತಿ ಸೌಹಾರ್ದತೆಯ ಸಂಕೇತವೇ ಪೈಗಂಬರ್ ಜಯಂತಿ: ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ .

virat kohli k l rahul ishan kishan

ಇಶಾನ್, ರಾಹುಲ್, ವಿರಾಟ್: ಟಿ20 ವಿಶ್ವಕಪ್ ನಲ್ಲಿ ಭಾರತದ ಆರಂಭಿಕ ಆಟಗಾರ ಯಾರು?

ಕೃಷಿ ಕಾಯ್ದೆ ಜಾರಿಯಿಂದ ರೈತರು ಬೀದಿಪಾಲು

ಕೃಷಿ ಕಾಯ್ದೆ ಜಾರಿಯಿಂದ ರೈತರು ಬೀದಿಪಾಲು

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸಟೇಬಲ್ ಅನ್ನೇ ಅಪಹರಿಸಿದ!

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸ್ ಟೇಬಲ್ ಅನ್ನೇ ಅಪಹರಿಸಿದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.