Udayavni Special

ಸಿಎಂ ಜತೆ ಎಲಿವೇಟೆಡ್‌ ಕಾರಿಡಾರ್‌ ಕುರಿತ ಚರ್ಚೆ

Team Udayavani, Feb 20, 2020, 3:07 AM IST

cm-jate

ಬೆಂಗಳೂರು: ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನಗರದ ಒಂದು ಮೂಲೆಯಿಂದ ಮತ್ತೂಂದು ಮೂಲೆಗೆ ಸಂಪರ್ಕ ಕಲ್ಪಿಸುವ 87 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಚರ್ಚಿಸಲು ನಗರದ ಬಿಜೆಪಿ ಶಾಸಕರು ನಿರ್ಧರಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಆಶ್ವತ್ಥನಾರಾಯಣ ನೇತೃತ್ವದಲ್ಲಿ ವಿಕಾಸ ಸೌಧದ ಅವರ ಕಚೇರಿಯಲ್ಲಿ ಸಚಿವರು ಮತ್ತು ಶಾಸಕರ ಸಭೆ ನಡೆಯಿತು. ಯೋಜನೆಯ ನೀಲಿನಕ್ಷೆ ಸಿದ್ಧಪಡಿಸಿರುವ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಯೋಜನೆ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ನಮ್ಮ ಮೆಟ್ರೊ ಮಾದರಿಯಲ್ಲೇ ಎಲಿವೇಟೆಡ್‌ ಕಾರಿಡಾರನ್ನೂ ವಿವಿಧ ಹಂತ ಗಳಲ್ಲಿ ನಿರ್ಮಾಣ ಮಾಡಬೇಕಾಗಿದೆ. ಹೀಗಾಗಿ ಕನಿಷ್ಠ ಮೊದಲ ಹಂತದ ಕಾಮಗಾರಿಗಳಿಗೆ ಈ ಸಲದ ಬಜೆಟ್‌ನಲ್ಲಿ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಒಟ್ಟು 87 ಕಿ.ಮೀ ಉದ್ದದ ಎಲಿ ವೇಟೆಡ್‌ ಕಾರಿಡಾರ್‌ಗೆ ಅಂದಾಜು 26 ಸಾವಿರ ಕೋಟಿ ರೂಪಾಯಿ ಬೇಕಾಗು ತ್ತದೆ. ಒಮ್ಮೆಲೇ ಅಷ್ಟೊಂದು ಹಣ ಹೊಂದಿಸುವುದು ಕಷ್ಟ ಆಗುತ್ತದೆ. ಹೀಗಾಗಿ ಮೊದಲ ಹಂತದಲ್ಲಿ ಕನಿಷ್ಠ ಪೂರ್ವ- ಪಶ್ಚಿಮ (ಕೆ.ಆರ್‌.ಪುರ- ಯಶ  ವಂತಪುರ) ಎಲಿವೇಟೆಡ್‌ ಕಾರಿಡಾರ್‌ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದ್ದು, ಇದಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಒದಗಿಸುವುದಕ್ಕೆ ಮನವಿ ಮಾಡಲು ಶಾಸಕರು ನಿರ್ಧರಿಸಿದರು.

ಮೊದಲ ಹಂತದ ಕಾಮಗಾರಿಗೆ 9,300 ಕೋಟಿ ರೂಪಾಯಿ ಬೇಕಾಗುತ್ತದೆ. ಇದು ಕೆ.ಆರ್‌.ಪುರದಿಂದ ಅಲ ಸೂರು, ಕಂಟೋನ್ಮೆಂಟ್‌, ಮೇಖ್ರೀ ಸರ್ಕಲ್‌ ಮೂಲಕ ಯಶವಂತಪುರಕ್ಕೆ ಸಂಪರ್ಕ ಕಲ್ಪಿಸಲಿದೆ. 29 ಕಿ.ಮೀ ಉದ್ದದ ಈ ಮಾರ್ಗವು ಆರು ಪಥದಲ್ಲಿ ಇರುತ್ತದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸಭೆಯ ಗಮನಕ್ಕೆ ತಂದರು.

ಇದರ ನಂತರ ಮೂರು ಹಂತಗಳಲ್ಲಿ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಲಾಗುವುದು. ಅಂದಾಜು ಮುಂದಿನ 10 ವರ್ಷಗಳ ಕಾಲ ಕಾಮಗಾರಿ ನಡೆಯ ಲಿದೆ. ಎಲಿವೇಟೆಡ್‌ ಕಾರಿಡಾರ್‌ ಕೆಲವು ಕಡೆ ಬಹು ಅಂತಸ್ತಿನಲ್ಲಿ ಇರುತ್ತದೆ. ಭೂಸ್ವಾಧೀನಕ್ಕೇ ಸುಮಾರು 10 ಸಾವಿರ ಕೋಟಿ ರೂ. ಬೇಕಾಗಬಹುದು. ಇದನ್ನು ಆದಷ್ಟು ಕಡಿಮೆ ಮಾಡಿ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಕಾರಿಡಾರ್‌ ನಿರ್ಮಾಣದ ನಂತರ ನಗರದ ಒಂದು ಭಾಗದಿಂದ ಮತ್ತೂಂದು ಭಾಗಕ್ಕೆ ಅರ್ಧ ಗಂಟೆಯಲ್ಲಿ ತಲುಪಬಹುದು. ಇದರಿಂದ ನಗರದ ಕೇಂದ್ರ ಭಾಗ ದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ಅವರು ವಿವರಿಸಿದರು.

ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಹೊರವಲಯದ 120 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ 1,400 ಕೋಟಿ ಬೇಕಾಗಿದ್ದು, ಇದಕ್ಕೆ ಲೋಕೋಪ ಯೋಗಿ ಇಲಾಖೆಯಿಂದ ಹಣ ಪಡೆ ಯುವ ಸಂಬಂಧ ಚರ್ಚಿಸಲಾಯಿತು. ಈ ಸಂಬಂಧ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಚರ್ಚಿಸುವುದಕ್ಕೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಚಿವರಾದ ಎಸ್‌.ಟಿ. ಸೋಮಶೇಖರ್‌. ಕೆ.ಗೋಪಾಲಯ್ಯ, ಬೈರತಿ ಬಸವರಾಜ್‌, ಶಾಸಕರಾದ ಅರ ವಿಂದ ಲಿಂಬಾವಳಿ, ಎಸ್‌ ಆರ್‌.ವಿಶ್ವನಾಥ, ಉದಯ್‌ ಗರುಡಾಚಾರ್‌, ಎಸ್‌.ರಘು, ಎಲ್.ಎ.ರವಿಸುಬ್ರಹ್ಮಣ್ಯ, ಎಂ.ಸತೀಶ್‌ ರೆಡ್ಡಿ ಮತ್ತಿತರರು ಹಾಜರಿ ದ್ದರು. ಅನರ್ಹ ಶಾಸಕ ಮುನಿರತ್ನ ಕೂಡ ಸಭೆಯಲ್ಲಿ ಪಾಲ್ಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

lockdown

ಜುಲೈ 16 ರಿಂದ ದಕ್ಷಿಣ ಕನ್ನಡ ಸಂಪೂರ್ಣ ಲಾಕ್ ಡೌನ್ : ಮಾರ್ಗಸೂಚಿ ಹೀಗಿದೆ

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ : BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ:BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

ಹೆತ್ತವರ ಪ್ರೇರಣೆ ಮತ್ತು ಕಾಲೇಜಿನ ವಾತಾವರಣ ನನ್ನ ಯಶಸ್ಸಿನ ಮೂಲ : ಅಭಿಜ್ಞಾ ರಾವ್

ಹೆತ್ತವರ ಪ್ರೇರಣೆ ಜೊತೆಗೆ ಕಾಲೇಜಿನ ವಾತಾವರಣ ನನ್ನ ಯಶಸ್ಸಿಗೆ ಸ್ಫೂರ್ತಿ : ಅಭಿಜ್ಞಾ ರಾವ್

ಬಿಗಡಾಯಿಸಿದ ರಾಜಸ್ಥಾನ್ ರಾಜಕೀಯ ಬಿಕ್ಕಟ್ಟು: ಸತ್ಯ ಎಂದಿಗೂ ಸೋಲಲ್ಲ: ಸಚಿನ್ ಪೈಲಟ್

ಬಿಗಡಾಯಿಸಿದ ರಾಜಸ್ಥಾನ್ ರಾಜಕೀಯ ಬಿಕ್ಕಟ್ಟು: ಸತ್ಯ ಎಂದಿಗೂ ಸೋಲಲ್ಲ: ಸಚಿನ್ ಪೈಲಟ್

ಚಾಮರಾಜನಗರ: ದ್ವಿತೀಯ ಪಿಯುಸಿ ಶೇ. 69.29 ಫಲಿತಾಂಶ

ಚಾಮರಾಜನಗರ: ದ್ವಿತೀಯ ಪಿಯುಸಿ ಶೇ. 69.29 ಫಲಿತಾಂಶ

abhijna

ಉಡುಪಿ ದ್ವಿತೀಯ ಪಿಯುಸಿ ಫಲಿತಾಂಶ: 6 ಪ್ರಮುಖ ರ‌್ಯಾಂಕ್, ವಿಜ್ಞಾನದಲ್ಲಿ ಅಭಿಜ್ಞಾ ಪ್ರಥಮ

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ : BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ:BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್

ಸಚಿವ ಈಶ್ವರಪ್ಪ ಹಾಗೂ ಕುಟುಂಬಸ್ಥರ ಕೋವಿಡ್ ವರದಿ ನೆಗೆಟಿವ್

second-puc

ಅಧಿಕೃತ ಘೋಷಣೆಗೆ ಮುನ್ನವೇ ದ್ವಿತೀಯ ಪಿಯುಸಿ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ

ಪಾಲಿಕೆಯನ್ನು ನಂಬಿದರೆ ಕಷ್ಟ: ಹೈಕೋರ್ಟ್‌ ಆತಂಕ

ಪಾಲಿಕೆಯನ್ನು ನಂಬಿದರೆ ಕಷ್ಟ: ಹೈಕೋರ್ಟ್‌ ಆತಂಕ

bng-tdy-2

ಹಾಸಿಗೆ ನೀಡದಿದ್ದರೆ ಕರೆಂಟ್- ವಾಟರ್ ಬಂದ್?

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

ಹೊಸ ಸೇರ್ಪಡೆ

lockdown

ಜುಲೈ 16 ರಿಂದ ದಕ್ಷಿಣ ಕನ್ನಡ ಸಂಪೂರ್ಣ ಲಾಕ್ ಡೌನ್ : ಮಾರ್ಗಸೂಚಿ ಹೀಗಿದೆ

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ : BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

Covid ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮನವಿ:BBMP ನೌಕರರ ಸಂಘದಿಂದ ಸಾಮೂಹಿಕ ರಜೆ ಎಚ್ಚರಿಕೆ

60 ಡಬಲ್‌ ಡೆಕ್ಕರ್‌ ಬಸ್‌ಗಳ ಸೇವಾರಂಭ

60 ಡಬಲ್‌ ಡೆಕ್ಕರ್‌ ಬಸ್‌ಗಳ ಸೇವಾರಂಭ

ಹೆತ್ತವರ ಪ್ರೇರಣೆ ಮತ್ತು ಕಾಲೇಜಿನ ವಾತಾವರಣ ನನ್ನ ಯಶಸ್ಸಿನ ಮೂಲ : ಅಭಿಜ್ಞಾ ರಾವ್

ಹೆತ್ತವರ ಪ್ರೇರಣೆ ಜೊತೆಗೆ ಕಾಲೇಜಿನ ವಾತಾವರಣ ನನ್ನ ಯಶಸ್ಸಿಗೆ ಸ್ಫೂರ್ತಿ : ಅಭಿಜ್ಞಾ ರಾವ್

ಚಾಮರಾಜನಗರ: ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಾರಕವಾದ ಲಾಕ್‌ ಡೌನ್

ಚಾಮರಾಜನಗರ: ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಾರಕವಾದ ಲಾಕ್‌ ಡೌನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.