ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆ: ಉಸಿರುಗಟ್ಟಿ ತಾಯಿ – ಮಗು ಸಾವು
Team Udayavani, Jan 16, 2022, 5:39 PM IST
ಬೆಂಗಳೂರು: ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆ ಉಸಿರುಗಟ್ಟಿ ತಾಯಿ- ಮಗು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ನಡೆದಿದೆ.
ತಾಯಿ ಮಂಗಳ(35) ಮಗು ಗೌತಮಿ (07) ಮೃತರು.
ಗ್ಯಾಸ್ ಗೀಜರ್ ಬಳಸಿ ಸ್ನಾನ ಮಾಡುವಾಗ, ಗೀಜರ್ ಅನಿಲ ಸೋರಿಕೆಯಾಗಿ ತಾಯಿ- ಮಗುವಿಗೆ ಉಸಿರುಗಟ್ಟಿ ಈ ಘಟನೆ ಸಂಭವಿಸಿದ್ದು, ಮನೆ ಮಾಲೀಕೆ ಗಾಯಿತ್ರಿ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಪತಿ ನರಸಿಂಹಮೂರ್ತಿ ಕೆಲಸಕ್ಕೆ ತೆರಳಿದ್ದಾಗ ಈ ಅವಘಡ ನಡೆದಿದೆ ಎನ್ನಲಾಗಿದ್ದು, ನರಸಿಂಹಮೂರ್ತಿ ದಂಪತಿ 15 ವರ್ಷದ ಹಿಂದೆ ರಾಮನಗರದಿಂದ ಬಂದು ನಗರದಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಂಗಳೂರು : ಶಾಪಿಂಗ್ ಮಾಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು
ಯಾರು ಭ್ರಷ್ಟರು, ಯಾರು ಭ್ರಷ್ಟರಲ್ಲ ಎಂದು ಜನರಿಗೆ ಗೊತ್ತಿದೆ : ಸಿಎಂ ಬೊಮ್ಮಾಯಿ
ಯಾವುದೇ ಸೌಲಭ್ಯ ನೀಡದೆ 11 ಸಾವಿರ ಬಿಸಿಯೂಟ ನೌಕರರ ವಜಾ : ಸರಕಾರದ ನಿರ್ಧಾರಕ್ಕೆ ಡಿಕೆಶಿ ಗರಂ
ಸಾಯಿ ಲೇಔಟ್ ನಿವಾಸಿಗಳಿಗೆ ಭವಿಷ್ಯದ ಚಿಂತೆ
ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿ.. ಜೈಲಿಗೆ ಹೋದ ಭಾಮೈದುನ