ಹಸಿರು ಪಟಾಕಿ ಬದಲು ಸಾಮಾನ್ಯ ಪಟಾಕಿ ಬಳಕೆ

50ಕ್ಕೂಹೆಚ್ಚು ಜನರಕಣ್ಣಿಗೆ ಹಾನಿ; ಇಬ್ಬರಿಗೆ ದೃಷ್ಟಿ ಹಾನಿ, 30 ಮಕ್ಕಳಿಗೆ ಗಾಯ

Team Udayavani, Nov 18, 2020, 11:54 AM IST

Damage From Useing Cracakers

ಬೆಂಗಳೂರು: ರಾಜ್ಯ ಸರ್ಕಾರದ ಕಡ್ಡಾಯ ಹಸಿರು ಪಟಾಕಿ ಮಾರಾಟ ಮತ್ತು ಬಳಕೆ ನಿಯಮ ಜಾರಿಯಲ್ಲಿದ್ದರೂ, ರಾಜಧಾನಿಯಲ್ಲಿ ಸಾಮಾನ್ಯ ಪಟಾಕಿಯನ್ನೇ ಸಿಡಿಸುವ ಮೂಲಕ 50ಕ್ಕೂ ಹೆಚ್ಚುಮಂದಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.

ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈ ಬಾರಿ ದೀಪಾವಳಿಗೆ ಹಸಿರು ಪಟಾಕಿ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಅಲ್ಲದೆ, ನ.12 ರಂದು ಹಸಿರು ಪಟಾಕಿ ಹೊರತಾಗಿ ಇತರೆ ಪಟಾಕಿ ಮಾರಾಟ ಮಾಡುವುದು ಹಾಗೂ ಸಿಡಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು.

ಈ ನಿಯಮ ಜಾರಿಗೊಳಿಸುವಂತೆ ಮಾಲಿನ್ಯ ನಿಯಂತ್ರಣಮಂಡಳಿ, ಸ್ಥಳೀಯ ಆಡಳಿತ ಸಂಸ್ಥೆಗಳು,ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿತ್ತು.  ಆದರೂ, ಈ ಬಾರಿ ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯ ಪಟಾಕಿಗಳುಹೆಚ್ಚು ಸದ್ದು ಮಾಡಿದೆ. ಇದರ ಪರಿಣಾಮ 30 ಮಕ್ಕಳನ್ನು ಸೇರಿದಂತೆ 50 ಮಂದಿ ಕಣ್ಣಿನ ಹಾನಿ ಮಾಡಿಕೊಂಡಿದ್ದಾರೆ. ಈ ಪೈಕಿ ಇಬ್ಬರು ಮಕ್ಕಳ ಕಣ್ಣಿಗೆ ತೀವ್ರ ಹಾನಿಯಾಗಿದ್ದು, ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಸಾಮಾನ್ಯ ಪಟಾಕಿಯಿಂದಲೇ ಹಾನಿ: ನಗರದಲ್ಲಿ ಈ ಬಾರಿ ದೀಪಾವಳಿ ಹಬ್ಬದ ಮೂರು ದಿನಗಳಲ್ಲಿ ಪಟಾಕಿಯಿಂದ ಹಾನಿಗೊಳಗಾಗಿ ಮಿಂಟೋ ಆಸ್ಪತ್ರೆಯಲ್ಲಿ 11 ಮಂದಿ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ19 ಮಂದಿ, ನಾರಾಯಣ ನೇತ್ರಾಲಯದಲ್ಲಿ 11 ಮಂದಿ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ಕು ಮಂದಿ, ನೇತ್ರಧಾಮದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದಾರೆ. ವೈದ್ಯರ ಬಳಿ ಪಟಾಕಿ ಕುರಿತು ಮಾಹಿತಿ ನೀಡುವ ಸಂದರ್ಭದಲ್ಲಿ ಎಲ್ಲರೂ ಸಾಮಾನ್ಯ ಪಟಾಕಿ ಬಳಸಿರುವುದಾಗಿ ಹೇಳಿದ್ದಾರೆ ಎಂದು ಆಯಾ ಆಸ್ಪತ್ರೆಗಳ ವೈದ್ಯರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಮಾರ್ಗಸೂಚಿ ತಡವಾಗಿದ್ದೇ ಸಮಸ್ಯೆಯಾಯಿತೆ?: ಹಬ್ಬಕ್ಕೆ ಒಂದು ವಾರ ಮುಂಚೆ ನ.6 ರಂದು ಹಸಿರು ಪಟಾಕಿ ಬಳಕೆ ಮಾಡಿ ಎಂದಷ್ಟೇ ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಸಂದೇಶ ನೀಡಿದ್ದರು. ಆದರೆ, ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಇಲ್ಲದೆ ಜನರಿಗೆ ಹಸಿರು ಪಟಾಕಿ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಈ ಬಗ್ಗೆ ಕೋರ್ಟ್‌ ಕೂಡಾ ಸ್ಪಷ್ಟ ಮಾಹಿತಿ ನೀಡುವಂತೆ ಸರ್ಕಾರಕ್ಕೆ ತಿಳಿಸಿತ್ತು. ಆ ಬಳಿಕ ಹಬ್ಬದ ಒಂದು ದಿನ ಮುಂಚೆ ನ.12ಕ್ಕೆ ಸರ್ಕಾರದಿಂದ ಪರಿಷ್ಕೃತ ಸುತ್ತೋಲೆ ಹೊರಡಿಸಲಾಯಿತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಮಾಹಿತಿ ಪ್ರಕಟಣೆ ನೀಡಿತು. ಮಾರ್ಗಸೂಚಿ ತಡವಾದ ಹಿನ್ನೆಲೆ ಪರಿಣಾಮಕಾರಿಯಾಗಿ ನಿಮಯ ಜಾರಿಗೊಳಿಸಲು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಸಾಮಾನ್ಯ ಪಟಾಕಿ ಮಾರಾಟ ಮತ್ತು ಬಳಕೆಯಾಗಿರಬಹುದು ಎನ್ನುತ್ತಾರೆ ಪರಿಸರವಾದಿಗಳು.

ನಿರ್ಲಕ್ಷ್ಯವೇ ಕಾರಣ!: ನಗರದ 59 ಕಡೆಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಇಲ್ಲಿನ ಪಟಾಕಿ ಮಳಿಗೆಗಳಿಗೆ ತೆರಳಿ ಕಡ್ಡಾಯವಾಗಿ ಹಸಿರು ಪಟಾಕಿ ಮಾರಾಟ ಮಾಡುತ್ತಿದ್ದಾರೆಯೇ ತಪಾಸಣೆ ನಡೆಸುವಂತೆ ಸರ್ಕಾರ ಸೂಚಿಸಿತ್ತು. ಆದರೆ, ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುತೇಕ ಕಡೆ ಸರಿಯಾಗಿ ತಪಾಸಣೆ ಕಾರ್ಯ ನಡೆದಿಲ್ಲ. ರಾಜಾಜಿನಗರದಲ್ಲಿ ಮಾತ್ರ ಮೂವರು ವ್ಯಾಪಾರಿಗಳಿಗೆ ಸ್ಫೋಟಕ ವಸ್ತುಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ ವರ್ಷಕಿಂತ್ಕ ಕಡಿಮೆಹಾನಿ :  ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ ಅರ್ಧದಷ್ಟುಕಡಿಮೆಯಾಗಿದೆ. ನಗರದಲ್ಲಿ 2019ರಲ್ಲಿ120 ಮಂದಿ ಕಣ್ಣಿಗೆ ಹಾನಿಯಾಗಿತ್ತು. ಈ ಬಾರಿ 50ಕ್ಕೆ ಇಳಿಕೆಯಾಗಿದೆ, ಇದಕ್ಕೆ ಪ್ರಮುಖ ಕಾರಣ ಕೋವಿಡ್ ಹಿನ್ನೆಲೆ ಬಹುತೇಕ ಮಂದಿ ಪಟಾಕಿಯಿಂದ ಹಿಂದುಳಿದಿದ್ದಾರೆ. ಜತೆಗೆ ಹಸಿರು ಪಟಾಕಿ ಬಳಕೆಯು ಪರಿಣಾಮ ಬೀರಿದೆ.

ಸರ್ಕಾರ ಕೊನೆಯ ಹಂತದಲ್ಲಿ ನಿಯಮ ಜಾರಿಗೊಳಿಸಿದ್ದರಿಂದ ಅನೇಕರು ಸಾಮಾನ್ಯ ಪಟಾಕಿ ಪೆಟ್ಟಿಗೆ ಮೇಲೆ ಹಸಿರು ಪಟಾಕಿ ಎಂಬ ನಕಲಿ ಮಾಹಿತಿ ಚೀಟಿ ಹಾಕಿ ಮಾರಾಟ ಮಾಡಿದ್ದಾರೆ. ಆಕೃತಿ, ಗಾತ್ರ ಮತ್ತು ಶಬ್ಧದಲ್ಲಿ ಯಾವುದೇ ವ್ಯತ್ಯಾಸ ಇಲ್ಲದ ಹಿನ್ನೆಲೆ ಗ್ರಾಹಕರು ಕೂಡಾ ಹಸಿರು ಪಟಾಕಿ ಎಂದು ಖರೀದಿಸಿದ್ದಾರೆ. ಹೆಚ್ಚಿನ ಹಣ ಬಂಡವಾಳ ಹಾಕಿ ಹಸಿರು ಪಟಾಕಿ ಮಾರಾಟ ಮಾಡಿದ ಅನೇಕರಿಗೆ ನಷ್ಟವಾಗಿದೆ. ಶಿವಪ್ರಕಾಶ್‌, ಹಸಿರು ಪಟಾಕಿ ಮಾರಾಟಗಾರರು

ಹಸಿರು ಪಟಾಕಿಎಂದೇ ಖರೀದಿಸಿದೆವು. ಆದರೆ, ಮನೆಗೆ ತೆರಳಿ ನೋಡಿದಾಗ ಪೆಟ್ಟಿಗೆ ಒಳಗೆ ಸಾಮಾನ್ಯ ಪಟಾಕಿಇದ್ದವು. ಮಗಳುಹೂ ಕುಂಡಹಚ್ಚಿದ್ದು, ಒಮ್ಮೆಗೆ ಸ್ಫೋಟಗೊಂಡಿತು. ಮುಖಭಾಗಹಾನಿಯಾಗಿದೆ. ಹೆಸರು ಬೇಡ, ಗಾಯಗೊಂಡ ಮಗುವಿನ ತಾಯಿ

ಈ ಬಾರಿ ಪಟಾಕಿ ಹಾನಿಗೊಳಗಾಗಿ ಮಿಂಟೋ ಆಸ್ಪತ್ರೆಗೆ ಬಂದ 11 ಮಂದಿ ಪೈಕಿಎಲ್ಲರೂ ಸಾಮಾನ್ಯ ಪಟಾಕಿಯನ್ನೇ ಬಳಸಿದ್ದಾರೆ. ಹಸಿರು ಪಟಾಕಿ ಮತ್ತು ಅದರ ಲಭ್ಯತೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಹೆಚ್ಚಿನ ಮಾಲಿನ್ಯಕಾರಕ ರಾಸಾಯನಿಕಗಳುಕಣ್ಣಿಗೆ ಸೇರಿದ್ದು, ಒಂಬತ್ತು ಮಕ್ಕಳಕಣ್ಣಿನ ಗುಡ್ಡೆಗೆ ತೀವ್ರ ಹಾನಿಯಾಗಿದೆ, ಇಬ್ಬರಿಗೆ ದೃಷ್ಟಿ ಹಾನಿಯಾಗಿದೆ. ಡಾ.ಸುಜಾತಾ ರಾಥೋಡ್‌, ನಿರ್ದೇಶಕರು ಮಿಂಟೋ ಕಣ್ಣಿನ ಆಸ್ಪತ್ರೆ

ಹಸಿರು ಹೆಸರಲ್ಲಿ ಸಾಮಾನ್ಯ ಪಟಾಕಿ ಮಾರಾಟ ಕೆಲವೆಡೆ ಹಸಿರು ಪಟಾಕಿ ಹೆಸರಿನಲ್ಲಿ ಸಾಮಾನ್ಯ ಪಟಾಕಿಗಳನ್ನೇ ನೀಡಲಾಗಿದೆ. ಹಬ್ಬದ ಹಿಂದಿನ ದಿನ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆ ಬಹುತೇಕ ಮಳಿಗೆಗಳಲ್ಲಿ ಜನದಟ್ಟಣೆ ಹೆಚ್ಚಿತ್ತು. ಈ ವೇಳೆ ಸಾಮಾನ್ಯ ಪಟಾಕಿಯನ್ನೇ ಹಸಿರು ಪಟಾಕಿ ಎಂದು ಮಾರಾಟ ಮಾಡಲಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.