Udayavni Special

ಕೆಂಪೇಗೌಡ ಪ್ರಶಸ್ತಿಗೆ “ಮಾನ’ದಂಡ


Team Udayavani, Dec 16, 2018, 12:10 PM IST

kempegowda.jpg

ಬೆಂಗಳೂರು: ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಬರೋಬ್ಬರಿ 550ಕ್ಕೂ ಹೆಚ್ಚು ಮಂದಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಇದೀಗ ಕೆಂಪೇಗೌಡ ಪ್ರಶಸ್ತಿಯ ಮೌಲ್ಯ ಹೆಚ್ಚಿಸಲು ಮುಂದಾಗಿದೆ.

ಪ್ರಸಕ್ತ ಸಾಲಿನಲ್ಲಿ ಯಾವುದೇ ಮಾನದಂಡ ಅನುಸರಿಸದೆ 550ಕ್ಕೂ ಹೆಚ್ಚು ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪರಿಣಾಮ ಪ್ರಶಸ್ತಿ ಪ್ರದಾನ ಸಮಾರಂಭ ಅವ್ಯವಸ್ಥೆಯ ಗೂಡಾಗಿ ಪರಿಣಮಿಸಿತ್ತು. ಜತೆಗೆ ನೂರಾರು ಪುರಸ್ಕೃತರಿಗೆ ಪ್ರಶಸ್ತಿ ಫ‌ಲಕ ಹಾಗೂ ಸ್ಮರಣಿಕೆಗಳೇ ದೊರೆಯದೆ ಪಾಲಿಕೆ, ಪುರಸ್ಕೃತರಿಬ್ಬರೂ ಮುಜುಗರ ಅನುಭವಿಸುವಂತಾಗಿತ್ತು. ಜತೆಗೆ ಕಾರ್ಯಕ್ರಮ ನೋಡಲು ಬಂದವರೂ ಪ್ರಶಸ್ತಿ ಪಡೆಯುವ ಮೂಲಕ ಪಾಲಿಕೆಯ ಆಡಳಿತ ವೈಫ‌ಲ್ಯವನ್ನು ಬಯಲು ಮಾಡಿದ್ದರು. 

ಈ ಅದ್ವಾನ, ಅವ್ಯವಸ್ಥೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾಗಿತ್ತು. ಬೇಕಾಬಿಟ್ಟಿಯಾಗಿ ಪ್ರಶಸ್ತಿ ನೀಡುವ ಮೂಲಕ ನಾಡಪ್ರಭು ಕೆಂಪೇಗೌಡರ ಹೆಸರಿಗೆ ಅಗೌರವ ತೋರಿರುವ ಪಾಲಿಕೆ ಆಡಳಿತ, ಪ್ರಶಸ್ತಿಯ ಮೌಲ್ಯವನ್ನು ಹಾಳು ಮಾಡುತ್ತಿದೆ ಎಂದು ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಸಾರ್ವಜನಿಕ ವಲಯದಿಂದ ಕೇಳಿಬಂದ ಟೀಕೆ, ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಮುಂದಿನ ವರ್ಷ ಕೆಂಪೇಗೌಡ ಪ್ರಶಸ್ತಿ ನೀಡುವ ವೇಳೆ ಸಾಧಕರನ್ನು ಗುರುತಿಸಲು ಮಾನದಂಡ ನಿಗದಿಪಡಿಸುವ ಜತೆಗೆ, ಸಾಧಕರ ಆಯ್ಕೆಗೆ ಸಮಿತಿ ರಚಿಸುವಂತೆ ಇತ್ತೀಚೆಗೆ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಪತ್ರದ ಬರೆದಿದ್ದರು.

ಶಿವರಾಜು ಅವರ ಪತ್ರಕ್ಕೆ ಸ್ಪಂದಿಸಿರುವ ಪರಮೇಶ್ವರ್‌ ಅವರು, ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೀಡಲಾಗುವ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡುವಾಗ ಅನುಸರಿಸುವ ಮಾನದಂಡಗಳನ್ನೇ ಕೆಂಪೇಗೌಡ ಪ್ರಶಸ್ತಿ ಆಯ್ಕೆಗೂ ಅಳವಡಿಸಿಕೊಳ್ಳಲು ಪಾಲಿಕೆ ನಿರ್ಧರಿಸಿದ್ದು, ಮಾನದಂಡಗಳ ಕರಡು ಸಿದ್ಧಪಡಿಸಿ ಸರ್ಕಾರದಿಂದ ಆದೇಶ ಹೊರಡಿಸಲು ಚಿಂತನೆ ನಡೆಸಿದೆ. ಆ ಮೂಲಕ ಅರ್ಹರಿಗೆ ಮಾತ್ರ ಪ್ರಶಸ್ತಿ ನೀಡುವತ್ತ ಪಾಲಿಕೆ ಹೆಜ್ಜೆಯಿರಿಸಿದೆ. 

ಪ್ರಶಸ್ತಿಗಳ ಸಂಖ್ಯೆ ಗೊಂದಲ: ಈ ನಡುವೆ, ಪ್ರಶಸ್ತಿಯನ್ನು ಎಷ್ಟು ಜನರಿಗೆ ನೀಡಬೇಕು ಎಂಬುದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ. ಆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಸಂದಿರುವ ವರ್ಷಗಳ ಲೆಕ್ಕದಲ್ಲಿ ಅಥವಾ ಮೇಯರ್‌ಗಳ ಸಂಖ್ಯೆಗೆ ಅನುಗುಣವಾಗಿ ಪ್ರಶಸ್ತಿ ನೀಡಬೇಕೆ ಎಂಬ ಗೊಂದಲಕ್ಕೆ ಒಳಗಾಗಿರುವ ಪಾಲಿಕೆ, ಕೌನ್ಸಿಲ್‌ ಸಭೆಯಲ್ಲಿ ವಿಷಯ ಮಂಡಿಸಿ, ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.

ಜನಪ್ರತಿನಿಧಿಗಳ ಬೆಂಬಲ ದೊರೆಯುವುದೇ?: ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಜನಪ್ರತಿನಿಧಿಗಳು ತಮ್ಮ ಮತ ಬ್ಯಾಂಕ್‌ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದಾಗಿ ಕಾರ್ಪೊರೇಟರ್‌ಗಳು ವಾರ್ಡ್‌ನಲ್ಲಿ ತಮ್ಮ ಪರವಾಗಿ ಕೆಲಸ ಮಾಡುವವರಿಗೆ ಪ್ರತಿ ವರ್ಷ ಕೆಂಪೇಗೌಡ ಪ್ರಶಸ್ತಿ ನೀಡಿ “ಋಣ ತೀರಿಸುವ’ ಕೆಲಸ ಮಾಡುತ್ತಿದ್ದಾರೆ. ಒಂದೊಮ್ಮೆ ಆಯ್ಕೆ ಸಮಿತಿ ರಚನೆಯಾಗಿ, ಮಾನದಂಡಗಳನ್ನು ನಿಗದಿಪಡಿಸಿದರೆ ಜನಪ್ರತಿನಿಧಿಗಳ ಈ ಆಟಾಟೋಪ ತಪ್ಪಲಿದೆ. ದರೆ, ಆಯ್ಕೆ ಸಮಿತಿ ರಚನೆ ಮತ್ತು ಮಾನದಂಡಗಳ ನಿಗದಿಗೆ ಕಾರ್ಪೊರೇಟರ್‌ಗಳು ಅವಕಾಶ ನೀಡುವರೇ ಎಂಬುದೇ ಈಗಿರುವ ಪ್ರಶ್ನೆ.

ಪ್ರಶಸ್ತಿ ನೀಡಿ ಓಲೈಸುವ ಇರಾದೆ?: 2020ರಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಮುಖಂಡರಿಗೆ ಕೆಂಪೇಗೌಡ ಪ್ರಶಸ್ತಿ ಕೊಡಿಸಿ ಅವರನ್ನು ಓಲೈಸುವ ಆಲೋಚನೆ ಮೂರೂ ಪಕ್ಷಗಳ ಬಹುತೇಕ ಸದಸ್ಯರದ್ದಾಗಿದೆ. ಸದಸ್ಯರ ಆಲೋಚನೆ, ಇರಾದೆ ಮೀರಿ ಈ ಬಾರಿಯಾದರೂ ಪ್ರಶಸ್ತಿಗೆ “ಅರ್ಹರನ್ನು’ ಆಯ್ಕೆ ಮಾಡುವ ಮೂಲಕ ಕೆಂಪೇಗೌಡ ಪ್ರಶಸ್ತಿಯ ಮೌಲ್ಯ ಹೆಚ್ಚಿಸುವ ಕೆಲಸವನ್ನು ಪಾಲಿಕೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 

ಕೆಂಪೇಗೌಡ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಮಾನದಂಡಗಳ ನಿಗದಿ ಮತ್ತು ತಜ್ಞರ ಸಮಿತಿ ರಚನೆ ಮನವಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಸಹಮತ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಪ್ರಶಸ್ತಿಗಳ ಸಂಖ್ಯೆಯನ್ನು 100ಕ್ಕೆ ಸೀಮಿತಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. 
-ಎಂ.ಶಿವರಾಜು, ಪಾಲಿಕೆ ಆಡಳಿತ ಪಕ್ಷದ ನಾಯಕ

ಟಾಪ್ ನ್ಯೂಸ್

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

“ಜಾಗೃತ ಭಾರತ, ಸಮೃದ್ಧ ಭಾರತ”

ಜಾಗೃತ ಭಾರತ, ಸಮೃದ್ಧ ಭಾರತ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಮಲೀನ ನೀರು ರಸೆಗೆ ಹರಿಯದಂತೆ ಕ್ರಮವಹಿಸಿ

8

ಗಿರಿಜನರೆಡೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ

ಸತತ ಮಳೆಗೆ ಮನೆ ಕುಸಿಯುವ ಭೀತಿ

ಸತತ ಮಳೆಗೆ ಮನೆ ಕುಸಿಯುವ ಭೀತಿ

4

ಚೈತನ್ಯ ಇನ್ಫಿನಿಟಿ ಲರ್ನ್ ರೋಹಿತ್‌ ಶರ್ಮ ರಾಯಭಾರಿ

3

ಕೊರೊನಾ ನಂತರ ಮಾನಸಿಕ ಸಮಸ್ಯೆ ಹೆಚ್ಚಳ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

Untitled-1

ಅತ್ತಿಕುಪ್ಪೆಯಲ್ಲಿ ಪಡಿತರ ಉಪಕೇಂದ್ರ ಉದ್ಘಾಟನೆ,ಡೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

Dak Seva Award for Achievers

8 ಸಾಧಕರಿಗೆ ಡಾಕ್ ಸೇವಾ ಪ್ರಶಸ್ತಿ ಪ್ರಧಾನ ಮಾಡಿದ ರಾಜ್ಯಪಾಲರು

davanagere news

ಹಿರೇಕಲ್ಮಠದೊಂದಿಗೆ ಅವಿನಾಭಾವ ಸಂಬಂಧ

12

ಕ್ಷಯ ಮುಕ್ತ ದೇಶಕ್ಕೆ ಸಹಕಾರ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.