ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ: ಬಾಂಗ್ಲಾ ಮೂಲದ ಮಹಿಳೆ ಬಂಧನ


Team Udayavani, Jan 28, 2022, 6:37 AM IST

ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ:  ಬಾಂಗ್ಲಾ ಮೂಲದ ಮಹಿಳೆ ಬಂಧನ

ಬೆಂಗಳೂರು: ಹದಿನಾರು ವರ್ಷಗಳ ಹಿಂದೆ ಅಕ್ರಮವಾಗಿ ಭಾರತ ಪ್ರವೇಶಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಂಗಳೂರು ಮೂಲದ ಯುವಕನನ್ನು ಮದುವೆಯಾಗಿ ನಗರದಲ್ಲಿ ವಾಸವಾಗಿದ್ದ ಬಾಂಗ್ಲಾದೇಶದ ರೋನಿ ಬೇಗಂ(36) ಎಂಬಾಕೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

2005-06ರಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಈಕೆ, ಮುಂಬಯಿ, ಪೂನಾ ಸಹಿತ ವಿವಿಧೆಡೆ ವಾಸವಿದ್ದರು. ಮುಂಬಯಿಯ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ  ಮಂಗಳೂರು ಮೂಲದ ನಿತಿನ್‌ ಎಂಬಾತನನ್ನು ಪ್ರೀತಿಸಿದ್ದರು.  ತನ್ನ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂಬ ಮಾಹಿತಿ ಮೇರೆಗೆ ಈಕೆ ಪಾಯಲ್‌ ಘೋಷ್‌ ಎಂದು ಹೆಸರು ಬದಲಿಸಿಕೊಂಡು ಹಿಂದೂ ಧರ್ಮಕ್ಕೆ  ಮತಾಂತರಗೊಂಡು ಭಾರತೀಯ ಪೌರತ್ವ ಪಡೆದುಕೊಂಡಿದ್ದರು. ಅನಂತರ 2015ರಲ್ಲಿ  ನಿತಿನ್‌ನನ್ನು  ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಈತ ಫ‌ುಡ್‌ ಡೆಲಿವರಿ ಬಾಯ್‌ ಆಗಿದ್ದು, ಆಕೆ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಕೋಲ್ಕೊತಾ ಪೊಲೀಸರ ಬಲೆಗೆ ಬಿದ್ದ ರೋನಿ:

ನಕಲಿ ದಾಖಲೆ ನೀಡಿ ಪಾಯಲ್‌ ಘೋಷ್‌ ಹೆಸರಿನಲ್ಲಿ ಚುನಾವಣೆ ಗುರುತಿನ ಚೀಟಿ ಹಾಗೂ ಆಧಾರ್‌ಕಾರ್ಡ್‌, ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದಳು. ಇದೇ ಪಾಸ್‌ಪೋರ್ಟ್‌ ಬಳಸಿ ಬಾಂಗ್ಲಾದೇಶಕ್ಕೆ ತೆರಳುತ್ತಿದ್ದಾಗ ಕೋಲ್ಕೊತಾ ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್‌ ಅಧಿಕಾರಿಗಳು ದಾಖಲೆ ತಪಾಸಣೆ ನಡೆಸಿದ್ದಾರೆ. ದಾಖಲೆಗಳ ಬಗ್ಗೆ ಅನುಮಾನ ಬಂದು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದಾಳೆ. ಕೂಡಲೇ ವಿಚಾರಣೆಗೊಳಪಡಿಸಿದಾಗ ಆಕೆ ಬಳಿ ಇರುವುದು ನಕಲಿ ದಾಖಲೆಗಳು ಎಂಬುದು ಗೊತ್ತಾಗಿದೆ. ಹೀಗಾಗಿ, ಆಕೆಯ ವಿರುದ್ಧ ಎಫ್‌ಆರ್‌ಆರ್‌ಒ ಅಧಿಕಾರಿಗಳು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅನಂತರ ಆಕೆ  ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದಳು. ಒಂದೂವರೆ ವರ್ಷದ ಬಳಿಕ ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.

ಈಕೆಯನ್ನು ಮದುವೆಯಾಗಿರುವ  ನಿತಿನ್‌ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ಹೈರಾಣಾಗಿಸಿದ ವರುಣ; ರಾಜ್ಯದಲ್ಲಿ ಮೂವರ ಸಾವು; ಇಂದು ಭಾರೀ ಮಳೆ ಸಾಧ್ಯತೆ

ಹೈರಾಣಾಗಿಸಿದ ವರುಣ; ರಾಜ್ಯದಲ್ಲಿ ಮೂವರ ಸಾವು; ಇಂದು ಭಾರೀ ಮಳೆ ಸಾಧ್ಯತೆ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ನಿಖತ್‌ ಜರೀನ್‌ ಫೈನಲಿಗೆ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ನಿಖತ್‌ ಜರೀನ್‌ ಫೈನಲಿಗೆ

ಇಂಗ್ಲೆಂಡ್‌ ತಂಡಕ್ಕೆ ಮರಳಿದ ಜೇಮ್ಸ್‌ ಆ್ಯಂಡರ್ಸನ್‌,ಸ್ಟುವರ್ಟ್‌ ಬ್ರಾಡ್‌

ಇಂಗ್ಲೆಂಡ್‌ ತಂಡಕ್ಕೆ ಮರಳಿದ ಜೇಮ್ಸ್‌ ಆ್ಯಂಡರ್ಸನ್‌,ಸ್ಟುವರ್ಟ್‌ ಬ್ರಾಡ್‌

ಥಾಯ್ಲೆಂಡ್‌ ಓಪನ್‌: ಶ್ರೀಕಾಂತ್‌, ಸಿಂಧು ದ್ವಿತೀಯ ಸುತ್ತಿಗೆ

ಥಾಯ್ಲೆಂಡ್‌ ಓಪನ್‌: ಶ್ರೀಕಾಂತ್‌, ಸಿಂಧು ದ್ವಿತೀಯ ಸುತ್ತಿಗೆ

ಕರ್ತವ್ಯ ಲೋಪ ಸಹಿಸೆನು: ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ

ಕರ್ತವ್ಯ ಲೋಪ ಸಹಿಸೆನು: ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ

ಕೋಟ್ಯಂತರ ರೂ. ಸ್ನೇಹಿತರ ಮನೆಯಲ್ಲಿಇಟ್ಟಿದ್ದ ಹೆಡ್‌ಕಾನ್‌ಸ್ಟೆಬಲ್‌ ಶ್ರೀಧರ್‌

ಕೋಟ್ಯಂತರ ರೂ. ಸ್ನೇಹಿತರ ಮನೆಯಲ್ಲಿಇಟ್ಟಿದ್ದ ಹೆಡ್‌ಕಾನ್‌ಸ್ಟೆಬಲ್‌ ಶ್ರೀಧರ್‌

PSI

ಪಿಎಸ್‌ಐ ನೇಮಕಾತಿ ಅಕ್ರಮ: ವಿಚಾರಣೆ ಮುಂದಕ್ಕೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುತ್ತಿಗೆದಾರರ ಬೇಜವಾಬ್ದಾರಿ, ಕಾಮಗಾರಿ ವಿಳಂಬದಿಂದ ಮನೆಗಳಿಗೆ ನೀರು :ಎಸ್.ಟಿ.ಸೋಮಶೇಖರ್ ಕಿಡಿ

ಗುತ್ತಿಗೆದಾರರ ಬೇಜವಾಬ್ದಾರಿ, ಕಾಮಗಾರಿ ವಿಳಂಬದಿಂದ ಮನೆಗಳಿಗೆ ನೀರು :ಎಸ್.ಟಿ.ಸೋಮಶೇಖರ್ ಕಿಡಿ

ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ನಡೆಸಿದರೆ ಕ್ಷಮೆ ಇಲ್ಲ : ಗೃಹ ಸಚಿವ ಎಚ್ಚರಿಕೆ

ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ನಡೆಸಿದರೆ ಕ್ಷಮೆ ಇಲ್ಲ : ಗೃಹ ಸಚಿವ ಎಚ್ಚರಿಕೆ

ಖಾಲಿಯಿರುವ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ : ಸಚಿವ ಬಿ.ಸಿ.ಪಾಟೀಲ್

ಖಾಲಿಯಿರುವ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ : ಸಚಿವ ಬಿ.ಸಿ.ಪಾಟೀಲ್

ಭಾರೀ ಮಳೆಗೆ ವಿದ್ಯುತ್ ವ್ಯತ್ಯಯ : ಖುದ್ದು ನಿರ್ವಹಣೆಗಿಳಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

ಭಾರಿ ಮಳೆಗೆ ವಿದ್ಯುತ್ ವ್ಯತ್ಯಯ : ಖುದ್ದು ನಿರ್ವಹಣೆಗಿಳಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

ಭಾರಿ ಮಳೆ : ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ : 25,000 ರೂ. ಪರಿಹಾರ : ಸಿಎಂ ಬೊಮ್ಮಾಯಿ

ಭಾರಿ ಮಳೆ : ನೀರು ನುಗ್ಗಿರುವ ಮನೆಗಳಿಗೆ 25,000 ರೂ ಪರಿಹಾರ : ಸಿಎಂ ಬೊಮ್ಮಾಯಿ

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

ಹೈರಾಣಾಗಿಸಿದ ವರುಣ; ರಾಜ್ಯದಲ್ಲಿ ಮೂವರ ಸಾವು; ಇಂದು ಭಾರೀ ಮಳೆ ಸಾಧ್ಯತೆ

ಹೈರಾಣಾಗಿಸಿದ ವರುಣ; ರಾಜ್ಯದಲ್ಲಿ ಮೂವರ ಸಾವು; ಇಂದು ಭಾರೀ ಮಳೆ ಸಾಧ್ಯತೆ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ನಿಖತ್‌ ಜರೀನ್‌ ಫೈನಲಿಗೆ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ನಿಖತ್‌ ಜರೀನ್‌ ಫೈನಲಿಗೆ

ಇಂಗ್ಲೆಂಡ್‌ ತಂಡಕ್ಕೆ ಮರಳಿದ ಜೇಮ್ಸ್‌ ಆ್ಯಂಡರ್ಸನ್‌,ಸ್ಟುವರ್ಟ್‌ ಬ್ರಾಡ್‌

ಇಂಗ್ಲೆಂಡ್‌ ತಂಡಕ್ಕೆ ಮರಳಿದ ಜೇಮ್ಸ್‌ ಆ್ಯಂಡರ್ಸನ್‌,ಸ್ಟುವರ್ಟ್‌ ಬ್ರಾಡ್‌

ಥಾಯ್ಲೆಂಡ್‌ ಓಪನ್‌: ಶ್ರೀಕಾಂತ್‌, ಸಿಂಧು ದ್ವಿತೀಯ ಸುತ್ತಿಗೆ

ಥಾಯ್ಲೆಂಡ್‌ ಓಪನ್‌: ಶ್ರೀಕಾಂತ್‌, ಸಿಂಧು ದ್ವಿತೀಯ ಸುತ್ತಿಗೆ

ಕರ್ತವ್ಯ ಲೋಪ ಸಹಿಸೆನು: ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ

ಕರ್ತವ್ಯ ಲೋಪ ಸಹಿಸೆನು: ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.