ದಿಣ್ಣೂರು ಮುಖ್ಯ ರಸ್ತೆ ಪರಿಶೀಲಿಸಿದ ಡಿಸಿಎಂ


Team Udayavani, Jun 29, 2019, 3:06 AM IST

dinnuru

ಬೆಂಗಳೂರು: ಆರ್‌.ಟಿ ನಗರ ಬಳಿಯ ದಿಣ್ಣೂರು ಮುಖ್ಯರಸ್ತೆ ಅಗಲೀಕರಣ ವಿಚಾರವಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಶುಕ್ರವಾರ ಸ್ಥಳಕ್ಕೆ ತೆರಳಿದ್ದ ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ಅಭಿಪ್ರಾಯ ಪಡೆದರು.

ದಿಣ್ಣೂರು ಮುಖ್ಯರಸ್ತೆ ಕಡಿದಾದ್ದರಿಂದ ನಿತ್ಯ ವಾಹನ ದಟ್ಟಣೆ ಅಧಿಕವಾಗಿದೆ. ಹೀಗಾಗಿ, ಈ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಲು ನಿರ್ಧರಿಸಲಾಗಿತ್ತು. ಸದ್ಯ 25 ಅಡಿ ಅಗಲವಿರುವ 4.1 ಕಿ.ಮೀ ರಸ್ತೆಯನ್ನು 69.45 ಕೋಟಿ ರೂ.ವೆಚ್ಚದಲ್ಲಿ 80 ಅಡಿಗೆ ವಿಸ್ತರಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಇದಕ್ಕಾಗಿ ಈಗಾಗಲೇ ನೀಲನಕ್ಷೆ ಕೂಡಾ ಸಿದ್ಧಪಡಿಸಿತ್ತು.

ಆದರೆ, ಅಗಲೀಕರಣದಿಂದ ಸರ್ಕಾರಿ ಕಟ್ಟಡ ಸೇರಿದಂತೆ ಸಾಕಷ್ಟು ಮನೆ, ಖಾಸಗಿ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರವಾಗಿ ಪರಿಶೀಲನೆ ಹಾಗೂ ಸ್ಥಳೀಯರ ಅಹವಾಲು ಸ್ವೀಕರಿಸಿದರು. ಈ ವೇಳೆ ಮನವಿ ಮಾಡಿದ ಸ್ಥಳೀಯರು 80 ಅಡಿ ರಸ್ತೆ ಅಗಲೀಕರಣ ಮಾಡಿದರೆ ಒಟ್ಟು 579 ಕಟ್ಟಗಳು ಒಡೆಯಬೇಕುತ್ತದೆ.

ಈ ಸಂಬಂಧ ಸ್ಥಳೀಯರು ಇರುವ 25 ಅಡಿ ರಸ್ತೆಗೆ ಎರಡೂ ಬದಿಯಲ್ಲಿ ತಲಾ 10 ಅಡಿ ಜಾಗ ಪಡೆದು ಒಟ್ಟು 50 ಅಡಿ ರಸ್ತೆ ಮಾಡುವಂತೆ ಮನವಿ ಮಾಡಿದ್ದಾರೆ. ಸ್ಥಳಿಯರ ಮನವಿಗೆ ಸ್ವೀಕರಿಸಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌, ಈ ಬಗ್ಗೆ ಪಾಲಿಕೆ ಆಯುಕ್ತ ಹಾಗೂ ಮೇಯರ್‌ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗವುದು.

ರಸ್ತೆ ಅಗಲೀಕರಣದಲ್ಲಿ ಕಟ್ಟಡ ಕಳೆದುಕೊಂಡವರಿಗೆ ಪರಿಹಾರ ಅಥವಾ ಟಿಡಿಆರ್‌ ನೀಡಬೇಕಾ ಎಂಬುದರ ಬಗ್ಗೆಯೂ ಪಾಲಿಕೆ ಆಯುಕ್ತ, ಮೇಯರ್‌ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಗರದ ನಾಲ್ಕು ಭಾಗಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅತ್ಯಾಧುನಿಕ ಕ್ರೀಡಾಂಗಣ, ಕಬ್ಬನ್‌ ಉದ್ಯಾನದ ರೀತಿಯಲ್ಲಿ ಉದ್ಯಾನ ನಿರ್ಮಾಣ ಮಾಡಲು ಚಿಂತಿಸಲಾಗಿದೆ.

ಇದಕ್ಕಾಗಿ ಜಾಗ ಗುರುತಿಸಲು ಬಿಬಿಎಂಪಿಗೆ ಸೂಚನೆ ನೀಡಿದ್ದು, ಮುಂದಿನ ಬಜೆಟ್‌ನಲ್ಲಿ ಹಣ ಒದಗಿಸಲು ನಿರ್ಧರಿಸಲಾಗಿದೆ ಎಂದರು. ಈ ವೇಳೆ ಶಾಸಕರಾದ ಭೈರತಿ ಸುರೇಶ್‌, ಅಖಂಡ ಶ್ರೀನಿವಾಸ್‌ ಮೂರ್ತಿ, ಸಚಿವ ಜಮೀರ್‌ ಅಹಮದ್‌, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಇದ್ದರು.

ಶಾಲಾ ಮಕ್ಕಳಿಗೆ ಕ್ಷಮೆ ಕೇಳಿದ ಡಿಸಿಎಂ: ದಿಣ್ಣೂರು ಮುಖ್ಯರಸ್ತೆಯಲ್ಲಿ ಪರಿಶೀಲನೆಗೆ ತೆರಳಿವಾಗ ಡಿಸಿಎಂ ಬರುತ್ತಿದ್ದಾರೆ ಎಂದು ಆರ್‌.ಟಿ.ನಗರ ಮುಖ್ಯ ರಸ್ತೆ ಹಾಗೂ ದಿಣ್ಣೂರು ರಸ್ತೆಯಲ್ಲಿ ಜೀರೋ ಟ್ರಾಫಿಕ್‌ ಮಾಡಲಾಗಿತ್ತು. ಜೀರೊ ಟ್ರಾಫಿಕ್‌ ಬಿಸಿ ಶಾಲಾ ಬಸ್‌ಗಳಿಗೂ ತಟ್ಟಿದ್ದು, ಇದರಿಂದಾಗಿ ಮಕ್ಕಳು ಶಾಲೆಗೆ ತಲುಪುವುದು 30 ನಿಮಿಷ ತಡವಾಗಿದೆ.

ಈ ವಿಚಾರ ತಿಳಿದ ಬಳಿಕ ಡಿಸಿಎಂ ಮಕ್ಕಳ ಕ್ಷಮೆ ಕೇಳಿದ್ದಾರೆ. “ಆ್ಯಂಬುಲೆನ್ಸ್‌ ,ಶಾಲಾ ವಾಹನಕ್ಕೆ ಅಡ್ಡಿ ಮಾಡಬೇಡಿ ಎಂದು ಪೊಲೀಸರಿಗೆ ತಿಳಿಸಲಾಗಿತ್ತು. ಆದರೂ, ಕೆಲವೊಮ್ಮೆ ಇಂತಹ ಘಟನೆ ನಡೆಯುತ್ತವೆ. ಶಾಲಾ ಮಕ್ಕಳಿಗೆ ತಡವಾಗಿದ್ದು, ನನಗೂ ಬೇಸರ ತಂದಿದ್ದು, ಎಲ್ಲರಿಗೂ ಕ್ಷಮೆ ಕೇಳುವೆ’ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

cancer

ಮಹಿಳೆಯರಲ್ಲಿ ಕೌಟುಂಬಿಕ ಕ್ಯಾನ್ಸ ರ್‌ ಸಿಂಡ್ರೋಮ್‌ಗಳು ಮತು ವಂಶವಾಹಿ ಪರೀಕ್ಷೆ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

1-fsfsdf

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ನಾಯಕರ ಭೇಟಿಯಾದ ಜೆಡಿಎಸ್ ನ ಕುಪೇಂದ್ರ ರೆಡ್ಡಿ

parameshwar

ದಲಿತ ಸಿಎಂ ವಿಚಾರ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದ ಪರಮೇಶ್ವರ್

ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್‌ ರೈಲುಗಳಿಗೆ ಕಲ್ಲು ತೂರಾಟ!

ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್‌ ರೈಲುಗಳಿಗೆ ಕಲ್ಲು ತೂರಾಟ!

Nepal: Tara airlines carrying 22 passengers goes missing

ನೇಪಾಳ: 22 ಮಂದಿ ಪ್ರಯಾಣಿಕರಿದ್ದ ತಾರಾ ಏರ್ ಲೈನ್ಸ್ ವಿಮಾನ ನಾಪತ್ತೆ!

8

ಶಿರಸಿ: ಜಿಪಿಎಗೆ ಬೆಲೆ ಇಲ್ಲ; ಸರ್ವರ್‌ ಮೊದಲೇ ಇಲ್ಲ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದರೆ ದಂಡ: ಪಾಲಿಕೆ ಆಯುಕ್ತ ತುಷಾರ್‌ ಗಿರಿನಾಥ್‌

ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದರೆ ದಂಡ: ಪಾಲಿಕೆ ಆಯುಕ್ತ ತುಷಾರ್‌ ಗಿರಿನಾಥ್‌

Untitled-1

ಬೆಂಕಿ ಹಚ್ಚಿಕೊಂಡು ನೌಕರ ಆತ್ಮಹತ್ಯೆ

3cycle

ಸೈಕಲ್‌ ಕದ್ದರೆ ದೂರು ನೀಡಲ್ಲ ಎಂದು 54 ಸೈಕಲ್‌ಗಳನ್ನು ಕದ್ದ ಭೂಪ

ವೃತ್ತಗಳ ಅಂದ ಹೆಚ್ಚಿಸಲು ಯೋಜನೆ

ವೃತ್ತಗಳ ಅಂದ ಹೆಚ್ಚಿಸಲು ಯೋಜನೆ

ಸ್ನೇಹಿತರ ಇನ್‌ಸ್ಟ್ರಾಗ್ರಾಂ ಖಾತೆ ಹ್ಯಾಕ್‌ ಮಾಡಿ ವಂಚನೆ

ಸ್ನೇಹಿತರ ಇನ್‌ಸ್ಟ್ರಾಗ್ರಾಂ ಖಾತೆ ಹ್ಯಾಕ್‌ ಮಾಡಿ ವಂಚನೆ

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

cancer

ಮಹಿಳೆಯರಲ್ಲಿ ಕೌಟುಂಬಿಕ ಕ್ಯಾನ್ಸ ರ್‌ ಸಿಂಡ್ರೋಮ್‌ಗಳು ಮತು ವಂಶವಾಹಿ ಪರೀಕ್ಷೆ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನ‌ರ ದುರ್ಮರಣ

14

ಯುವಕರಲ್ಲಿ ರಾಷ್ಟ್ರ ಪ್ರೇಮ ಜಾಗೃತಗೊಳ್ಳಲಿ: ನಾಗೇಶ

ಕೂಡ್ಲೂರು ಕೆರೆ ಏರಿಗೆ ತಡೆಗೋಡೆ ಇಲ್ಲ 

ಕೂಡ್ಲೂರು ಕೆರೆ ಏರಿಗೆ ತಡೆಗೋಡೆ ಇಲ್ಲ 

1-fsfsdf

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ನಾಯಕರ ಭೇಟಿಯಾದ ಜೆಡಿಎಸ್ ನ ಕುಪೇಂದ್ರ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.