ವಿಮಾನದಲ್ಲಿ ಬಂದು ಕಳ್ಳತನ ಮಾಡಿ ರೈಲಲ್ಲಿ ಹೋಗ್ತಾರೆ!

ರಾಜಧಾನಿಯಲ್ಲಿ ಬವಾರಿಯಾ ಗ್ಯಾಂಗ್‌ ಸಕ್ರಿಯ ; ಕದ್ದ ಬೈಕ್‌ನಲ್ಲಿ ಸರ ಕಳವು ಮಾಡುವುದೇ ಇವರ ಕಸುಬು

Team Udayavani, Aug 28, 2021, 2:50 PM IST

ವಿಮಾನದಲ್ಲಿ ಬಂದು ಕಳ್ಳತನ ಮಾಡಿ ರೈಲಲ್ಲಿ ಹೋಗ್ತಾರೆ!

ಸಾಂದರ್ಭಿಕ ಚಿತ್ರ.

ಬೆಂಗಳೂರು: ವಿಮಾನದಲ್ಲಿ ಬಂದುಕಪ್ಪು ಬಣ್ಣದ ಪಲ್ಸರ್‌ ಬೈಕ್‌ಗಳನ್ನು ಕಳ್ಳತನ ಮಾಡ್ತಾರೆ. ನಂತರ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರಗಳನ್ನು ದೋಚಿ ರೈಲಿನಲ್ಲಿ ಪರಾರಿ ಯಾಗುತ್ತಾರೆ!

ಇದು ಉತ್ತರ ಪ್ರದೇಶ ಮೂಲದ ಬುಡಕಟ್ಟು ಸಮುದಾಯದ “ಬವಾರಿಯಾ’ ಗ್ಯಾಂಗ್‌ನ ಕೈಚಳಕ. ಇತ್ತೀಚೆಗೆ ವಿಜಯನಗರ ಪೊಲೀಸರು ಐವರು
ಬವಾರಿಯಾ ಗ್ಯಾಂಗ್‌ ಸದಸ್ಯರನ್ನು ಬಂಧಿಸಿದ್ದರು.

ಸ್ಥಳೀಯ ಪೊಲೀಸರುಕೂಡ ಮುಟ್ಟಲು ಹಿಂಜರಿಯುವ ಈ ಗ್ಯಾಂಗ್‌ನಕುಲ ಕಸುಬುಚಿನ್ನದ ಸರಕಳವು.ಅಗತ್ಯಬಿದ್ದಲ್ಲಿ ಡಕಾಯಿತಿ, ದರೋಡೆ. ಬುಡಕಟ್ಟ ಸಮುದಾಯವಾದರಿಂದ ಸ್ಥಳೀಯ ಸರ್ಕಾರಗಳು ಕೂಡ ಅವರನ್ನು ನಿರ್ಲಕ್ಷ್ಯ ಮಾಡಿವೆ ಎನ್ನಲಾಗುತ್ತಿದೆ. ಹೀಗಾಗಿ ದೆಹಲಿ ಮೂಲದ ಮಧ್ಯವರ್ತಿಯೊಬ್ಬನ ಸಂಪರ್ಕದಿಂದ ದೇಶದ ಕ್ಯಾಪಿಟಲ್‌ ಸಿಟಿಗಳಿಗೆ ಲಗ್ಗೆ ಇಡುವ ಈ ಗ್ಯಾಂಗ್‌, ಮುಂಜಾನೆ 5.30 ರಿಂದ 8.30 ಗಂಟೆಯೊಳಗೆ10-20 ಚಿನ್ನದ ಸರಗಳನ್ನು ಎಗರಿಸಿ ರೈಲುಗಳ ಮೂಲಕ ದೆಹಲಿ ಸೇರಿಕೊಳ್ಳುತ್ತಾರೆ. ಐದಾರು ವರ್ಷಗಳ ಹಿಂದೆ ಬವಾರಿಯಾ
ಗ್ಯಾಂಗ್‌ಗೆ ಶಕ್ತಿಸೇನಾ ಎಂಬಾತ ಮುಖ್ಯಸ್ಥನಾಗಿದ್ದ. ದೆಹಲಿ ಮೂಲದ ವ್ಯಕ್ತಿಯೊಬ್ಬನ ಸೂಚನೆ ಮೇರೆಗೆ ಈತ ಬೆಂಗಳೂರು, ಚೆನ್ನೈ, ಹೈದರಾಬಾದ್‌ ಸೇರಿ ದಕ್ಷಿಣ ಭಾರತದ ರಾಜ್ಯಗಳ ಕ್ಯಾಪಿಟಲ್‌ ಸಿಟಿಗಳಿಗೆ ತನ್ನ ತಂಡವನ್ನು ಕಳುಹಿಸಿ ಸರಗಳ್ಳತನ ಮಾಡಿಸಿ ಅದನ್ನು ದೆಹಲಿಗೆ ತರಿಸಿಕೊಂಡು ವಿಲೇವಾರಿ ತಲಾ ಇಂತಿಷ್ಟು ಹಣ ಕೊಟ್ಟು ಕಳುಹಿಸಿದ್ದ.

ಇದನ್ನೂ ಓದಿ:ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ ಪ್ರಕಟ : ಡಾ.ಸಿ.ಎನ್.ಅಶ್ವತ್ಥನಾರಾಯಣ

ಒಮ್ಮೆ ಒಂದು ರಾಜ್ಯಕ್ಕೆ ಭೇಟಿ ಕೊಟ್ಟರೆ, ಮತ್ತೆ ಮೂರು ತಿಂಗಳು ಆ ಕಡೆ ಹೋಗುವುದಿಲ್ಲ. ಮತ್ತೊಂದು ರಾಜ್ಯಕ್ಕೆ ತೆರಳಿ ಕೃತ್ಯ ಎಸಗುತ್ತಿದ್ದರು. ಆದರೆ, ಸದ್ಯ ಶಕ್ತಿಸೇನಾನ ಬಗ್ಗೆ ಮಾಹಿತಿಯಿಲ್ಲ. ಆದರೆ, ದೆಹಲಿ ಮೂಲದ ವ್ಯಕ್ತಿಗಳು ಈಗಲೂ ಬವಾರಿಯಾ ಸದಸ್ಯರ ಜತೆ ಸಂಪರ್ಕದಲ್ಲಿದ್ದು
ಅಪರಾಧಕೃತ್ಯ ಎಸಗುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು.

ಕೃತ್ಯ ಹೇಗೆ?: ಉತ್ತಮ ಬಟ್ಟೆ, ಶೂ, ಧರಿಸಿ ವಿಮಾನದಲ್ಲಿ ಒಂದು ಬಾರಿ ಬರುವ ಬವಾರಿಯಾ ತಂಡದ ಹತ್ತು ಮಂದಿ ಸದಸ್ಯರು, ಬೆಂಗಳೂರು ಗ್ರಾಮಾಂತರ ಪ್ರದೇಶಗಳಾದ ಆನೇಕಲ್‌, ಗುಬ್ಬಲಾ, ಕೆಂಗೇರಿ, ದೇವನಹಳ್ಳಿ ಸಮೀಪದಲ್ಲಿ ಮಾಲೀಕರ ನಿರೀಕ್ಷೆಗೂ ಹೆಚ್ಚು ಬಾಡಿಗೆ
ಕೊಟ್ಟು ಸ್ಥಳೀಯ ಆರೋಪಿಗಳ ನೆರವಿನೊಂದಿಗೆ ವಾಸವಾಗುತ್ತಾರೆ. ಇಲ್ಲವಾದಲ್ಲಿ ಲಾಡ್ಜ್, ಸಣ್ಣ-ಪುಟ್ಟಕೊಠಡಿಗಳಲ್ಲಿ ವಾಸಿಸುತ್ತಾರೆ.
ಇದೇ ವೇಳೆ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ಗಳನ್ನು ಕಳ್ಳತನ ಮಾಡುತ್ತಾರೆ. ಜತೆಗೆ ನಂಬರ್‌ ಪ್ಲೆಟ್‌ ಬದಲಾವಣೆ ಅಥವಾ ತೆಗೆಯುತ್ತಾರೆ. ಬಳಿಕ ಮುಂಜಾನೆ 5 ಗಂಟೆಯಿಂದ 8.30ರ ಅವಧಿಯಲ್ಲಿ ಫೀಲ್ಡ್‌ಗಿಳಿಯುವ ತಂಡಗಳು, ಬೇರೆ ಬೇರೆ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು,
ಮನೆ ಮುಂದೆ ರಂಗೋಲಿ ಹಾಕುವ, ವಾಯುವಿಹಾರಕ್ಕೆ ಹೋಗುವ, ಒಂಟಿಯಾಗಿ ಹೋಗುವ ಮಹಿಳೆಯರನ್ನು ಹಿಂಬಾಲಿಸಿ ಕ್ಷಣಾರ್ಧದಲ್ಲಿ ಚಿನ್ನದ ಸರಗಳ ಕಳವು ಮಾಡಿ ಪರಾರಿಯಾಗುತ್ತಾರೆ. ಇದರೊಂದಿಗೆ ಇತ್ತೀಚೆಗೆ ಬೀಗ ಹಾಕಿದ ಮನೆಗಳು, ಒಂಟಿ ಮಹಿಳೆಯರು ವಾಸವಾಗಿರುವ ‌ ಮಹಿಳೆಯರ ಮನೆಗಳಿಗೆ ನುಗ್ಗಿ ದರೋಡೆ, ಡಕಾಯಿತಿಯಲ್ಲೂ ತೊಡಗಿದ್ದಾರೆ.

ಕೃತ್ಯ ಎಸಗಿದ ಬಳಿಕ ದೆಹಲಿಗೆ ವಿಮಾನ ಅಥವಾ ರೈಲಿನಲ್ಲಿ ವಾಪಸ್‌ ಹೋಗುತ್ತಿದ್ದರು. ಕದ್ದ ಸರಗಳನ್ನು ದೆಹಲಿಯಲ್ಲಿ ಒಬ್ಬನಿಗೆ ಕೊಟ್ಟು ಕಮಿಷನ್‌ ಪಡೆದು ತಮ್ಮ ಊರುಗಳಿಗೆ ತೆರಳುತ್ತಿದ್ದರು. ಸ್ವಲ್ಪದಿನದ ನಂತರ ಈ ಗ್ಯಾಂಗ್‌ನ ಮತ್ತೊಂದು  ತಂಡ ಬೆಂಗಳೂರಿಗೆ ಬಂದು ಕೃತ್ಯದಲ್ಲಿ ಭಾಗಿಯಾಗುತ್ತದೆ. ಕೃತ್ಯಕ್ಕೆ ಬಳಸಿದ ಪಲ್ಸರ್‌ ಬೈಕ್‌ಗಳನ್ನು ಸುಮಾರು 10-15 ಕಿ.ಮೀ. ದೂರದ ‌ ಸ್ಲಂ ಅಥವಾ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಪರಾರಿಯಾಗುತ್ತಾರೆ.

ಜಾಗ್ರತೆ ವಹಿಸಲು ಸಲಹೆ
ಮುಂಜಾನೆ ಮನೆ ಮುಂದೆ ರಂಗೋಲಿ ಹಾಕುವಾಗ, ವಾಯುವಿಹಾರಕ್ಕೆಹೋಗುವಾಗ ಸರಮುಚ್ಚಿಕೊಳ್ಳುವ ವೇಲ್‌ಅಥವಾ ವಸ್ತ್ರ ಧರಿಸುವುದು ಉತ್ತಮ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

-ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.