Udayavni Special

ಸಿದ್ಧಗೊಂಡ ಸಂಪರ್ಕ ಸೇತುವೆ


Team Udayavani, May 21, 2018, 11:30 AM IST

siddagonda.jpg

ಬೆಂಗಳೂರು: ಕೊನೆಗೂ ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು “ನಮ್ಮ ಮೆಟ್ರೋ’ ನಡುವೆ ಸಂಪರ್ಕ ಸೇತುವೆ ಸಿದ್ಧಗೊಂಡಿದೆ. ನಗರದ ಹೃದಯಭಾಗಕ್ಕೆ ಮೆಟ್ರೋ ಬಂದು ಎರಡು ವರ್ಷಗಳ ನಂತರ ಪಾದಚಾರಿ ಮಾರ್ಗ ಬಹುತೇಕ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಸೇವೆಗೆ ಮುಕ್ತಗೊಳ್ಳಲಿದೆ.

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಡುವೆ ಇರುವ ಎತ್ತರಿಸಿದ ಪಾದಚಾರಿ ಮಾರ್ಗದಿಂದ ಮೆಟ್ರೋ ನಿಲ್ದಾಣಕ್ಕೆ ನೇರವಾಗಿ ಸಂಪರ್ಕ ಕಲ್ಪಿಸಬೇಕು ಎನ್ನುವುದು ಪ್ರಯಾಣಿಕರ ಬಹುದಿನಗಳ ಬೇಡಿಕೆ ಆಗಿತ್ತು. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸ್ಕೈವಾಕ್‌ನಿಂದ ಸುಮಾರು 30 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

ಈ ಮೊದಲು ಸುತ್ತು ಹಾಕಿ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ತಲುಪಬೇಕಿತ್ತು. ನೂತನ ಸ್ಕೈವಾಕ್‌ನಿಂದ ಮೆಟ್ರೋ ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳ ನಡುವಿನ ಅಂತರ ಹೆಚ್ಚು-ಕಡಿಮೆ 600ರಿಂದ 800 ಮೀ.ನಷ್ಟು ಕಡಿಮೆ ಆಗಲಿದೆ. ಈ ಮೂಲಕ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸಿದಂತಾಗಿದೆ.

ರೈಲು ನಿಲ್ದಾಣಕ್ಕೆ ತೆರಳುವವರು ಈಗಾಗಲೇ ನಿರ್ಮಾಣಗೊಂಡ ಅಂಡರ್‌ಪಾಸ್‌ ಮೂಲಕ ಹೋಗಬಹುದು. ಆದರೆ, ಸ್ಕೈವಾಕ್‌ ಮತ್ತು ಅಂಡರ್‌ಪಾಸ್‌ಗಳಲ್ಲಿ ಮುಂದಿನ ದಿನಗಳಲ್ಲಿ ಅಕ್ರಮ ಚಟುವಟಿಕೆ, ಫ‌ುಟ್‌ಪಾತ್‌ ವ್ಯಾಪಾರಿಗಳ ಹಾವಳಿ ಆಗದಂತೆ ನೋಡಿಕೊಳ್ಳಬೇಕಿದೆ. ಇಲ್ಲದಿದ್ದರೆ, ಇದು ಪ್ರಯಾಣಿಕರಿಗೆ ಮತ್ತೂಂದು ಕಿರಿಕಿರಿ ಆಗಲಿದೆ ಎಂದು ಪ್ರಜಾ ಸಂಸ್ಥೆಯ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ. 

ನಿತ್ಯ 6 ಲಕ್ಷ ಜನ ಸಂಚಾರ!: ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲ್ವೆ ಪ್ರಯಾಣಿಕರು ಸೇರಿದಂತೆ ಪ್ರತಿ ದಿನ ಮೆಜೆಸ್ಟಿಕ್‌ಗೆ ಬಂದು-ಹೋಗುವವರ ಸಂಖ್ಯೆ 8.5ರಿಂದ 9 ಲಕ್ಷ. ಇದರಲ್ಲಿ ಸಿಂಹಪಾಲು ಬಿಎಂಟಿಸಿಯದ್ದು. ಇಲ್ಲಿ ನಿತ್ಯ 6ರಿಂದ 6.5 ಲಕ್ಷ ಜನ ಬಂದು-ಹೋಗುತ್ತಾರೆ. ಇನ್ನು ಪೂರ್ವ-ಪಶ್ಚಿಮ ಕಾರಿಡಾರ್‌ನ ಮೆಟ್ರೋ ರೈಲಿನಲ್ಲಿ ನಿತ್ಯ 2 ಲಕ್ಷ ಜನ ಪ್ರಯಾಣಿಸುತ್ತಾರೆ. ಇದರಲ್ಲಿ ಬಹುತೇಕ ಪ್ರಯಾಣಿಕರು ಈ ಮೂರೂ ಮೂಲಗಳಿಂದಲೇ ಬರುತ್ತಾರೆ.

ಬಿಎಂಟಿಸಿ ಬಸ್‌ ನಿಲ್ದಾಣದ ಯಾವುದೇ ಮೂಲೆಯಿಂದ ಎತ್ತರಿಸಿದ ಸೇತುವೆ ಏರಿ, 20ನೇ ಪ್ಲಾಟ್‌ ಫಾರಂ ಎದುರು ಇಳಿಯಬೇಕು. ಅಲ್ಲಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ಗಮಿಸಲು ಇರುವ ಎರಡೂ ರಸ್ತೆಗಳನ್ನು ದಾಟಿ, ಸಾರ್ವಜನಿಕ ಶೌಚಾಲಯದ ಮುಂದೆಹಾದು ಮೆಟ್ರೋ ನಿಲ್ದಾಣ ತಲುಪಬೇಕು. ಇನ್ನು ಉತ್ತರ ಕರ್ನಾಟಕದ ಕಡೆಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಂದಿಳಿಯುವ ಪ್ರಯಾಣಿಕರು ಕೂಡ ಮೆಟ್ರೋ ನಿಲ್ದಾಣಕ್ಕೆ ಬರಬೇಕಾದರೆ ಇದೇ ರೀತಿಯ ಸಾಹಸ ಮಾಡಬೇಕಾದ ಸ್ಥಿತಿ ಈಗ ಇದೆ. ನೂತನ ಸ್ಕೈವಾಕ್‌ನಿಂದ ಈ ಸಮಸ್ಯೆ ತಪ್ಪಲಿದೆ. 

ಆದರೆ, ಇನ್ನೂ ಸ್ಕೈವಾಕ್‌ನಲ್ಲಿ ಪ್ರಯಾಣಿಕರಿಗೆ ಬಿಸಿಲು, ಮಳೆ ರಕ್ಷಣೆಗಾಗಿ ಶೆಲ್ಟರ್‌ ಅಳವಡಿಸಬೇಕು. ಬೀದಿ ದೀಪಗಳ ಅಳವಡಿಕೆ ಕೆಲಸ ಬಾಕಿ ಇದೆ. ಮೆಟ್ರೋ ನಿಲ್ದಾಣಕ್ಕೆ ತೆರಳಲು ಸೂಕ್ತ ಸೂಚನಾ ಫ‌ಲಕಗಳ ಅಳವಡಿಕೆಯೂ ಆಗಬೇಕಿದೆ. ಬಿಎಂಆರ್‌ಸಿ ಈ ಸ್ಕೈವಾಕ್‌ ನಿರ್ಮಾಣ ಮಾಡಿದೆ.

ಇದ್ದೂ ಇಲ್ಲದಂತಾದ ಸುರಂಗ ಮಾರ್ಗ: ಚಿಕ್ಕ ಲಾಲ್‌ಬಾಗ್‌ನಿಂದ ಗೋಪಾಲಪುರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಸುರಂಗ ಮಾರ್ಗದ ಪ್ರವೇಶದ್ವಾರ ಬಹುತೇಕ ಮುಚ್ಚಿರುತ್ತದೆ. ಹಾಗಾಗಿ, ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಫೆಬ್ರವರಿಯಲ್ಲೇ ಈ ಅಂಡರ್‌ಪಾಸ್‌ ಸೇವೆಗೆ ಮುಕ್ತಗೊಂಡಿದ್ದು, ನೇರವಾಗಿ ಗೋಪಾಲಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಆ ಭಾಗದಲ್ಲಿರುವ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ಯಾವಾಗಲೂ ಬೀಗ ಹಾಕಿರುತ್ತದೆ. ಹಾಗಾಗಿ, ಇದ್ದೂ ಇಲ್ಲದಂತಾಗಿದೆ. ಈ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

* ವಿಜಯಕುಮಾರ ಚಂದರಗಿ 

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

KUDಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

Capitals-New-01

ಚೇಸಿಂಗ್ ನಲ್ಲಿ ಮುಗ್ಗರಿಸಿದ ಡೆಲ್ಲಿ ; ಸನ್ ರೈಸರ್ಸ್ ಗೆ 15 ರನ್ ಜಯ

ಫ್ರೆಂಚ್‌ ಓಪನ್‌-2020; ಮುಗುರುಜಾ 3 ಗಂಟೆ ಹೋರಾಟ

ಫ್ರೆಂಚ್‌ ಓಪನ್‌-2020; ಮುಗುರುಜಾ 3 ಗಂಟೆ ಹೋರಾಟ

ಕಾರ್ತಿಕ್‌ ಬಳಗಕ್ಕೆ ಕಾದಿದೆ ರಾಜಸ್ಥಾನ್‌ ಟೆಸ್ಟ್‌

ಕಾರ್ತಿಕ್‌ ಬಳಗಕ್ಕೆ ಕಾದಿದೆ ರಾಜಸ್ಥಾನ್‌ ಟೆಸ್ಟ್‌

ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಚಿಕ್ಕಬಳ್ಳಾಪುರ: 5 ಕೋಟಿ 93 ಲಕ್ಷ ತೆರಿಗೆ ವಸೂಲಿ ಗುರಿ

ಚಿಕ್ಕಬಳ್ಳಾಪುರ: 5 ಕೋಟಿ 93 ಲಕ್ಷ ತೆರಿಗೆ ವಸೂಲಿ ಗುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

bng-tdy-2

ಕೋಮಾದಲ್ಲಿದ್ದ ಯುವಕನ ಆರೈಕೆ ಮಾಡಿದ ಪೊಲೀಸರು

ಓಕಳಿಪುರಕಾರಿಡಾರ್‌ ಪೂರ್ಣಕ್ಕೆ ಬೇಕು 1ವರ್ಷ

ಓಕಳಿಪುರಕಾರಿಡಾರ್‌ ಪೂರ್ಣಕ್ಕೆ ಬೇಕು 1ವರ್ಷ

ಹತ್ತೇ ನಿಮಿಷದಲ್ಲಿ ನಗರಕ್ಕೆ  ಬನ್ನಿ

ಹತ್ತೇ ನಿಮಿಷದಲ್ಲಿ ನಗರಕ್ಕೆ ಬನ್ನಿ

ಕಥೆ ಹೇಳುವ ತಂಡದ ಜತೆ ಮೋದಿ ಮಾತುಕತೆ

ಕಥೆ ಹೇಳುವ ತಂಡದ ಜತೆ ಮೋದಿ ಮಾತುಕತೆ

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆಹೊಸ ಸೇರ್ಪಡೆ

udupiಪ್ರಮುಖ ರಸ್ತೆಗಳಲ್ಲೇ ಹರಿಯುತ್ತಿದೆ ತ್ಯಾಜ್ಯ ನೀರು!

ಪ್ರಮುಖ ರಸ್ತೆಗಳಲ್ಲೇ ಹರಿಯುತ್ತಿದೆ ತ್ಯಾಜ್ಯ ನೀರು!

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ನಕ್ಷೆ ನೀಡಲು ಸೂಚನೆ; ಶೀಘ್ರ ಇತ್ಯರ್ಥಕ್ಕೆ ಡಿಸಿ ಆದೇಶ

ನಕ್ಷೆ ನೀಡಲು ಸೂಚನೆ; ಶೀಘ್ರ ಇತ್ಯರ್ಥಕ್ಕೆ ಡಿಸಿ ಆದೇಶ

KUDಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.