Udayavni Special

ಮುಂದುವರಿದ ಕಾರ್ಯಕರ್ತೆಯರ ಪ್ರತಿಭಟನೆ


Team Udayavani, Feb 8, 2018, 1:18 PM IST

blore-5.jpg

ಬೆಂಗಳೂರು: “ಮನೀ ಬಿಟ್ಟು ಮೂರ್‌ ದಿನ ಆಯ್ತು. ಹೊಟ್ಟಿಗೆ ಹಿಟ್ಟಿಲ್ಲ. ಶೌಚಾಲಯಕ್ಕೆ ಹೋಗಾಕ ಸರಿಯಾದ ಜಾಗ ಇಲ್ಲ. ಮನೆಯಿಂದ ತಂದಿದ್ದ ರೊಟ್ಟಿ, ಚೆಟ್ನಿ ಖಾಲಿಯಾಗ್ಯಾವು. ನಿನ್ನೆ ರಾತ್ರಿಯಿಂದ ಹೊಟ್ಟಿàಗೆ ಹಿಟ್ಟಿಲ್ದ ಕಳ್ಳು ಚುರುಕ್‌ ಅಂತೈತಿ. ಸಾಕಾಗಿ ಹೋಗೈತ್ರೀ ಈ ಜೀವನ. ಸರ್ಕಾರದೋವ್ರು ಯಾರಾದ್ರು ಬಂದ್‌ ನಾಲ್ಕೈದು ಕಾಸು (ನಾನೂರು, ಐದುನೂರು) ಹೆಚ್ಚಿಗಿ ಕೋಡ್ತೀವಿ ಅಂತ ಹೇಳಿದ್ರೆ ಸಾಕು. ನಾವ್‌, ನಂಪಾಡಿಗೆ ನಮ್ಮೂರ್‌ ಕಡೆ ಹೊಕ್ಕೀವ್ರಿ ಇದು ಪ್ರತಿಭಟನಾ ನಿರತ ಬಿಸಿಯೂಟ ಕಾರ್ಯಕರ್ತೆ ನಾಗಮ್ಮ ಅವರ ಅಳಲು.

ಕೊರೆಯುವ ಚಳಿಯಲ್ಲಿಯೇ ಮಂಗಳವಾರ ಬೀದಿಯಲ್ಲಿ ರಾತ್ರಿ ಕಳೆದಿದ್ದ ನಾಗಮ್ಮನಿಗೆ ಒಂದು ಕಡೆ ಊಟ ಇಲ್ಲದೆ ಹೊಟ್ಟೆ ತಡಬಡಿಸುತ್ತಿತ್ತು. ಯಾರಾದ್ರೂ ಊಟ ಕೊಟ್ರೇ ಸಾಕಿತ್ತು ಎಂಬ ಮನಸ್ಥಿತಿ ಅವರದಾಗಿತ್ತು. ಫ್ರೀಡಂ ಪಾರ್ಕ್‌ ಮುಂಭಾಗದಲ್ಲಿ ಬೆಳಗ್ಗೆ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸಹ ನಟಿಯೊಬ್ಬರು ಊಟ ನೀಡಿದಾಗ ಅವರ ಆ ಖುಷಿಗೆ ಪಾರವೇ ಇರಲಿಲ್ಲ.

ಈ ಪರಿಸ್ಥಿತಿ ಎಲ್ಲರದ್ದೂ ಆಗಿದೆ. ರಾತ್ರಿ ನಿದ್ರೆ ಇಲ್ಲದೆ, ರಸ್ತೆ ಮಧ್ಯೆ ಹಾಗೂ ಇಕ್ಕೆಲಗಳಲ್ಲಿ ತಾವು ತಂದಿದ್ದ ಕೈಚೀಲಗಳನ್ನೇ ದಿಂಬುಗಳನ್ನಾಗಿ ಮಾಡಿಕೊಂಡು ಮಲಗಿದ್ದ ಮಹಿಳೆಯರು ಊಟ, ನೀರಿಗಾಗಿ ಪರಿತಪ್ಪಿಸುತ್ತಿದ್ದ ಪರಿಸ್ಥಿತಿ ನೋವಿನಿಂದ ಕೂಡಿತ್ತು. ತಮ್ಮ ಬೇಡಿಕೆಗೆ ಸ್ಪಂದಿಸಲು ಮಂತ್ರಿಗಳು, ಸರ್ಕಾರದ ಅಧಿಕಾರಿಗಳ ಬರುವಿಕೆಗಾಗಿ ಕಾಯುತ್ತಿದ್ದರು ಕುಸಿದು ಬಿದ್ದ ಮಹಿಳೆ
ಅನಿರ್ಧಿಷ್ಟಾವಧಿಯ ಅಹೋರಾತ್ರಿ ಹೋರಾಟದಲ್ಲಿ ರಾಜ್ಯದ ನಾಲ್ಕೂ ಮೂಲೆಗಳಿಂದ ಬಿಸಿಯೂಟ ತಯಾರಕರು ಪಾಲ್ಗೊಂಡಿ 
ದ್ದಾರೆ. ಸರಿಯಾಗಿ ಅನ್ನ, ನಿದ್ರೆ ಇಲ್ಲದೆ ಅವರೆಲ್ಲಾ ನಿತ್ರಾಣಗೊಂಡಿದ್ದಾರೆ. ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ
ರಾಣೆಬೆನ್ನೂರಿನ ಸುನಂದಾ ಎಂಬುವರು ಬುಧವಾರ ಸ್ಥಳದಲ್ಲಿಯೇ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಅವರನ್ನು
ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ನೆರವಾದರು.

ನಾವೆಲ್ಲರೂ ದೂರದೂರುಗಳಿಂದ ಬಂದಿದ್ದೇವೆ. ಸಿಎಂ ಮತ್ತು ಶಿಕ್ಷಣ ಸಚಿವ ತನ್ವೀರ್‌ ಸೇಠ್… ಧರಣಿ ನಿರತ ಸ್ಥಳಕ್ಕೆ ಬರಬೇಕು.
ಅವರು ಬಂದು ನಮ್ಮ ದುಮ್ಮಾನಗಳನ್ನು ಕೇಳುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ.
ಶೈಲಜಾ, ತೀರ್ಥಹಳ್ಳಿ ನಿವಾಸಿ.

ಈ ಹಿಂದೆ ತನ್ವೀರ್‌ ಸೇಠ್ಠ್… ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಬಿಸಿಯೂಟ ತಯಾರ ಕರಿಗೆ 3 ಸಾವಿರ ರೂ. ಹೆಚ್ಚುವರಿಯಾಗಿ ನೀಡುವ ಭರವಸೆ ನೀಡಿದ್ದರು. ಆದರೆ, ಸರ್ಕಾರ ಕ್ರಮ ಕೈಗೊಂಡಿಲ್ಲ. ಕೇಂದ್ರವೂ ನಮ್ಮನ್ನು ಕಡೆಗಣಿಸಿದೆ. ವೇತನ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವು ಭಾರಿ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ಈ ಬಗ್ಗೆ ಮುಂದೆ ಸರ್ಕಾರದ ವಿರುದ್ದ ಹೋರಾಟ ರೂಪಿಸಲಾಗುವುದು.
ಹೊನ್ನಪ್ಪ ಮರೇಮ್ಮನವರ, ಬಿಸಿಯೂಟ ತಯಾರಕರ ಫೆಡರೇಷನ್‌ನ ರಾಜ್ಯ ಸಮಿತಿ ಅಧ್ಯಕ್ಷ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಜೋಶಿ, ಶೆಟ್ಟರ್ ಹೆಸರು ಕೇಳಿ ಬರುತ್ತಿದೆ: ಸತೀಶ್ ಜಾರಕಿಹೊಳಿ

ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಜೋಶಿ, ಶೆಟ್ಟರ್ ಹೆಸರು ಕೇಳಿ ಬರುತ್ತಿದೆ: ಸತೀಶ್ ಜಾರಕಿಹೊಳಿ

ಯಾದಗಿರಿಗೆ ನಿರಂತರ ಕೋವಿಡ್ ಆಘಾತ! ಮತ್ತೆ18 ಜನರಲ್ಲಿ ಸೋಂಕು ದೃಢ

ಯಾದಗಿರಿಗೆ ನಿರಂತರ ಕೋವಿಡ್ ಆಘಾತ! ಮತ್ತೆ18 ಜನರಲ್ಲಿ ಸೋಂಕು ದೃಢ

ರಾಜ್ಯದಲ್ಲಿ ಮತ್ತೆ 141 ಜನರಿಗೆ ಕೋವಿಡ್-19 ಸೋಂಕು ದೃಢ

ರಾಜ್ಯದಲ್ಲಿ ಮತ್ತೆ 141 ಜನರಿಗೆ ಕೋವಿಡ್-19 ಸೋಂಕು ದೃಢ

ಕ್ವಾರಂಟೈನ್ ಮುಗಿಸಿ ಬಂದವರಿಗೂ ಸೋಂಕು ದೃಢ: ಉಡುಪಿಯಲ್ಲಿಂದು ಜನರಿಗೆ ಸೋಂಕು ಪತ್ತೆ

ಕ್ವಾರಂಟೈನ್ ಮುಗಿಸಿ ಬಂದವರಿಗೂ ಸೋಂಕು ದೃಢ: ಉಡುಪಿಯಲ್ಲಿಂದು 13 ಜನರಿಗೆ ಸೋಂಕು ಪತ್ತೆ

ಬಿಎಸ್ ವೈ ಅವರಿಂದ ಯತ್ನಾಳ್ ಶಾಸಕರಾಗಿದ್ದು, ಮಾತನಾಡುವ ಮೊದಲು ಯೋಚಿಸಲಿ: ಅಯನೂರು

ಬಿಎಸ್ ವೈ ಅವರಿಂದ ಯತ್ನಾಳ್ ಶಾಸಕರಾಗಿದ್ದು, ಮಾತನಾಡುವ ಮೊದಲು ಯೋಚಿಸಲಿ: ಅಯನೂರು

ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಮುಂದುವರಿಯುತ್ತದೆ: ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಮುಂದುವರಿಯುತ್ತದೆ: ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಉಡುಪಿ: ಕೋವಿಡ್ ಗೆದ್ದ ನಾಲ್ವರು ಪೊಲೀಸರು ಆಸ್ಪತ್ರೆಯಿಂದ ಬಿಡುಗಡೆ

ಉಡುಪಿ: ಕೋವಿಡ್ ಗೆದ್ದ ನಾಲ್ವರು ಪೊಲೀಸರು ಆಸ್ಪತ್ರೆಯಿಂದ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tree rain

ಅವಾಂತರ ಸೃಷ್ಟಿಸಿದ ವರ್ಷಧಾರೆ

hosa-sumka-mrp

ಹೊಸ ಸುಂಕ ಹಳೆಯ ಎಂಆರ್‌ಪಿ

pil notice

ತೊಡಕು: ಸ್ವಯಂ ಪ್ರೇರಿತ ಪಿಐಎಲ್‌, ನೋಟಿಸ್‌

contain qyr

ಒಂದೇ ದಿನ 13 ಮಂದಿಗೆ ಕೋವಿಡ್‌ 19

pada galte

ಪಾದರಾಯನಪುರ ಗಲಾಟೆ: ಆರೋಪಿಗಳಿಗೆ ಜಾಮೀನು

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಶಿವಮೊಗ್ಗದಲ್ಲಿ ಇಂದು ಹೊಸದಾಗಿ ಆರು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಶಿವಮೊಗ್ಗದಲ್ಲಿ ಇಂದು ಹೊಸದಾಗಿ ಆರು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಜೋಶಿ, ಶೆಟ್ಟರ್ ಹೆಸರು ಕೇಳಿ ಬರುತ್ತಿದೆ: ಸತೀಶ್ ಜಾರಕಿಹೊಳಿ

ಬಿಜೆಪಿಯಲ್ಲಿ ಸಿಎಂ ಸ್ಥಾನಕ್ಕೆ ಜೋಶಿ, ಶೆಟ್ಟರ್ ಹೆಸರು ಕೇಳಿ ಬರುತ್ತಿದೆ: ಸತೀಶ್ ಜಾರಕಿಹೊಳಿ

ದೇಶಕ್ಕೊಬ್ಬನೇ ಮುಖ್ಯ ದಂಡನಾಯಕ

ದೇಶಕ್ಕೊಬ್ಬನೇ ಮುಖ್ಯ ದಂಡನಾಯಕ

30-May-25

ಕೋವಿಡ್ ವಾರಿಯರ್ಸ್ ಗಳ ಸೇವೆ ಅನನ್ಯ: ಸುರೇಶಗೌಡ

ಜೂ.1ರಿಂದ ಉಡುಪಿಯಲ್ಲಿ ನಿರಂತರವಾಗಿ ಖಾಸಗಿ ಬಸ್ಸು ಓಡಾಟ:  ಶಾಸಕ ರಘುಪತಿ ಭಟ್

ಜೂ.1ರಿಂದ ಉಡುಪಿಯಲ್ಲಿ ನಿರಂತರವಾಗಿ ಖಾಸಗಿ ಬಸ್ಸು ಓಡಾಟ:  ಶಾಸಕ ರಘುಪತಿ ಭಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.