Udayavni Special

ರಾಜವಂಶಸ್ಥರ ಸಂಬಂಧಿ ಹೆಸರಲ್ಲಿ ವಂಚನೆ

ಮೂವರು ಯುವತಿಯರಿಗೆ 42 ಲಕ್ಷ ರೂ. ವಂಚನೆ! ­ ಮೈಕ್ರೋಸಾಫ್ಟ್ ಎಂಜಿನಿಯರ್‌ ಎಂದು ನಂಬಿಸಿದ್ದ

Team Udayavani, Jul 13, 2021, 1:59 PM IST

cats

ಬೆಂಗಳೂರು: ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಎಂಜಿನಿಯರ್‌, ಮೈಸೂರು ರಾಜವಂಶಸ್ಥರ ಸಂಬಂಧಿ ಎಂದು ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ತೆರೆದು ಪರಿಚಯಸ್ಥ ಯುವತಿಯರಿಗೆ ಸ್ಪಾನಿಷ್‌, ಅಮೆರಿಕನ್‌ ಇಂಗ್ಲಿಷ್‌ನಲ್ಲಿ ಮಾತನಾಡಿ ಯುವತಿಯರಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಮೈಸೂರು ಮೂಲದ ಖತರ್ನಾಕ್‌ ವಂಚಕ ವೈಟ್‌ಫೀಲ್ಡ್‌ ಸೆನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟೌನ್‌ನ ಲಕ್ಷ್ಮೀಪುರ ನಿವಾಸಿ ಕೆ.ಸಿದ್ದಾರ್ಥ್ ಅಲಿಯಾಸ್‌ ಸಿದ್ದಾರ್ಥ್ ಅರಸ್‌, ಅಲಿ ಯಾಸ್‌ ಸ್ಯಾಂಡಿ ಅಲಿಯಾಸ್‌ ವಿನಯ್‌ ಅಲಿಯಾಸ್‌ ಮುತ ¤(33) ಬಂಧಿತ. ಆತನಿಂದ ಮೂರು ಐ-ಫೋ ನ್‌ಗಳು, ಆರು ಬ್ಯಾಂಕ್‌ಗಳ ಡೆಬಿಟ್‌ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ‌ ವಿರುದ್ಧ ವೈಟ್‌ಫೀಲ್ಡ್, ಈಶಾನ್ಯ ಮತ್ತು ದಕ್ಷಿಣ ವಿಭಾಗ ಸೆನ್‌ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರ‌ಣಗಳು ದಾಖಲಾಗಿದ್ದು, ಮೂವರು ಯುವ‌ತಿಯರಿಗ ೆ ಮದುವೆಯಾಗುವುದಾಗಿ ನಂಬಿಸಿ, ಅವರಿಂದ ‌ ವೈದ್ಯಕೀಯ, ವೈಯಕ್ತಿಕ ಕಾರಣಗಳ ‌ನ್ನು ನೀಡಿ ಬರೋಬರಿ 42 ಲಕ್ಷ ರೂ. ವಂಚಿಸಿದ್ದಾನೆ. ಸುಮಾರು ಎರಡು ವರ್ಷಗ ‌ಳಿಂದ ಕೃತ್ಯ ಎಸಗುತ್ತಿರುವ ‌ ಆರೋಪಿ ಇನ್ನಷ್ಟು ಮಹಿಳೆಯರು, ಯುವ‌ತಿಯರಿಗೆ ವಂಚಿಸುತ್ತಿರುವ ಮಾಹಿತಿ ಸಿಕ್ಕಿದ್ದು, ಸೆನ್‌ ಠಾಣೆಯ ಇನ್‌ಸ್ಪೆಕ್ಟರ್‌ ಜಿ.ಗುರು ಪ್ರಸಾದ್‌, ಪಿಎಸ್‌ಐ ನವೀನ್‌ ಕುಮಾರ್ ನೇತೃತ್ವದ ತಂಡ ‌ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ಮುಂದುವ‌ರಿಸಲಾಗಿದೆ ಎಂದು ವೈಟ್‌ ಫೀಲ್ಡ್‌ ಡಿಸಿಪಿ ಡಿ. ದೇವ‌ರಾಜ್‌ ತಿಳಿಸಿದರು.

ಬೈಲಕುಪ್ಪೆಯ ಲಕ್ಷ್ಮೀಪುರದ ಟೆಷಿಲಂ ಮುನಷ್ಟ್ರೀ ಟೆಂಪಲ್‌ನ ಟಿಬೆಟಿಯನ್‌ ಕ್ಯಾಂಪ್‌ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ, ಮಗನ ಜತೆ ವಾಸವಾಗಿ ರುವ ಆರೋಪಿ, ಏಳನೇ ತರಗತಿ ಫೇಲ್‌ ಆಗಿದ್ದು, ಟೂರಿಸ್ಟ್‌ ಗೈಡ್‌ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಮೈಸೂರು, ಟಿಬೆಟಿಯನ್‌ ಕ್ಯಾಂಪ್‌ನ ಪ್ರವಾಸಿ ತಾಣ ಗಳಿಗೆ ಬರುವ ವಿದೇಶಿಯರು, ನೆರೆ ರಾಜ್ಯಗಳ ಜನರ ಪ್ರೋತ್ಸಾಹ ಹಾಗೂ ಯುಟ್ಯೂಬ್‌ ಚಾಲನ್‌ಗಳ ಮೂಲಕ ಸ್ಪ್ಯಾನಿಷ್‌, ಯುಎಸ್‌ ಇಂಗ್ಲಿಷ್‌, ತಮಿಳು, ಕೂರ್ಗ್‌, ಮಲೆಯಾಳಂ, ಟಿಬಿಟಿಯನ್‌ ಸೇರಿ ಸುಮಾರು ಹತ್ತಕ್ಕೂ ಹೆಚ್ಚು ಭಾಷೆಗಳನ್ನು ಕರಗತ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು.

ವಂಚನೆಗಾಗಿ ಯುಟ್ಯೂಬ್‌ ಶೋಧ: ವಂಚನೆಯ ಬಗ್ಗೆ ತಿಳಿಯಲು ಯುಟ್ಯೂಬ್‌ನಲ್ಲಿ “ನೈಜಿರಿಯಾ ಫ್ರಾರ್ಡ್‌ ಹಾಗೂ ಇತರೆ ವಂಚನೆ’ಗಳ ಬಗ್ಗೆ ಶೋಧಿಸಿ ದ್ದಾನೆ. ಈ ವೇಳೆ ಇಂಟರ್‌ನ್ಯಾಷನಲ್‌ ಸಿಮ್‌ಕಾರ್ಡ್‌ ಖರೀದಿ, ನೆಟ್‌ವರ್ಕ್‌ ಹೇಗೆ ಪಡೆಯಬೇಕೆಂದೆಲ್ಲ ತಿಳಿದುಕೊಂಡಿದ್ದಾನೆ. ಬಳಿಕ ತಾನೂ ಗೈಡ್‌ ಆಗಿ ಗಳಿ ಸಿದ ಹಣದಲ್ಲಿ ಐ-ಫೋನ್‌ಗಳು, ಇಂಟರ್‌ನ್ಯಾಷನಲ್‌ ಸಿಮ್‌ಕಾರ್ಡ್‌ಗಳನ್ನು ಖರೀದಿಸಿದ್ದಾನೆ ಎಂದು ಪೊಲೀ ಸರು ಮಾಹಿತಿ ನೀಡಿದರು.

ರಾಜಮನೆತನ ಹೆಸರು ದುರ್ಬಳಕೆ: ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಎಂಜಿನಿಯರ್‌ ಆಗಿ ಕೆಲಸ ಮಾಡು ತ್ತಿದ್ದು, ತಾನೂ ಮೈಸೂರು ರಾಜವಂಶಸ್ಥರ ಸಂಬಂಧಿ “ಸಿದ್ಧಾರ್ಥ್ ಅರಸ್‌’ ಹಾಗೂ “ಸ್ಯಾಂಡಿ, ವಿನಯ್‌’ ಎಂಬ ಹೆಸರಿನಲ್ಲಿ ಕನ್ನಡ, ಸಂಗಮ್‌ ಮ್ಯಾಟ್ರಿಮೋನಿ ಯಲ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿದ್ದಾನೆ.

ವೆಬ್‌ಸೈ ಟ್‌ನಲ್ಲಿ ಆಯ್ದ ಯುವತಿಯರಿಗೆ ರಿಕ್ವೆಸ್ಟ್‌ ಕಳುಹಿಸಿ, ಮದುವೆಯಾಗುವುದಾಗಿ ನಂಬಿಸುತ್ತಿದ್ದ. ಬಳಿಕ ಮೈಸೂರು ರಾಜವಂಶಸ್ಥರ ಸಂಬಂಧಿ ಎಂದು ನಂಬಿ ಸಲು, ಗೂಗಲ್‌ನಲ್ಲಿ ರಾಜವಂಸ್ಥ ಕುಟುಂಬದವರ ಫೋಟೋಗಳನ್ನು ಡೌನ್‌ಲೋಡ್‌ ಮಾಡಿ, ಅವರ ಜತೆ ಬಾಲ್ಯ ಕಳೆದಿರುವ ಹಾಗೇ ಚಿಕ್ಕವಯಸ್ಸಿನ ಹುಡುಗನ ಫೋಟೋಗಳನ್ನು ಯುವತಿಯರಿಗೆ ಪ್ರತ್ಯೇಕವಾಗಿ ಕಳುಹಿಸಿ ನಂಬಿಸುತ್ತಿದ್ದ. ನಂತರ ಅವರೊಂದಿಗೆ ವಾಟ್ಸ್‌ ಆ್ಯಪ್‌ ಹಾಗೂ ಇಂಟರ್‌ನ್ಯಾಷನಲ್‌ ಕಾಲ್‌ ಮಾಡಿ, ತಾನೂ ಅಮೆರಿಕಾದಿಂದ ಮಾತನಾಡುತ್ತಿದ್ದೇನೆ ಎಂದು ಅವರೊಂದಿಗೆ ಸ್ಪಾನಿಷ್‌, ಯುಎಸ್‌ ಇಂಗ್ಲಿಷ್‌ನಲ್ಲಿ ಮಾತನಾಡಿ ನಂಬಿಸುತ್ತಿದ್ದ. ಕೆಲ ದಿನಗಳ ಬಳಿಕ ವೈದ್ಯಕೀಯ ಕಾರಣ ಮತ್ತು ವೈಯಕ್ತಿಕ ಕಾರಣಗಳನ್ನು ನೀಡಿ ತುರ್ತು ಹಣ ಬೇಕಾ ಗಿದೆ, ಅಮೆರಿಕಾದಿಂದ ಬಂದ ಬಳಿಕ ಕೊಡುವುದಾಗಿ ನಂಬಿಸಿ ತನ್ನ ಹಾಗೂ ತನ್ನ ಸ್ನೇಹಿತರ ಖಾತೆಗಳಿಗೆ (ಯಾವುದೋ ಹಣ ಬರುತ್ತದೆ ಎಂದು ಸ್ನೇಹಿತರಿಗೆ ಸುಳ್ಳು ಹೇಳಿ)ಹಂತ-ಹಂತವಾಗಿ ಹಣ ಹಾಕಿಸಿಕೊಳ್ಳು ತ್ತಿದ್ದ. ಬಳಿಕ ಯುವತಿಯರ ನಂಬರ್‌ ಬ್ಲ್ಯಾಕ್‌ ಮಾಡು ತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

Parliament disrupted to protect interest of one family: Ravi Shankar Prasad attacks Congress on Pegasus row

ಒಂದು ಕುಟುಂಬದ ಹಿತಾಸಕ್ತಿಗಾಗಿ ಸಂಸತ್ ಕಾರ್ಯ ನಿರ್ವಹಿಸುವುದಿಲ್ಲ : ರವಿಶಂಕರ್ ಪ್ರಸಾದ್

ಆಗುಂಬೆ: ಪ್ರಪಾತದತ್ತ ನುಗ್ಗಿದ ಟ್ರಕ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ದುರಂತ

ಆಗುಂಬೆ: ಪ್ರಪಾತದತ್ತ ನುಗ್ಗಿದ ಟ್ರಕ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ದುರಂತ

ದಾಂತೇವಾಡ: ನಕ್ಸಲೀಯರಿಂದ ಎಸ್ ಯುವಿ ಕಾರು ಸ್ಫೋಟ; ಮಹಿಳೆ ಸೇರಿ 12 ಮಂದಿಗೆ ಗಾಯ

ದಾಂತೇವಾಡ: ನಕ್ಸಲೀಯರಿಂದ ಎಸ್ ಯುವಿ ಕಾರು ಸ್ಫೋಟ; ಮಹಿಳೆ ಸೇರಿ 12 ಮಂದಿಗೆ ಗಾಯ

zero commission marketplace by flipkart

ಶೂನ್ಯ-ಕಮೀಷನ್ ಮಾರ್ಕೆಟ್ ಪ್ಲೇಸ್ ಪರಿಚಯಿಸಿದ ಫ್ಲಿಪ್ ಕಾರ್ಟ್

vijayendra

ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ… ವರುಣಾ ಕ್ಷೇತ್ರದ ಮೇಲೆ ಕಣ್ಣಿಟ್ಟ ವಿಜಯೇಂದ್ರ

surathkal

ಶಿಕ್ಷಕಿಯ ಕರಿಮಣಿ ಸರ ಸೆಳೆದು ಪರಾರಿಯಾದ ಯುವಕ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಆರೋಪಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hotel

ಹೋಟೆಲ್‌ ಉದ್ಯಮಕ್ಕೆ ಆರ್ಥಿಕ ಹೊಡೆತ

wORK

ಆಸ್ಪತ್ರೆ ಸುತ್ತ ಕಾಮಗಾರಿ ಸದ್ದು

Swami-ShraddhanandA

ಸ್ವಾಮಿ ಶ್ರದ್ಧಾನಂದ: ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಮನವಿ

kaml-panth

ಜೋನ್‌ ಸಾವು ಲಾಕಪ್‌ ಡೆತ್‌ ಅಲ್ಲ; ಬಂಧಿತ ಐವರಲ್ಲಿ ಒಬ್ಬ ಡ್ರಗ್ಸ್‌ ವ್ಯಸನಿ

yghy-]

ಕೋವಿಡ್ : ರಾಜ್ಯದಲ್ಲಿಂದು 1674 ಪಾಸಿಟಿವ್ ಪ್ರಕರಣ ಪತ್ತೆ; 38 ಜನರು ಸಾವು

MUST WATCH

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

udayavani youtube

ಪಾಕಿಸ್ತಾನ ಹಿಂದೂ ದೇವಾಲಯದ ಮೇಲೆ ದಾಳಿ , ಧ್ವಂಸ !

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

ಹೊಸ ಸೇರ್ಪಡೆ

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ

ghykjh

ಶಂಕರಗೆ ಪೇಡಾ; ಬೆಲ್ಲದಗೆ ಬೇವು

Parliament disrupted to protect interest of one family: Ravi Shankar Prasad attacks Congress on Pegasus row

ಒಂದು ಕುಟುಂಬದ ಹಿತಾಸಕ್ತಿಗಾಗಿ ಸಂಸತ್ ಕಾರ್ಯ ನಿರ್ವಹಿಸುವುದಿಲ್ಲ : ರವಿಶಂಕರ್ ಪ್ರಸಾದ್

ಆಗುಂಬೆ: ಪ್ರಪಾತದತ್ತ ನುಗ್ಗಿದ ಟ್ರಕ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ದುರಂತ

ಆಗುಂಬೆ: ಪ್ರಪಾತದತ್ತ ನುಗ್ಗಿದ ಟ್ರಕ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ದುರಂತ

ದಾಂತೇವಾಡ: ನಕ್ಸಲೀಯರಿಂದ ಎಸ್ ಯುವಿ ಕಾರು ಸ್ಫೋಟ; ಮಹಿಳೆ ಸೇರಿ 12 ಮಂದಿಗೆ ಗಾಯ

ದಾಂತೇವಾಡ: ನಕ್ಸಲೀಯರಿಂದ ಎಸ್ ಯುವಿ ಕಾರು ಸ್ಫೋಟ; ಮಹಿಳೆ ಸೇರಿ 12 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.