ಭಜರಂಗಿ-2 ಚಿತ್ರೀಕರಣ ಸೆಟ್‌ನಲ್ಲಿ ಮತ್ತೆ ಬೆಂಕಿ

Team Udayavani, Jan 20, 2020, 3:05 AM IST

ನೆಲಮಂಗಲ: ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿಯನಯದ “ಭಜರಂಗಿ-2′ ಚಿತ್ರದ ಸೆಟ್‌ನಲ್ಲಿ ಸತತ ಎರಡನೇ ಬಾರಿ ಬೆಂಕಿ ಕಾಣಿಸಿಕೊಂಡಿದೆ. ಚಿತ್ರದ ಪ್ರಮುಖ ದೃಶ್ಯ ಒಂದರ ಚಿತ್ರೀಕರಣಕ್ಕಾಗಿ ನೆಲಮಂಗಲ ಸಮೀಪದ ಶ್ರೀನಿವಾಸಪುರದ ಮೋಹನ್‌ ಬಿ. ಕೆರೆ ಸ್ಟುಡಿಯೋದಲ್ಲಿ ನಿರ್ಮಿಸಿದ್ದ ಬೃಹತ್‌ ಸೆಟ್‌ಗೆ ಭಾನುವಾರ ಬೆಂಕಿ ಹೊತ್ತಿಕೊಂಡು ಸೆಟ್‌ ಸಂಪೂರ್ಣ ಸುಟ್ಟುಹೋಗಿದೆ.

ಸ್ಟುಡಿಯೋದಲ್ಲಿ ಒಟ್ಟು 13 ದಿನ ಶೂಟಿಂಗ್‌ ನಡೆಸುವ ಯೋಜನೆಯಿದ್ದು, ಕೇವಲ ನಾಲ್ಕು ದಿನಗಳಲ್ಲಿ ಮೂರು ಕಂಟಕ ಎದುರಾಗಿವೆ. ಜ.16ರಂದು ಶಾರ್ಟ್‌ ಸರ್ಕಿಟ್‌ನಿಂದಾಗಿ ಸೆಟ್‌ಗೆ ಬೆಂಕಿ ಹೊತ್ತಿಕೊಂಡರೆ, ಜ.18ರಂದು ಕಲಾವಿದರು ಸಂಚರಿಸುತಿದ್ದ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿತ್ತು.

ಭಾನುವಾರ ಮತ್ತೆ ಬೆಂಕಿಕಾಣಿಸಿಕೊಂಡಿದ್ದು, ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಸೆಟ್‌ ಭಸ್ಮವಾಗಿದೆ. ಈ ಬಾರಿಯೂ ಶಾರ್ಟ್‌ ಸರ್ಕಿಟ್‌ನಿಂದ ಬಲ್ಬ್ ಸಿಡಿದು, ಬೆಂಕಿ ಹೊತ್ತಿಕೊಂಡಿದೆ. 2 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.

ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಎಲ್ಲರನ್ನೂ ಹೊರಗೆ ಕಳುಹಿಸಲಾಯಿತು. ಸೆಟ್‌ ಸಂಪೂರ್ಣ ಸುಟ್ಟಿರುವ ಕಾರಣ, ಮತ್ತೂಮ್ಮೆ ನಿರ್ಮಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಶಿವಣ್ಣ ಅಪಾಯದಿಂದ ಪಾರು: ಭಾನುವಾರ ಸೆಟ್‌ಗೆ ಬೆಂಕಿ ಕಾಣಿಸಿಕೊಂಡಾಗ ಸೆಟ್‌ನಲ್ಲಿ ನಾಯಕನಟ ಶಿವರಾಜ್‌ಕುಮಾರ್‌ ಸೇರಿ 400ಕ್ಕೂ ಹೆಚ್ಚು ಕಲಾವಿದರು ಹೊಡೆದಾಟದ ದೃಶ್ಯವೊಂದರ ಚಿತ್ರೀಕರಣದ‌ಲ್ಲಿ ತೊಡಗಿದ್ದರು.

“ಮೂರು ಬಾರಿ “ಭಜರಂಗಿ-2′ ಚಿತ್ರದ ಚಿತ್ರೀಕರಣದ ವೇಳೆ ತೊಂದರೆಯಾಗಿರುವುದು ಬೇಸರ ತಂದಿದೆ. ಆದರೆ, ಕಲಾವಿದರಿಗೆ ತೊಂದರೆಯಾಗಿಲ್ಲವೆಂಬುದು ನೆಮ್ಮದಿ ವಿಚಾರ. ನಿರ್ಮಾಪಕರಿಗೆ ಬಹಳಷ್ಟು ನಷ್ಟವಾಗಿದೆ’ ಎಂದು ಶಿವರಾಜಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಅಕ್ಟೋಬರ್‌ನಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾಕ್ಕೆ ದೇಶ-ವಿದೇಶಿಗರನ್ನು ಆಕರ್ಷಿಸಲು ಏಪ್ರಿಲ್‌ ತಿಂಗಳಿನಿಂದ ಸಿದ್ಧತೆ ಆರಂಭಿಸಲಾಗುವುದು ಎಂದು...

  • ಬೆಂಗಳೂರು: ನಗರದಲ್ಲಿ ವಾಸವಿರುವ ಮಂಗಳಮುಖೀಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ...

  • ಬೆಂಗಳೂರು: ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರುದಿನಗಳ ಕಾಲ "ಜುಂಬಾ' ನೃತ್ಯ ತರಬೇತಿ ನೀಡಿದ್ದು ಪೊಲೀಸ್‌ ಸಿಬ್ಬಂದಿ ಕುಣಿದು ಕುಪ್ಪಳಿಸಿರುವ ವಿಡಿಯೋ...

  • ಬೆಂಗಳೂರು: ಆಸ್ಪತ್ರೆ ಪಕ್ಕದಲ್ಲಿಯೇ ನಡೆಯುವ ಸಂತೆಗೆ ನಿತ್ಯ ಸಹಸ್ರಾರು ಜನ ಬರುತ್ತಾರೆ. ಆ ಪೈಕಿ ಬಹುತೇಕರು ಆಸ್ಪತ್ರೆ ಆವರಣದಲ್ಲಿ ವಾಹನ ನಿಲ್ಲಿಸಿ ಸಂತೆಗೆ...

  • ಬೆಂಗಳೂರು: ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್‌ ಎಂಜಿನಿಯರ್‌ ಲಕ್ಷ್ಮಣ್‌ಕುಮಾರ್‌ (33) ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಮಹದೇವಪುರ ಠಾಣೆ ಪೊಲೀಸರು,...

ಹೊಸ ಸೇರ್ಪಡೆ