ಇಂದಿರಾ ಕ್ಯಾಂಟೀನ್‌ನಲ್ಲಿ ಮೊದಲ ದಿನ ರಾತ್ರಿ ಊಟ ಉಚಿತ


Team Udayavani, Aug 15, 2017, 11:15 AM IST

ideera-canteen.jpg

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಇಂದಿರಾ ಕ್ಯಾಂಟೀನ್‌’ ಯೋಜನೆಗೆ ಆ.16ರಂದು ಚಾಲನೆ ದೊರೆಯಲಿದ್ದು, ಮೊದಲ ದಿನ ಎಲ್ಲ ಕ್ಯಾಂಟೀನ್‌ಗಳಲ್ಲಿ ರಾತ್ರಿ ಊಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಕ್ಯಾಂಟೀನ್‌ಗೆ ಚಾಲನೆ ನೀಡಲಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ಗಾಂಧಿ ಸಹ ಅಲ್ಲೇ ಆಹಾರ ಸೇವಿಸಲಿದ್ದಾರೆ.

ಕ್ಯಾಂಟೀನ್‌ನಲ್ಲಿ ಪೂರೈಕೆ ಮಾಡುವ ಆಹಾರದ ಗುಣಮಟ್ಟ ಪರೀಕ್ಷಿಸಲು ರಾಹುಲ್‌ಗಾಂಧಿಯವರು ಅಂದು ಅಲ್ಲೇ ಆಹಾರ ಸೇವನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲ ದಿನ ಎಲ್ಲ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಊಟ ವಿತರಣೆ ಮಾಡುವಂತೆ ಮುಖ್ಯಮಂತ್ರಿಗಳು ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕ್ಯಾಂಟೀನ್‌ಗಳ ಚಾಲನೆ ಹಾಗೂ ಅಲಂಕಾರಗೊಳಿಸಲು ಬಿಬಿಎಂಪಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಜಯನಗರ ವಾರ್ಡ್‌ನ ಕನಕನಪಾಳ್ಯದಲ್ಲಿ ನಿರ್ಮಿಸಲಾಗಿರುವ ಕ್ಯಾಂಟೀನ್‌ ಉದ್ಘಾಟಿಸುವ ಮೂಲಕ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಆನಂತರದಲ್ಲಿ ಎಲ್ಲ 101 ಕ್ಯಾಂಟೀನ್‌ಗಳು ಆರಂಭವಾಗಲಿದ್ದು, ಪ್ರತಿ ಕ್ಯಾಂಟೀನ್‌ನಲ್ಲಿ ತಲಾ 500 ಮಂದಿಗೆ ರಾತ್ರಿಯ ಊಟವನ್ನು ಉಚಿತವಾಗಿ ವಿತರಿಸಲಾಗುತ್ತದೆ. ಇದರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸುಮಾರು 5 ಸಾವಿರ ಮಂದಿಗೂ ಇದೇ ವೇಳೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಬಿಬಿಎಂಪಿ ವ್ಯಾಪ್ತಿಯ 105 ಕಡೆಗಳಲ್ಲಿ ಕ್ಯಾಂಟೀನ್‌ ಕಾಮಗಾರಿಗಳ ಪೈಕಿ ಈಗಾಗಲೇ 95ಕ್ಕೂ ಹೆಚ್ಚು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಡೆಗಳಲ್ಲಿ ಸಿವಿಲ್‌ ಕಾಮಗಾರಿಗಳು ಬಾಕಿ ಉಳಿದಿವೆ. ಮಂಗಳವಾರ (ಆ.15) ಸಂಜೆ ವೇಳೆಗೆ ಬಿಬಿಎಂಪಿಗೆ ಎಲ್ಲ ಕ್ಯಾಂಟೀನ್‌ಗಳು ಹಸ್ತಾಂತರವಾಗಲಿದ್ದು, ಊಟ ವಿತರಣೆಗೆ ಅಗತ್ಯ ಸಿದ್ಧತೆಗಳನ್ನು ಆಹಾರ ಪೂರೈಕೆ ಗುತ್ತಿಗೆ ಪಡೆದ ಸಂಸ್ಥೆಗಳು ಮಾಡಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಟಾಪ್‌ 10 ಕ್ಯಾಂಟೀನ್‌ಗಳಿಗೆ ಪ್ರಶಸ್ತಿ
ವಿವಿಧ ವಾರ್ಡ್‌ಗಳಲ್ಲಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅತ್ಯುತ್ತಮವಾದ 10 ಕ್ಯಾಂಟೀನ್‌ಗಳಿಗೆ ಪ್ರಶಸ್ತಿ ನೀಡಲು ಪಾಲಿಕೆಯ ಹಿರಿಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಕ್ಯಾಂಟೀನ್‌ ನಿರ್ಮಾಣಕ್ಕೆ ಸ್ಥಳ ಆಯ್ಕೆ, ಶೀಘ್ರ ಕಾಮಗಾರಿಗಳ ಪೂರ್ಣ, ಕ್ಯಾಂಟೀನ್‌ ಸುಂದರೀಕರಣ ಹಾಗೂ ಜನರಿಗೆ ಉಪಯೋಗವಾಗುತ್ತಿದೆಯೇ ಎಂಬ ಅಂಶಗಳನ್ನು ಆಧರಿಸಿ 10 ಕ್ಯಾಂಟೀನ್‌ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಪ್ರಚಾರಕ್ಕಾಗಿ ಎಲ್‌ಇಡಿ ಟಿವಿ
ನಗರದಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಯೊಂದು ಕ್ಯಾಂಟೀನ್‌ನಲ್ಲಿ ಎಲ್‌ಇಡಿ ಟಿವಿ ಅಳವಡಿಸಿಲು ಬಿಬಿಎಂಪಿ ಮುಂದಾಗಿದೆ. ಆ ಮೂಲಕ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಸಾರ್ವಜನಿಕರಿಗಾಗಿ ರೂಪಿಸಲಾಗಿರುವ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಇದರೊಂದಿಗೆ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಕುರಿತ ಮಾಹಿತಿಯನ್ನು ಜನರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ. 

ಅಡುಗೆ ಮನೆಗಳ ಪುನರ್‌ ವಿಂಗಡಣೆ
ಪಾಲಿಕೆಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ 198 ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮಾಡಲು 27 ಕ್ಯಾಂಟೀನ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಸದ್ಯ ನಿರ್ಮಿಸಲು ಉದ್ದೇಶಿಸಿರುವ ಸ್ಥಳಗಳು ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ಅಡುಗೆ ಮನೆಗಳನ್ನು ಪುನರ್‌ ವಿಂಗಡಣೆ ಮಾಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ನಗರದಲ್ಲಿರುವ ಎಲ್ಲ ಕ್ಯಾಂಟೀನ್‌ಗಳಿಗೆ ಶೀಘ್ರ ಆಹಾರ ಪೂರೈಕೆಗೆ ಅನುಕೂಲವಾಗುವಂತಹ ಸ್ಥಳಗಳಲ್ಲಿ ಅಡುಗೆ ಮನೆಗಳನ್ನು ನಿರ್ಮಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಆಯುಕ್ತರ ನೈಟ್‌ ರೌಂಡ್ಸ್‌
ಆಗಸ್ಟ್‌ 16ರೊಳಗೆ 101 ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ನಿತ್ಯ ಒಂದೊಂದು ವಲಯದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾಂಟೀನ್‌ಗಳನ್ನು ರಾತ್ರಿ ವೇಳೆ ಪರಿಶೀಲನೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ ಅವರು ರಾಜರಾಜೇಶ್ವರಿ ನಗರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾಂಟೀನ್‌ಗಳನ್ನು ಪರಿಶೀಲಿಸಿ, ಆ.15ರೊಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ 95ಕ್ಕೂ ಹೆಚ್ಚು ಕ್ಯಾಂಟೀನ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕ್ಯಾಂಟೀನ್‌ಗಳ ಕಾಮಗಾರಿ ಮಂಗಳವಾರ ಸಂಜೆ ವೇಳೆ ಪೂರ್ಣಗೊಳ್ಳಲಿದೆ. ಕಾಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ರಾತ್ರಿ ವೇಳೆ ಪರಿಶೀಲನೆ ನಡೆಸಲಾಗುತ್ತಿದೆ. ಇದರೊಂದಿಗೆ ಆ.16ರಂದು ಇಂದಿರಾ ಕ್ಯಾಂಟೀನ್‌ಗೆ ಚಾಲನೆ ದೊರೆಲಿದ್ದು, ರಾತ್ರಿ ಎಲ್ಲ 101 ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ನೀಡಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಟಾಪ್ ನ್ಯೂಸ್

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

1-bbm

ಹಾನಗಲ್ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ : ಸಿಎಂ ತಿರುಗೇಟು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

breast cancer

ಪ್ರತಿ 4 ನಿಮಿಷಕ್ಕೆ ಓರ್ವ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್‌

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

cracker

ಹೊರಬೀಳದ ಆದೇಶ, ಮುಗಿಯದ ಆತಂಕ

MUST WATCH

udayavani youtube

ನೂಜಿಬಾಳ್ತಿಲ ಶಾಲೆಯಲ್ಲಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆ; ತಪ್ಪಿದ ಭಾರೀ ದುರಂತ

udayavani youtube

ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ಬಂದರೂ ಶಿಕ್ಷಕರು ಬರಲೇ ಇಲ್ಲ : ಪೋಷಕರಿಂದ ಪ್ರತಿಭಟನೆ

udayavani youtube

ಶಾಲಾ ಪ್ರಾರಂಭೋತ್ಸವ : ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

ಹೊಸ ಸೇರ್ಪಡೆ

ತೋಟ ವಿಸ್ತರಣೆ ಮಾಡದೇ ಅಡಕೆ ಮಾನ ಕಾಪಾಡಿಕೊಳ್ಳಿ

ತೋಟ ವಿಸ್ತರಣೆ ಮಾಡದೇ ಅಡಕೆ ಮಾನ ಕಾಪಾಡಿಕೊಳ್ಳಿ

23election

ವಾಕ್ಸಮರದ ಮಧ್ಯೆ ಮತದಾನಕ್ಕೆ ದಿನಗಣನೆ

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

1-bbm

ಹಾನಗಲ್ ಜನರ ಪುರುಷಾರ್ಥಕ್ಕೆ ಪ್ರಣಾಳಿಕೆ ಮಾಡಿದ್ದೇವೆ : ಸಿಎಂ ತಿರುಗೇಟು

22model

ಯುರೋಪ್‌ ಮಾದರಿ ಕಸದ ವಿಲೇವಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.