ಅರ್ಚಕನ ಕೊಂದು ಹೂತಿಟ್ಟು ಕಾಂಕ್ರೀಟ್‌ ಹಾಕಿದ್ರು

ಹಣಕಾಸು ವಿಚಾರಕ್ಕೆ ಕಾಶಿ ವಿಶ್ವನಾಥ ದೇಗುಲ ಅರ್ಚಕನನ್ನು ಕೊಂದಿದ್ದ ದುಷ್ಕರ್ಮಿಗಳು: ಇನ್ನುಳಿದ ನಾಲ್ವರಿಗೆ ಶೋಧ

Team Udayavani, Dec 23, 2020, 12:01 PM IST

bng-tdy-1

ಬೆಂಗಳೂರು: ಮೂರೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕಾಡುಗೋಡಿಯ ಕಾಶಿವಿಶ್ವನಾಥ ದೇವಾಲಯದ ಪ್ರಧಾನ ಅರ್ಚಕ ನೀಲಕಂಠ ದೀಕ್ಷಿತ್‌ ಅವರುಕೊಲೆ ಆಗಿರುವುದು ಈಗ ಬೆಳಕಿಗೆ ಬಂದಿದೆ.

ದುರ್ಷರ್ಮಿಗಳು ಹಣಕಾಸಿನ ವಿಚಾರಕ್ಕೆ ಅವರನ್ನು ಬರ್ಬರವಾಗಿ ಕೊಂದು ಮಣ್ಣಿನಲ್ಲಿ ಹೂತು ಹಾಕಿರುವುದನ್ನು ಬೇಧಿಸಿರುವ ಪೊಲೀಸರು ಈ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಕಾಡು ಗೋಡಿ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿ ಮಂಜುನಾಥ್‌ (35) ಮತ್ತು ಗೋಪಿ(32) ಬಂಧಿತರು. ಆರೋಪಿಗಳು ಸೆ.5ರಂದು ಹಣಕಾಸಿನ ವಿಚಾರವಾಗಿ ನೀಲಕಂಠ ದೀಕ್ಷಿತ್‌ ಅವರನ್ನು ಹಾರ್ಡ್‌ವೇರ್‌ ಶಾಪ್‌ನಲ್ಲಿ ಕೊಲೆಗೈದು, ಬಳಿಕ ಕಲ್ಯಾಣ ಮಂಟಪ ಸಮೀಪದಲ್ಲಿ ಹೂತುಹಾಕಿದ್ದರು ಎಂದು ಪೊಲೀಸರು ಹೇಳಿದರು.

ಸೆ.5ರಂದು ಕಬ್ಬಿಣ ರಾಡ್‌ಗಳಿಂದ ಅರ್ಚಕರನ್ನು ಥಳಿಸಿ ಕೊಲೆಗೈದ ಆರೋಪಿಗಳು , ಅವರನ್ನು ಕಲ್ಯಾಣಮಂಟಪವೊಂದರ ಬಳಿ ಮಣ್ಣಿನಲ್ಲಿ ಹೂತುಹಾಕಿ ಮೇಲೆ ಕಾಂಕ್ರೀಟ್‌ ಹಾಕಿದ್ದಾರೆ. ತಹಶೀಲ್ದಾರ್‌ಸಮ್ಮುಖದಲ್ಲಿ ನಗರ ಪೊಲೀಸರು ಮೃತದೇಹದ ಅಸ್ತಿಪಂಜರವನ್ನು ಹೊರತೆಗೆದು ಮಹಜರು ನಡೆಸಲಿದ್ದಾರೆ.

ನಾಲ್ಕೈದು ಮಂದಿ ಇದ್ದಾರೆ: ಕೊಲೆಯಾದ ನೀಲಕಂಠ ದೀಕ್ಷಿತ್‌ ಅವರು ಕಾಶಿವಿಶ್ವನಾಥ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿದ್ದರು. ನಂಜನಗೂಡಿನ ದೇವಸ್ಥಾನವೊಂದರ ಅರ್ಚಕರ ಸಂಬಂಧಿಯೂ ಆಗಿದ್ದಾರೆ. ಜತೆಗೆ ಲಕ್ಷಾಂತರ ರೂ. ಮೌಲ್ಯದ ಆಸ್ತಿಹೊಂದಿದ್ದು, ಬಿಬಿಎಂಪಿ ಮಾಜಿ ಸದಸ್ಯರೊಬ್ಬರ ಜತೆಸೇರಿಕೊಂಡು ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಆರೋಪಿ ಮಂಜುನಾಥ್‌ ಕಾಡುಗೋಡಿಯಲ್ಲಿ ಹಾರ್ಡ್‌ವೇರ್‌ ಮಳಿಗೆ ಹೊಂದಿದ್ದು,

ಆರೋಪಿ ಗೋಪಿ ಸೇರಿ ನಾಲ್ಕೈದು ಮಂದಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾನೆ. ಈ ಮಧ್ಯೆ ಕೆಲ ತಿಂಗಳ ಹಿಂದೆ ದೀಕ್ಷಿತ್‌, ಆರೋಪಿ ಮಂಜುನಾಥ್‌ಗೆ 10 ಲಕ್ಷ ರೂ. ಸಾಲ ಕೊಟ್ಟಿದ್ದರು. ಆದರೆ, ನಿರ್ದಿಷ್ಟ ಸಮಯಕ್ಕೆವಾಪಸ್‌ ನೀಡಿರಲಿಲ್ಲ. ನಾಲ್ಕೈದು ತಿಂಗಳಿಂದ ಬಡ್ಡಿ ಸಹ ಕೊಡುತ್ತಿರಲಿಲ್ಲ. ಅದರಿಂದ ಇಬ್ಬರ ನಡುವೆಆಗಾಗ್ಗೆ ವಾಗ್ವಾದ ನಡೆಯುತ್ತಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮತ್ತೂಂದೆಡೆ ದೀಕ್ಷಿತ್‌ ಕುಟುಂಬ ಸದಸ್ಯರುಕಾಡು ಗೋಡಿ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಆಗ, ಸೆ.5ರಂದು ಸಂಜೆ ದೀಕ್ಷಿತ್‌ ಅವರು ಮಳಿಗೆಗೆ ಬಂದು ಹಣದ ವಿಚಾರವಾಗಿ ಮಾತನಾಡಿದರು. ಒಂದೆರಡು ದಿನಗಳಲ್ಲಿ ಕೊಡುತ್ತೇನೆ ಎಂದು ಹೇಳಿ ಕಳುಹಿಸಿದ್ದೆ ಅಷ್ಟೇ. ಆನಂತರ ಎಲ್ಲಿ ಹೋದರು ಎಂಬುದು ಗೊತ್ತಿಲ್ಲ ಎಂದು ಸುಳ್ಳು ಹೇಳಿದ್ದ. ಅಷ್ಟರಲ್ಲಿ ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಕೆಲ ನೌಕರರಿಗೆ ಲಕ್ಷಾಂತರ ರೂ. ಕೊಟ್ಟು ಊರಿಗೆ ಹೋಗಿ ಬರುವಂತೆ ಕಳುಹಿಸಿದ್ದಾನೆ. ದೀಕ್ಷಿತ್‌ ಅವರ ಪತ್ತೆಗೆ ಸಾಕಷ್ಟು ಶ್ರಮಿಸಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಹೀಗಾಗಿ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಸಿಸಿಬಿ ಪೊಲೀಸರು ಸಾಕಷ್ಟು ಕಾರ್ಯಾಚರಣೆ ನಡೆಸಿದರೂ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಕೋವಿಡ್ ರೂಪಾಂತರ; ಎಚ್ಚರಿಕೆಯಿಂದ ಇರುವಂತೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ

ಸುಳಿವು ಕೊಟ್ಟ ಲಕ್ಷಾಂತರ ರೂ. ನ ಹೊಸ ಬೈಕ್‌ :

ಹಾರ್ಡ್‌ವೇರ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಗೋಪಿ ಲಕ್ಷಾಂತರ ರೂ. ಮೌಲ್ಯದ ಬೈಕ್‌ ಖರೀದಿಸಿದ್ದ. ಅಲ್ಲದೆ, ಈತನೊಂದಿಗೆ ಕೆಲಸ ಮಾಡುತ್ತಿದ್ದ ಇತರರು ಮಾದಕ ವಸ್ತುಗಳ ವ್ಯಸನಿಯಾಗಿದ್ದರು.ಡ್ರಗ್ಸ್‌ಪ್ರಕರಣದಲ್ಲಿ ಗೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣದ ರಹಸ್ಯ  ಬಾಯಿಬಿಟ್ಟಿದ್ದಾನೆ. ಈತನ ಹೇಳಿಕೆ ಆಧರಿಸಿ ಮಂಜುನಾಥ್‌ನನ್ನು ಬಂಧಿಸಲಾಗಿದೆ. ಇನ್ನು ನಾಲ್ವರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಹಣ ಕೊಡುತ್ತೇವೆಂದು ಕರೆದುಕೊಂದರು :

ಸೆ.5ರಂದು ಸಂಜೆ ಐದು ಗಂಟೆ ಸುಮಾರಿಗೆ ದೀಕ್ಷಿತ್‌, ಆರೋಪಿ ಮಂಜುನಾಥ್‌ ಅಂಗಡಿಗೆ ಬಂದು ಹಣ ಕೊಡುವಂತೆ ಜೋರು ಧ್ವನಿಯಲ್ಲಿ ಕೇಳಿದ್ದಾರೆ. ಅದ ರಿಂದ ಕೋಪಗೊಂಡ ಆರೋಪಿ, ತನ್ನ ಅಂಗಡಿಗೆ ಹೊಂದಿಕೊಂಡಂತಿರುವ ಗೋಡೌನ್‌ನಲ್ಲಿ ಹಣ ಕೊಡುವುದಾಗಿ ಕರೆದೊಯ್ದಿದ್ದಾನೆ. ಕಬ್ಬಿಣ ರಾಡ್‌ ಗಳಿಂದ ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರ ಜತೆ ಸೇರಿಕೊಂಡು ಬರ್ಬರವಾಗಿ ಕೊಲೆಗೈದಿದ್ದಾನೆ. ಬಳಿಕ ತಡರಾತ್ರಿ ಕಾಡುಗೋಡಿಯಲ್ಲಿರುವ ತನ್ನ ಕಲ್ಯಾಣ ಮಂಟಪ ಹಿಂಭಾಗದ ಕಸ ವಿಂಗಡಣೆ ಘಟಕ ನಿರ್ಮಾಣ ಮಾಡಲು ಪಾಯ ತೋಡಲಾಗಿತ್ತು. ಅದೇ ಜಾಗದಲ್ಲಿ ದೀಕ್ಷಿತರ ಶವ ಹೂತುಹಾಕಿ, ಕಲ್ಲು, ಸಿಮೆಂಟ್‌ನಿಂದ ಮುಚ್ಚಿ ಪರಾರಿಯಾಗಿದ್ದರು. ಬಳಿಕ ಕಟ್ಟಡ ನಿರ್ಮಾಣ ಕಾರ್ಮಿಕರು ಅರಿವಿಲ್ಲದೆ ಕಸ ವಿಂಗಡಣಾ ಘಟಕ ನಿರ್ಮಾಣ ಮಾಡಿದ್ದಾರೆ.

ಟಾಪ್ ನ್ಯೂಸ್

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.