Udayavni Special

3ವರ್ಷ ಹೋರಾಡಿ ಟಿಕೆಟ್‌ ಹಣ ವಾಪಾಸ್‌ ಪಡೆದ


Team Udayavani, May 2, 2018, 3:03 PM IST

3varsha.jpg

ಬೆಂಗಳೂರು: ವಿಮಾನ ರದ್ದಾದರೂ ಟಿಕೆಟ್‌ ಕಾಯ್ದಿರಿಸಿದ ಗ್ರಾಹಕರಿಗೆ ಹಣ ವಾಪಸ್‌ ಮಾಡದ ಖಾಸಗಿ ವಿಮಾನಯಾನ ಸೇವಾ ಸಂಸ್ಥೆಯೊಂದು ಇದೀಗ ತನ್ನ ಗ್ರಾಹಕರೊಬ್ಬರಿಗೆ ವಿಮಾನ ಟಿಕೆಟ್‌ ದರವನ್ನು ಬಡ್ಡಿಯೊಂದಿಗೆ ವಾಪಸ್‌ ನೀಡುವುದರ ಜತೆಗೆ ಹೆಚ್ಚುವರಿ ದಂಡವನ್ನೂ ಪಾವತಿಸಬೇಕಾದ ಪ್ರಸಂಗ ಬಂದಿದೆ.

ಏಕಾಏಕಿ ವಿಮಾನ ಪ್ರಯಾಣ ಸೇವೆ ರದ್ದಾಗಿದ್ದರಿಂದ ಮುಂಗಡ ಟಿಕೆಟ್‌ ಬುಕ್‌ ಮಾಡಿ ಹಣ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಮೂರು ವರ್ಷಗಳ ಕಾನೂನು ಹೋರಾಟ ನಡೆಸಿ ಜಯ ಗಳಿಸಿದ್ದಾರೆ.

ಸ್ಪೈಸ್‌ಜೆಟ್‌ ಸಂಸ್ಥೆ 2015ರ ಜನವರಿಯಲ್ಲಿ ತನ್ನ ಸೇವೆ ಸ್ಥಗಿತದಿಂದ ತಾವು ಮುಂಗಡವಾಗಿ ಟಿಕೆಟ್‌ಗೆ ಪಾವತಿಸಿದ್ದ ಹಣಕೊಡಿಸುವಂತೆ ಮುನೇಕೊಳಾಲುವಿನ ಅಶ್ವಿ‌ನ್‌ಕುಮಾರ್‌ ಶಂಕರ್‌ ತಲವಾರ್‌ ಸಲ್ಲಿಸಿದ್ದ ದೂರು ಪುರಸ್ಕರಿಸಿರುವ ನಗರದ ನಾಲ್ಕನೇ ಗ್ರಾಹಕರ ವೇದಿಕೆ ಪರಿಹಾರ ಕೊಡಿಸಿದೆ. ಆರ್ಥಿಕ ಸಂಕಷ್ಟ ಹಾಗೂ ಇನ್ನಿತರೆ ಕಾರಣಗಳಿಂದ 2015ರ ಜನವರಿಯಲ್ಲಿ ಸ್ಪೈಸ್‌ ಜೆಟ್‌ ಸಂಸ್ಥೆಯ 300 ವಿಮಾನಗಳ ಹಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು.

ಈ ವೇಳೆ ಗ್ರಾಹಕರಿಗೆ ಆದ ಅನನುಕೂಲಕ್ಕೆ ಕ್ಷಮೆ ಕೋರಿದ ಸಂಸ್ಥೆ, ವಿಮಾನಯಾನ ಕಾಯ್ದೆಯನ್ವಯ ಟಿಕೆಟ್‌ ಹಣ ಮರುಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ, ಈ ವಾದವನ್ನು ತಳ್ಳಿಹಾಕಿರುವ ಗ್ರಾಹಕರ ವೇದಿಕೆ, ಅಸಮರ್ಪಕ ಸೇವೆಯಿಂದ ಆದ ತೊಂದರೆಗೆ ಪರಿಹಾರ ನೀಡಲು ಆದೇಶಿಸಿದ್ದು, ಮುಂದಿವಾರದಲ್ಲಿ ಪರಿಹಾರ ಪಾವತಿಸಲು ನಿರ್ದೇಶಿಸಿತು.

ಖಾಸಗಿ ಕಂಪನಿಯ ಉದ್ಯೋಗಿ ಅಶ್ವಿ‌ನ್‌ಕುಮಾರ್‌ ಜ. 19ಕ್ಕೆ 2015ರ ಅನ್ವಯವಾಗುವಂತೆ ಬೆಂಗಳೂರಿನಿಂದ ದೆಹಲಿ, ದೆಹಲಿಯಿಂದ ಶ್ರೀನಗರಕ್ಕೆ ಮತ್ತು ಫೆ. 2ರಂದು ವಾಪಾಸ್‌ ಪ್ರಯಾಣಕ್ಕೆ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಿ ಕ್ರೆಡಿಟ್‌ ಕಾರ್ಡ್‌ ಮೂಲಕ 8274 ರೂ. ಪಾವತಿಸಿದ್ದರು. ಆದರೆ, ಜ. 9ಕ್ಕೆ ಅಶ್ವಿ‌ನ್‌ ಕುಮಾರ್‌ ಅವರ ಮೊಬೈಲ್‌ಗೆ ಸ್ಪೈಸ್‌ ಜೆಟ್‌ ಸಂಸ್ಥೆಯಿಂದ ಸಂದೇಶ ಬಂದಿದ್ದು,

ಅದರಲ್ಲಿ, ಜನವರಿ ತಿಂಗಳಲ್ಲಿ ಹಲವು ತಾಂತ್ರಿಕ ಕಾರಣಗಳಿಂದ ನಮ್ಮ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ಹೀಗಾಗಿ ಬೇರೆ ವಿಮಾನದಲ್ಲಿ ಪ್ರವಾಸ ಮಾಡಿದ್ದರು. ಬಳಿಕ ಮುಂಗಡ ಟಿಕೆಟ್‌ ಬುಕ್‌ಗೆ ಪಾವತಿಸಿದ್ದ ಹಣ ವಾಪಾಸ್‌ ನೀಡುವಂತೆ ಇ-ಮೇಲ್‌ ಮೂಲಕ ಸ್ಪೈಸ್‌ ಜೆಟ್‌ ಸಂಸ್ಥೆಗೆ ಮನವಿ ಮಾಡಿದ್ದರೂ ಪ್ರಯೋಜನ ವಾಗದ ಹಿನ್ನೆಲೆ  ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.

ಪರಿಹಾರ ಏನು?: ಅರ್ಜಿದಾರ ಅಶ್ವಿ‌ನ್‌ಕುಮಾರ್‌ ಅವರು ಪಾವತಿಸಿದ್ದ ಟಿಕೆಟ್‌ ಹಣ 9 ಸಾವಿರ ರೂ., ಸೇವೆ ಸ್ಥಗಿತಗೊಂಡ ಕಾರಣ ಬೇರೆ ಸಂಸ್ಥೆಯಿಂದ ಟಿಕೆಟ್‌ ಖರೀದಿಸಲು ಅನುಭವಿಸಿದ ತೊಂದರೆಗೆ 10 ಸಾವಿರ ರೂ. ಮೊತ್ತವನ್ನು ಶೇ 6ರಷ್ಟು ಬಡ್ಡಿಯೊಂದಿಗೆ ವಾಪಾಸ್‌ ನೀಡಬೇಕು. ಜತೆಗೆ ಕಾನೂನು ಹೋರಾಟದ ಶುಲ್ಕ 1 ಸಾವಿರ ರೂ. ನೀಡುವಂತೆ ಸ್ಪೈಸ್‌ ಜೆಟ್‌ ವ್ಯವಸ್ಥಾಪಕ ನಿರ್ದೇಶಕರಿಗೆ  ಗ್ರಾಹಕರ ವೇದಿಕೆ ಆದೇಶಿಸಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

aouraV

ಮುಂಬೈ-ಚೆನ್ನೈ ಮೊದಲ ಕಾದಾಟ: ಯಾರು ಗೆಲ್ಲುತ್ತಾರೆ ? ಸೌರವ್ ಗಂಗೂಲಿ ಹೇಳಿದ್ದೇನು ?

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ಮುಂದೂಡಿಕೆ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ಉತ್ಪಾದನೆಗೆ ಉತ್ತೇಜನ: ಸೋಮಶೇಖರ್

ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ಉತ್ಪಾದನೆಗೆ ಉತ್ತೇಜನ: ಸೋಮಶೇಖರ್

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ವೈದ್ಯರು, ನರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಜೈಲು: ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-tdy-4

ನಿಯಮ ಜಾರಿಗೆ ಕಠಿಣ ಕ್ರಮಕೈಗೊಳ್ಳಿ

bng-tdy-3

ಕೋವಿಡ್ ಸೋಂಕಿತರ ಸಾವು ತಡೆಗೆ ಚರ್ಚೆ

bng-tdy-2

ಮೇಲ್ಸೇತುವೆ ಕಾಮಗಾರಿ ಶೀಘ್ರವಾಗಿ ಮುಗಿಸಿ

ಹೊರವರ್ತುಲ: ರಾಜ್ಯದಿಂದಲೇ ಅನುಮತಿ?

ಹೊರವರ್ತುಲ: ರಾಜ್ಯದಿಂದಲೇ ಅನುಮತಿ?

bng-tdy-3

ಮೂರು ತಿಂಗಳಲ್ಲಿ ಶೇ.100 ಕಸ ವಿಂಗಡಿಸುವ ಗುರಿ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಅಶೋಕನಗರ ರಸ್ತೆಗೆ ರೂಪಕಲಾ ಭೇಟಿ

ಅಶೋಕನಗರ ರಸ್ತೆಗೆ ರೂಪಕಲಾ ಭೇಟಿ

aouraV

ಮುಂಬೈ-ಚೆನ್ನೈ ಮೊದಲ ಕಾದಾಟ: ಯಾರು ಗೆಲ್ಲುತ್ತಾರೆ ? ಸೌರವ್ ಗಂಗೂಲಿ ಹೇಳಿದ್ದೇನು ?

ಫ‌ುಟ್‌ಪಾಥ್‌ ಅಂಗಡಿ ತೆರವಿಗೆ ವಿರೋಧ

ಫ‌ುಟ್‌ಪಾಥ್‌ ಅಂಗಡಿ ತೆರವಿಗೆ ವಿರೋಧ

ಡ್ರಗ್ಸ್‌ ಮುಕ್ತ ಕರ್ನಾಟಕಕ್ಕೆ ಸಂಕಲ್ಪ

ಡ್ರಗ್ಸ್‌ ಮುಕ್ತ ಕರ್ನಾಟಕಕ್ಕೆ ಸಂಕಲ್ಪ

ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಗಂಗಾಧರ ಹಿರೇಗುತ್ತಿ ಆಯ್ಕೆ

ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಗಂಗಾಧರ ಹಿರೇಗುತ್ತಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.