ಕಳೆದಿದ್ದ ದಾಖಲೆ ತಲುಪಿಸಿದ ಪೇದೆ: ಉದ್ಯೋಗ ಪಡೆದ ಯುವತಿ

Team Udayavani, Jan 11, 2020, 3:09 AM IST

kaledidda

ಬೆಂಗಳೂರು: ಕಳೆದು ಹೋಗಿದ್ದ ಶೈಕ್ಷಣಿಕ ಮೂಲ ದಾಖಲೆಗಳನ್ನು ತ್ವರಿತಗತಿಯಲ್ಲಿ ಯುವತಿಯ ಕೈ ಸೇರುವಂತೆ ಮಾಡಿದ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರ ಕಾರ್ಯಕ್ಷಮತೆಯಿಂದಾಗಿ ಕಾಶ್ಮೀರ ಮೂಲದ ಯುವತಿ, ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆಯಲು ನೆರವಾದ ಪ್ರಕರಣ ನಡೆದಿದೆ.

ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯ ಪೊಲೀಸ್‌ ಕಾನ್ಸ್‌ ಟೇಬಲ್‌ ಸದಾಶಿವ ಬೆಳಗಲಿ, ತ್ವರಿತ ಕಾರ್ಯತತ್ಪರತೆ ಮೆರೆದವರು. ಅವರ ಕಾರ್ಯದಿಂದ ಉದ್ಯೋಗ ಪಡೆದ ಕಾಶ್ಮೀರದ ಎಂಜಿನಿಯರಿಂಗ್‌ ಪದವೀಧರೆ ಮರಿಯಾ ಖಾನ್‌, ಬೆಂಗಳೂರು ಪೊಲೀಸರ ಕಾರ್ಯಕ್ಷಮತೆ, ಕಾನ್ಸ್‌ಟೇಬಲ್‌ ಸದಾಶಿವ ಅವರ ನೆರವನ್ನು ಶ್ಲಾ ಸಿದ್ದಾರೆ. ಜತೆಗೆ, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ.

ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಬಹುರಾಷ್ಟ್ರೀಯ ಕಂಪನಿಯಲ್ಲಿ ಜ.7ರಂದು ಸಂದರ್ಶನಕ್ಕೆಂದು ಆಟೋದಲ್ಲಿ ತೆರಳಿದ್ದ ಮರಿಯಾ, ತಮ್ಮ ಶೈಕ್ಷಣಿಕ ಮೂಲ ದಾಖಲೆಗಳನ್ನು ಮರೆತು ಹೋಗಿದ್ದಾರೆ. ದಾಖಲೆಗಳನ್ನು ಗಮನಿಸಿ ಪುನಃ ಅಲ್ಲಿಗೆ ಹೋದ ಚಾಲಕ, ಅವುಗಳನ್ನು ಟೆಕ್‌ಪಾರ್ಕ್‌ ಬಳಿಯಿದ್ದ ಅಪರಿಚಿತ ಯುವಕನಿಗೆ ನೀಡಿದ್ದಾರೆ. ಆ ಯುವಕ ದಾಖಲೆಗಳನ್ನು ನಾಗವಾರ ಸಿಗ್ನಲ್‌ನಲ್ಲಿ ಕರ್ತವ್ಯದಲ್ಲಿದ್ದ ಸದಾಶಿವ ಅವರಿಗೆ ನೀಡಿದ್ದ.

ದಾಖಲೆಗಳನ್ನು ಠಾಣೆಗೆ ತಂದ ಸದಾಶಿವ, ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಯುವತಿಗೆ ತಲುಪಿಸಲು ಪ್ರಯತ್ನಿಸಿದ್ದಾರೆ. ಆದರೆ, ಮರಿಯಾರ ದೂರವಾಣಿ ಸಂಪರ್ಕ ಸಿಕ್ಕಿಲ್ಲ. ಹೀಗಾಗಿ, ಸದಾಶಿವ ಅವರು ಘಟನೆ ಕುರಿತು ಸಮೀಪದ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡಿ ದಾಖಲೆಗಳು ಕಳೆದ ಬಗ್ಗೆ ದೂರು ಬಂದರೆ ಸಂಪರ್ಕಿಸುವಂತೆ ಹೇಳಿದ್ದಾರೆ. ಆದರೆ, ಯಾವುದೇ ದೂರು ದಾಖಲಾಗಿಲ್ಲ.

ಇ-ಲಾಸ್ಟ್‌ನಲ್ಲಿ ದೂರು ದಾಖಲಾದರೆ ಠಾಣೆಯ ಇ-ಮೇಲ್‌ ವಿಳಾಸಕ್ಕೆ ಮಾಹಿತಿ ಬರಲಿದೆ ಎಂದು ಸದಾಶಿವ ಅವರು ಕಾದರೂ ಪ್ರಯೋಜನವಾಗಿಲ್ಲ. ಇತ್ತ ದಾಖಲೆಗಳು ಕಳೆದಿದ್ದರಿಂದ ಮರಿಯಾ ಕೂಡ ಕಂಗಾಲಾಗಿದ್ದರು. ಜ.8ರಂದು ಭಾರತ್‌ ಬಂದ್‌ ಇದ್ದಿದ್ದರಿಂದಾಗಿ ಸದಾಶಿವ ಅವರು ಮುಂಜಾನೆ ಐದು ಗಂಟೆಗೆ ಠಾಣೆಗೆ ಬಂದು, ಇ-ಲಾಸ್ಟ್‌ ಪರಿಶೀಲನೆ ನಡೆಸಿದಾಗ, ದಾಖಲೆ ಕಳೇದ ಬಗ್ಗೆ ದೂರು ಬಂದಿತ್ತು. ಕೂಡಲೇ ದೂರಿನಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಠಾಣೆಗೆ ಬಂದು ಸದಾಶಿವ ಅವರಿಂದ ದಾಖಲೆಗಳನ್ನು ಪಡೆದ ಮರಿಯಾ, ದೂರಿಗೆ ತುರ್ತು ಸ್ಪಂದನೆ ನೀಡಿ ದಾಖಲೆ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಇದಾದ ಬಳಿಕ ದಾಖಲೆಗಳನ್ನು ಸಲ್ಲಿಸಿ ಕಂಪನಿಯಲ್ಲಿ ಕೆಲಸ ಪಡೆದಿದ್ದಾರೆ. ಈ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಸದಾಶಿವ ಬೆಳಗಲಿ, “ಪೊಲೀಸ್‌ ಸಿಬ್ಬಂದಿಯಾಗಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಯುವತಿ ಉದ್ಯೋಗ ಪಡೆದ ವಿಚಾರ ಸಂತೋಷ ನೀಡಿತು’ ಎಂದರು.

ಟಾಪ್ ನ್ಯೂಸ್

ಟ್ವಿಟರ್‌ನಲ್ಲಿ ಫಾಲೋವರ್‌ ಸಂಖ್ಯೆ ಹೆಚ್ಚದಂತೆ ಕೇಂದ್ರದಿಂದ ತಡೆ: ರಾಹುಲ್ ಗಾಂಧಿ

ಟ್ವಿಟರ್‌ನಲ್ಲಿ ಫಾಲೋವರ್‌ ಸಂಖ್ಯೆ ಹೆಚ್ಚದಂತೆ ಕೇಂದ್ರದಿಂದ ತಡೆ: ರಾಹುಲ್ ಗಾಂಧಿ

1-rwerw

ಮುಗಿಯದ ವಿವಾದ : ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತಪಡಿಸಿಲ್ಲವೆಂದ ರಾಮದಾಸ್

10death

ಬಂಟ್ವಾಳ: ಶೇಂದಿ ತೆಗೆಯುತ್ತಿದ್ದ ವ್ಯಕ್ತಿ ಮರದಿಂದ ಬಿದ್ದು ಸಾವು

vidhana-soudha

ಪೊಲೀಸರ ಮೇಲೆ ಶಾಕಸರಿಂದ ಹಲ್ಲೆ? ಅವಾಚ್ಯ ನಿಂದನೆ ಆರೋಪ

araga

ಸ್ಫೋಟ ಆರೋಪಿಗೆ ರಾಜಾತಿಥ್ಯ : ವರದಿಗೆ ಗೃಹ ಇಲಾಖೆ ಸೂಚನೆ

ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ಗೆ ಸಂದೇಶ ಅಳಿಸುವ ಅಧಿಕಾರ; ಏನಿದು ಹೊಸ ವ್ಯವಸ್ಥೆ

ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ಗೆ ಸಂದೇಶ ಅಳಿಸುವ ಅಧಿಕಾರ; ಏನಿದು ಹೊಸ ವ್ಯವಸ್ಥೆ

12 ಬಿಜೆಪಿ ಶಾಸಕರ ಅಮಾನತು ನಿರ್ಣಯವನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್

12 ಬಿಜೆಪಿ ಶಾಸಕರ ಅಮಾನತು ನಿರ್ಣಯವನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ:  ಬಾಂಗ್ಲಾ ಮೂಲದ ಮಹಿಳೆ ಬಂಧನ

ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ: ಬಾಂಗ್ಲಾ ಮೂಲದ ಮಹಿಳೆ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಟ್ವಿಟರ್‌ನಲ್ಲಿ ಫಾಲೋವರ್‌ ಸಂಖ್ಯೆ ಹೆಚ್ಚದಂತೆ ಕೇಂದ್ರದಿಂದ ತಡೆ: ರಾಹುಲ್ ಗಾಂಧಿ

ಟ್ವಿಟರ್‌ನಲ್ಲಿ ಫಾಲೋವರ್‌ ಸಂಖ್ಯೆ ಹೆಚ್ಚದಂತೆ ಕೇಂದ್ರದಿಂದ ತಡೆ: ರಾಹುಲ್ ಗಾಂಧಿ

1-rwerw

ಮುಗಿಯದ ವಿವಾದ : ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತಪಡಿಸಿಲ್ಲವೆಂದ ರಾಮದಾಸ್

10death

ಬಂಟ್ವಾಳ: ಶೇಂದಿ ತೆಗೆಯುತ್ತಿದ್ದ ವ್ಯಕ್ತಿ ಮರದಿಂದ ಬಿದ್ದು ಸಾವು

9life

ಸದೃಢ ಆರೋಗ್ಯಕ್ಕೆ ಮುಂಜಾಗ್ರತೆ ಅವಶ್ಯ: ಶ್ರೀ

vidhana-soudha

ಪೊಲೀಸರ ಮೇಲೆ ಶಾಕಸರಿಂದ ಹಲ್ಲೆ? ಅವಾಚ್ಯ ನಿಂದನೆ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.