ಸೈಬರ್‌ ಕ್ರೈಂ ರಾಜಧಾನಿಯತ್ತ ಬೆಂಗಳೂರು


Team Udayavani, Oct 12, 2020, 12:28 PM IST

bng-tdy-1

ಸಾಂದರ್ಭಿಕ ಚಿತ್ರ

ನಾಗಲೋಟದಲ್ಲಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ಅಪರಾಧ ಪ್ರಕರಣದಿನೇ ದಿನೆ ಏರುತ್ತಿವೆ. ಆಧುನಿಕ ತಂತ್ರಜ್ಞಾನವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ವಂಚಕರು”ಐಟಿ ಹಬ್‌’ಅನ್ನು ಆಶ್ರಯ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ದೇಶದ ಮಹಾನಗರಗಳಲ್ಲಿ ಅತ್ಯಧಿಕ ಸೈಬರ್‌ ಅಪರಾಧಗಳು ನಡೆಯುವ ಸ್ಥಳ ಎಂಬಕುಖ್ಯಾತಿಯನ್ನು “ಸಿಲಿಕಾನ್‌ ಸಿಟಿ’ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ, ಹಿಂಸಾತ್ಮಕ ಕೊಲೆ, ದರೋಡೆ, ಮಹಿಳಾ ದೌರ್ಜನ್ಯ ಪ್ರಕರಣವೂಗಣನೀಯ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಾಷ್ಟ್ರೀಯ ಅಪರಾಧ ದತ್ತಾಂಶ ಕ್ರೋಡೀಕರಣ ಘಟಕ(ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ 2019ರ ಸಾಲಿನ ಅಂಕಿ-ಅಂಶಗಳು ಈ ವಾದವನ್ನು ಪುಷ್ಟೀಕರಿಸಿವೆ. ಎನ್‌ ಸಿಆರ್‌ಬಿಯ ಮಾಹಿತಿ ಆಧರಿಸಿ ನಗರದ ಅಪರಾಧ ಪ್ರಕರಣಗಳ ಹಿನ್ನೋಟ ಈ ವಾರದ ಸುದ್ದಿಸುತ್ತಾಟ..

ಬೆಂಗಳೂರಿಗೆ ಉದ್ಯಾನನಗರಿ, ಸಿಲಿಕಾನ್‌ ಸಿಟಿ, ಐಟಿ-ಬಿಟಿ ನಗರ ಇತ್ಯಾದಿ ಅನ್ವರ್ಥ‌ ನಾಮಗಳಿವೆ . ರಾಜಧಾನಿಯ ಅತಿವೇಗದ ಬೆಳವಣಿಗೆಯೂ ಕಾರಣ ಇರಬಹುದು. ಆದರೆ, ಕಳೆದ ಮೂರು ವರ್ಷಗಳಿಂದ ಸೈಬರ್‌ ಅಪರಾಧ ಪ್ರಕರಣಗಳು ದ್ವಿಗುಣಗೊಳ್ಳುತ್ತಾ ಬೆಂಗಳೂರು ಸೈಬರ್‌ ಕ್ರೈಂ ಸಿಟಿಯಾಗುವತ್ತಾ ಹೆಜ್ಜೆಹಾಕುತ್ತಿದೆ. ನಗರದ ಅಪರಾಧ ನಡೆಸುತ್ತಿರುವ ಬಹುತೇಕ ವಂಚಕರು ಅಪ್‌ ಗ್ರೇಡ್‌ ಆಗಿರುವಂತಿದೆ. ಅಂತರ್ಜಾಲದ ಮೂಲಕ ತಮ್ಮ ಗುರುತು ಮರೆಮಾಚಿ ಬ್ಯಾಂಕ್‌ ಅಕೌಂಟ್‌ಗಳಿಗೆಕನ್ನ ಹಾಕಿ ಹಣಲೂಟಿ ಮಾಡುತ್ತಿದ್ದಾರೆ. ಜತೆಗೆ, ಆನ್‌ಲೈನ್‌ ಮಾರಾಟ ತಾಣಗಳು, ಸಾಮಾಜಿಕ ಜಾಲತಾಣಗಳನ್ನು ವಂಚನೆಗೆ ಆಶ್ರಯತಾಣವನ್ನಾಗಿ ಮಾಡಿಕೊಂಡಿದ್ದಾರೆ.

ತಮ್ಮ ವಂಚನೆ ಕೃತ್ಯಕ್ಕೆ ಟೆಲಿಕಾಂ ಪ್ರತಿನಿಧಿಗಳು, ಬ್ಯಾಂಕ್‌ ಸಿಬ್ಬಂದಿ, ವೈದ್ಯರು, ವಿದ್ಯಾರ್ಥಿಗಳು, ಸೈನಿಕರುಅಷ್ಟೇ ಯಾಕೆ ಪೊಲೀಸ್‌ ಅಧಿಕಾರಿಗಳ ಮುಖವಾಡ(ಹೆಸರು) ವನ್ನೂ ಬಳಕೆ ಮಾಡಿಕೊಂಡಿದ್ದಾರೆ. ಸೈಬರ್‌ ವಂಚಕರಕಾಟಕ್ಕೆ ಬೆಚ್ಚಿಬಿದ್ದಿರುವ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಯಮಾಡಿ ನಂಬಬೇಡಿ ಎಂದು ಐಪಿಎಸ್‌ ದರ್ಜೆಯ ಅಧಿಕಾರಿಗಳೇ ಸಾರ್ವಜನಿಕರ ಮುಂದೆ ಮಂಡಿಯೂರಿ ಮನವಿ ಮಾಡುವ ಹಂತಕ್ಕೆ ತಲುಪಿದ್ದಾರೆ.

ಸೈಬರ್‌ ವಂಚಕರು ಮಹಾಜಾಲಕ್ಕೆ ಸಿಲುಕಿರುವ ವರ್ಗದಲ್ಲಿ ವಿದ್ಯಾವಂತರೇ ಹೆಚ್ಚಿದ್ದಾರೆ ಎಂಬುದು ಕಳವಳದ ಸಂಗತಿ. ಮೊಬೈಲ್‌ ಬಳಕೆ, ಸಾಮಾಜಿಕ ಜಾಲತಾಣಗಳು, ಇಂಟರ್‌ನೆಟ್‌ ಬ್ಯಾಂಕಿಂಗ್‌ ಬಳಸುವವರನ್ನೇ ಬಹುತೇಕ ಟಾರ್ಗೆಟ್‌ ಮಾಡಿಕೊಂಡಿರುವ ವಂಚಕರು ವಿದೇಶಗಳಿಂದ ದುಬಾರಿ ಉಡುಗೊರೆ, ಕ್ಯುಆರ್‌ ಸ್ಕ್ಯಾನ್‌,ಒಟಿಪಿ ಕಳಿಸುವುದು, ಕಂಪನಿಗಳ ಹೊಸ ಲಿಂಕ್‌ಕಳಿಸುವುದು ಸೇರಿದಂತೆ ಹಲವು ಮಾದರಿಗಳಲ್ಲಿ ಅಕೌಂಟ್‌ಗಳಿಗೆ ಕನ್ನ ಹಾಕುತ್ತಿದ್ದಾರೆ.ಸೈಬರ್‌ ಪ್ರಕರಣಗಳ ತನಿಖೆಯೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಅಂತಾರಾಷ್ಟ್ರೀಯ ವೆಬ್‌ಸೈಟ್‌(ಗೂಗಲ್‌, ಫೇಸ್‌ ಬುಕ್‌, ಟ್ವೀಟರ್‌) ಸೇರಿ ಹಲವುಕಂಪನಿಗಳು ವಂಚಕರ ಐಪಿ ಅಡ್ರೆಸ್‌ ಗಳ ಪತ್ತೆಗೆ ಮನವಿಗಳಿಗೆ ಸರಿಯಾದ ಸ್ಪಂದನೆ ‌ ನೀಡದಿರುವುದು.

ಪೊಲೀಸ್‌ ಇಲಾಖೆಯಲ್ಲಿ ಸೈಬರ್‌ಕ್ರೈಂಗಳಕುರಿತ ಜ್ಞಾನ ಕೌಶಲ್ಯದ ಕೊರತೆ. ಸಿಬ್ಬಂದಿ ಕೊರತೆಯಿಂದಲೂ ಪ್ರಕರಣಗಳ ತನಿಖೆ ಆಮೆಗತಿಯಲ್ಲಿ ಸಾಗುತ್ತಿದೆ. ಈ ಕೊರತೆ ನೀಗಿಸುವ ಸಲುವಾಗಿ ಸರ್ಕಾರ ಎಂಟು ವಿಭಾಗಗಳಲ್ಲಿ ಹೊಸ ಸಿಇಎನ್‌ ಠಾಣೆಗಳನ್ನು ಅಸ್ತಿತ್ವಕ್ಕೆ ತಂದಿದೆ. ಇಷ್ಟಾದರೂ ತನಿಖೆ ವೇಗದಲ್ಲಂತೂ ಯಾವುದೇ ಪರಿಣಾಮಕಾರಿ ಬೆಳವಣಿಗೆಕಾಣುತ್ತಿಲ್ಲ ಎನ್ನುತ್ತವೆ ಅಂಕಿ ಅಂಶಗಳು.

ಪೊಲೀಸ್‌ ಅಧಿಕಾರಿಗಳೇ ಟಾರ್ಗೆಟ್‌ :  ಪೊಲೀಸ್‌ ಇಲಾಖೆಯ ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯುವ ವಂಚಕರು, ಅವರ ಹೆಸರಿನಲ್ಲಿ ಸಾರ್ವಜನಿಕರಿಂದ ಹಣವಸೂಲಿ ಮಾಡುತ್ತಿದ್ದಾರೆ. ಉತ್ತರಕರ್ನಾಟಕದ ಪೊಲೀಸ್‌ ಅಧಿಕಾರಿ ಮತ್ತು ಐಎಸ್‌ಡಿಯಲ್ಲಿ ಕರ್ತವ್ಯ ನಿರ್ವಹಿಸುವ ಐಪಿಎಸ್‌ ಅಧಿಕಾರಿಹೆಸರಿನಲ್ಲಿ ನಕಲಿಖಾತೆ ತೆರೆಯಲಾಗಿತ್ತು. “ತಾನೂ ಪೊಲೀಸ್‌ ಇಲಾಖೆಯಲ್ಲಿಕರ್ತವ್ಯ ನಿರ್ವಹಿಸುತ್ತಿದ್ದು, ಕೌಟುಂಬಿಕ ಮತ್ತು ವೈಯಕ್ತಿಕ ಸಮಸ್ಯೆಗಳು ಉಂಟಾಗಿವೆ. ದಯವಿಟ್ಟು ಹಣ ನೀಡುವಂತೆ ಇನ್‌ಬಾಕ್ಸ್‌ನಲ್ಲಿ ಚಾಟ್‌ ಮಾಡುತ್ತಾರೆ. ಅದನ್ನು ನಂಬಿದ ಕೆಲ ಸಾರ್ವಜನಿಕರು ವಂಚಕರು ಸೂಚಿಸಿದ ಖಾತೆಗಳಿಗೆ ಹಣಹಾಕುತ್ತಿದ್ದಾರೆ. ಇತ್ತೀಚೆಗೆ ಉತ್ತರಕರ್ನಾಟಕದ ಪೊಲೀಸ್‌ ಅಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಐದು ಲಕ್ಷಕ್ಕೂ ಅಧಿಕ ಹಣಪಡೆದುಕೊಂಡು ವಂಚಿಸಿದ್ದರು. ಈ ವಿಚಾರ ತಿಳಿದ ಪೊಲೀಸ್‌ ಅಧಿಕಾರಿಗಳು ತಮ್ಮ ಅಸಲಿಖಾತೆಯಲ್ಲಿ ನಕಲಿಖಾತೆಗಳ ಬಗ್ಗೆ ಮಾಹಿತಿ ನೀಡಿ, ದಯವಿಟ್ಟು ಸಾರ್ವಜನಿಕರು ನಕಲಿಖಾತೆಗಳಿಗೆ ಹಣ ಹಾಕಬೇಡಿ. ಅಂತಹ ವಿಚಾರಗಳು ಕಂಡು ಬಂದಲ್ಲಿ ಪೊಲೀಸ್‌ ಸಹಾಯವಾಣಿಅಥವಾ ಅಧಿಕೃತಖಾತೆಯ ಇನ್‌ಬಾಕ್ಸ್‌ನಲ್ಲಿ ಮೆಸೇಜ್‌ ಮಾಡುವಂತೆ ಮನವಿ ಮಾಡಿದ್ದಾರೆ.

ದೇಶದಲ್ಲಿ ಹೆಚ್ಚು ತಂತ್ರಜ್ಞಾನ ಬಳಕೆ ಆಗುತ್ತಿರುವ ನಗರಗಳಲ್ಲಿ ಬೆಂಗಳೂರು ಪ್ರಮುಖ ಸ್ಥಾನ ಹೊಂದಿದೆ. ಹೀಗಾಗಿಯೇ, ಸೈಬರ್‌ ವಂಚಕರು ನಗರದಲ್ಲಿವಂಚನೆಗಳನ್ನು ಹೆಚ್ಚು ಎಸಗುತ್ತಿದ್ದಾರೆ.ಪೊಲೀಸ್‌ ಇಲಾಖೆಕೂಡ ಪ್ರತಿಯೊಂದುದೂರನ್ನೂ ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.ಸಾರ್ವಜನಿಕರುಕೂಡ ಸೈಬರ್‌ ವಂಚನೆ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಿದಾಗ ಈ ವಂಚನೆಗೆಕಡಿವಾಣ ಬೀಳಲಿದೆ. ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

ಕೊಲೆ ಪ್ರಕರಣದಲ್ಲಿ ದ್ವಿತೀಯ ಸ್ಥಾನ :  ದೇಶದ ಮಹಾನಗರಗಳಲ್ಲಿ ಅತಿ ಹೆಚ್ಚು ಅಪರಾಧಕೃತ್ಯಗಳು ನಡೆಯುವ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ಕೊಲೆ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದೆ. ವೈಯಕ್ತಿದ ದ್ವೇಷಕ್ಕೆ ಅತಿ ಹೆಚ್ಚು ಬೆಂಗಳೂರಿನಲ್ಲಿಯೇ ಕೊಲೆಗಳು ನಡೆದಿವೆ. ಇನ್ನು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿಯೂ ಮುಂದಿದೆ ಮಕ್ಕಳ ಮೇಲಿನ ಕೃತ್ಯಗಳು 17 ಕೊಲೆ 4 ಆತ್ಮಹತ್ಯೆ 958 ಕಿಡ್ನಾಪ್‌ ಕೇಸ್‌ 350ಲೈಂಗಿಕ ಕಿರುಕುಳ ಸೇರಿ ಇತ್ಯಾದಿ265 ಪೋಕ್ಸೋ(ಶೇ.6.4) 63 ಲೈಂಗಿಕ ಹಲ್ಲೆ (ಶೇ.1.6) 18 ಲೈಂಕಿಗ ಕಿರುಕುಳ (ಶೇ.0.4)

ತಂತ್ರಜ್ಞರ ಕೊರತೆ : ಬೆಂಗಳೂರಿನಲ್ಲಿ ಎಂಟು ವಿಭಾಗಗಳಲ್ಲಿಸಿಇಎನ್‌ ಠಾಣೆಗಳನ್ನು ತೆರೆಯಲಾಗಿದೆ. ಆದರೆ, ಅಗತ್ಯ ತಂತ್ರಜ್ಞರಕೊರತೆಯನ್ನು ಈಗಲೂ ಠಾಣೆಗಳಲ್ಲಿಕಾಣಬಹುದು. ಹೀಗಾಗಿ ಸೈಬರ್‌ಕ್ರೈಂಗಳು ತನಿಖೆಯ ವೇಗಕಡಿಮೆಯಾಗಿದೆ. ಮತ್ತೂಂದೆಡೆ ಸಾಮಾಜಿಕ ಜಾಲತಾಣಗಳಕೇಂದ್ರಕಚೇರಿಗಳಿಂದ ಬರುವ ಪ್ರತಿಕ್ರಿಯೆ ತನಿಖೆ ಇತ್ಯರ್ಥಕ್ಕೆ ಸಹಕಾರವಾಗುತ್ತಿಲ್ಲ ಎನ್ನುತ್ತವೆ ಮೂಲಗಳು.

ದೇಶದಲ್ಲಿ ಹೆಚ್ಚು ತಂತ್ರಜ್ಞಾನ ಬಳಕೆ   ಆಗುತ್ತಿರುವ ನಗರಗಳಲ್ಲಿ ಬೆಂಗಳೂರುಪ್ರಮುಖಸ್ಥಾನ ಹೊಂದಿದೆ. ಹೀಗಾಗಿಯೇ,ಸೈಬರ್‌ ವಂಚಕರು ನಗರದಲ್ಲಿವಂಚನೆಗಳನ್ನು ಹೆಚ್ಚು ಎಸಗುತ್ತಿದ್ದಾರೆ.ಪೊಲೀಸ್‌ ಇಲಾಖೆಕೂಡ ಪ್ರತಿಯೊಂದು ದೂರನ್ನೂ ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಸಾರ್ವಜನಿಕರುಕೂಡ ಸೈಬರ್‌ ವಂಚನೆ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಿದಾಗ ಈ ವಂಚನೆಗೆಕಡಿವಾಣ ಬೀಳಲಿದೆ. ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

 

-ಮಂಜುನಾಥ್‌ಲಘುಮೇನಹಳ್ಳಿ

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.