Udayavni Special

ಪೊಲೀಸರ ಅಮಾನತು ಹಿಂಪಡೆದ ಸರ್ಕಾರ

Team Udayavani, Jul 27, 2018, 12:16 PM IST

polisara.jpg

ಬೆಂಗಳೂರು: ಅಮಾನ್ಯಗೊಂಡ ನೋಟುಗಳ ಬದಲಾವಣೆ ಪ್ರಕರಣದಲ್ಲಿ ಆರೋಪಿಗಳಿಂದ 35 ಲಕ್ಷ ರೂ. ಕಳವು ಮಾಡಿದ ಆರೋಪದ ಅಮಾನತುಗೊಂಡಿದ್ದ ಕಲಾಸಿಪಾಳ್ಯ ಠಾಣೆಯ ನಾಲ್ವರು ಸಿಬ್ಬಂದಿಯನ್ನು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸರ್ಕಾರ ಆದೇಶಿಸಿದೆ.

ಕಲಾಸಿಪಾಳ್ಯ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಮಲ್ಲಿಕಾರ್ಜುನ್‌, ಪೇದೆಗಳಾದ ಅನಂತರಾಜು, ಚಂದ್ರಶೇಖರ್‌ ಮತ್ತು ಗಿರೀಶ್‌ ಅವರುಗಳನ್ನು ಕರ್ತವ್ಯಲೋಪದ ಆರೋಪದ ಮೇಲೆ 2016ರ ಡಿ.14 ರಂದು ನಗರ ಪೊಲೀಸ್‌ ಕಮಿಷನರ್‌ ಅಮಾನತ್ತುಗೊಸಿದ್ದರು.

ಆರೋಪಿತ ಸಿಬ್ಬಂದಿ ಅಮಾನತುಗೊಳಿಸುವ ವೇಳೆಯಲ್ಲಾಗಲಿ, ನಂತರವಾಗಲಿ ನಿಯಮ ಪ್ರಕಾರ ಇಲಾಖೆ ವಿಚಾರಣೆ ನಡೆಸಿಲ್ಲ. ಆರೋಪಿತರ ಹೇಳಿಕೆಯನ್ನು ಪಡೆಯದೇ ಅಮಾನತುಗೊಳಿಸಿರುವುದು ಸಹಜ ನ್ಯಾಯಕ್ಕೆ ಧಕ್ಕೆ ತಂದಿದೆ. ಹೀಗಾಗಿ ಇವರನ್ನು ಮತ್ತೆ ಕರ್ತವ್ಯಕ್ಕೆ ನೇಮಕ ಮಾಡಿಕೊಂಡು ಸ್ವಾಭಾವಿಕ ನ್ಯಾಯದ ಅನ್ವಯ ಇಲಾಖೆ ವಿಚಾರಣೆಯನ್ನು ನಡೆಸುವಂತೆ ಸರ್ಕಾರ ಸೂಚಿಸಿದೆ.

ತಮ್ಮ ಅಮಾನತು ಆದೇಶವನ್ನು ಪ್ರಶ್ನಿಸಿ ಆರೋಪಿತರು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೊರೆ ಹೋಗಿದ್ದರು. ಅರ್ಜಿ ತಿರಸ್ಕರಿಸಿದ್ದ ಮಂಡಳಿ ಮೇಲ್ಮನವಿ ಪ್ರಾಧಿಕಾರದ ಮುಂದೆಯೇ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಮೇಲ್ಮನವಿ ಪ್ರಾಧಿಕಾರ ಕೂಡ ವಿಚಾರಣೆ ನಡೆಸದೆ ಅಮಾನತು ಆದೇಶ ಸರಿಯಾಗಿದೆ ಎಂದು ಸೂಚಿಸಿತ್ತು.

ಇದರ ವಿರುದ್ಧ ಆರೋಪಿಗಳು ಸರ್ಕಾರದ ಪರಿಷ್ಕರಣಾ ವಿಭಾಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪರಿಷ್ಕರಣಾ ಮನವಿಯನ್ನು ಸ್ವೀಕರಿಸಿದ ಒಳಾಡಳಿತ ಇಲಾಖೆ ಅಮಾನತು ಪ್ರಕ್ರಿಯೆಯಲ್ಲಿ ಆಗಿರುವ ನಿಯಮ ಉಲ್ಲಂಘನೆ ಆಧಾರದಲ್ಲಿ ಆರೋಪಿಗಳ ಅಮಾನತು ರದ್ದುಗೊಳಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.

ಏನಿದು ಪ್ರಕರಣ?: ಒಂದು ಸಾವಿರ ಮತ್ತು ಐದು ನೂರು ಮುಖ ಬೆಲೆಯ ನೋಟುಗಳ ನಿಷೇಧದ ಬಳಿಕ, ನೋಟುಗಳ ಬದಲಾವಣೆ ದಂಧೆ ಹೆಚ್ಚಾಗಿತ್ತು. ಈ ವೇಳೆ ಪೀಣ್ಯದ ನೆಲಗದರನಹಳ್ಳಿ ಬಳಿ ರುಕ್ಮಿಣಿನಗರದ ಕಣ್ವ ಮಾರ್ಟ್‌ ಹಿಂಭಾಗ ಸಿ.ಬಿ.ಕುಮಾರ ಎಂಬುವರ ಮನೆಯಲ್ಲಿ ನೋಟು ಬದಲಾವಣೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಆರೋಪಿತ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ 43 ಲಕ್ಷ ರೂ. ಸ್ಥಳದಲ್ಲಿ ಸಿಕ್ಕಿತ್ತು.

ಈ ಪೈಕಿ 8 ಲಕ್ಷ ರೂ. ಕುಮಾರ್‌ಗೆ ಹಿಂದಿರುಗಿಸಿ ಇನ್ನುಳಿದ 35 ಲಕ್ಷ ರೂ. ಸಮೇತ ನಾಲ್ವರು ಸಿಬ್ಬಂದಿ ಪರಾರಿಯಾಗಿದ್ದರು. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿತಸ್ಥರ ವಿರುದ್ಧ ಕಾನುನು ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಇದರ ಬೆನ್ನಲ್ಲೇ ನಾಲ್ವರನ್ನೂ ಅಮಾನತ್ತುಗೊಳಿಸಲಾಗಿತ್ತು.

ಟಾಪ್ ನ್ಯೂಸ್

ಕೊಲೆ ಯತ್ನ : ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ತಲೆಗೆ ಜಾಕ್ ಲಿವರ್ ನಿಂದ ಹೊಡೆದು 40 ಅಡಿ ಆಳಕ್ಕೆ ಎಸೆದರೂ ಬದುಕುಳಿದ ಮಹಿಳೆ : ನಾಲ್ವರ ಬಂಧನ

ಸ್ವಾಮೀಜಿಗಳ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

ಸ್ವಾಮೀಜಿಗಳ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು: ವಿಜಯಾನಂದ ಕಾಶಪ್ಪನವರ್

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಅ.1 ರಿಂದ ಪಂಚಮಸಾಲಿ ಸಮುದಾಯದಿಂದ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 30,773 ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆ

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 30,773 ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆ

ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕ್ಯಾಂಪಸ್ ಗೆ ಶಂಕರಾಚಾರ್ಯರ ಹೆಸರು ಸೂಕ್ತ :ಕರಂದ್ಲಾಜೆ

ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕ್ಯಾಂಪಸ್ ಗೆ ಶಂಕರಾಚಾರ್ಯರ ಹೆಸರು ಸೂಕ್ತ :ಕರಂದ್ಲಾಜೆ

ನಂಜನಗೂಡು ಮಂದಿರದಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ: ಸಿಎಂ ಬೊಮ್ಮಾಯಿ

ನಂಜನಗೂಡು ಮಂದಿರದಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ: ಸಿಎಂ ಬೊಮ್ಮಾಯಿ

ನೀವು ಚಹಾದೊಂದಿಗೆ ಸವಿಯುವ ಟೋಸ್ಟ್ ಹೀಗೂ ಮಾಡ್ತಾರೆ! ಶಾಕಿಂಗ್ ವಿಡಿಯೋ ವೈರಲ್

ನೀವು ಚಹಾದೊಂದಿಗೆ ಸವಿಯುವ ಟೋಸ್ಟ್ ಹೀಗೂ ಮಾಡ್ತಾರೆ! ಶಾಕಿಂಗ್ ವಿಡಿಯೋ ವೈರಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gfgrr

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

ftry5r

ಕೋವಿಡ್: ರಾಜ್ಯದಲ್ಲಿಂದು 889 ಹೊಸ ಪ್ರಕರಣ ಪತ್ತೆ|1080 ಜನ ಸೋಂಕಿತರು ಗುಣಮುಖ

5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

ತಿಗರಪಾಳ್ಯ ಘಟನೆ: 5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

MUST WATCH

udayavani youtube

ಖಾಸಗಿ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ

udayavani youtube

ಕಾಲಿನಿಂದ ಒದ್ದು ,ನೆಕ್ಕಿ ಮಾಡುವ TOASTನ್ನು ನಾವು ತಿನ್ನೋದ ?

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

ಹೊಸ ಸೇರ್ಪಡೆ

ಕೊಲೆ ಯತ್ನ : ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ತಲೆಗೆ ಜಾಕ್ ಲಿವರ್ ನಿಂದ ಹೊಡೆದು 40 ಅಡಿ ಆಳಕ್ಕೆ ಎಸೆದರೂ ಬದುಕುಳಿದ ಮಹಿಳೆ : ನಾಲ್ವರ ಬಂಧನ

ಸ್ವಾಮೀಜಿಗಳ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

ಸ್ವಾಮೀಜಿಗಳ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು: ವಿಜಯಾನಂದ ಕಾಶಪ್ಪನವರ್

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಅ.1 ರಿಂದ ಪಂಚಮಸಾಲಿ ಸಮುದಾಯದಿಂದ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಸ್ವಾಮೀಜಿ

25 ವರ್ಷ ನಂತರ ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

25 ವರ್ಷ ನಂತರ ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

pavitra-vastra-abiyana

ಪವಿತ್ರ ವಸ್ತ್ರ ಅಭಿಯಾನಕ್ಕೆ ಚಾಲನೆ : ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಪ್ರದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.