ಬೆಂಗಳೂರು: ಹಾಡುಹಗಲೇ ಕಚೇರಿ ಮುಂದೆ ಮಾಜಿ ಕಾರ್ಪೊರೇಟರ್ ಭೀಕರ ಹತ್ಯೆ
Team Udayavani, Jun 24, 2021, 1:11 PM IST
ಬೆಂಗಳೂರು: ನಗರದಲ್ಲಿ ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆಯೊಬ್ಬರ ಹತ್ಯೆ ಮಾಡಲಾಗಿದೆ. ಕಚೇರಿ ಮುಂಭಾಗದಲ್ಲಿಯೇ ಮಾಜಿ ಕಾರ್ಪೊರೇಟರ್ ಹತ್ಯೆಯಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ ಎಂಬಲ್ಲಿ ಮಾಜಿ ಬಿಜೆಪಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ:‘ಯಾವ ಸಭೆಗೂ ನನ್ನನ್ನು ಕರೆಯಲ್ಲ’: ಎಂಎಲ್ ಸಿ ಭೋಜೇಗೌಡ ಏಕಾಂಗಿ ಪ್ರತಿಭಟನೆ
ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಹತ್ಯೆ ನಡೆದಿದೆ, ರೇಖಾ ಅವರು ಕಚೇರಿಯ ಒಳಗಿದ್ದರು. ಅವರನ್ನು ಹೊರಗಡೆ ಕರೆದ ದುಷ್ಕರ್ಮಿಗಳು ಅವರು ಬರುತ್ತಿದ್ದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ನೆಲಕ್ಕೆ ಬಿದ್ದ ರೇಖಾ ಅವರನ್ನು ಅಲ್ಲಿದ್ದವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅದಾಗಲೇ ರೇಖಾ ಕೊನೆಯುಸಿರೆಳಿದ್ದರು.
ರೇಖಾ ಅವರ ಪತಿ ಕದಿರೇಶ್ ರನ್ನು ಮುನೇಶ್ವರ ದೇವಸ್ಥಾನದ ಬಳಿ ಕೊಲೆ ಮಾಡಲಾಗಿತ್ತು. ಇದೀಗ ಪತ್ನಿಯ ಕೊಲೆ ಮಾಡಲಾಗಿದೆ. ಟೆಂಡರ್ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ