ಡಿ.ಕೆ ಶಿವಕುಮಾರ್ ಎರಡನೇ ಸಿದ್ದಾರ್ಥ್ ಆಗಬಾರದು: ನಂಜಾವದೂತ ಸ್ವಾಮೀಜಿ

Team Udayavani, Sep 11, 2019, 4:16 PM IST

ಬೆಂಗಳೂರು: ಸಾವಿರಾರು ಜನರಿಗೆ ಉದ್ಯೋಗ, ಲಕ್ಷ ಲಕ್ಷ ಕುಟುಂಬಗಳಿಗೆ ಅನ್ನ ಕೊಟ್ಟ ಸಿದ್ಧಾರ್ಥ್ ರನ್ನ ಕಳೆದುಕೊಂಡಿದ್ದೇವೆ . ಅದೇ ರೀತಿಯಲ್ಲಿ  ಡಿ.ಕೆ ಶಿವಕುಮಾರ್ ಎರಡನೇ ಸಿದ್ದಾರ್ಥ್ ಆಗಬಾರದು ಎಂದು ನಂಜಾವದೂತ ಸ್ವಾಮೀಜಿ ಹೇಳಿದ್ದಾರೆ.

ಡಿಕೆಶಿ ಬಂಧನ ವಿರೋಧಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಡಿಕೆಶಿ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಅವರ ಧ್ವನಿಯನ್ನು ಮೊಟಕು ಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.

ಬೆಂಗಳೂರಿಗೆ ಕಾವೇರಿ ನೀರು ತಂದಿದ್ದು ದೇವೇಗೌಡರು. ಈ ಬಾರಿ ಅವರನ್ನು ಸಂಸದರಾಗಿ ಕಳುಹಿಸಿಕೊಡಲು ಆಗಲಿಲ್ಲ. ಅದ್ದರಿಂದ ಕೇಂದ್ರದಲ್ಲಿ ಅವರ ಧ್ವನಿ ಕಳಚಿದೆ. ಹೆಚ್ ಡಿ ಕುಮಾರಸ್ವಾಮಿ 48 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ಅವರ ಧ್ವನಿಯನ್ನು ಕೂಡ ಮೊಟಕು ಮಾಡುವ ಕೆಲಸ ಆಯಿತು ಎಂದು ಅಭಿಪ್ರಾಯಪಟ್ಟರು.

ಒಕ್ಕಲಿಗರು ಯಾರಿಗೂ ಕಿಂಚಿತ್ತೂ ನೋವು ಕೊಡಲ್ಲ ಮತ್ತು ಘಾಸಿ  ಮಾಡಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು .

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ