ಹಿರಿ ಜೀವಗಳ ಅಮಿತೋತ್ಸಾಹ

Team Udayavani, Dec 6, 2019, 10:28 AM IST

ಬೆಂಗಳೂರು: ಒಂದೆಡೆ 95 ವರ್ಷದ ವೃದ್ಧೆ ಸ್ವತಃ ಸ್ಕೂಟರ್‌ ಓಡಿಸಿಕೊಂಡು ಬಂದು ಮತಚಲಾಯಿಸಿದರು. ಇನ್ನೊಂದೆಡೆ ಯುವಕರು ಮತಗಟ್ಟೆಯಿಂದ ದೂರ ಉಳಿದರು. ಕೆಲವರು ದೂರದ ಹೈದರಾಬಾದ್‌ನಿಂದ ಬಂದು ಹಕ್ಕು ಚಲಾಯಿಸಿದರು.

ಆದರೆ, ಕ್ಷೇತ್ರದ ಅಭ್ಯರ್ಥಿಗೆ ಇಲ್ಲಿ ಮತಚಲಾಯಿಸುವ ಅವಕಾಶ ಇರಲಿಲ್ಲ. ಇವುಗಳೊಟ್ಟಿಗೆ ಮತಯಂತ್ರ ಕೈಕೊಟ್ಟು ಕಿರಿಕಿರಿ, ಮತಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿ ಪರದಾಟಇವೆಲ್ಲಾ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ವೇಳೆ ಕಂಡು ಬಂದ ದೃಶ್ಯಗಳು. ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ 270 ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಶಾಂತಿಯುತ ಮತದಾನ ನಡೆದಿಯಿತು. ಮಹಾಲಕ್ಷ್ಮೀ ಲೇಔಟ್‌ನ ಕಮಲನಗರ ಬಳಿ ಮತಗಟ್ಟೆಯಲ್ಲಿ ಬೆಳಗ್ಗೆ 7 ಗಂಟೆಗೆ ಉಮಾದೇವಿ ಎಂಬ ಕುಬ್ಜ ಮಹಿಳೆ ಬಂದು ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, “ಓಟ್‌ ಮಾಡದವರು ಬ್ಯಾಡ್‌ ಫೇಲೋಸ್‌. ಮತದಾನ ನಮ್ಮ ಹಕ್ಕು, ಎಲ್ಲರೂ ಎದ್ದು ಬಂದು ಮತ ದಾನ ಮಾಡಿಎಂದರು.

ವಿಶೇಷವಾಗಿ ಕ್ಷೇತ್ರದ ಅಮರವಾಣಿ ಹೈಸ್ಕೂಲ್‌ ಮತಗಟ್ಟೆಯಲ್ಲಿ 97 ವರ್ಷದ ವೃದ್ಧೆ ಗಂಗಮ್ಮ, ಮಗನನ್ನು ಹಿಂದೆ ಕೂರಿಸಿಕೊಂಡು, ಸ್ವತಃ ಸ್ಕೂಟರ್‌ ಚಾಲನೆ ಮಾಡಿಕೊಂಡು ಬಂದು ಮತ ಹಾಕಿದರು. 1952ರಲ್ಲಿ ಚುನಾವಣೆ ಆರಂಭವಾದಾಗಿನಿಂದಲೂ ಮತದಾನ ಮಾಡುತ್ತಿರುವ 90 ವರ್ಷದ ವೃದ್ಧೆ ಸರೋಜಮ್ಮ, ವಿವಿಧ ಚುನಾವಣೆಯಲ್ಲಿ 30ಕ್ಕೂ ಹೆಚ್ಚು ಬಾರಿ ಮತದಾನ ಮಾಡಿದನೀಲಮ್ಮ ಈ ಬಾರಿಯೂ ತಮ್ಮ ಹಕ್ಕು ಚಲಾಯಿಸಿ ಯುವಕರಿಗೆ ಮಾದರಿಯಾದರು.

ಮತಗಟ್ಟೆಗಳ ಬಳಿ ವಯಸ್ಕರು ಹಾಗೂ ಹಿರಿಯರೇ ಹೆಚ್ಚು ಕಂಡು ಬಂದಿದ್ದು, ಯುವ ಜನತೆ ಮತದಾನದಿಂದ ದೂರ

ಉಳಿದರು.

ನಿವೃತ್ತ ನೌಕರರು, ಹಿರಿಯ ನಾಗರಿಕರು, 90 ವರ್ಷ ಮೇಲ್ವಟ್ಟ ವಯೋವೃದ್ಧರು ಬೆಳಗಿನ ಅವಧಿಯಲ್ಲಿ ಹೆಚ್ಚು

ಕಾಣಿಸಿಕೊಂಡರೆ, ಮಧ್ಯಾಹ್ನದ ನಂತರ ಮಹಿಳೆಯರ ಪ್ರಮಾಣ ಹೆಚ್ಚಿತ್ತು. ಸಂಜೆ ಬಿರುಸಿನ ಮತದಾನ ಕಂಡುಬಂತು. ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಾಗಿ ನಂದಿನಿ ಲೇಔಟ್‌ 4ನೇ ಬ್ಲಾಕ್‌, 6ನೇ ಮುಖ್ಯ ರಸ್ತೆಯ ಹತ್ತಕ್ಕೂ ಹೆಚ್ಚು ಮಂದಿ ಚುನಾವಣಾ ಆಯೋಗದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. 50 ವರ್ಷದಿಂದ ಇದೇ ಬಡಾವಣೆಯಲ್ಲಿದ್ದೇವೆ. ಕಳೆದ ಬಾರಿ ಓಟ್‌ ಹಾಕಿದ್ದೆವು. ಈ ಬಾರಿ ಪಟ್ಟಿಯಲ್ಲಿ ಹೆಸರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ, ಕಾಂಗ್ರೆಸ್‌ ಅಭ್ಯರ್ಥಿ ಎಂ.ಶಿವರಾಜು ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಅಂಗನವಾಡಿ ದಾಖಲಾತಿ, ಮಕ್ಕಳ ಅಪೌಷ್ಠಿಕತೆಯ ನಿಖರ ಸಂಖ್ಯೆ, ಟಿ.ಟಿ ಚುಚ್ಚುಮದ್ದು ಸೇರಿ ವಿವಿಧ ಮಾಹಿತಿ ನೀಡಲು ಅನುಕೂಲವಾಗಲೆಂದು ಮಹಿಳಾ ಮತ್ತು ಮಕ್ಕಳ...

  • ಬೆಂಗಳೂರು: ಯೋಜನೆ ಇರುವುದು "ಡಬಲ್‌ ಡೆಕರ್‌'. ಆದರೆ, ಆಗುತ್ತಿರುವುದು ಟ್ರಿಪಲ್‌ ಡೆಕರ್‌! ಹೌದು, ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವೆ ರಸ್ತೆ ಕಂ ರೈಲು ಮಾರ್ಗ...

  • ಬೆಂಗಳೂರು: ಅಕ್ಟೋಬರ್‌ನಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾಕ್ಕೆ ದೇಶ-ವಿದೇಶಿಗರನ್ನು ಆಕರ್ಷಿಸಲು ಏಪ್ರಿಲ್‌ ತಿಂಗಳಿನಿಂದ ಸಿದ್ಧತೆ ಆರಂಭಿಸಲಾಗುವುದು ಎಂದು...

  • ಬೆಂಗಳೂರು: ನಗರದಲ್ಲಿ ವಾಸವಿರುವ ಮಂಗಳಮುಖೀಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ...

  • ಬೆಂಗಳೂರು: ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರುದಿನಗಳ ಕಾಲ "ಜುಂಬಾ' ನೃತ್ಯ ತರಬೇತಿ ನೀಡಿದ್ದು ಪೊಲೀಸ್‌ ಸಿಬ್ಬಂದಿ ಕುಣಿದು ಕುಪ್ಪಳಿಸಿರುವ ವಿಡಿಯೋ...

ಹೊಸ ಸೇರ್ಪಡೆ