Udayavni Special

ಹಣ್ಣುಗಳ ರಾಜನ ಪುರ ಪ್ರವೇಶ


Team Udayavani, May 19, 2018, 11:49 AM IST

hannugala.jpg

ಬೆಂಗಳೂರು: ತಟ್ಟನೆ ಸೆಳೆಯುವ ಹಳದಿ-ಕಡುಗೆಂಪು ಬಣ್ಣದ ಹಣ್ಣುಗಳ ರಾಶಿ. ದೂರದಿಂದಲೇ ಮೂಗಿಗೆ ಬಡಿಯುವ ಘಮಲು. “ಹಣ್ಣುಗಳ ರಾಜ’ನ ಪುರ ಪ್ರವೇಶದಿಂದ ಪುಳಕಿತರಾದ ಜನ…

ಮುಂಗಾರು ಪೂರ್ವದಲ್ಲೇ ರಾಜಧಾನಿ ಬೆಂಗಳೂರಿಗೆ ಹಣ್ಣುಗಳ ರಾಜ ಮಾವು ಲಗ್ಗೆ ಇಟ್ಟಿದ್ದು, ನಗರದೆಲ್ಲೆಡೆ ಈಗ ಮಾವಿನ ಘಮಲು. ಮಾವಿನ ಸುಗ್ಗಿ ಶುರುವಾಗುತ್ತಿದ್ದಂತೆ ತರಹೇವಾರಿ ಮಾವು ಬಿಕರಿಗೆ ಲಭ್ಯವಿದ್ದು, ಸ್ವಾದಿಷ್ಟ ಹಣ್ಣುಗಳಿಗೆ ಜನ ಮುಗಿ ಬಿದ್ದಿದ್ದಾರೆ.

ನಗರದ ಹಣ್ಣಿನ ಮಳಿಗೆಗಳು, ಸೂಪರ್‌ ಮಾರ್ಕೆಟ್‌ಗಳು, ಬಜಾರ್‌ಗಳಲ್ಲಿ ಹವಾನಿಯಂತ್ರಿತ ವಾತಾವರಣದಲ್ಲಿ ಮಾವಿನ ದಾಸ್ತಾನು ಮಾರಾಟಕ್ಕಿದೆ. ಇನ್ನೊಂದೆಡೆ ಹಾಪ್‌ಕಾಮ್ಸ್‌, ತಳ್ಳುಗಾಡಿಗಳು, ಬೀದಿಬದಿ ವ್ಯಾಪಾರ ಮಳಿಗೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾವಿನ ಹಣ್ಣಿನ ರಾಶಿ ಕಾಣುತ್ತಿದೆ. ಇನ್ನೂ ಕೆಲ ತಿಂಗಳ ಕಾಲ ಮಾವಿನ ಪಾರುಪತ್ಯ ಮುಂದುವರಿದಿದೆ.

ತಡವಾದರೆ ಜಾಸ್ತಿ ಬೆಲೆ: ಪ್ರತಿವರ್ಷ ಬಸವಜಯಂತಿ ವೇಳೆಗಾಗಲೇ ಆಗಮಿಸುತ್ತಿದ್ದ ಮಾವು ಪ್ರಕೃತಿ ವೈಪರೀತ್ಯದ ಹಿನ್ನೆಲೆಯಲ್ಲಿ ಈ ಬಾರಿ ಮಾವಿನ ಆಗಮನ ತಿಂಗಳ ಮಟ್ಟಿಗೆ ತಡವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿದ್ದು, ಬೆಲೆಯು ತುಸು ಹೆಚ್ಚಿದೆ. ಕಳೆದ ಬಾರಿಗೆ ಹೊಲಿಸಿದರೆ ಕೆ.ಜಿ.ಗೆ 20ರಿಂದ 30 ರೂ. ಹೆಚ್ಚಾಗಿದೆ. ಇಷ್ಟಾದರೂ ಖರೀದಿ ಭರಾಟೆ ಜೋರಾಗಿದೆ. ಮುಖ್ಯವಾಗಿ ಜ್ಯೂಸ್‌ ವ್ಯಾಪಾರಿಗಳು, ಹೋಟೆಲ್‌, ಶುಭ ಸಮಾರಂಭಗಳಿಗೆ ಮಾವು ಖರೀದಿಗೂ ಚುರುಕಾಗಿ ನಡೆದಿದೆ. 

ವಿವಿಧ ತಳಿಗಳ ಮಾವು: ಬಾದಾಮಿ, ಹಿಮಾಯತ್‌, ಮಲ್ಗೊàವಾ, ಮಲ್ಲಿಕಾ, ರಸಪೂರಿ, ಸಿಂಧೂರ, ರತ್ನಗಿರಿ, ತೋತಾಪುರಿ, ದಶೇರಿ, ಕಾಲಾಪಹಾಡ್‌ , ಕುದಾದಾಸ್‌, ಬೈಗಾನ್‌ಪಲ್ಲಿ ಸೇರಿದಂತೆ 16ಕ್ಕೂ ಹೆಚ್ಚಿನ ತಳಿಗಳು ಮಾರುಕಟ್ಟೆಗೆ ಆಗಮಿಸಿವೆ. ಇವುಗಳಲ್ಲಿ ಬಾದಾಮಿ ಹಾಗೂ ಹಿಮಾಯತ್‌ ತಳಿಗಳು ರುಚಿಭರಿತವಾಗಿದ್ದು, ಗ್ರಾಹಕರ ಆದ್ಯತೆಯ ಹಣ್ಣಾಗಿದೆ ಎಂದು ಎನ್ನುತ್ತಾರೆ ಬಳ್ಳಾರಿ ರಸ್ತೆ ವ್ಯಾಪಾರಿ ರಮೇಶ್‌.

ನೆರೆರಾಜ್ಯಗಳ ಹಣ್ಣು ಲಭ್ಯ: ರಾಜ್ಯದಲ್ಲಿ ಈ ಬಾರಿ ಮಾವಿನ ಫ‌ಸಲು ತಡವಾದ ಹಿನ್ನೆಲೆ ಹೊರ ರಾಜ್ಯಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಂಗಳೂರಿಗೆ ಪೂರೈಕೆಯಾಗಿದೆ. ಪ್ರಮುಖವಾಗಿ ಆಂಧ್ರಪ್ರದೇಶ, ತಮಿಳುನಾಡಿನ ವಿವಿಧ ಭಾಗಗಳಿಂದ ಹಣ್ಣುಗಳನ್ನು ಇಂದು ಇಲ್ಲಿ ಮೂರ್‍ನಾಲ್ಕು ದಿನ ಹುಲ್ಲಿನ ಪೆಟ್ಟಿಗೆಯಲ್ಲಿಟ್ಟು ಮಾಗಿಸಿ ಮಾರಾಟ ಮಾಡುತ್ತಾರೆ. ಸದ್ಯದಲ್ಲೇ ಚಿಂತಾಮಣಿ, ಶ್ರೀನಿವಾಸಪುರ ಭಾಗಗಳಿಂದ ಮಾವಿನ ರುಚಿ ಸಚಿಯಲು ಜನ ಕಾತರರಾಗಿದ್ದಾರೆ.

ಮೇ 22ರಿಂದ ಮಾವು ಮೇಳ: ಪ್ರತಿವರ್ಷದಂತೆ ಈ ಬಾರಿಯೂ ಹಾಪ್‌ಕಾಮ್ಸ್‌ ನಗರದಲ್ಲಿನ ತನ್ನ ಮಳಿಗೆಗಳಲ್ಲಿ ಮಾವು ಮೇಳವನ್ನು ಹಮ್ಮಿಕೊಂಡಿದೆ. ಮೇ 22ರಿಂದ ಆರಂಭವಾಗುವ ಮೇಳವು ಮಾವಿನ ಸುಗ್ಗಿ ಮುಗಿಯುವವರೆಗೆ ನಡೆಯಲಿದೆ. ಮುಖ್ಯವಾಗಿ ಹಡ್ಸನ್‌ ವೃತ್ತದ ಬಳಿಯ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ಮಾವಿನ ದಾಸ್ತಾನ ಮಾರಾಟಕ್ಕೆ ಲಭ್ಯವಿರಲಿದೆ.

ರಾಸಾಯನಿಕ ಬಳಸದೇ ಬೆಳೆದ ಸ್ವಾಭಾವಿಕ ಮಾವಿನ ಹಣ್ಣುಗಳನ್ನು ಮಾರುವ ಉದ್ದೇಶದಿಂದ ಈ ಮಾವು ಮೇಳ ಹಮ್ಮಿಕೊಂಡಿದ್ದು, ರಾಜ್ಯದ ವಿವಿಧ ಭಾಗದ ರೈತರು ಬೆಳೆದ 10ರಿಂದ 12 ತಳಿಯ ಮಾವು ಮೇಳದಲ್ಲಿರಲಿವೆ. ಇಲ್ಲಿ ಮಾವು ಅಭಿವೃದ್ಧಿ ನಿಗಮದ ಸಹಕಾರದೊಂದಿಗೆ ರೈತರೇ ಮಾವು ಮಾರಾಟ ಮಾಡಲಿದ್ದಾರೆ. ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಮೇಳದಲ್ಲಿ ಶೇ.15ಕ್ಕೂ ಹೆಚ್ಚು ರಿಯಾಯಿತಿ ಸಿಗಲಿದೆ. ಇಳುವಳಿ ಕಡಿಮೆಯಾಗಿರುವ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಬೆಲೆ ಹೆಚ್ಚಿದೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಎಂ.ವಿಶ್ವನಾಥ್‌ ತಿಳಿಸಿದ್ದಾರೆ.

ಜಯಮಹಲ್‌ ರಸ್ತೆಯಲ್ಲಿ ನೂರಾರು ಮಳಿಗೆ: ನಗರದ ಜಯಮಹಲ್‌ ರಸ್ತೆಯ ಫ‌ನ್‌ವರ್ಲ್ಡ್ ಮುಂಭಾಗದ ಖಾಲಿ ಜಾಗದಲ್ಲಿ 100ಕ್ಕೂ ಹೆಚ್ಚು ಮಾವಿನಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ತಮಿಳುನಾಡಿನ ಸೇಲಂ, ತಿರಕೋಯಿಲೂರು, ಕಾಟಾಡಿ, ಧರ್ಮಪುರಿ ಮೂಲದ ವ್ಯಾಪಾರಿಗಳು ಕಳೆದ 15 -20 ವರ್ಷಗಳಿಂದ ಮಾವಿನ ಸುಗ್ಗಿ ಆರಂಭವಾಗುತ್ತಿದ್ದಂತೆ ಕುಟುಂಬ ಸಮೇತ ಬಂದು ಕೆಲ ತಿಂಗಳು ವ್ಯಾಪಾರ ಮಾಡುತ್ತಾರೆ. ಆಗಸ್ಟ್‌ವರೆಗೂ ವ್ಯಾಪಾರ ಮುಂದುವರಿಯಲಿದ್ದು, ಪ್ರತಿ ಮಳಿಗೆಯಲ್ಲಿ ನಿತ್ಯ ಕನಿಷ್ಠವೆಂದರೂ 200ರಿಂದ 250 ಕೆ.ಜಿ. ಮಾವು ಬಿಕರಿಯಾಗುತ್ತಿದ್ದು, 10 ರಿಂದ 12 ಸಾವಿರ ರೂ. ವ್ಯಾಪಾರವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

ಕಳೆದ ಬಾರಿಗೆ ಹೋಲಿಸಿದರೆ ಮಾವಿನ ಬೆಲೆ ಕೆ.ಜಿ.ಗೆ 20-30 ರೂ. ಬೆಲೆ ಹೆಚ್ಚಿದೆ. ಇದಕ್ಕೆ ಮುಖ್ಯಕಾರಣ ಮಾವಿನ ಸುಗ್ಗಿ ತಿಂಗಳ ಕಾಲ ತಡವಾಗಿ ಆರಂಭವಾಗಿರುವುದು. ದಿನ ಕಳೆದಂತೆ ಬೆಲೆ ಇಳಿಕೆಯಾಗಿ ಮತ್ತೆ ಆಗಸ್ಟ್‌ನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
-ವಿಶ್ವನಾಥ್‌, ಹಾಪ್‌ಕಾಮ್ಸ್‌ ಎಂಡಿ

ಹಣ್ಣು ಬರುವುದು ತಡವಾಗಿ ಬೆಲೆ ಹೆಚ್ಚಿದ್ದರೂ ಮಾರಾಟ ಉತ್ತಮವಾಗಿದೆ. ಒಮ್ಮೆಗೆ 4-5 ಕೆ.ಜಿ ಹಣ್ಣು ಖರೀದಿಸುತ್ತಿದ್ದಾರೆ. ಬಾದಾಮಿ ಹಾಗೂ ಹಿಮಾಯತ್‌ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ.
-ವಿನೇಶ್‌, ಜಯಮಹಲ್‌ ಬಳಿಯ ವ್ಯಾಪಾರಿ

ಮಾವಿನ ಸುಗ್ಗಿಗೆ ಕಾಯುತ್ತಿದ್ದೆವು. ಮಳೆ ಬಿದ್ದಿರುವುದರಿಂದ ರುಚಿಕರ ಹಣ್ಣು ಸಿಗುತ್ತಿವೆ. ರಸ್ತೆಗಳ ಅಕ್ಕ ಪಕ್ಕದಲ್ಲೇ ಹಣ್ಣು  ಲಭ್ಯವಿರುವುದರಿಂದ ಮಾರುಕಟ್ಟೆಗೆ ಹೋಗುವ ಅವಶ್ಯಕತೆ ಇಲ್ಲದಂತಾಗಿದೆ. 
-ಬಸಪ್ಪ, ಆರ್‌.ಟಿ.ನಗರ

ದರ ಪಟ್ಟಿ (ಕೆ.ಜಿ.ಗೆ)
ತಳಿ    ದರ

ಬಾದಾಮಿ    100ರಿಂದ 110 ರೂ.
ಮಲ್ಗೊವಾ    100 ರಿಂದ 120ರೂ.
ಹಿಮಾಯತ್‌     200 ರೂ.
ರಸಪೂರಿ    80 ರೂ.
ಮಲ್ಲಿಕಾ    80 ರೂ.
ಸಿಂಧೂರ    50 ರೂ.
ಕಾಲಾಪಹಡ್‌    100 ರೂ.
ದಶೇರಿ    100 ರೂ.
ತೊತಾಪುರಿ    60 ರೂ.
ರತ್ನಗಿರಿ    150 ರೂ.

* ಜಯಪ್ರಕಾಶ್‌ ಬಿರಾದಾರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

irland-1

ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಸುಂದರ ಪ್ರವಾಸಿ ತಾಣ, ಇಲ್ಲಿದೆ ಎಮರಾಲ್ಡ್ ಐಲ್ಯಾಂಡ್ ಪರಿಚಯ !

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಗ್ರಿಲ್‌

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಸಿಸಿಬಿ ಗ್ರಿಲ್‌

ದೇಸೀತನವನ್ನು ಜನಪ್ರಿಯಗೊಳಿಸುವುದು ಪ್ರಮುಖ ಉದ್ದೇಶ

ಉಡುಪಿ ಶ್ರೀಕೃಷ್ಣ ಮಠ : ದೇಸೀತನವನ್ನು ಜನಪ್ರಿಯಗೊಳಿಸುವುದು ಪ್ರಮುಖ ಉದ್ದೇಶ

ವಶಕ್ಕೆ ಪಡೆದ ಗಾಂಜಾವನ್ನು ಪೆಡ್ಲರ್‌ಗೆ ಮಾರಿದ ಪೊಲೀಸರು!

ವಶಕ್ಕೆ ಪಡೆದ ಗಾಂಜಾವನ್ನು ಪೆಡ್ಲರ್‌ಗೆ ಮಾರಿದ ಪೊಲೀಸರು!

ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಗೆ ಕೋವಿಡ್-19 ಸೋಂಕು ದೃಢ

ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಗೆ ಕೋವಿಡ್-19 ಸೋಂಕು ದೃಢ

ರೈತ ಸಂಘಟನೆಗಳಿಂದ ರಾಜ್ಯ ಬಂದ್

ರೈತ ಸಂಘಟನೆಗಳಿಂದ ರಾಜ್ಯ ಬಂದ್‌: ಕರಾವಳಿಯಲ್ಲೂ ಬೆಂಬಲ, ಏನಿರುತ್ತೇ- ಏನಿರಲ್ಲ?

ಸೋಮವಾರದ ಕರ್ನಾಟಕ ಬಂದ್ ಗೆ ಜೆಡಿಎಸ್ ಪಕ್ಷದ ಬೆಂಬಲ: ದೇವೇಗೌಡ

ಸೋಮವಾರದ ಕರ್ನಾಟಕ ಬಂದ್ ಗೆ ಜೆಡಿಎಸ್ ಪಕ್ಷದ ಬೆಂಬಲ: ದೇವೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಗ್ರಿಲ್‌

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಸಿಸಿಬಿ ಗ್ರಿಲ್‌

ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಗೆ ಕೋವಿಡ್-19 ಸೋಂಕು ದೃಢ

ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಗೆ ಕೋವಿಡ್-19 ಸೋಂಕು ದೃಢ

ಕೃಷಿ ಮಸೂದೆ ಅಂಗೀಕಾರ ! ನಾಳೆ ರೈತ ಸಂಘಟನೆಗಳಿಂದ ರಾಜ್ಯ ಬಂದ್‌

ಕೃಷಿ ಮಸೂದೆ ಅಂಗೀಕಾರ ! ನಾಳೆ ರೈತ ಸಂಘಟನೆಗಳಿಂದ ರಾಜ್ಯ ಬಂದ್‌

ಸರ್ಕಾರದ ವಿರುದ್ಧದ ಪ್ರತಿಪಕ್ಷದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕೃತ

ಸರ್ಕಾರದ ವಿರುದ್ಧದ ಪ್ರತಿಪಕ್ಷದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕೃತ

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

ಪ್ರಕೃತಿ ಪ್ರಿಯರಿಗೂ, ಸಾಹಸಪ್ರಿಯರಿಗೂ ರಸದೌತಣ ನೀಡುವ ನೇಚರ್ ಕ್ಯಾಂಪ್ng

ಪ್ರಕೃತಿ ಪ್ರಿಯರಿಗೂ, ಸಾಹಸಪ್ರಿಯರಿಗೂ ರಸದೌತಣ ನೀಡುವ ನೇಚರ್ ಕ್ಯಾಂಪ್

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

irland-1

ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಸುಂದರ ಪ್ರವಾಸಿ ತಾಣ, ಇಲ್ಲಿದೆ ಎಮರಾಲ್ಡ್ ಐಲ್ಯಾಂಡ್ ಪರಿಚಯ !

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಗ್ರಿಲ್‌

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಸಿಸಿಬಿ ಗ್ರಿಲ್‌

 ಚಿಕ್ಕಬಳ್ಳಾಪುರ ಜಿಲ್ಲಾ ಬಂದ್‌ಗೆ‌ ಜೆಡಿಎಸ್ ಬೆಂಬಲ

 ಚಿಕ್ಕಬಳ್ಳಾಪುರ ಜಿಲ್ಲಾ ಬಂದ್‌ಗೆ‌ ಜೆಡಿಎಸ್ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.