ಪಾಜೆಕ್ಟ್ ಕೊಡಿಸುವುದಾಗಿ ವಂಚನೆ; ಇಬ್ಬರ ಬಂಧನ


Team Udayavani, Feb 10, 2019, 6:34 AM IST

project.jpg

ಬೆಂಗಳೂರು: ಹೊಸದಾಗಿ ಕಾಲ್‌ ಸೆಂಟರ್‌ ಮತ್ತು ಔಟ್‌ ಸೋರ್ಸಿಂಗ್‌ ಕಂಪನಿ ತೆರೆದರೆ ಪ್ರತಿಷ್ಠಿತ ಕಂಪನಿಗಳಿಂದ ಪ್ರಾಜೆಕ್ಟ್ ಕೆಲಸಗಳನ್ನು ಕೊಡಿಸುತ್ತೇವೆ ಎಂದು ನಂಬಿಸಿ ಕೋಟ್ಯಂತರ ರೂ ಹಣ ಪಡೆದು ವಂಚಿಸಿದ್ದ ಇಂಜಿನಿಯರ್‌, ಹಾಗೂ ಆತನ ವಂಚನೆಗೆ ಸಾಥ್‌ ನೀಡುತ್ತಿದ್ದ ರೌಡಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿ ಗೌಡನಪಾಳ್ಯದ ನಿವಾಸಿ ದರ್ಶನ್‌ ಶ್ರೀರಾಮ್‌(32),  ಬಿಟಿಎಂ ಲೇಔಟ್‌ನ ಷಣ್ಮುಗ(46) ಬಂಧಿತರು. ಈ ವಂಚನೆಯಲ್ಲಿ ದರ್ಶನ್‌ ಪತ್ನಿ ನಿಖೀತಾ ಕೂಡ ಭಾಗಿಯಾಗಿದ್ದು ಆಕೆಯನ್ನು ವಿಚಾರಣೆ ನಡೆಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆರಿಕಾ ನೋಂದಣಿಯ “ಡಿಎನ್‌ಎಸ್‌ ಪ್ರೈಮ್‌’ ಹೆಸರಿನಲ್ಲಿ  2015ರಲ್ಲಿ ಕಂಪನಿ ತೆರೆದಿದ್ದ  ದರ್ಶನ್‌ ಹಾಗೂ ನಿಖೀತಾ,  ಬೆಂಗಳೂರು, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳಲ್ಲಿ ಹೊಸದಾಗಿ ಸಾಫ್ಟ್‌ವೇರ್‌, ಕಾಲ್‌ಸೆಂಟರ್‌, ಔಟ್‌ ಸೋರ್ಸಿಂಗ್‌ ಪ್ರೋಸೆಸಿಂಗ್‌ ಕಂಪನಿ ತೆರೆಯಲು ಬಯಸುವವರಿಗೆ ಇನ್‌ಫೋಸಿಸ್‌, ಎಚ್‌.ಪಿ, ಐಬಿಎಂ, ಒರ್‌ಸೆಲ್‌, ವಿಎಮ್‌ವೇರ್‌ ಸೇರಿ ಹಲವಾರು ಪ್ರತಿಷ್ಠಿತ ಕಂಪನಿಗಳ ಔಟ್‌ ಸೋರ್ಸಿಂಗ್‌ ಪ್ರಾಜೆಕ್ಟ್ ಕೊಡಿಸುವುದಾಗಿ ಹೇಳಿಕೊಂಡಿದ್ದರು.

ಈ ಜಾಹಿರಾತುಗಳನ್ನು ಗಮನಿಸಿದ್ದ ಕೆಲ ಟೆಕ್ಕಿಗಳು ಆರೋಪಿಗಳನ್ನು ಸಂಪರ್ಕಿಸಿದ್ದರು. ಅವರಿಂದ ಹಣ ಪಡೆದು, ಬಳಿಕ ಉದ್ದೇಶಪೂರ್ವಕಾಗಿ ಅವರ ಒಪ್ಪಂದ ರದ್ದುಗೊಳಿಸುತ್ತಿದ್ದರು. ಕಟ್ಟಿಸಿಕೊಂಡ ಹಣ ವಾಪಾಸ್‌ ನೀಡುತ್ತಿರಲಿಲ್ಲ.  ಇದುವರೆಗಿನ ತನಿಖೆಯಲ್ಲಿ ಆರೋಪಿಗಳು ಹತ್ತಕ್ಕೂ ಅಧಿಕ ಜನರಿಗೆ ಒಟ್ಟು 2.10 ಕೋಟಿ ರೂ.ವಂಚಿಸಿರುವುದು ಕಂಡು ಬಂದಿದೆ. ಆರೋಪಿಗಳಿಂದ 1 ಕಾರು, 1 ಲ್ಯಾಪ್‌ಟಾಪ್‌, ಕೆಲ ದಾಖಲೆಗಳನ್ನು  ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಯಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಇ ಮೇಲ್‌: ಪ್ರತಿಷ್ಠಿತ ಕಂಪನಿಗಳ ನಕಲಿ ಈ-ಮೇಲ್‌ ಐಡಿಗಳನ್ನು ತಾವೇ ಸೃಷ್ಟಿಸಿ ತಮ್ಮ ಗ್ರಾಹಕರಿಗೆ ಕಳುಹಿಸುತ್ತಿದ್ದರು. ಆರೋಪಿಗಳ ಮಾತು ನಂಬುತ್ತಿದ್ದ ಗ್ರಾಹಕರು ಹೊಸ ಕಾಲ್‌ ಸೆಂಟರ್‌ ತೆರೆಯುತ್ತಿದ್ದರು. ಕಂಪನಿಯ ಪ್ರಾಜೆಕ್ಟ್ ಕೊಡಿಸಲು ಲಕ್ಷಾಂತರ  ರೂ. ದುಡ್ಡನ್ನು ಪಡೆಯುತ್ತಿದ್ದರು. ನಕಲಿ ಪ್ರಾಜೆಕ್ಟ್ಗಳನ್ನು ಗ್ರಾಹಕರಿಗೆ ನೀಡಿದ ಎರಡು ತಿಂಗಳಲ್ಲಿಯೇ ಪ್ರಾಜೆಕ್ಟ್ ಕೆಲಸ ಸರಿಯಾಗಿ ಮಾಡಲಿಲ್ಲ ಎಂದು ಹೇಳಿ ಒಪ್ಪಂದ ಕಾಂಟ್ರಾಕ್ಟ್‌ನು° ರದ್ದು ಮಾಡುತ್ತಿದ್ದರು.

ಆದರೆ, ಗ್ರಾಹಕರಿಂದ ಹಣ ಹಿಂದಿರುಗಿಸುತ್ತಿರಲಿಲ್ಲ. ಹಣ ವಾಪಾಸ್‌ ನೀಡುವಂತೆ  ಒತ್ತಾಯಿಸಿದರೆ, ತಮ್ಮ ಪರಿಚಿತ ರೌಡಿ ಷಣ್ಮುಗ ಮೂಲಕ ಅವರಿಗೆ ಬೆದರಿಕೆ ಹಾಕಿಸುತ್ತಿದ್ದರು. ಇತ್ತೀಚೆಗೆ ತಮ್ಮ ಹಳೆ ಕಂಪನಿ ಮುಚ್ಚಿದ್ದ ಆರೋಪಿಗಳು ಫಾಕ್ಸ್‌ ರನ್‌ ಹೆಸರಿನ ಹೊಸ ನಕಲಿ ಕಂಪನಿ ತೆರೆದು ವಂಚಿಸಲು ಯತ್ನಿಸುತ್ತಿದ್ದರು ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

ಮಾಜಿ ಶಾಸಕರ ಹೆಸರು ಬಳಕೆ: ಆರೋಪಿ ನಿಖೀತಾ ಗಾಡ್ವೆ ಮಾಜಿ ಶಾಸಕರೊಬ್ಬರ  ಸಹೋದರಿ ಪುತ್ರಿಯಾಗಿದ್ದಾರೆ. ಹಲವು ವರ್ಷಗಳ ಹಿಂದೆ ದರ್ಶನ್‌ನನ್ನು ಪ್ರೀತಿಸಿ ವಿವಾಹವಾಗಿದ್ದರು. 2013ರವರೆಗೂ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್‌, ಆನ್‌ಲೈನ್‌ ಪೋರ್ಟಲ್‌ನಲ್ಲಿ ಕಂಪನಿ ನಡೆಸುತ್ತಿದ್ದ ಸಂಜಿತ್‌ ಬೋಹಾ ಎಂಬಾತನನ್ನು ಸಂಪರ್ಕಿಸಿ, ಹೊಸ ಕಾಲ್‌ ಸೆಂಟರ್‌ ಮತ್ತು ಔಟ್‌ ಸೋರ್ಸಿಂಗ್‌ ಕಂಪನಿ ತೆರೆಯಲು ಸಲಹೆ ಪಡೆದು ಅದರಂತೆ ಬೆಂಗಳೂರಿನಲ್ಲಿ ಐದಾರು ಕಂಪನಿ ಆರಂಭಿಸಿದ್ದ ಬಳಿಕ ಎಲ್ಲವನ್ನೂ ಮುಚ್ಚಿದ್ದಾನೆ. ಗ್ರಾಹಕರು ಹಣ ವಾಪಾಸ್‌ ಕೇಳಿದರೆ ಮಾಜಿ ಶಾಸಕರ ಸಂಬಂಧಿ ಗೊತ್ತಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಟಾಪ್ ನ್ಯೂಸ್

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

bgfjfg

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಆದೇಶ ಮರುಪರಿಶೀಲನೆಗೆ ಹೈಕೋರ್ಟ್‌ ಸೂಚನೆ

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಆದೇಶ ಮರುಪರಿಶೀಲನೆಗೆ ಹೈಕೋರ್ಟ್‌ ಸೂಚನೆ

ಸಿನಿಮಾ ನಟಿ ಮೇಲೆ ಹಲ್ಲೆ : ಮಾಜಿ ಪ್ರಿಯಕರ ಸೆರೆ

ಸಿನಿಮಾ ನಟಿ ಮೇಲೆ ಹಲ್ಲೆ : ಮಾಜಿ ಪ್ರಿಯಕರ ಸೆರೆ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಅನಧಿಕೃತ ವೈದ್ಯಕೀಯ ತರಬೇತಿ : ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೋಟಿಸ್

ಅನಧಿಕೃತ ವೈದ್ಯಕೀಯ ತರಬೇತಿ : ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೋಟಿಸ್

ಗ್ರಾಹಕರ ಕೈ ಸುಡುತ್ತಿರುವ ಬೀನ್ಸ್‌, ಟೊಮ್ಯಾಟೋ, ಕೊತ್ತಂಬರಿ!

ಗ್ರಾಹಕರ ಕೈ ಸುಡುತ್ತಿರುವ ಬೀನ್ಸ್‌, ಟೊಮ್ಯಾಟೋ, ಕೊತ್ತಂಬರಿ!

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

bgfjfg

ರಾಜ್ಯೋತ್ಸವ ಹತ್ತಿರಕ್ಕೆ ಬಂದ ವೇಳೆ ಎಂಇಎಸ್ ಪುಂಡಾಟಿಕೆ ಶುರು ಮಾಡಿದೆ : HDK

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.