Udayavni Special

ಸಾಂಸ್ಕೃತಿಕ ನೀತಿ ವರದಿ ಒಕ್ಕೊರಲ ಆಗ್ರಹ


Team Udayavani, Jul 30, 2019, 3:05 AM IST

Udayavani Kannada Newspaper

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ಇತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ವಲಯದಲ್ಲೀಗ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರಕ್ಕೆ ನೀಡಿದ್ದ “ಸಾಂಸ್ಕೃತಿಕ ನೀತಿ’ ವರದಿಯ ಸಂಪೂರ್ಣ ಜಾರಿಗಾಗಿ ದೊಡ್ಡ ಕೂಗು ಕೇಳಿಬಂದಿದೆ.

ಸಾಮಾನ್ಯವಾಗಿ ಸರ್ಕಾರಗಳು ಬದಲಾದೊಡನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ 13 ಅಕಾಡೆಮಿ ಮತ್ತು 3 ಪ್ರಾಧಿಕಾರದ ಅಧ್ಯಕ್ಷರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅವಧಿ (3 ವರ್ಷ) ಪೂರ್ಣಗೊಳ್ಳುವ ಮೊದಲೇ ರಾಜೀನಾಮೆ ನೀಡುವ ಪ್ರಸಂಗ ಎದುರಾಗುತ್ತದೆ. ಹೀಗಾಗಿ ಸಾಂಸ್ಕೃತಿಕ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಸಂಬಂಧ ಆಯಾ ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರು ಹಾಕಿಕೊಂಡಿರುವ ಯೋಜನೆಗಳು ಪೂರ್ಣಗೊಳ್ಳದೆ ಅವಸಾನದ ಹಾದಿ ಹಿಡಿಯುತ್ತವೆ.

ಈ ಎಲ್ಲಾ ಅಂಶಗಳನ್ನು ಮನಗಂಡು ಮುಂದೆ ಇಂತಹ ವಿಪ್ಲವಗಳು ಕಾಣಿಸಿಕೊಳ್ಳದಿರಲಿ ಎಂಬ ದೃಷ್ಟಿಯಿಂದ ಸರ್ಕಾರವೇ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ “ಸಾಂಸ್ಕೃತಿಕ ನೀತಿ ‘ ಶಿಫಾರಸು ಸಮಿತಿ ನೇಮಕ ಮಾಡಿತ್ತು. ಆ ಸಮಿತಿ 2014ರ ಜೂನ್‌ 25 ರಂದು ಈ ಸಂಬಂಧದ ವರದಿಯೊಂದನ್ನು ಸರ್ಕಾರಕ್ಕೆ ನೀಡಿತ್ತು.

ಕುಲಪತಿಗಳ ರೀತಿಯಲ್ಲಿ ಆಯ್ಕೆ ಇರಲಿ: ಈ ವರದಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಬಲೀಕರಣದ ಬಗ್ಗೆ ಹಲವು ರೀತಿಯ ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಕುಲಪತಿಗಳನ್ನು ಆಯ್ಕೆ ರೀತಿಯಲ್ಲೇ ಒಂದು ಶೋಧನಾ ಸಮಿತಿ ರಚನೆ ಮಾಡಿ, ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರನ್ನು ಆಯ್ಕೆ ಮಾಡಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, “ನಾನು ಎರಡು ರೀತಿಯ ಸಲಹೆ ನೀಡಿದ್ದೆ. ಇದರಲ್ಲಿ ಕುಲಪತಿಗಳ ರೀತಿಯಲ್ಲಿ ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರ ಆಯ್ಕೆ ಹಾಗೂ 3 ವರ್ಷಗಳ ಅಧಿಕಾರ ಅವಧಿ ಮುಗಿದ ನಂತರ ಹೊಸ ಅಧ್ಯಕ್ಷರು ನೇಮಕವಾಗುವ ವರೆಗೂ ಹಾಲಿ ಅಧ್ಯಕ್ಷರು ಮುಂದುವರಿಯುವ ಅವಕಾಶ ಇದರಲ್ಲಿ ಸೇರಿತ್ತು. ಆದರೆ, ಸರ್ಕಾರ ಇದರಲ್ಲಿ ಹೊಸ ಅಧ್ಯಕ್ಷರು ನೇಮಕವಾಗುವವರೆಗೂ ಹಾಲಿ ಅಧ್ಯಕ್ಷರು ಮುಂದುವರಿಯಬೇಕು ಎಂಬುವುದನ್ನು ಮಾತ್ರ ಅಂಗೀಕರಿಸಿದೆ ಎಂದರು.

ಪಕ್ಷಗಳು ಸಿದ್ಧಾಂತಗಳ ಕೇಂದ್ರಗಳಲ್ಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಅಕಾಡೆಮಿ ಮತ್ತು ಪ್ರಾಧಿಕಾರಗಳು ಸಾಂಸ್ಕೃತಿಕ ಸಂರಕ್ಷಣಾ ಕೇಂದ್ರಗಳೇ ಹೊರತು ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ತತ್ವ ಸಿದ್ಧಾಂತಗಳ ಪಾಲನೆ ಕೇಂದ್ರಗಳಲ್ಲ ಎಂಬ ಮಾತುಗಳು ಸಾಂಸ್ಕೃತಿಕ ವಲಯದಿಂದ ಕೇಳಿ ಬರುತ್ತಿವೆ.

ಕೋರ್ಟ್‌ನಲ್ಲಿ ತೀರ್ಮಾನ ಆಗುವುದಿಲ್ಲ: ನ್ಯಾಯಾಲಯದಲ್ಲಿ ಇದೆಲ್ಲ ತೀರ್ಮಾನವಾಗುವುದಿಲ್ಲ. ಸರ್ಕಾರದ ಆದೇಶ ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೂ ಅಂತಿದೆ. ಸರ್ಕಾರ ಇಷ್ಟಪಟ್ಟರೆ 3 ವರ್ಷದಿಂದ ನಾಲ್ಕೈದು ವರ್ಷದ ವರೆಗೂ ಮುಂದುವರಿಯಬಹುದು. ಒಂದೇ ವರ್ಷಕ್ಕೆ ಬಿಟ್ಟು ಹೋಗು ಎಂದು ಹೇಳಬಹುದು. ಸರ್ಕಾರ ಆದೇಶವನ್ನು ಒಪ್ಪಿಯೇ ಅಧಿಕಾರ ವಹಿಸಿಕೊಂಡಿರುವ ಕಾರಣ ಏನು ಮಾಡಲಾಗದು ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ನಾಡಿನ ಸಾಂಸ್ಕೃತಿಕ ಲೋಕವನ್ನು ಯಾವ ರೀತಿಯಲ್ಲಿ ನೋಡಬೇಕು ಎಂಬುವುದೇ ನಮ್ಮನ್ನಾಳುವ ಸರ್ಕಾರಗಳಿಗೆ ಗೊತ್ತಿಲ್ಲ. ಆ ಹಿನ್ನೆಲೆಯಲ್ಲಿ ಬರಗೂರು ರಾಮಚಂದ್ರಪ್ಪ ಅವರು ನೀಡಿರುವ ವರದಿ ಜಾರಿಯ ಅಗತ್ಯವಿದೆ.
-ಪ್ರೊ.ಎಂ.ಎ.ಹೆಗಡೆ, ನಾಟಕ ಅಕಾಡೆಮಿ ಅಧ್ಯಕ್ಷರು

* ದೇವೇಶ ಸೂರಗುಪ್ಪ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

ಮಂಡ್ಯ ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

ಕಾಶ್ಮೀರ, ಗಿಲ್ಗಿಟ್, ಬಾಲ್ಟಿಸ್ತಾನವನ್ನು ಪಾಕಿಸ್ಥಾನದ ನಕ್ಷೆಯಿಂದ ಕೈ ಬಿಟ್ಟ ಸೌದಿ ಅರೇಬಿಯಾ

ಕಾಶ್ಮೀರ, ಗಿಲ್ಗಿಟ್, ಬಾಲ್ಟಿಸ್ತಾನವನ್ನು ಪಾಕಿಸ್ಥಾನದ ನಕ್ಷೆಯಿಂದ ಕೈ ಬಿಟ್ಟ ಸೌದಿ ಅರೇಬಿಯಾ

.0.0.

ಮುಂಬೈ vs ಆರ್ ಸಿಬಿ ಬಲಾಢ್ಯರ ಕಾದಾಟ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಮಂಡ್ಯ: ಮಾರಮ್ಮನ ಪ್ರಸಾದ ಸ್ವೀಕರಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

4ನೇ ಬಾರಿ ಸಿಎಂ ಆಗಿ ಆಯ್ಕೆಯಾಗುತ್ತಾರೆಯೇ?ಬಿಹಾರ ಪ್ರಥಮ ಹಂತ: ಶೇ.52ರಷ್ಟು ಮತದಾನ

ನಿತೀಶ್ 4ನೇ ಬಾರಿ ಸಿಎಂ ಆಗಿ ಆಯ್ಕೆಯಾಗುತ್ತಾರೆಯೇ?ಬಿಹಾರ ಪ್ರಥಮ ಹಂತ: ಶೇ.52ರಷ್ಟು ಮತದಾನ

ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ ವಿವರ ಬದಲಾಯಿಸೋದು ಹೇಗೆ?: ಇಲ್ಲಿದೆ ಮಾಹಿತಿ

ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ ವಿವರ ಬದಲಾಯಿಸೋದು ಹೇಗೆ?: ಇಲ್ಲಿದೆ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆನ್ ಲೈನ್ ಶಿಕ್ಷಣದ ಅವಧಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ : ಸುರೇಶ್ ಕುಮಾರ್

ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ:ಗೈಡ್ ಲೈನ್ಸ್ ನಲ್ಲಿ ಏನಿದೆ?

ramalinga-‘

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೋ, ಇಲ್ಲವೋ? BJPಯಿಂದ ಕೀಳು ರಾಜಕೀಯ: ರಾಮಲಿಂಗಾ ರೆಡ್ಡಿ

ಮಾಸ್ಕ್; ನಾಲ್ಕು ಕಮಿಟಿ ರಚನೆ

ಮಾಸ್ಕ್; ನಾಲ್ಕು ಕಮಿಟಿ ರಚನೆ

bng-tdy-2

ಕಾಂಗ್ರೆಸ್‌ನಿಂದ ಬಿಜೆಪಿ ವಿರುದ್ಧ ಧರಣಿ; ಕೇಸು

ಬಂಡೆ, ಚಪ್ಪಡಿಕಲ್ಲು ಬೇಕಿಲ್ಲ: ಅಶೋಕ್‌

ಬಂಡೆ, ಚಪ್ಪಡಿಕಲ್ಲು ಬೇಕಿಲ್ಲ: ಅಶೋಕ್‌

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

avalu-tdy-4

ಕೊರಗುವುದೇ ಬದುಕಾಗಬಾರದು…

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

ಕಹಿಯೇ ಜೀವನ ಲೆಕ್ಕಾಚಾರ!

ಕಹಿಯೇ ಜೀವನ ಲೆಕ್ಕಾಚಾರ!

avalu-tdy-2

ಕರೆಂಟ್‌ ಇಲ್ಲದಿದ್ದರೆ..

ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

ಮಂಡ್ಯ ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.