ಹೈನುಗಾರಿಕೆ ಕಾಲೇಜಿನಲ್ಲಿ ಕಲಿಕೆ ಜತೆ ಗಳಿಕೆ!


Team Udayavani, Dec 8, 2021, 1:15 PM IST

Untitled-1

ಬೆಂಗಳೂರು: ಸಾಮಾನ್ಯವಾಗಿ ಯಾವೊಂದು ವೃತ್ತಿ ಪರ ಕೋಸ್‌ಗಳ ಅಂತಿಮ ವರ್ಷದಲ್ಲಿ “ಕ್ಯಾಂಪಸ್‌ ಪ್ಲೇಸ್‌ ಮೆಂಟ್‌’ ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ ಆಗಿದೆ. ಆದರೆ, ಹೆಬ್ಬಾಳದ ಹೈನುಗಾರಿಕೆ ಮಹಾವಿದ್ಯಾಲಯವು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ತನ್ನ ವಿದ್ಯಾರ್ಥಿಗಳಿಗೆ ಕಲಿಕೆ ಹಂತದಲ್ಲೇ ಗಳಿಕೆ ವಿಧಾನ ಪರಿಚಯಿಸುವ ಮೂಲಕ ಮೇಲ್ಪಂಕ್ತಿ ಹಾಕಿದೆ.

ಹೆಬ್ಟಾಳದ ಹೈನುಗಾರಿಕೆ ಮಹಾವಿದ್ಯಾಲಯದ ಹೈನುಗಾರಿಕೆ ತಂತ್ರಜ್ಞಾನ ಮತ್ತು ಸಂಸ್ಕರಣಾ ವಿಭಾ ಗವು ಹಾಲಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದರಿಂದ ಬಿಟೆಕ್‌ ಡೈರಿ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಕೊನೆಯ ಸೆಮಿಸ್ಟರ್‌ ವಿದ್ಯಾರ್ಥಿಗಳು ಒಂದೇ ತಿಂಗಳಲ್ಲಿ 1.20 ಲಕ್ಷ ರೂ. ನಿವ್ವಳ ಆದಾಯ ಗಳಿಸಿದ್ದಾರೆ.

ಹಾಲಿನಿಂದ ತುಪ್ಪ, ಪನ್ನೀರ್‌, ಲಸ್ಸಿ, ಶ್ರೀಖಂಡ, ಕುಲ್ಫಿ ಸೇರಿದಂತೆ ಹಲವು ಮೌಲ್ಯವರ್ಧಿತ ಉತ್ಪನ್ನ ಗಳನ್ನುತಯಾರಿಸಿ, ತಮ್ಮದೇ ಬ್ರ್ಯಾಂಡ್‌ ಮಾಡಿ ಕೊಂಡು,ವಿವಿಧೆಡೆ ಸಾವಿರಾರು ಕೆಜಿ ಉತ್ಪನ್ನಗಳನ್ನು ಮಾರಾಟಮಾಡಲಾಗುತ್ತಿದೆ. ಅಲ್ಪಾವಧಿಯಲ್ಲೇ 40ವಿದ್ಯಾರ್ಥಿಗಳ ಈ ತಂಡ ಯಶಸ್ವಿಯೂ ಆಗಿದೆ.

ಕೇವಲ ಒಂದು ತಿಂಗಳಲ್ಲಿ ಒಂದು ಟನ್‌ ತುಪ್ಪ ಉತ್ಪಾದನೆ ಮಾಡಿದ್ದು, ಇದರಲ್ಲಿ 970 ಕೆಜಿ ಮಾರಾಟ ಆಗಿದೆ. 150 ಕೆಜಿ ಪನ್ನೀರ್‌, 26 ಲೀಟರ್‌ ತೆಂಗಿನ ಎಣ್ಣೆಉತ್ಪಾದಿಸಿ, ಮಾರಾಟ ಮಾಡಲಾಗಿದ್ದು, ಇದರಿಂದ1.20 ಲಕ್ಷ ರೂ. ನಿವ್ವಳ ಆದಾಯ ಬಂದಿದೆ. ಮುಂಬರುವ ದಿನಗಳಲ್ಲಿ ಈ ಆದಾಯ ಪ್ರಮಾಣ ಮತ್ತಷ್ಟು ಹೆಚ್ಚಳ ಆಗಲಿದೆ.

“ಕಲಿಕೆ ಹಂತದಲ್ಲೇ ನಮಗೆ ಉದ್ಯಮದ ತರಬೇತಿ ದೊರೆಯುತ್ತಿದೆ. ಇಲ್ಲಿನ ಅನುಭವ ಪಡೆದು, ಅದ ರಿಂದಭವಿಷ್ಯದಲ್ಲಿ ಉದ್ಯಮಿ ಮಾತ್ರವಲ್ಲ; ಊರುಗಳಲ್ಲಿರೈತರಿಗೆ ಪ್ರೇರಣೆ ನೀಡಲೂ ಇದು ಅನುಕೂಲಆಗುತ್ತದೆ. ಈಗಾಗಲೇ ವಾರಕ್ಕೊಮ್ಮೆ ಊರಿಗೆಹೋದಾಗ, ಪೋಷಕರು ಮತ್ತು ಅಕ್ಕ- ಪಕ್ಕ ದವರಿಗೆ ಈತಂತ್ರಜ್ಞಾನದ ಬಗ್ಗೆ ಹೇಳಿಕೊಟ್ಟು, ಉತ್ತೇ ಜನನೀಡಲಾಗುತ್ತಿದೆ’ ಎಂದು ಬಿಟೆಕ್‌ ನಾಲ್ಕನೇ ವರ್ಷದವಿದ್ಯಾರ್ಥಿನಿ ಚಿಕ್ಕಬಳ್ಳಾಪುರದ ಎ. ಅನುಷಾ ತಿಳಿಸಿದರು.

“ಪ್ರಧಾನಿ ನರೇಂದ್ರ ಮೋದಿ ಅವರು “ರೆಡಿ’ (ಗ್ರಾಮೀಣ ಉದ್ಯಮ ಜಾಗೃತಿ ಮತ್ತು ಅಭಿವೃದ್ಧಿ ಯೋಜನೆ) ಯೋಜನೆ ಅಡಿ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿನೀಡಲಾಗಿದೆ. ಕಲಿಕೆ ಪೂರೈಸಿ ಹೊರಗೆ ಬರುವವಿದ್ಯಾರ್ಥಿಗಳು ಉದ್ಯೋ ಗಕ್ಕಾಗಿ ಅಲೆದಾಡುವ ಬದಲಿಗೆ, ಅವರೇ ಉದ್ಯೋಗ ಸೃಷ್ಟಿಕರ್ತರಾಗಬೇಕುಎಂಬ ಮುಖ್ಯ ಉದ್ದೇಶದಿಂದ ಕಲಿಕೆ ಹಂತದಲ್ಲೇವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ.

ಕೇವಲ 25 ಸಾವಿರ ರೂ. ಮೂಲ ಬಂಡವಾಳದಿಂದ ಶುರುವಾದ ಈ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ತಂತ್ರಜ್ಞಾನವು ಅಲ್ಪಾವಧಿಯಲ್ಲಿ ಫ‌ಲ ನೀಡುತ್ತಿದೆ.ಇಂದು ವಿದ್ಯಾರ್ಥಿಗಳು ತಯಾರಿಸಿದ ತುಪ್ಪ ಬೀದರ್‌ವರೆಗೂ ಹೋಗುತ್ತಿದೆ’ ಎಂದು ಹೈನುಗಾರಿಕೆ ತಂತ್ರಜ್ಞಾನಮತ್ತು ಸಂಸ್ಕರಣಾ ವಿಭಾಗದ ಮುಖ್ಯಸ್ಥ ಡಾ.ಮಹೇಶ್‌ ಕುಮಾರ್‌ “ಉದಯವಾಣಿ’ಗೆ ತಿಳಿಸಿದರು.

ಹಾಸನ ಜಿಲ್ಲೆಯಿಂದ ಸಾವಯವ ಪ್ರಮಾಣಿಕೃತ ಹೈನುಗಾರಿಕೆ ಮಾಡುವ ರೈತರಿಂದ ಹಾಲು ಖರೀದಿಸಲಾಗುತ್ತದೆ. ಅದನ್ನು ನಮ್ಮ ಪ್ರಯೋಗಾಲಯದಲ್ಲಿ ಸಂಸ್ಕರಿಸಿ, ಹಾಲಿನಲ್ಲಿಯ ಕ್ರೀಮ್‌ ಅನ್ನು ಬೇರ್ಪಡಿಸಲಾಗುತ್ತದೆ. ನಂತರ ಅದರಿಂದ ತುಪ್ಪ ತಯಾರಿಸಲಾಗುತ್ತದೆ. ಹತ್ತು ಲೀಟರ್‌ ಹಾಲಿಗೆ ಒಂದು ಕೆಜಿ ತುಪ್ಪ ಬರುತ್ತದೆ ಎಂದು ಮಾಹಿತಿ ನೀಡಿದರು.

ರೈತರಿಗೂ ತರಬೇತಿ :

ವಿದ್ಯಾರ್ಥಿಗಳಿಗೆ ಮಾತ್ರವಲ್ಲ; ರೈತರಿಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಬಗ್ಗೆ ತರಬೇತಿ ನೀಡಲು ಹೈನುಗಾರಿಕೆ ಮಹಾವಿದ್ಯಾಲಯ ಯೋಜನೆ ರೂಪಿಸಿದೆ. “ಈಗಾಗಲೇ ಕ್ಯಾಂಪಸ್‌ನಲ್ಲಿ ಇನ್‌ಕ್ಯೂಬೇಷನ್‌ ಸೆಂಟರ್‌ ತೆರೆಯಲು ಉದ್ದೇಶಿಸಲಾಗಿದೆ. ಅಲ್ಲಿ ರೈತರು ಸೇರಿದಂತೆಆಸಕ್ತರಿಗೆ ತರಬೇತಿ ನೀಡಲಾಗುವುದು. ಹೀಗೆತರಬೇತಿ ಪಡೆದವರು, ಇಲ್ಲಿಯೇ ಉತ್ಪನ್ನಗಳನ್ನುತಯಾರಿಸಿ, ತಮ್ಮದೇ ಬ್ರ್ಯಾಂಡ್‌ ಮಾಡಿಕೊಂಡುಮಾರಾಟ ಕೂಡ ಮಾಡಲು ಅವಕಾಶ ಇದೆ’ ಎಂದು ಕಾಲೇಜು ಡೀನ್‌ ಪ್ರೊ.ಎ. ಸಚ್ಚಿಂದ್ರಬಾಬು ತಿಳಿಸಿದರು.

ದುಪ್ಪಟ್ಟಿಗಿಂತ ಹೆಚ್ಚು ಆದಾಯ :

ಕೊರೊನಾ ಹಾವಳಿ ಪರಿಣಾಮ ಹಾಲಿನ ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಈಗ ಬರುವುದಕ್ಕಿಂತ ದುಪ್ಪಟ್ಟು ಆದಾಯತರುವ ತಂತ್ರಜ್ಞಾನವೂ ಇದಾಗಿದೆ. ಕಳೆದಒಂದು ವರ್ಷದಿಂದ ರೈತರಿಂದ ಖರೀದಿಸುವಹಾಲಿನ ದರ ಇಳಿಮುಖವಾಗಿದ್ದು, ಲೀಟರ್‌ಗೆ24-25 ರೂ. ಇದೆ. ಈ ಮೊದಲೇ ನೆರೆ ಮತ್ತಿತರಕಾರಣಗಳಿಂದ ನಷ್ಟ ಅನುಭವಿಸುತ್ತಿರುವವರುಇದರಿಂದ ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ. ಆದರೆ, ಮೌಲ್ಯವರ್ಧಿತ ಉತ್ಪನ್ನಗಳ ಮೂಲಕದುಪ್ಪಟ್ಟಿಗಿಂತ ಹೆಚ್ಚು ಆದಾಯ ಗಳಿಸುವ ತಂತ್ರಜ್ಞಾನವು ವರವಾಗಿ ಪರಿಣಮಿಸಲಿದೆ.

ಲೆಕ್ಕಾಚಾರ ಹೀಗಿದೆ :

ಒಂದು ಲೀಟರ್‌ ಹಾಲಿಗೆ 30 ರೂ. ಅಂದುಕೊಳ್ಳೋಣ. ಹತ್ತು ಲೀಟರ್‌ ಹಾಲಿಗೆ300 ರೂ. ಆಗುತ್ತದೆ. ಅದರಲ್ಲಿನ ಕ್ರೀಮ್‌ ಅನ್ನುಬೇರ್ಪಡಿಸಿ ಒಂದು ಕೆಜಿ ತುಪ್ಪತಯಾರಿಸಬಹುದು. ಒಂದು ಕೆಜಿ ತುಪ್ಪಕ್ಕೆ 500ರೂ. ಆಗುತ್ತದೆ. ಎಲ್ಲ ಖರ್ಚು ತೆಗೆದು ಎರಡು-ಮೂರು ಪಟ್ಟು ಹಣ ಉಳಿತಾಯ ಆಗುತ್ತದೆ. ಅಲ್ಲದೆ, ಉಳಿದ 9 ಲೀ. ಹಾಲಿನಿಂದಪನ್ನೀರ್‌, ಲಸ್ಸಿ ಮತ್ತಿತರ ಉತ್ಪನ್ನಗಳನ್ನುಮಾಡಬಹುದು ಎಂದು ಡಾ.ಮಹೇಶ್‌ ಕುಮಾರ್‌ ತಿಳಿಸಿದರು.

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.