- Tuesday 10 Dec 2019
ಕಬ್ಬನ್ ಪಾರ್ಕ್ ನೂತನ ಪ್ರವೇಶ ದ್ವಾರ ಉದ್ಘಾಟನೆ
Team Udayavani, Jun 20, 2019, 3:06 AM IST
ಬೆಂಗಳೂರು: ಕಬ್ಬನ್ ಉದ್ಯಾನಕ್ಕೆ ಹಡ್ಸನ್ ವೃತ್ತದ ಬಳಿ ತೋಟಗಾರಿಕೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದೊಂದಿಗೆ ನೂತನವಾಗಿ ನಿರ್ಮಿಸಿರುವ ಪ್ರವೇಶದ್ವಾರವನ್ನು ತೋಟಗಾರಿಕೆ ಇಲಾಖೆ ಸಚಿವ ಎಂ.ಸಿ.ಮನಗೂಳಿ ಬುಧವಾರ ಉದ್ಘಾಟಿಸಿದರು.
ಜತೆಗೆ ಉದ್ಯಾನದಲ್ಲಿ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಹಮ್ಮಿಕೊಂಡಿರುವ ಸೈಕಲ್ ಪ್ರವಾಸೋದ್ಯಮ ಹಾಗೂ ಉದ್ಯಾನದಲ್ಲಿ 600 ಸಸಿ ನೆಡುವ ಕಾರ್ಯಕ್ರಮಕ್ಕೂ ಸಚಿವರು ಚಾಲನೆ ನೀಡಿದರು. ಮೇಯರ್ ಗಂಗಾಂಬಿಕೆ, ತೋಟಗಾರಿಕೆ ಇಲಾಖೆ ಆಯುಕ್ತ ವೆಂಕಟೇಶ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿದೇಶಕರ ಮಹಾಂತೇಶ್ ಮುರುಗೋಡ ಅವರು, 1948ರಲ್ಲಿ ರಾಜ್ಯ ಸರ್ಕಾರ ಚಾಮರಾಜೇಂದ್ರ ಉದ್ಯಾನವನವೆಂದು ಆದೇಶ ಹೊರಡಿಸಿತು. ಕಬ್ಬನ್ ಉದ್ಯಾನದಲ್ಲಿ ಒಟ್ಟು 7 ಪ್ರವೇಶದ್ವಾರವಿದ್ದು, ಅವುಗಳಲ್ಲಿ ಎಲ್ಲೂ ಈ ಹೆಸರನ್ನು ನಮೂದಿಸಿರಲಿಲ್ಲ. ಹೀಗಾಗಿಯೇ, ಕಬ್ಬನ್ ಪಾರ್ಕ್ ಅಂತಲೇ ಪ್ರಸಿದ್ಧಿ ಪಡೆದಿದೆ.
ಇನ್ನು ಎರಡು ವರ್ಷಗಳ ಹಿಂದೆ ಹೈಕೋರ್ಟ್ ಬಳಿ ಒಂದು ಪ್ರವೇಶ ದ್ವಾರ ನಿರ್ಮಾಣ ಮಾಡಿ ಚಾಮರಾಜೇಂದ್ರ ಉದ್ಯಾನ ಎಂದು ಹೆಸರನ್ನು ಸೂಚಿಸಲಾಗಿತ್ತು. ಆ ಬಳಿಕ ಹಡ್ಸಸ್ ವೃತ್ತದ ಬಳಿ 40 ಲಕ್ಷ ರೂ. ವೆಚ್ಚದಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ ಎಂದರು.
ಇನ್ನು ಉದ್ಯಾನದಲ್ಲಿ ಸೈಕಲ್ ಪ್ರವಾಸೋದ್ಯಮ ಆರಂಭಿಸಲಾಗಿದೆ. ಡಿಸ್ಕವರಿ ವಿಲೇಜ್ ಸಹಯೋಗದೊಂದಿಗೆ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ನಿಗದಿತ ದರದೊಂದಿಗೆ ಆ್ಯಪ್ ಒಂದರ ಮೂಲಕ ಸೈಕಲ್ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಸೈಕಲ್ ದರಪಟ್ಟಿ
-500 ರೂ. ಭದ್ರತಾ ಠೇವಣಿ
-50 ರೂ. ಮೊಲದ 3 ಗಂಟೆಗೆ
-100 ರೂ. 3ರಿಂದ 6 ಗಂಟೆಗೆ
ನೋಂದಾಯಿತ ಸದಸ್ಯರಿಗೆ ದರಪಟ್ಟಿ
-25 ರೂ. ಮೊದಲ ಎರಡು ಗಂಟೆಗೆ
-50 ರೂ. 2-4 ಗಂಟೆಗೆ
-75 ರೂ. 4-6 ಗಂಟೆಗೆ
-100 ರೂ. 6 ಗಂಟೆ ಮೇಲ್ಪಟ್ಟು
ಈ ವಿಭಾಗದಿಂದ ಇನ್ನಷ್ಟು
-
ಯಲಹಂಕ: ರಾಜ್ಯದಲ್ಲಿ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಯಲಹಂಕ...
-
ಬೆಂಗಳೂರು: ಹೈದರಾಬಾದ್ನ ಪಶು ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಳಿಕ ಮಹಿಳಾ ಸುರಕ್ಷತೆ ಬಗ್ಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ನಗರ ಪೊಲೀಸರು ಕೈಗೊಳ್ಳುತ್ತಿದ್ದಾರೆ....
-
ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಕಾವು ಜೋರಿದೆ. ಆದರೆ, ಉದ್ಯಾನ ನಗರಿಯ ವಾತಾವರಣಇದಕ್ಕೆ ಭಿನ್ನವಾಗಿದ್ದು, ಸ್ಪಲ್ಪ ಯಾಮಾರಿದರು ಆಸ್ಪತ್ರೆ ಮೆಟ್ಟಿಲೇರಬಹುದು...
-
ಬೆಂಗಳೂರು: ನಗರದ 24 ಪ್ರಮುಖ ಮೇಲ್ಸೇತುವೆ, ಅಂಡರ್ ಪಾಸ್ ಮತ್ತು ತೂಗು ಸೇತುವೆಗಳಲ್ಲಿನ ಲೋಪ ಸರಿಪಡಿಸಲು ಬಿಬಿಎಂಪಿ 40 ಕೋಟಿ ರೂ. ಮೀಸಲಿರಿಸಿದ್ದು, ಟೆಂಡರ್ ಕರೆಯಲು...
-
ಬೆಂಗಳೂರು: ಉಪ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ, ಮದ್ಯ ಮಾರಾಟ ನಿಷೇಧ ಹಾಗೂ ಈ ಭಾಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ...
ಹೊಸ ಸೇರ್ಪಡೆ
-
ಬೆಂಗಳೂರು: ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ 104 ಸ್ಥಾನ ಗೆದ್ದರೂ ಸರ್ಕಾರ ರಚಿಸಲಾಗದೆ 14 ತಿಂಗಳು ಪ್ರತಿಪಕ್ಷದಲ್ಲಿದ್ದು, ಬದಲಾದ ರಾಜಕೀಯ ಸನ್ನಿವೇಶದಲ್ಲಿ...
-
ಬೆಂಗಳೂರು: ಕೂಸು ಹುಟ್ಟುವ ಮುನ್ನ ಕುಲಾವಿ ಎಂಬಂತೆ ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರದ ಪತನದ ಕನಸು ಕಂಡಿದ್ದ ಕಾಂಗ್ರೆಸ್ ನಾಯಕರಿಗೆ ಮತದಾರ "ಶಾಕ್' ನೀಡಿದ್ದು,...
-
ಬೆಂಗಳೂರು: ಆಪರೇಷನ್ ಕಮಲ ಕಾರ್ಯಾಚರಣೆಯಡಿ ಮೂರು ಸ್ಥಾನ ಕಳೆದು ಕೊಂಡು ಐದು ಸ್ಥಾನ ಗೆಲ್ಲುತ್ತೇವೆಂದು ಉಪ ಸಮರದ ಅಖಾಡಗಿಳಿದಿದ್ದ ಜೆಡಿಎಸ್ ಶೂನ್ಯ ಸಂಪಾದನೆ...
-
ಹುಬ್ಬಳ್ಳಿ: ಬಿಜೆಪಿಗೆ ಬಲ ನೀಡುವ ತಾಣವೆಂದೇ ಗುರುತಿಸಿಕೊಂಡಿರುವ ಉತ್ತರ ಕರ್ನಾಟಕದಲ್ಲಿ, ಉಪ ಚುನಾವಣೆ ಫಲಿತಾಂಶದಿಂದ ಕಮಲ ಮತ್ತಷ್ಟು ಅರಳಿದೆ. ಪ್ರಸ್ತುತ...
-
ಬರ್ಹಿ/ಬೊಕಾರೋ: ಕರ್ನಾಟಕದ ವಿಧಾನಸಭೆಗೆ 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಜನರ ತೀರ್ಪನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ತಿರುಚಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ...