Udayavni Special

4,540 ಮಂದಿ ಕೋವಿಡ್ ದಿಂದ ಗುಣಮುಖ


Team Udayavani, Sep 7, 2020, 11:59 AM IST

4,540 ಮಂದಿ ಕೋವಿಡ್ ದಿಂದ ಗುಣಮುಖ

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆ ಆಗುತ್ತಿರುವವರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂದಿದೆ.

ಭಾನುವಾರ 4,540 ಮಂದಿ ಕೋವಿಡ್‌-19 ನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಗಳಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಕೊರೊನಾ ಸೋಂಕಿನಿಂದ ಚೇತರಿಸಿ ಕೊಂಡು ಬಿಡುಗಡೆ ಆಗುತ್ತಿರುವವರ ಸಂಖ್ಯೆ ಇದೀಗ 1,05,692ಕ್ಕೆ ಏರಿಕೆಯಾಗಿದ್ದು ಚೇತರಿಕೆ ಪ್ರಮಾಣ ಶೇ.71.64 ರಷ್ಟಿದೆ.

ಜತೆಗೆ 2,824 ಪ್ರಕರಣ ದೃಢಪಟ್ಟಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 1,47,581ಕ್ಕೆ ತಲುಪಿದೆ. ಅಲ್ಲದೇ 39,724 ಸಕ್ರಿಯ ಪ್ರಕರಣ ನಗರದಲ್ಲಿದ್ದು ಅವರೆಲ್ಲಾ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಆರೈಕೆ ಪಡೆಯುತ್ತಿದ್ದಾರೆ. 267 ಮಂದಿ ತೀವ್ರ ನಿಗಾ ಘಟಕಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು ಭಾನುವಾರ 25 ಪುರುಷ, 13 ಮಹಿಳೆಯರು ಸೇರಿ 38 ಮಂದಿ ಸಾವನ್ನಪ್ಪಿ ದ್ದಾರೆ. ಈ ಮೂಲಕ ಕೋವಿಡ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ 2,164ಕ್ಕೆ ತಲುಪಿದೆ. ಸಾವಿನ ಪ್ರಮಾಣ ಶೇ.1.47 ರಷ್ಟಿದೆ. ಸಿಲಿಕಾನ್‌ ಸಿಟಿಯಲ್ಲೀಗ ಒಟ್ಟು ಪಾಸಿಟಿವ್‌ ಪ್ರಮಾಣ ಶೇ.14.22 ಇದ್ದು, ಆಕ್ಟೀವ್‌ ಪ್ರಮಾಣ ಶೇ.26.92 ರಷ್ಟಿದೆ. ಭಾನುವಾರ 28,728 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇದುವರೆಗೂ 10,38,077 ಮಂದಿ ತಪಾಸಣೆ ಮಾಡಲಾಗಿದೆ.

ಹೆಡ್‌ಕಾನ್ಸ್‌ಟೇಬಲ್‌ ಸಾವು :  ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಹೆಡ್‌ಕಾನ್ಸ್‌ಟೇಬಲ್‌ವೊಬ್ಬರು ಚಿಕಿತ್ಸೆ ಫ‌ಲಿಸದೆ ಮೃತ ಪಟ್ಟಿದ್ದಾರೆ. ಜಿ.ಆರ್‌.ರಾಘವೇಂದ್ರ (41) ಮೃತರು. ಆರ್‌ಎಂಸಿ ಯಾರ್ಡ್‌ ಠಾಣೆ ಹೆಡ್‌ಕಾನ್ಸ್‌ಟೇಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಅವರಿಗೆ ಆ.25ರಂದು ಸೋಂಕು ದೃಢಪಟ್ಟಿತ್ತು. ಅಂದಿನಿಂದ ಅವರಿಗೆ ಎಲೆಕ್ಟ್ರಾನಿಕ್‌ ಸಿಟಿಯ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ದುರಾದೃಷ್ಟವಶಾತ್‌ ಶನಿವಾರ ತಡರಾತ್ರಿ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ.

ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ನಿವಾಸಿಯಾದ ಮೃತ ರಾಘವೇಂದ್ರ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ ಎಂದು ಉತ್ತರ ವಿಭಾಗ ಪೊಲೀಸರು ತಿಳಿಸಿದ್ದಾರೆ. ಕೊರೊನಾ ವಾರಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ನಗರ ಪೊಲೀಸ್‌ ಸಿಬ್ಬಂದಿ ಪೈಕಿ ಸೋಂಕು ದೃಢಪಟ್ಟು ಪಿಎಸ್‌ಐ, ಎಎಸ್‌ಐ, ಕಾನ್ಸ್‌ ಟೇಬಲ್‌ ಸೇರಿ 10 ಮಂದಿ ಮೃತಪಟ್ಟಿದ್ದಾರೆ. 1500ಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

“ಚೇತರಿಕೆಯತ್ತ ಅರ್ಥ ವ್ಯವಸ್ಥೆ’

“ಚೇತರಿಕೆಯತ್ತ ಅರ್ಥ ವ್ಯವಸ್ಥೆ’

ನಾಯಕರಿಗೇಕೆ 2 ಕ್ಯಾಪ್‌?

ಐಪಿಎಲ್‌ 2020: ತಂಡದ ನಾಯಕರಿಗೇಕೆ 2 ಕ್ಯಾಪ್‌?

ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ; ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌!

ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌: ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ

IPLIPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ

IPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-tdy-4

ಲೋಪ ಬಂದರೆ ದಂಡ ವಿಧಿಸಲು ಸೂಚನೆ

bng-tdy-3

ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

bng-tdy-2

ಭೂಸ್ವಾಧೀನಕ್ಕೂ ಪಿಪಿಪಿ ಮಾದರಿ?

BNG-TDY-1

ಕ್ಷೇತ್ರದಲ್ಲಿ ಯಾವ ಬಂಡೆ ಆಟವೂ ನಡೆಯಲ್ಲ

ಸಮಸ್ಯೆಗಳನ್ನು ಜೀವಂತವಾಗಿಟ್ಟು ರಾಜಕೀಯ ಮಾಡುವುದೇ ಕಾಂಗ್ರೆಸ್- ಜೆಡಿಎಸ್‌ ಚಾಳಿ: ಡಿಸಿಎಂ

ಸಮಸ್ಯೆಗಳನ್ನು ಜೀವಂತವಾಗಿಟ್ಟು ರಾಜಕೀಯ ಮಾಡುವುದೇ ಕಾಂಗ್ರೆಸ್- ಜೆಡಿಎಸ್‌ ಚಾಳಿ: ಡಿಸಿಎಂ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್



ಹೊಸ ಸೇರ್ಪಡೆ

ಡ್ರಗ್ಸ್‌ ಮುಕ್ತ ಜಿಲ್ಲೆಯಾಗಿ ಪಣ ; ಉಡುಪಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಡ್ರಗ್ಸ್‌ ಮುಕ್ತ ಜಿಲ್ಲೆಯಾಗಿ ಪಣ ; ಉಡುಪಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಪೊಲೀಸರ ಕೆಲಸ ಶ್ಲಾಘನೀಯ ; ಮಂಗಳೂರಿನಲ್ಲಿ ಐಜಿಪಿ ದೇವಜ್ಯೋತಿ ರೇ

ಪೊಲೀಸರ ಕೆಲಸ ಶ್ಲಾಘನೀಯ; ಮಂಗಳೂರಿನಲ್ಲಿ ಐಜಿಪಿ ದೇವಜ್ಯೋತಿ ರೇ

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಪೊಲೀಸರ ಕಾರ್ಯ ಅವಿಸ್ಮರಣೀಯ: ಮುಖ್ಯಮಂತ್ರಿ

ಪೊಲೀಸರ ಕಾರ್ಯ ಅವಿಸ್ಮರಣೀಯ: ಮುಖ್ಯಮಂತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.