
ಸಿ.ಟಿ.ರವಿ ಲೂಟಿಕೋರ ಆಗಿರದಿದ್ದರೆ ಕ್ಷೇತ್ರದ ಜನ ‘ಲೂಟಿ ರವಿ’ ಎನ್ನಲು ಸಾಧ್ಯವೆ? ದಿನೇಶ್ ಗುಂಡೂರಾವ್ ಪ್ರಶ್ನೆ
Team Udayavani, Dec 8, 2022, 9:10 AM IST

ಬೆಂಗಳೂರು: ಸಿದ್ದರಾಮಯ್ಯರಿಗೆ ‘ಸಿದ್ರಾಮುಲ್ಲಾ ಖಾನ್’ ಎಂದು ನಾಮಕರಣ ಮಾಡಿರುವ ಸಿ.ಟಿ.ರವಿ, ತಮಗೆ ‘ಲೂಟಿ ರವಿ’ ಎಂದು ಜನ ನಾಮಕರಣ ಮಾಡಿರುವುದನ್ನು ಕ್ರೀಡಾ ಮನೋಭಾವದಿಂದ ಸ್ವಾಗತಿಸಬೇಕು. ಆದರೆ ‘ಲೂಟಿ ರವಿ’ ಎಂದರೆ ಸಿ.ಟಿ.ರವಿಯವರು ಅದ್ಯಾಕೆ ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಾರೆ.? ಒಂದು ವೇಳೇ ಸಿ.ಟಿ.ರವಿ ಲೂಟಿಕೋರರಾಗಿರದಿದ್ದರೆ ಅವರಿಗೆ ಆ ಕ್ಷೇತ್ರದ ಜನ ‘ಲೂಟಿ ರವಿ’ ಎನ್ನಲು ಸಾಧ್ಯವೆ.? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಸಿ.ಟಿ.ರವಿ ಪ್ರಕಾರ ಸಿದ್ದರಾಮಯ್ಯ ‘ಸಿದ್ರಾಮುಲ್ಲಾ ಖಾನ್’. ಆದರೆ, ಟಿಪ್ಪು ಬಗ್ಗೆ 400 ಪುಟಗಳ ಪುಸ್ತಕ ಬರೆಸಿ ಮುನ್ನುಡಿ ಬರೆದಿದ್ದ ಜಗದೀಶ್ ಶೆಟ್ಟರ್ ಯಾವ ‘ಖಾನ್’? ಟಿಪ್ಪು ಜಯಂತಿಯಂದು ಮುಸ್ಲಿಮರ ಟೋಪಿ ಧರಿಸಿದ್ದ ಯಡಿಯೂರಪ್ಪನವರು ಯಾವ ‘ಖಾನ್’. ರಂಜಾನ್ ಹಬ್ಬದಲ್ಲಿ ನಾವೆಲ್ಲರೂ ಒಂದೆ ಎಂದು ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಬಿರಿಯಾನಿ ತಿಂದಿದ್ದ ಈಶ್ವರಪ್ಪ ಯಾವ ‘ಖಾನ್’?
ಸರ್ವಧರ್ಮವನ್ನು ಸಮಾನವಾಗಿ ಕಾಣುವುದೇ ಜಾತ್ಯಾತೀತ. ಜಾತ್ಯಾತೀತ ತತ್ವದ ಬಗ್ಗೆ ಸಂವಿಧಾನದಲ್ಲೇ ಉಲ್ಲೇಖವಾಗಿದೆ. ಸಿದ್ದರಾಮಯ್ಯ ತಮ್ಮ ಬದುಕಿನುದ್ದಕ್ಕೂ ಇದೇ ತತ್ವದ ಆಧಾರದಲ್ಲಿ ಬದುಕಿದ್ದಾರೆ ಹಾಗೂ ರಾಜಕಾರಣ ಮಾಡಿದ್ದಾರೆ. ಎಲ್ಲರನ್ನೂ ಪ್ರೀತಿಸುವವನೇ ನಿಜವಾದ ಹಿಂದೂ. ಅನ್ಯಧರ್ಮದವರನ್ನು ಕಡಿ-ಕೊಲ್ಲು ಎನ್ನುವ ಸಿ.ಟಿ.ರವಿಯವರದ್ದು ಯಾವ ಧರ್ಮ.?
‘ಶಾದಿ ಭಾಗ್ಯ’ ಕೊಟ್ಟ ಮಾತ್ರಕ್ಕೆ ಸಿದ್ದರಾಮಯ್ಯ ‘ಸಿದ್ರಾಮುಲ್ಲಾ ಖಾನ್’ ಆಗುವುದಾದರೆ, ‘ಶಾದಿ ಶುಗುನ್ ಭಾಗ್ಯ’ ಕೊಟ್ಟ ಮೋದಿಯವರು ‘ಮೋದಿ ಖಾನ್’ ಆಗುವುದಿಲ್ಲವೆ.? ಸಿ.ಟಿ.ರವಿಯವರು ‘ಶಾದಿ ಶುಗುನ್ ಭಾಗ್ಯ’ ಕೊಟ್ಟ ಮೋದಿಯವರನ್ಯಾಕೆ ‘ಮೋದಿ ಖಾನ್’ ಎನ್ನುವುದಿಲ್ಲ. ಮೋದಿಯವರಿಗೆ ‘ಮೋದಿ ಖಾನ್’ ಎನ್ನಲು ಸಿ.ಟಿ.ರವಿಯವರಿಗೆ ನರ ದೌರ್ಬಲ್ಯವೇ.? ಎಂದು ಕಿಡಿಕಾರಿದ್ದಾರೆ.
ಹಳ್ಳಿ ಕಡೆ ಚೆನ್ನಾಗಿರುವ ಕುಟುಂಬಗಳ ಮಧ್ಯೆ ಜಗಳ ತಂದು ಕುಟುಂಬ ಒಡೆಯುವವರನ್ನು ‘ತಂದಾಕುವ ಗಿರಾಕಿ’ ಎನ್ನುತ್ತಾರೆ. ಸಿ.ಟಿ.ರವಿ ಕೂಡ ಇದೇ ಜಾತಿಗೆ ಸೇರಿದವರು. ಕಲಹ ಪ್ರಿಯ ಸಿ.ಟಿ.ರವಿಯವರು ತಂದಾಕುವ ಬುದ್ಧಿಯಿಂದ ರಾಜ್ಯ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಶಾಂತಿಯ ತೋಟ. ಈ ತೋಟದಲ್ಲಿ ಧರ್ಮದ ಅಫೀಮ್ ಬೆಳೆಸುವುದು ಸರಿಯೇ ಸಿ.ಟಿ.ರವಿಯವರೇ? ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಆಕ್ಸಿಲ್ ತುಂಡಾಗಿ ಪಲ್ಟಿಯಾದ ಟ್ರ್ಯಾಕ್ಟರ್: ಪ್ರಾಣಾಪಾಯದಿಂದ ಪಾರಾದ ಚಾಲಕ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುರುಗೋಡು: 16 ಕೋಟಿ ವೆಚ್ಚದಲ್ಲಿ ಎಮ್ಮಿಗನೂರು 110 ಕೆ.ವಿ ಕಾಮಗಾರಿಗೆ ಚಾಲನೆ

ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ 5 ಸೀಟು ಗೆದ್ದು ತೋರಿಸಲಿ: ಕುಮಾರಸ್ವಾಮಿ ಸವಾಲು

ಪಿಎಫ್ಐ: ಅಹವಾಲು ಸ್ವೀಕರಿಸಲು ಯುಎಪಿಎ ನ್ಯಾಯಾಧಿಕರಣ

76 ಕ್ಷೇತ್ರಗಳೇ ನಿರ್ಣಾಯಕ: ತಲೆಬಿಸಿ ಹೆಚ್ಚಿಸಿದೆ ಗುಪ್ತಚರ ದಳದ ವರದಿ

ಕಿತ್ತೂರು, ಕಲ್ಯಾಣ, ಕರಾವಳಿ ಮಂತ್ರ: ಸಾಂಪ್ರದಾಯಿಕ ಮತದಾರರತ್ತ ಬಿಜೆಪಿ ನೋಟ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ತೆಕ್ಕಟ್ಟೆ: ಕಾರಿಗೆ ಟ್ಯಾಂಕರ್ ಲಾರಿ ಢಿಕ್ಕಿ ; ನಾಲ್ವರು ವಿದ್ಯಾರ್ಥಿಗಳು ಪಾರು !

ಪತ್ರಕರ್ತನನ್ನು ಮರಕ್ಕೆ ಕಟ್ಟಿ ಥಳಿಸಿದ ಕಿಡಿಗೇಡಿಗಳು: ಆರು ಮಂದಿಯ ಬಂಧನ

ಜ. 29ರಂದು ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್