ಆಧಾರ್‌ ಅನುಷ್ಠಾನದಲ್ಲಿ ದೋಷ


Team Udayavani, Oct 30, 2017, 11:42 AM IST

jai-ram-ramesh.jpg

ಬೆಂಗಳೂರು: ಸರ್ಕಾರ ವಿವಿಧ ಯೋಜನೆಗಳನ್ನು ನೇರವಾಗಿ ಫ‌ಲಾನುಭವಿಗೆ ತಲುಪಿಸಲು ಪರಿಚಯಿಸಿದ ತಂತ್ರಜ್ಞಾನ “ಆಧಾರ್‌’. ಆದರೆ, 2014ರ ನಂತರ ಅದರ ಮೂಲ ಪರಿಕಲ್ಪನೆಯೇ ಬದಲಾಗಿದೆ ಎಂದು ಕೇಂದ್ರ ಮಾಜಿ ಸಚಿವ ಜೈರಾಮ್‌ ರಮೇಶ್‌ ತಿಳಿಸಿದರು. 

ನಗರದ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ಹಮ್ಮಿಕೊಂಡ ಎರಡು ದಿನಗಳ ಸಾಹಿತ್ಯ ಉತ್ಸವದಲ್ಲಿ ಭಾನುವಾರ “ಆಧಾರ್‌: ಡಿಸ್ಟೋಪಿಯ ಆರ್‌ ಯುಟೋಪಿಯ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. 

ಸರ್ಕಾರದ ಅನೇಕ ಯೋಜನೆಗಳು ಅರ್ಹರಿಗೆ ತಲುಪಬೇಕು. ಅನರ್ಹರ ಪಾಲಾಗಬಾರದು, ಯೋಜನೆಗಳು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕು ಎಂಬ ಉದ್ದೇಶದಿಂದ 2009ರಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಲವು ಯೋಜನೆಗಳಲ್ಲಿ ಈ ತಂತ್ರಜ್ಞಾನ ಪರಿಚಯಿಸಲಾಯಿತು.

ಇದು ಕಡ್ಡಾಯವೂ ಆಗಿರಲಿಲ್ಲ; ಬದಲಿಗೆ ಒಂದು ಆಯ್ಕೆಯಾಗಿತ್ತು. ಆದರೆ, 2014ರ ನಂತರ ಇದರ ಮೂಲ ಪರಿಕಲ್ಪನೆಯೇ ಬದಲಾಯಿತು. ಜನನ-ಮರಣ ಪ್ರಮಾಣಪತ್ರ, ಮೊಬೈಲ್‌ ನಂಬರ್‌ ಹೀಗೆ ಎಲ್ಲದಕ್ಕೂ “ಆಧಾರ್‌’ ನೀಡಬೇಕಾಯಿತು. ಹಾಗಾಗಿ, ತಂತ್ರಜ್ಞಾನದಲ್ಲಿ ಲೋಪವಿಲ್ಲ, ಅದರ ಅನುಷ್ಠಾನದಲ್ಲಿ ಸಮಸ್ಯೆ ಇದೆ ಎಂದು ವಿಶ್ಲೇಷಿಸಿದರು. 

“ಈ ಹಿನ್ನೆಲೆಯಲ್ಲಿ ನನ್ನ ಪ್ರಕಾರ ಯಾವ ಉದ್ದೇಶಕ್ಕೆ “ಆಧಾರ್‌’ ಪರಿಚಯಿಸಲಾಯಿತೋ ಅದಕ್ಕಾಗಿ ಆ ತಂತ್ರಜ್ಞಾನ ಸೀಮಿತಗೊಳಿಸಬೇಕು. ನಂತರ ಹಂತ-ಹಂತವಾಗಿ ಅದನ್ನು ಇತರ ಯೋಜನೆಗಳಿಗೆ ವಿಸ್ತರಿಸಬೇಕು’ ಎಂದು ಅಭಿಪ್ರಾಯಪಟ್ಟರು. 

ಆಧಾರ್‌ ವಿಷಯದಲ್ಲಿ ಕೇಂದ್ರ ಸರ್ಕಾರ ಅಂಕಿ-ಸಂಖ್ಯೆಗಳ ಆಟವಾಡುತ್ತಿದೆ. ಎಲ್‌ಪಿಜಿಯಲ್ಲಿ ಆಧಾರ್‌ ತಂತ್ರಜ್ಞಾನದಿಂದ ಬಿಲಿಯನ್‌ ಡಾಲರ್‌ಗಟ್ಟಲೆ ಉಳಿತಾಯವಾಯಿತು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಕಲ್ಲಿದ್ದಲು ಹಗರಣ, “2ಜಿ ಸ್ಪೆಕ್‌óಂ’ ಹಗರಣವನ್ನು ಬಯಲು ಮಾಡಿದ ಸ್ವತಃ ಸಿಎಜಿ ಕೇಂದ್ರ ಸರ್ಕಾರದ ವಾದವನ್ನು ತಳ್ಳಿಹಾಕಿದೆ ಎಂದು ಇದೇ ವೇಳೆ ತಿಳಿಸಿದರು. 

ಆಧಾರ್‌; ಜನರ ಹೊಣೆಗಾರಿಕೆ
ಯೋಜನಾ ಆಯೋಗದ ಮಾಜಿ ಸದಸ್ಯ ಅರುಣ್‌ ಮೈರಾ ಮಾತನಾಡಿ, ಇಂಟರ್‌ನೆಟ್‌, ಗೂಗಲ್‌, ಫೇಸ್‌ಬುಕ್‌ ಕೂಡ ಇದೆ. ಹಾಗಾಗಿ, ತಂತ್ರಜ್ಞಾನದ ಸದ್ಬಳಕೆಯೂ ಇದೆ; ದುರ್ಬಳಕೆಯೂ ಇದೆ. ಅದರಂತೆ ಆಧಾರ್‌ ಕೂಡ ಒಂದು ತಂತ್ರಜ್ಞಾನ. ಈ ತಂತ್ರಜ್ಞಾನದ ಬಳಕೆ ಮನುಷ್ಯನ ಕೈಯಲ್ಲಿದೆ. ಹಾಗಾಗಿ, ಈ ಉಪಕರಣದ ಸಮರ್ಪಕ ಅನುಷ್ಠಾನದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. 

ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರದ ಪ್ರಾಡಕ್ಟ್ ಮ್ಯಾನೇಜರ್‌ ಸಂಜಯ್‌ ಜೈನ್‌ ಮಾತನಾಡಿ, “ಆಧಾರ್‌’ ಶೇ. 98ರಷ್ಟು ಯಶಸ್ವಿಯಾಗಿದೆ. ಉಳಿದ ಶೇ. 2ರಷ್ಟು ಮಾತ್ರ ದೂರುಗಳು ಕೇಳಿಬರುತ್ತಿವೆ. ಹಿರಿಯ ನಾಗರಿಕರ ಬಯೋಮೆಟ್ರಿಕ್‌ ದತ್ತಾಂಶ ಸಂಗ್ರಹ ಮತ್ತಿತರ ಸಮಸ್ಯೆಗಳು ಕೇಳಿಬರುತ್ತಿವೆ. ಇದು ಕೂಡ ಕೆಲವೇ ದಿನಗಳಲ್ಲಿ ಪರಿಹಾರ ಆಗಲಿದೆ ಎಂದು ತಿಳಿಸಿದರು. 

ನನ್ನ ಪಾನ್‌ ಸಂಖ್ಯೆಗೆ ಆಧಾರ್‌ ಜೋಡಣೆ
ಸಂಸತ್ತಿನಲ್ಲಿ ನಾನು “ಆಧಾರ್‌’ ಅನ್ನು ವಿರೋಧಿಸಿದರೂ, ನನ್ನ ಪಾನ್‌ ಸಂಖ್ಯೆಯೊಂದಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಿಸುವುದನ್ನು ಮರೆತಿಲ್ಲ…
– “ನಿಮ್ಮ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಿಲ್ಲ ಎಂಬ ಎಚ್ಚರಿಕೆ ಸಂದೇಶಗಳು ನಿತ್ಯ ಮೊಬೈಲ್‌ಗೆ ಬರುತ್ತವೆ. ಈ ಬಗ್ಗೆ ಆಧಾರ್‌ ವಿಮರ್ಶಿಸುವ ನಿಮ್ಮ ಸಲಹೆ (ಜೈರಾಂ ರಮೇಶ್‌) ನಿಮ್ಮ ಸಲಹೆ ಏನು’ ಎಂದು ವ್ಯಕ್ತಿಯೊಬ್ಬರಿಂದ ತೂರಿಬಂದ ಪ್ರಶ್ನೆಗೆ ಜೈರಾಂ ರಮೇಶ್‌ ಪ್ರತಿಕ್ರಿಯೆ ಇದು. 

“ಆಧಾರ್‌ ಕಡ್ಡಾಯ ಎಂದು ಸರ್ಕಾರ ನಿಯಮ ಮಾಡಿದೆ. ಆ ನಿಯಮವನ್ನು ನಾವು ಮೊದಲು ಪಾಲಿಸೋಣ. ಮತ್ತೂಂದೆಡೆ ಬೇಕಿದ್ದರೆ ಹೋರಾಟ ಮಾಡೋಣ. ಸ್ವತಃ ನಾನು ಕೂಡ ಸಂಸತ್ತಿನ ಒಳಗಡೆ ನಿಂತು ಇದರ ವಿರುದ್ಧ ಮಾತನಾಡುತ್ತೇನೆ. ಆದರೆ, ನನ್ನ ಪಾನ್‌ ಸಂಖ್ಯೆಯೊಂದಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಿದ್ದೇನೆ’ ಎಂದು ಹೇಳಿದರು. 

ಸಕ್ರಮ ಅನುಷ್ಠಾನಕ್ಕೆ ಬಹುಮತ
“ಆಧಾರ್‌’ ಇರಬೇಕು ಎಂದು ಬಯಸುವವರು ಎಷ್ಟು ಜನ ಎಂದು ಜೈರಾಂ ಕೇಳಿದಾಗ, ಸಭೆಯಲ್ಲಿದ್ದ ಶೇ. 65ಕ್ಕೂ ಹೆಚ್ಚು ಜನ ಕೈ ಎತ್ತಿದರು. ಬೆನ್ನಲ್ಲೇ “ಆಧಾರ್‌’ ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಎಷ್ಟು ಜನ ಬಯಸುತ್ತೀರಾ ಎಂದು ಕೇಳಿದರು. ಆಗ, ಶೇ. 85ರಷ್ಟು ಜನ ಕೈ ಎತ್ತಿದರು. 

ಟಾಪ್ ನ್ಯೂಸ್

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಕರ್ಫ್ಯೂ ಪರಿಷ್ಕರಣೆ?: ಇಂದು ಮುಖ್ಯಮಂತ್ರಿ  ನೇತೃತ್ವದಲ್ಲಿ ಮಹತ್ವದ ಸಭೆ ನಿಗದಿ

ಕರ್ಫ್ಯೂ ಪರಿಷ್ಕರಣೆ?: ಇಂದು ಮುಖ್ಯಮಂತ್ರಿ  ನೇತೃತ್ವದಲ್ಲಿ ಮಹತ್ವದ ಸಭೆ ನಿಗದಿ

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಪಿಯು: ಈ ಬಾರಿ ಹೆಚ್ಚುವರಿ ಪ್ರಶ್ನೆಗಳು

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಕೋವಿಡ್: ಸಾವಿನ ಪ್ರಮಾಣ ಗಣನೀಯ ಕುಸಿತ

ಪಂಚ ಚುನಾವಣೆಗೆ ಕಣ ಬಿರುಸು

ಪಂಚ ಚುನಾವಣೆಗೆ ಕಣ ಬಿರುಸು

2021: ಅತೀ ಉಷ್ಣದ ವರ್ಷ

2021: ಅತೀ ಉಷ್ಣದ ವರ್ಷ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

Nalin-kumar

ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ: ನಳಿನ್ ಕಟೀಲ್ ನೇತೃತ್ವದಲ್ಲಿ ಸಭೆ

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

jcb

ರಸ್ತೆ ಬದಿಯಲ್ಲಿ ನಿಲ್ಲಿಸಿದ ಜೆಸಿಬಿಯನ್ನೇ ಕದ್ದೊಯ್ದ ಖದೀಮರು : ಪೊಲೀಸರಿಂದ ಶೋಧಕಾರ್ಯ

ರೌಡಿಯನ್ನು ಬಿಡಿಸಲು ಬೇಕಾದ ಹಣಕ್ಕಾಗಿ ಗಾಂಜಾ ಮಾರಾಟ ಮಾಡಲು ಹೋದ ಸಹಚರರೂ ಕೂಡ ಅಂದರ್

ತನ್ನ ಸಹಚರನನ್ನು ಜೈಲಿನಿಂದ ಬಿಡಿಸಲು ಹೋಗಿ ತಾವೇ ಪೊಲೀಸರ ಖೆಡ್ಡಾಕ್ಕೆ ಬಿದ್ದರು

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ

ಜಗತ್ತಿನ ಪ್ರವಾಸಿ ತಾಣಗಳಲ್ಲಿ ದಿಲ್ಲಿ, ಜೈಪುರ

ಜಗತ್ತಿನ ಪ್ರವಾಸಿ ತಾಣಗಳಲ್ಲಿ ದಿಲ್ಲಿ, ಜೈಪುರ

Untitled-1

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ! 

ಬಾಹ್ಯಾಕಾಶದಲ್ಲಿ ಇಳಯರಾಜಾ ಹಾಡುಗಳ ಮೇಳ!

ಬಾಹ್ಯಾಕಾಶದಲ್ಲಿ ಇಳಯರಾಜಾ ಹಾಡುಗಳ ಮೇಳ!

ಗೂಬೆಯ ಫೋಟೋಗಳಿಗೆ ಫಿದಾ

ಗೂಬೆಯ ಫೋಟೋಗಳಿಗೆ ಫಿದಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.