ಗ್ರಾಹಕರ ಕೈ ಸುಡುತ್ತಿರುವ ಬೀನ್ಸ್‌, ಟೊಮ್ಯಾಟೋ, ಕೊತ್ತಂಬರಿ!

Team Udayavani, Oct 26, 2021, 12:52 PM IST

ಗ್ರಾಹಕರ ಕೈ ಸುಡುತ್ತಿರುವ ಬೀನ್ಸ್‌, ಟೊಮ್ಯಾಟೋ, ಕೊತ್ತಂಬರಿ!

ಬೆಂಗಳೂರು: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆ ಯಲ್ಲಿ ತರಕಾರಿ ಸೇರಿದಂತೆ ಸೊಪ್ಪಿನ ಬೆಲೆಗಳು ಗಗನ ಮುಖಿಯಾಗಿವೆ.

ಕೊತ್ತಂಬರಿ ಸೊಪ್ಪು, ಬೀನ್ಸ್‌ , ಟೊಮ್ಯಾಟೊ, ಈರುಳ್ಳಿ ಸೇರಿದಂತೆ ಮತ್ತಿ ತರರತರಕಾರಿ ದರಗಳು ಗ್ರಾಹಕರ ಕೈ ಸುಡುತ್ತಿವೆ. ಸೋಮವಾರ ಯಶವಂತಪುರದ ಎಪಿ  ಎಂಸಿ ಯಲ್ಲಿ ಮತ್ತು ಕೆ.ಆರ್‌.ಮಾರುಕಟ್ಟೆಯಲ್ಲಿ ಕೊತ್ತಂ ಬರಿ ಸೊಪ್ಪು ಪ್ರತಿ ಕಟ್ಟು 50ರಿಂದ 60ರೂ. ವರೆಗೂ ಮಾರಾಟವಾಯಿತು. ಯಶವಂತಪುರ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಕಟ್ಟು ಕೆ.ಜಿಗೆ 200ರೂ.ಗೆ ಖರೀದಿಯಾಯಿತು.

ಕಳೆದ ಹದಿನೈದು ದಿನಗಳಿಂದ ಸೊಪ್ಪಿನ ಬೆಲೆಗಳಲ್ಲಿ ಏರಿಕೆ ಕಂಡುಬರುತ್ತಲೆ ಇದೆ.ಹೋದ ತಿಂಗಳು ಕೊತ್ತಂಬರಿ ಸೊಪ್ಪು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತಿತ್ತು. ಪ್ರತಿ ಕಟ್ಟು 8 ರಿಂದ 10ರೂ. ವರೆಗೂ ಸಿಗುತ್ತಿತ್ತು. ದಸರಾ ಹಬ್ಬದಿಂದ ಈವರೆಗೂ ಕೊತ್ತಂಬರಿ ಸೂಪ್ಪಿನ ಬೆಲೆಯು ಏರುತ್ತಲೆ ಇದೆ. ಕೆ.ಆರ್‌.ಮಾರುಕಟ್ಟೆಯಲ್ಲಿ ಸಾಮಾನ್ಯ ದರ್ಜೆಯ ಕೊತ್ತಂಬರಿ ಸೊಪ್ಪು ಪ್ರತಿ ಕಟ್ಟಿಗೆ 30ರೂ.ದಿಂದ 40ರೂ.ವರೆಗೆ ಮಾರಾಟ ವಾಯಿತು. ಆದರೆ ಉತ್ತಮ ಗುಣಮಟ್ಟದ ಕಟ್ಟು 50 ರಿಂದ 60 ರೂ.ಗೆ ಖರೀದಿಯಾಯಿತು.

ಗ್ರಾಹಕರ ಕೈ ಸುಡುತ್ತಿದೆ ಬೀನ್ಸ್‌: ಬೀನ್ಸ್‌ ಸೇರಿದಂತೆ ಹಲವು ತರಕಾರಿ ಬೆಲೆಗಳುಗ್ರಾಹಕರನ್ನು ನಿದ್ರೆಗೆಡಿಸುತ್ತಿವೆ. ಸೋಮವಾರ ಕೆ.ಆರ್‌.ಮಾರುಕಟ್ಟೆಯಲ್ಲಿ ಬೀನ್ಸ್‌ 50ರಿಂದ60ರೂ.ಗೆ ಮಾರಾಟವಾಯಿತು. ಪ್ರತಿ ಕೆ.ಜಿಗೆಕ್ಯಾರೆಟ್‌ 40 ರಿಂದ 30 ರೂ., ಬೆಂಡೆಕಾಯಿ 40ರೂ, ಬದನೆಕಾಯಿ 20 ರೂ.ದಿಂದ 30 ರೂ.ಗೆ ಖರೀದಿ ಆಯಿತು.

ಮತ್ತೆ ಏರಿದ ಟೊಮ್ಯಾಟೊ ದರ: ಕಳೆದ ವಾರ ಕೊಂಚ ತಗ್ಗಿದ್ದ ಟೊಮೊಟೊ ದರ ಸೋಮವಾರ ಮತ್ತೆ ಏರಿಕೆ ಆಗಿದೆ. ಉತ್ತಮ ಗುಣಮಟ್ಟದ ಟೊಮ್ಯಾಟೊ ಪ್ರತಿ ಕೆ.ಜಿಗೆ 40ರಿಂದ 45ರೂ.ಗೆ (ಹೋಲ್‌ ಸೇಲ್‌) ಮಾರಾಟವಾಗುತ್ತಿದೆ. ಕಳೆದ ತಿಂಗಳು ಟೊಮ್ಯಾಟೊ ಕೆ.ಜಿಗೆ 20ರಿಂದ 25 ರೂ.ಗೆ ಮಾರಾಟವಾಗಿತ್ತು. ಹದಿನೈದು ದಿನಗಳ ಹಿಂದೆ ಆ ಬೆಲೆ 60 ರಿಂದ 70 ರೂ.ಗೆ ತಲುಪಿತು.

ಆದರೆ ಕಳೆದ ಒಂದುವಾರದ ಹಿಂದೆ ಮತ್ತೆ ಟೊಮ್ಯಾಟೊ ಬೆಲೆ ಕೆ.ಜಿಗೆ 30 ರಿಂದ 40 ರೂ. ಗೆ ಖರೀದಿಯಾಗಿತ್ತು. ಇದೀಗ ಆ ಬೆಲೆ 40 ರಿಂದ 45 ರೂಪಾಯಿಗೆ ಜಿಗಿದಿದೆ ಎಂದು ಕಲಾಸಿಪಾಳ್ಯ ತರಕಾರಿ ವರ್ತಕರು ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ಮಾಹಿತಿ ನೀಡಿದ್ದಾರೆ.

ದುಪ್ಪಟ್ಟು ಬೆಲೆಗಳಲ್ಲಿ ಮಾರಾಟ: ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷರಂಗಸ್ವಾಮಿ ತರಕಾರಿ, ಟೊಮಾಟೊ, ಈರುಳ್ಳಿ ಸೇರಿದಂತೆ ಇನ್ನಿತರಅಗತ್ಯ ವಸ್ತುಗಳನ್ನುಬೀದಿಬದಿ ವ್ಯಾಪಾರಿಗಳು ಮಧ್ಯವರ್ತಿಗಳಿಂದ ಖರೀದಿ ಮಾಡುತ್ತಾರೆ. ಮಧ್ಯವರ್ತಿಗಳು ಹೋಲ್‌ಸೇಲ್‌ ವ್ಯಾಪಾರಿಗಳಿಂದ ಖರೀದಿಸಿ ಅದರಲ್ಲಿ ತಮ್ಮ ಲಾಭ ಇಟ್ಟುಕೊಂಡು ಇತರ ವ್ಯಾಪಾರಿಗಳಿಗೆ ಮಾಡುತ್ತಾರೆ. ಆಗ ಮಾರಾಟಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಸಾಗಾಣಿಕೆ  ವೆಚ್ಚ, ಕೂಲಿ ಸೇರಿಸಿದರೆ ವ್ಯಾಪಾರಿಗಳಿಗೆ ಉಳಿಯುವುದು ಕೆ.ಜಿಗೆ 3ರಿಂದ 5 ರೂ.ಅಷ್ಟೇ ಉಳಿಯುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.

ಈರುಳ್ಳಿ ಬೆಲೆ ಕ್ವಿಂಟಲ್‌ಗೆ 3100 ರೂ. :

ಸೋಮವಾರ ಯಶವಂತಪುರ ಮಾರುಕಟ್ಟೆಗೆ 31,555 ಬ್ಯಾಗ್‌ ಮತ್ತು ದಾಸನಪುರ ಮಾರುಕಟ್ಟೆಗೆ 27,327 ಬ್ಯಾಗ್‌ ಈರುಳ್ಳಿ ಪೂರೆಕೆ ಆಗಿದೆ. ಮಹಾರಾಷ್ಟ್ರದಿಂದ 40 ಟ್ರಕ್‌ ಹಳೆ ದಾಸ್ತಾನು ಈರುಳ್ಳಿ ಸರಬರಾಜಾಗಿದೆ ಎಂದು ಯಶವಂತಪುರ ಈರುಳ್ಳಿ ಮಾರಾಟ ವರ್ತಕರು ಹೇಳಿದ್ದಾರೆ. ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ 3100 ರಿಂದ 3300 ರೂ.ಗೆ ಖರೀದಿ ಆಯಿತು. ಜತೆಗೆ ದೊಡ್ಡಗಾತ್ರದ ಈರುಳ್ಳಿ 2900 ರಿಂದ 3000 ರೂ.ಗೆ ಮಾರಾಟವಾಯಿತು. ಬಿಸ್ಕೆಟ್‌ ಬಣ್ಣದ ಈರುಳ್ಳಿ ಪ್ರತಿ ಕ್ವಿಂಟಲ್‌ 1500 ದಿಂದ 2200ರೂ ಗೆ ಮಾರಾಟವಾಯಿತು ಎಂದು ಯಶವಂತಪುರು ಎಪಿಎಂಸಿಯ ಈರುಳ್ಳಿ ವರ್ತಕ ಉದಯಶಂಕರ್‌ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

1-ss

ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ದೂರು

dkshivakumar

ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡಲು ಡಿಕೆಶಿ ಒತ್ತಾಯ

ಮಂಗಗಳ ಅನುಮಾನಾಸ್ಪದ ಸಾವು

ಕೋತಿಗಳ ಅನುಮಾನಾಸ್ಪದ ಸಾವು..!

ಸಿದ್ದು ವಿರುದ್ಧ ದೂರು

ಸಿದ್ದು, ಲಾಡ್‌ ವಿರುದ್ಧ ಪೊಲೀಸರಿಗೆ ದೂರು

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.