ಮದ್ಯದ ಅಮಲಿನಲ್ಲಿ ಸ್ನೇಹಿತನ ತಲೆ ಮೇಲೆ ಹಾಲೊಬ್ರಿಕ್ಸ್ ಎತ್ತಿ ಹಾಕಿ ಕೊಲೆ
Team Udayavani, Aug 21, 2021, 8:22 AM IST
ಬೆಂಗಳೂರು: ಮದ್ಯ ಸೇವನೆ ಅಮಲಿನಲ್ಲಿ ಸ್ನೇಹಿತನ ತಲೆ ಮೇಲೆ ಹಾಲೊ ಬ್ರಿಕ್ಸ್ (ಇಟ್ಟಿಗೆ) ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡಿ.ಜೆ. ಹಳ್ಳಿಯ ಶ್ರೀನಿವಾಸನಗರ ನಿವಾಸಿ ನಿತೇಶ್ (32 ವ) ಕೊಲೆಯಾದ ವ್ಯಕ್ತಿ.ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಪ್ರಶಾಂಶ್ (24 ವ) ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ನಿತೇಶ್, ಆರೋಪಿ ಪ್ರಶಾಂತ್ ಬಾಲ್ಯ ಸ್ನೇಹಿತರಾಗಿದ್ದು, ಗುರುವಾರ ತಡರಾತ್ರಿಇಬ್ಬರು ಡಿ.ಜೆ. ಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಮದ್ಯ ಸೇವನೆ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮೃತ ನಿತೇಶ್ ಹಾಗೂ ಆರೋಪಿ ಪ್ರಶಾಂತ್ ನಡುವೆ ಜಗಳ ನಡೆದಿದೆ. ಪ್ರಶಾಂತ್‌ಗೆ ನಿತೇಶ್ ಕಾಲಿನಿಂದ ಒದ್ದಿದ್ದಾನೆ. ಹೀಗೆ ಇಬ್ಬರ ನಡುವೆ ಜಗಳವಾದ ಬಳಿಕ, ಇಬ್ಬರೂ ಕಟ್ಟಡದಲ್ಲೇ ಮಲಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡ ಆರೋಪಿ ಪ್ರಶಾಂತ್, ಕಾಲಿನಿಂದ ಸ್ನೇಹಿತ ಒದ್ದಿರುವುದಕ್ಕೆ ಆಕ್ರೋಶಗೊಂಡು ಕಟ್ಟಡದಲ್ಲಿ ಕಾಮಗಾರಿಗಾಗಿ ಇಟ್ಟಿದ್ದ ಹಾಲೊ ಬ್ರಿಕ್ಸ್ (ಸಿಮೆಂಟ್ ಇಟ್ಟಿಗೆ) ತೆಗೆದು ಕೊಂಡು ನಿತೇಶ್ ತಲೆಯ ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಮನೆ ಮನೆಗೆ ನುಗ್ಗಿ ಹತ್ಯೆ : ಪತ್ರಕರ್ತರು, ಸರಕಾರಿ ಅಧಿಕಾರಿಗಳು ತಾಲಿಬಾನ್ ಗುರಿ
ತಡರಾತ್ರಿ 1 ಗಂಟೆ ಸುಮಾರಿಗೆ ಜಗಳದ ಶಬ್ದ ಕೇಳಿ ಕಟ್ಟಡದ ಅಕ್ಕಪಕ್ಕದ ನಿವಾಸಿಗಳು, ಡಿ.ಜೆ. ಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಗ ನಿತೇಶ್‌ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಪ್ರಶಾಂತ್ ನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸ್ಕೆಟ್ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್
ಕ್ರಿಕೆಟ್ ಬೆಟ್ಟಿಂಗ್: ಸಾಲ ತೀರಿಸಲು ಬೈಕ್ ಕಳ್ಳತನ; ಆರೋಪಿ ಬಂಧನ
ಶಾಲೆ ಬಳಿ ಸಾರಿ.. ಸಾರಿ.. ಬರಹ: ಮುನಿಸಿಕೊಂಡ ಪ್ರಿಯತಮೆಯ ಓಲೈಕೆಗೆ ಪಾಗಲ್ ಪ್ರೇಮಿಯ ಕೃತ್ಯ?
ಶೋಕಿ ಜೀವನಕ್ಕಾಗಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ; ಮೂವರ ಬಂಧನ
ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!