Udayavni Special

ಉಗ್ರ ಕಟ್ಟೆಚ್ಚರ; ಸ್ವಾತಂತ್ರ್ಯೋತ್ಸವಕ್ಕೆ ಭಯೋತ್ಪಾದಕರ ಕರಿನೆರಳು


Team Udayavani, Aug 9, 2018, 6:00 AM IST

ban09081803medn-black-revised.jpg

ಬೆಂಗಳೂರು: ರಾಮನಗರ ಮತ್ತು ಬೆಂಗಳೂರಿನಲ್ಲಿ ಇಬ್ಬರು ಜಮಾತ್‌-ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರರನ್ನು ರಾಷ್ಟ್ರೀಯ ತನಿಖಾ ತಂಡಗಳು ಬಂಧಿಸಿದ್ದು ಅವರು ನೀಡಿರುವ ಮಾಹಿತಿ ಆಧಾರದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಉಗ್ರರ ಕರಿನೆರಳು ಇರುವುದು ಖಚಿತವಾಗಿದೆ.  ಆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಷ್ಟ್ರದ ಪ್ರಮುಖ ನಗರಗಳಲ್ಲಿ  ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

ಇದರ ಬೆನ್ನಿಗೇ, ಸೆರೆಸಿಕ್ಕ ಜೆಎಂಬಿ ಸದಸ್ಯರ ಇತರ ಸಹಚರರು ತಲೆಮರೆಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿರುವ ನೀಲಮಣಿ ಎನ್‌ ರಾಜು ಅವರು ಮಹಾನಗರಗಳ ಪೊಲೀಸ್‌ ಆಯುಕ್ತರು, ವಲಯ ಐಜಿಪಿಗಳು, ಜಿಲ್ಲಾ ಎಸ್‌ಪಿಗಳು ಸೇರಿದಂತೆ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಗುರುವಾರ ನಡೆಸಲಿದ್ದಾರೆ. ಸಭೆಯಲ್ಲಿ ಉಗ್ರಗಾಮಿ ಚಟುವಟಿಕೆ ಮತ್ತು ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಉಗ್ರ ಚಟುವಟಿಕೆ ನಿಗ್ರಹ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಧಾನ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಚರ್ಚ್‌ ಸ್ಟ್ರೀಟ್‌, ಮೈಸೂರು ಕೋರ್ಟ್‌ ಬಾಂಬ್‌ ಸ್ಫೋಟ ಘಟನೆ ಬಳಿಕ ರಾಜ್ಯದಲ್ಲಿ ಉಗ್ರರ ಸ್ಲಿàಪರ್‌ ಸೆಲ್‌ಗ‌ಳು ನಿಷ್ಕ್ರಿಯಗೊಂಡಿವೆ ಎಂದೇ ಭಾವಿಸಿದ್ದ ಪೊಲೀಸ್‌ ಇಲಾಖೆಗೆ ಇದೀಗ ರಾಜಧಾನಿಯ ಸಮೀಪದ ರಾಮನಗರದಲ್ಲಿಯೇ ಮೋಸ್ಟ್‌ ವಾಂಟೆಂಡ್‌ ಉಗ್ರನ ಬಂಧನವಾಗಿರುವುದು ಪೊಲೀಸ್‌ ಆತಂಕಕ್ಕೆ ಕಾರಣವಾಗಿದೆ. 

ರಾಜ್ಯದಲ್ಲಿ  ಉಗ್ರ ಸಂಘಟನೆಗಳ ಸ್ಲಿàಪರ್‌ ಸೆಲ್‌ಗ‌ಳು ಇನ್ನೂ ಬೇರುಬಿಟ್ಟಿವೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ರಾಜ್ಯ ಗುಪ್ತಚರ ಇಲಾಖೆ ಮತ್ತು ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಕ್ರಮ ಕೈಗೊಂಡಿವೆ.  ಆಯಾ ಜಿಲ್ಲೆಗಳಲ್ಲಿ ಅನುಮಾನಾಸ್ಪದ ಹಾಗೂ ಅಕ್ರಮವಾಗಿ ವಾಸವಾಗಿರುವ ವಲಸಿಗರ ಮೇಲೆ ನಿಗಾ ಇಡುವಂತೆಯೂ ಸಂದೇಶ ರವಾನಿಸಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಮೈಸೂರು, ಮಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳು ಹಾಗೂ ಪಾರಂಪರಿಕ ಸೌಧಗಳ ಬಳಿ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ಕಲ್ಪಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

ತಮಿಳುನಾಡಿಗೆ ತಂಡ ಭೇಟಿ! 
ಅಲ್‌ಖೈದಾ  ಸಂಘಟನೆಯ ಭಾರತೀಯ ಅಂಗ ಸಂಸ್ಥೆ ಎಕ್ಯೂಐಎಸ್‌ (ಅಲ್‌ಖೈದಾ ಇಂಡಿಯನ್‌ ಸಬ್‌ ಕಾಂಟಿನೆಂಟ್‌) ಹಾಗೂ ಅಲ್‌ -ಮುತ್ತಕೀನ್‌ – ಫೋರ್ಸ್‌ (ಎಎಂಎಫ್) ಸಂಘಟನೆಗಳು ಸದ್ದಿಲ್ಲದೆ ಕಾರ್ಯಚಟುವಟಿಕೆ ನಡೆಸುತ್ತಿರುವ ಬಗ್ಗೆ  ಮೈಸೂರು ಕೋರ್ಟ್‌ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ವೇಳೆ ಎನ್‌ಐಎ ಬಯಲಿಗೆಳೆದಿತ್ತು. ಇದೀಗ, ಜೆಎಂಬಿ ಉಗ್ರರ ಬಂಧನದ ಬಳಿಕ ಮತ್ತಷ್ಟು ಎಚ್ಚೆತ್ತುಕೊಂಡಿರುವ ಗುಪ್ತಚರ ದಳ ರಾಜ್ಯದಲ್ಲಿ ಉಗ್ರ ಸಂಘಟನೆಗಳ ಸ್ಲಿàಪರ್‌ ಸೆಲ್‌ಗ‌ಳ ಮೂಲ ಹುಡುಕಲು ಮುಂದಾಗಿದೆ.

ತಮಿಳುನಾಡಿನ ಕೊಯಮುತ್ತೂರು ಮೂಲದ ಅಲ್‌ -ಮುತಾಕಿನ್‌ ಫೋರ್ಸ್‌ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಅಲ್ಲದೆ, ಈ ಬಗ್ಗೆ ತಮಿಳುನಾಡಿನ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿ ಪತ್ರ ಬರೆದಿದೆ. ಅಲ್ಲದೆ, ಸದ್ಯದಲ್ಲಿಯೇ ಗುಪ್ತಚರ ದಳದ ತಂಡವೊಂದು ತಮಿಳುನಾಡಿಗೆ ತೆರಳಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ ಎಂದು ಉನ್ನತ ಮೂಲಗಳು ಉದಯವಾಣಿಗೆ ತಿಳಿಸಿವೆ.

– ಮಂಜುನಾಥ ಲಘುಮೇನಹಳ್ಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತೆವಾತಿಯಾ: ದುರದೃಷ್ಟ , ಅದೃಷ್ಟ ಮತ್ತು ತಾರಾಪಟ್ಟ!

ತೆವಾತಿಯಾ: ದುರದೃಷ್ಟ , ಅದೃಷ್ಟ ಮತ್ತು ತಾರಾಪಟ್ಟ!

ಸೋತು ಹೈರಾಣಾದ ಹೈದರಾಬಾದ್‌ಗೆ ಅಜೇಯ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು

ಸೋತು ಹೈರಾಣಾದ ಹೈದರಾಬಾದ್‌ಗೆ ಅಜೇಯ ಡೆಲ್ಲಿ ಕ್ಯಾಪಿಟಲ್ಸ್‌ ಸವಾಲು

ಏಳು ತಾರೆಯರಿಗೆ ಡ್ರಗ್ಸ್‌ ಸಮನ್ಸ್‌?

ಏಳು ತಾರೆಯರಿಗೆ ಡ್ರಗ್ಸ್‌ ಸಮನ್ಸ್‌?

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮದುವೆ ಸಮಾರಂಭ! ಭಾವುಕಳಾದ ವಧು

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

ಎಸ್ಪಿಬಿಯ ಆಸ್ಪತ್ರೆ ಖರ್ಚು ಪಾವತಿಯ ಗಾಳಿಸುದ್ದಿ: ಪುತ್ರ ಚರಣ್‌ ಅಸಮಾಧಾನ

Padikkal-ABD

ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರತಾಪ ಗೌಡ ಪರ ಹೈಕೋರ್ಟ್‌ ತೀರ್ಪು

ಪ್ರತಾಪ ಗೌಡ ಪರ ಹೈಕೋರ್ಟ್‌ ತೀರ್ಪು

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು

ಮಂತ್ರಾಲಯ ವಿದ್ಯಾಪೀಠದ ಮಕ್ಕಳ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

ಮಂತ್ರಾಲಯ ವಿದ್ಯಾಪೀಠದ ಬಾಲಕನ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

madhu

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಗೂ ಕೋವಿಡ್ ಸೋಂಕು ದೃಢ!

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

ಮೋದಿ ಇರೋದರಿಂದ ನಾವಿದ್ದೇವೆ! ಬಂದ್ ಮಾಡಲು ಬಂದ ರೈತ ಮುಖಂಡರಿಗೆ ವೃದ್ಧ ವ್ಯಾಪಾರಿಯ ತಿರುಗೇಟು

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

ಉಡುಪಿ ಪ್ರವಾಹದಿಂದ ಕಲಿಯುವುದೇನು

ಉಡುಪಿ ಪ್ರವಾಹದಿಂದ ಕಲಿಯುವುದೇನು

ತ್ಯಾಜ್ಯಮಯವಾಗಿರುವ ಹೆಜಮಾಡಿ ಬಂದರು ಪ್ರದೇಶ

ತ್ಯಾಜ್ಯಮಯವಾಗಿರುವ ಹೆಜಮಾಡಿ ಬಂದರು ಪ್ರದೇಶ

ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆ: ಸುಕುಮಾರ್‌ ಶೆಟ್ಟಿ

ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆ: ಸುಕುಮಾರ್‌ ಶೆಟ್ಟಿ

20 ಕೆ.ಜಿ ಗಾಂಜಾ ಜಪ್ತಿ : ಇಬ್ಬರು ವಶಕ್ಕೆ

20 ಕೆ.ಜಿ ಗಾಂಜಾ ಜಪ್ತಿ : ಇಬ್ಬರು ವಶಕ್ಕೆ

ಚಿಕ್ಕಬಳ್ಳಾಪುರ ಜಿಪಂ ಸಿಇಓ ಬಿ.ಫೌಝೀಯಾ ತರುನ್ನುಮ್ ವರ್ಗಾವಣೆ,ಸಾರ್ವಜನಿಕರ ಅಸಮಾಧಾನ

ಚಿಕ್ಕಬಳ್ಳಾಪುರ ಜಿಪಂ ಸಿಇಓ ಬಿ.ಫೌಝೀಯಾ ತರುನ್ನುಮ್ ವರ್ಗಾವಣೆ,ಸಾರ್ವಜನಿಕರ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.