ರಾಜರಾಜೇಶ್ವರಿ ಆಸ್ಪತ್ರೆ ವೈದ್ಯರಿಂದ ದೇಶದ ಮೊದಲ 3ಡಿ ಲೈವ್‌ ಸರ್ಜರಿ

Team Udayavani, Jun 18, 2019, 8:55 PM IST

ದೇಶದ ಮೊದಲ 3ಡಿ ಲೈವ್‌ ಸರ್ಜರಿ ಕೈಗೊಂಡ ಮೈಸೂರು ರಸ್ತೆಯ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ವೈದ್ಯರ ತಂಡ.

ಕೆಂಗೇರಿ: ಮೈಸೂರು ರಸ್ತೆಯ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ವೈದ್ಯರ ತಂಡ ದೇಶದ ಮೊಟ್ಟಮೊದಲ 3ಡಿ ಲೈವ್‌ ಸರ್ಜರಿ ಮಾಡುವ ಮೂಲಕ ದಾಖಲೆ ಬರೆದಿದೆ.

ರಾಜರಾಜೇಶ್ವರಿ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ.ಟಿ.ಎಂ.ನಾಗರಾಜ್‌ ನೇತೃತ್ವದಲ್ಲಿ ನಡೆದ 3ಡಿ ರೈನೋಪ್ಲಾಸ್ಟಿ ಸರ್ಜರಿ ನಡೆದಿದೆ.

ಸರ್ಜರಿ ನಂತರ ಮಾತನಾಡಿದ ಡಾ.ಟಿ.ಎನ್‌.ನಾಗರಾಜ್‌, ಈ ಸರ್ಜರಿಯಲ್ಲಿ ನಾವು 3ಡಿ ಗ್ಲಾಸ್‌ಗಳನ್ನು ಉಪಯೋಗಿಸಿದ್ದೇವೆ. ಸರ್ಜರಿ ವೇಳೆ ಉಪಸ್ಥಿತರಿದ್ದ ಡಾ.ವಿರೇಂದ್ರ ಗೈಸಾಸ್‌ ಹಾಗೂ ಡಾ.ವಿಶ್ವಾಸ್‌ ವಿಜಯ್‌ದೇವ್‌ ಅವರು ಭಾರತದ ಖ್ಯಾತ ಸರ್ಜನ್‌ಗಳಾಗಿದ್ದಾರೆ.

ಪ್ರಸ್ತುತ ನಾವು ಕೈಗೊಂಡಿರುವುದು ದೇಶದ ಮೊಟ್ಟಮೊದಲ 3ಡಿ ಲೈವ್‌ ಸರ್ಜರಿಯಾಗಿದ್ದು, ಭವಿಷ್ಯದಲ್ಲಿ ಇದು ಸರ್ಜರಿ ಕ್ಷೇತ್ರದಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ತರಲಿದೆ. ಕಾಸ್ಮೆಟಿಕ್‌ ಸರ್ಜರಿ ಮತ್ತು ಮೂಗಿನ ಭಾಗದ ಸರ್ಜರಿಯಲ್ಲಿ ಈ ಹೊಸ ತಂತ್ರಜ್ಞಾನ ರೋಗಿಗಳಿಗೆ ವರವಾಗಿದೆ ಎಂದರು. ಸರ್ಜರಿ ನಡೆಸುವ ಮೂಲಕ ಇತಿಹಾಸ ನಿರ್ಮಿಸಿದ ವೈದ್ಯರನ್ನು ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ಸಂಸ್ಥಾಪಕ ಅಧ್ಯಕ್ಷ ಎ.ಸಿ.ಷಣ್ಮುಗಮ್‌ ಅಭಿನಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ