ಕಾಳಸಂತೆ ಕೊನೆಗೊಳಿಸಿ


Team Udayavani, May 2, 2021, 7:00 AM IST

covid effect in karnataka

ಬೆಂಗಳೂರು: ರಾಜ್ಯಾದ್ಯಂತ ತೀವ್ರವಾಗಿರುವ ಕೊರೊನಾ ಹಾವಳಿಯ ದುರ್ಲಾಭ ಪಡೆಯಲು ಹೊಂಚುಹಾಕುತ್ತಿರುವ ದುಷ್ಕರ್ಮಿಗಳು ಸೋಂಕುಪೀಡಿತರ ಜೀವ ಉಳಿಸುವ ರೆಮಿಡಿಸಿವಿರ್‌, ಆಮ್ಲಜನಕ ಸಿಲಿಂಡರ್‌ ಮತ್ತು ಆಸ್ಪತ್ರೆಗಳ ಹಾಸಿಗೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಲವು ದಿನಗಳಿಂದ ಇಂಥ ಪ್ರಕರಣಗಳು ವರದಿಯಾಗುತ್ತಿದ್ದು, ಜನರು ದುಷ್ಕರ್ಮಿಗಳು ಒಡ್ಡುವ ಆಮಿಷಕ್ಕೆ ಬಲಿಯಾಗುತ್ತಿದ್ದಾರೆ. ಬೆಂಗಳೂರು ಸಹಿತ ರಾಜ್ಯದ ವಿವಿಧೆಡೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 50ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಒಟ್ಟು 26 ಪ್ರಕರಣಗಳು ದಾಖಲಾಗಿವೆ. ವಿವಿಧ ಜಿಲ್ಲೆಗಳ ಸರಕಾರಿ- ಖಾಸಗಿ ಆಸ್ಪತ್ರೆಗಳು, ಮೆಡಿಕಲ್‌ ಸ್ಟೋರ್‌ಗಳ ಮೇಲೆ ನಿಗಾ ಇರಿಸಲಾಗಿದೆ. ಜಿಲ್ಲಾ, ತಾಲೂಕು ಆರೋಗ್ಯಾಧಿಕಾರಿಗಳ ಜತೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಲಬುರಗಿ: ಮೂವರ ಬಂಧನ

ಕಲಬುರಗಿಯಲ್ಲಿ ಖಾಸಗಿ ಸ್ಟಾಫ್‌ ನರ್ಸ್‌, ಎಕ್ಸರೇ ಟೆಕ್ನಿಶಿಯನ್‌ ಮತ್ತು ಮೆಡಿಕಲ್‌ ಶಾಪ್‌ ಉದ್ಯೋಗಿ ಸಹಿತ ಮೂವರು ಕಾಳಸಂತೆಯಲ್ಲಿ ರೆಮಿಡಿಸಿವಿರ್‌ ಮಾರಾಟ ಮಾಡಿ ಜೈಲು ಸೇರಿದ್ದಾರೆ. ಈ ಇಂಜೆಕ್ಷನ್‌ಗಳನ್ನು 20ರಿಂದ 25 ಸಾವಿರ ರೂ.ಗಳಿಗೆ ಮಾರಾಟ ಮಾಡುವಾಗಲೇ ಪೊಲೀಸರು ಸೆರೆ ಹಿಡಿದಿದ್ದಾರೆ.

30 ಸಾವಿರ ರೂ. ಬೆಲೆ!

ಬೆಳಗಾವಿ ಜಿಲ್ಲೆಯಲ್ಲಿ 15 ದಿನಗಳ ಹಿಂದೆ ರೆಮಿಡಿಸಿವಿರ್‌ ಚುಚ್ಚುಮದ್ದು 25-30 ಸಾವಿರ ರೂ.ವರೆಗೆ ಕಾಳಸಂತೆಯಲ್ಲಿ ಮಾರಾಟವಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ವಿಜಯಪುರದಲ್ಲಿ ಐವರ ಬಂಧನ

ವಿಜಯಪುರದಲ್ಲಿ ರೆಮಿಡಿಸಿವಿರ್‌ ಕಾಳಸಂತೆ ಮಾರಾಟಕ್ಕಾಗಿ ಐವರನ್ನು ಬಂಧಿಸಿದ್ದು, ಡಿಎಚ್‌ಒ ಡಾ| ರಾಜಕುಮಾರ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ದಾವಣಗೆರೆಯಲ್ಲಿ ಇಬ್ಬರ ಬಂಧನ

ದಾವಣಗೆರೆಯಲ್ಲಿ ಜಿಲ್ಲಾ ಚಿಗಟೇರಿ ಆಸ್ಪತ್ರೆ ಫಾರ್ಮಸಿಸ್ಟ್‌ ಜಿ. ಮಂಜುನಾಥ ರಾವ್‌ ಮತ್ತು ದಿನಗೂಲಿ ನೌಕರ ಗಣೇಶ್‌ ಎಂಬವರನ್ನು ಬಂಧಿಸಲಾಗಿದೆ. ಜಿಲ್ಲಾಸ್ಪತ್ರೆ ಹಿಂಭಾಗ ಆಟೋದಲ್ಲಿ ರೆಮಿಡಿಸಿವಿರ್‌ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ವೇಳೆ ಗಣೇಶ್‌ನನ್ನು ಬಂಧಿಸಕೊಳ್ಳಲಾಗಿತ್ತು. ಆತ ನೀಡಿದ ಸುಳಿವಿನ ಮೇರೆಗೆ ಮಂಜುನಾಥ ರಾವ್‌ನನ್ನು ಬಂಧಿಸಲಾಗಿತ್ತು.

ಹೇಗಿದೆ ದಂಧೆ ?

ರೆಮಿಡಿಸಿವಿರ್‌ ಔಷಧ ಉತ್ಪಾದಿಸುವ ಕಂಪೆನಿಗಳು ಮತ್ತು ಸಗಟು ವ್ಯಾಪಾರಿಗಳು ಈ ಮಾಫಿಯಾದಲ್ಲಿ ತೊಡಗಿವೆ. ಮೂರನೇ ವ್ಯಕ್ತಿ ಮತ್ತು ಸಂಸ್ಥೆಯ ಮೂಲಕ ಔಷಧ ಮಳಿಗೆಗಳಲ್ಲಿ ರೆಮಿಡಿಸಿವಿರ್‌ ಮಾರಾಟ ಮಾಡಲಾಗುತ್ತಿದೆ.  ಇದಲ್ಲದೆ, ಸ್ವಯಂಸೇವಕರ ಹೆಸರಿನಲ್ಲಿ ಕೆಲವರು ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕದ ಸಿಲಿಂಡರ್‌ ಕೊಡಿಸುವುದಾಗಿ ಮೋಸ ಮಾಡುತ್ತಿದ್ದಾರೆ. ಇವರ ಮೋಸಕ್ಕೆ ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ವೇದಿಕೆಯಾಗುತ್ತಿವೆ. ಕೆಲವು ಸ್ವಯಂಸೇವಕರು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ನೊಂದವರಿಗೆ ಸಹಾಯ ಮಾಡುತ್ತಿದ್ದಾರೆ. ಇದರಲ್ಲಿ ನುಸುಳುವ ವಂಚಕರು ಹಾಸಿಗೆ, ಆಮ್ಲಜನಕ ಕೊಡಿಸುವುದಾಗಿ ಹೇಳಿ ಮುಂಗಡ ಹಣ ವಸೂಲಿ ಮಾಡುತ್ತಿದ್ದಾರೆ.

3,7504,000 ರೆಮಿಡಿಸಿವಿರ್‌ ದರ ನಿಗದಿ

ಸರಕಾರವು ರೆಮಿಡಿಸಿವಿರ್‌ ಉತ್ಪಾದಿಸುವ ಕಂಪೆನಿಗಳ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, 3,750-4,000 ರೂ. ಬೆಲೆಯಲ್ಲಿ ವಿತರಿಸುವಂತೆ ಸೂಚಿಸಿದೆ. ಅದಕ್ಕಿಂತ ಹೆಚ್ಚಿನ ಬೆಲೆ ನಿಗದಿ ಪಡಿಸುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಬೆಲೆ ಪಡೆದರೆ ಕಾನೂನು ಕ್ರಮದ ಜತೆಗೆ ಒಡಂಬಡಿಕೆ ರದ್ದುಪಡಿಸುವ ಎಚ್ಚರಿಕೆ ನೀಡಿದೆ. ಮೆಡಿಕಲ್‌ ಸ್ಟೋರ್‌ಗಳಲ್ಲಿ ರೆಮಿಡಿಸಿವಿರ್‌ ಮಾರಾಟಕ್ಕೆ ಅವಕಾಶವಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಕಾಳಸಂತೆಯಲ್ಲಿ 20,000 ರೂ.ಗಳಿಗೆ ಮಾರಾಟವಾಗುತ್ತಿರುವುದು ವರದಿಯಾಗಿದೆ.

ಯಾಕೆ ಈ ಸಮಸ್ಯೆ?

ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಹಾಸಿಗೆ ಬೇಡಿಕೆ ಮತ್ತು ಬೆಲೆ  ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಹಾಸಿಗೆಗಳು ಲಭ್ಯವಾಗದಿರುವುದು ಬೆಡ್‌ ಬ್ಲಾಕಿಂಗ್‌ ದಂಧೆಗೆ ದಾರಿ ಮಾಡಿಕೊಟ್ಟಿವೆ. ಸೋಂಕು ಹೆಚ್ಚಿರುವ ಬೆಂಗಳೂರಿನಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಅನಿವಾರ್ಯವಾಗಿ ಖಾಸಗಿಯ ಮೊರೆಹೋಗಿ ಲಕ್ಷಾಂತರ ರೂ. ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ.

ಖಾಸಗಿಯಲ್ಲಿ  ಕಾದಿರಿಸುವಿಕೆ

ಬಹುತೇಕ ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳು ಸರಕಾರಕ್ಕೆ ಶೇ. 50ರಷ್ಟು ಹಾಸಿಗೆ ನೀಡಿಲ್ಲ. ನೇರವಾಗಿ ಅಥವಾ ಪರಿಚಯಸ್ಥರು, ಪ್ರಭಾವಿಗಳ ಮೂಲಕ ಕೇಳಿದರೆ ಸರಕಾರಕ್ಕೆ ನೀಡದೆ ಖಾಲಿ ಇರುವ ಹಾಸಿಗೆಗಳನ್ನು ಆಸ್ಪತ್ರೆ ವೈದ್ಯರು, ಸಿಬಂದಿಯೇ ಹೆಚ್ಚಿನ ದರಕ್ಕೆ ನೀಡುತ್ತಿದ್ದಾರೆ.

ಕೊರೊನಾಹೆಸರಿನಲ್ಲಿ ನಡೆಯು ತ್ತಿರುವ ಅಕ್ರಮ ವ್ಯವಹಾರ ಸಂಬಂಧ ಈಗಾಗಲೇ ಬೆಂಗಳೂರು ಸಹಿತ ರಾಜ್ಯದ ಎಲ್ಲೆಡೆ ಕಾರ್ಯಾಚರಣೆಗೆ ಸೂಚಿಸಲಾಗಿದೆ.

-ಪ್ರತಾಪ್‌ ರೆಡ್ಡಿ, ಎಡಿಜಿಪಿ, ರಾಜ್ಯ ಕಾನೂನು ಸುವ್ಯವಸ್ಥೆ

 

ಟಾಪ್ ನ್ಯೂಸ್

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…

10PSI

ಪಿಎಸ್‌ಐ ನೇಮಕಾತಿ: ದೈಹಿಕ ಪರೀಕ್ಷೆಯಲ್ಲೂ ಅಕ್ರಮ?

cancer

ಮಹಿಳೆಯರಲ್ಲಿ ಕೌಟುಂಬಿಕ ಕ್ಯಾನ್ಸ ರ್‌ ಸಿಂಡ್ರೋಮ್‌ಗಳು ಮತು ವಂಶವಾಹಿ ಪರೀಕ್ಷೆ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

1-fsfsdf

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ನಾಯಕರ ಭೇಟಿಯಾದ ಜೆಡಿಎಸ್ ನ ಕುಪೇಂದ್ರ ರೆಡ್ಡಿ

parameshwar

ದಲಿತ ಸಿಎಂ ವಿಚಾರ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದ ಪರಮೇಶ್ವರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದರೆ ದಂಡ: ಪಾಲಿಕೆ ಆಯುಕ್ತ ತುಷಾರ್‌ ಗಿರಿನಾಥ್‌

ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದರೆ ದಂಡ: ಪಾಲಿಕೆ ಆಯುಕ್ತ ತುಷಾರ್‌ ಗಿರಿನಾಥ್‌

Untitled-1

ಬೆಂಕಿ ಹಚ್ಚಿಕೊಂಡು ನೌಕರ ಆತ್ಮಹತ್ಯೆ

3cycle

ಸೈಕಲ್‌ ಕದ್ದರೆ ದೂರು ನೀಡಲ್ಲ ಎಂದು 54 ಸೈಕಲ್‌ಗಳನ್ನು ಕದ್ದ ಭೂಪ

ವೃತ್ತಗಳ ಅಂದ ಹೆಚ್ಚಿಸಲು ಯೋಜನೆ

ವೃತ್ತಗಳ ಅಂದ ಹೆಚ್ಚಿಸಲು ಯೋಜನೆ

ಸ್ನೇಹಿತರ ಇನ್‌ಸ್ಟ್ರಾಗ್ರಾಂ ಖಾತೆ ಹ್ಯಾಕ್‌ ಮಾಡಿ ವಂಚನೆ

ಸ್ನೇಹಿತರ ಇನ್‌ಸ್ಟ್ರಾಗ್ರಾಂ ಖಾತೆ ಹ್ಯಾಕ್‌ ಮಾಡಿ ವಂಚನೆ

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

ನರಚನಹಳ್ಳಿಯಲ್ಲಿ ಭಾರೀ ಮಳೆ: ಬ್ಯಾರನ್‌ ಗೋಡೆ ಕುಸಿತ

ನರಚನಹಳ್ಳಿಯಲ್ಲಿ ಭಾರೀ ಮಳೆ: ಬ್ಯಾರನ್‌ ಗೋಡೆ ಕುಸಿತ

11checkdam

ಚೆಕ್‌ ಡ್ಯಾಂ ನಿರ್ಮಾಣ ಹಂತದಲ್ಲೇ ಕಳಪೆ!

16

ಕಾರ್ಮಿಕರು ಆಯುಷ್ಮಾನ್ ಕಾರ್ಡ್‌ ಪಡೆಯಿರಿ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.