ಸೌರ ವಿದ್ಯುತ್‌ ಬಳಕೆಗೆ ಗ್ರೀನ್‌ ಸಿಗ್ನಲ್‌


Team Udayavani, Oct 1, 2019, 3:08 AM IST

soura

ಬೆಂಗಳೂರು: ರೂಫ್ ಟಾಪ್‌ ಸೋಲಾರ್‌ ಅಳವಡಿಸಿಕೊಂಡ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಬೆಂಗಳೂರು ವಿಶ್ವವಿದ್ಯಾಲಯ ಪಾತ್ರವಾಗಿದೆ. 2018ರ ಅಕ್ಟೋಬರ್‌ ತಿಂಗಳಲ್ಲಿ ವಿವಿಯ 6 ಕಟ್ಟಡಗಳ ಮೇಲೆ ಸೋಲಾರ್‌ ಪ್ಯಾನಲ್‌ಗ‌ಳನ್ನು ಅಳವಡಿಸಲಾಗಿತ್ತು. ಆದರೆ, ವರ್ಷ ಕಳೆದರೂ ಬೆಸ್ಕಾಂನಿಂದ ಅನುಮತಿ ಸಿಕ್ಕಿರಲಿಲ್ಲ. ಇದರಿಂದಾಗಿ ವಿವಿ ಪ್ರತಿ ತಿಂಗಳು 10 ಲಕ್ಷ ರೂ. ವಿದ್ಯುತ್‌ ಬಿಲ್‌ ಪಾವತಿಸುತಿತ್ತು.

ಸೋಮವಾರದಿಂದ ಸೋಲಾರ್‌ ಬಳಕೆಗೆ ಬೆಸ್ಕಾಂ ಅನುಮತಿ ನೀಡಿದ್ದು, ಈ ಮೂಲಕ ಬೆಂಗಳೂರು ವಿವಿ ವಾರ್ಷಿಕ ಒಂದು ಕೋಟಿ ವಿದ್ಯುತ್‌ ಬಿಲ್‌ ಉಳಿಸಲಿದೆ. ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಮತ್ತಿತರ ಸಿಬ್ಬಂದಿ ಸಮ್ಮುಖದಲ್ಲಿ ಚಾಲನೆ ಪಡೆದ ಸೌರ ವಿದ್ಯುತ್‌ ಘಟಕ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಕಾರ್ಯನಿರ್ವಹಿಸಲಿದೆ. ಬಳಿಕ ವಿವಿ ಅಗತ್ಯಗಳಿಗೆ ಬಳಸಕೊಂಡು ಉಳಿದ ವಿದ್ಯುತ್‌ ಅನ್ನು ಬೆಸ್ಕಾಂಗೆ ಮಾರಾಟ ಮಾಡಲು ಬೆಸ್ಕಾಂ-ವಿವಿ ನಡುವೆ ಒಪ್ಪಂದ ಏರ್ಪಡಲಿದೆ.

ಸದ್ಯ ನಿತ್ಯ 495 ಕಿ.ವ್ಯಾಟ್‌ ವಿದ್ಯುತ್‌ ಉತ್ಪಾದಿಸಬಲ್ಲ ಸೌರ ವಿದ್ಯುತ್‌ ಘಟಕಗಳನ್ನು ವಿವಿ ಹೊಂದಿದೆ. ಆರು ಕಟ್ಟಡಗಳ ಮೇಲೆಲಿನ ಸೋಲಾರ್‌ ಪ್ಯಾನೆಲ್‌ಗ‌ಳಿಂದ ಉತ್ಪತ್ತಿಯಾದ ವಿದ್ಯುತ್‌ ಅನ್ನು ನೇರವಾಗಿ ಬೆಸ್ಕಾಂ ಗ್ರಿಡ್‌ಗಳಿಗೆ ಕಳುಹಿಸಿ, ನಂತರ ಬೆಸ್ಕಾಂನಿಂದ ವಿದ್ಯುತ್‌ ಪಡೆಯಲು ತಯಾರಿ ನಡೆದಿದೆ. ಹೀಗಾಗಿ, ವಿವಿ ಆವರಣದಲ್ಲೇ ಪವರ್‌ ಗ್ರಿಡ್‌ ಸ್ಥಾಪನೆ ಮಾಡಿ, ಅಲ್ಲಿ ವಿದ್ಯುತ್‌ ಶೇಖರಿಸಿ, ಬಳಸುವ ಉದ್ದೇಶವನ್ನು ಕೈಬಿಡಲಾಗಿದೆ. ವಿದ್ಯುತ್‌ ಶೇಖರಣೆಗೆ ಅಗತ್ಯವಿರುವ ಬ್ಯಾಟರಿಗಳು ದುಬಾರಿಯಾಗಿರುವ ಕಾರಣ, ವಿವಿ ಈ ನಿರ್ಧಾರಕ್ಕೆ ಬಂದಿದೆ.

ಅನುಮತಿ ವಿಳಂಬಕ್ಕೆ ಕಾರಣವೇನು?: ಸೌರ ವಿದ್ಯುತ್‌ ಉತ್ಪಾದನೆ ಮತ್ತು ಬಳಕೆಯನ್ನು ಪ್ರೋತ್ಸಾಹಿಸಲು ಕರ್ನಾಟಕ ವಿದ್ಯುತ್‌ ನಿಯಂತ್ರಣ ಪ್ರಾಧಿಕಾರ (ಕೆಇಆರ್‌ಸಿ) ರೂಫ್ ಟಾಪ್‌ ಸೋಲಾರ್‌ ಕರುಡು ಸಿದ್ಧಪಡಿಸಿದೆ. ಅದರಂತೆ, ಯಾವುದೇ ಖಾಸಗಿ ವ್ಯಕ್ತಿ ತನ್ನ ಸ್ವಂತ ಖರ್ಚಿನಲ್ಲಿ ಮನೆಯ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಸಿ ತನಗೆ ಅಗತ್ಯವಿರುವಷ್ಟು ವಿದ್ಯುತ್‌ ಉತ್ಪಾದಿಸಬಹುದು.

ಹೆಚ್ಚುವರಿ ವಿದ್ಯುತ್‌ ಉತ್ಪಾದಿಸಿದರೆ ಅದನ್ನು ಬೆಸ್ಕಾಂ ಖರೀದಿ ಮಾಡುತ್ತದೆ. ಆದರೆ, ಬೆಂಗಳೂರು ವಿವಿ ತನ್ನ ಸ್ವಂತ ಹಣ ಬಳಸುವ ಬದಲು, ಕೇಂದ್ರ ಸರ್ಕಾರದ “ಥಿಂಕ್‌ ಎನರ್ಜಿ’ ಯೋಜನೆ ಅಡಿ ರೂಫ್ ಟಾಪ್‌ ಸೋಲಾರ್‌ ಪ್ಯಾನಲ್‌ ಅಳವಡಿಸಿದೆ. ಥರ್ಡ್‌ ಪಾರ್ಟಿ ಇನ್ವೆಸ್ಟ್‌ಮೆಂಟ್‌ಗೆ (ಮೂರನೇ ವ್ಯಕ್ತಿ ಹೂಡಿಕೆ) ರೂಫ್ ಟಾಪ್‌ ಯೋಜನೆ ಅಡಿ ಅವಕಾಶವಿಲ್ಲದ ಕಾರಣ ಕೆಇಆರ್‌ಸಿ ನಿಯಮಾವಳಿಗೆ ತಿದ್ದುಪಡಿ ತರಬೇಕಿದ್ದರಿಂದ ವಿವಿ ಆಲರಣದಲ್ಲಿನ ಸೋಲಾರ್‌ ಬಳಕೆಗೆ ಅನುಮತಿ ನೀಡಿರಲಿಲ್ಲ.

“ಉದಯವಾಣಿ’ ಫ‌ಲಶೃತಿ: ವಿವಿ ಆವರಣದಲ್ಲಿ ವಸೋಲಾರ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೂ ಬಳಕೆಗೆ ಅನುಮತಿ ಸಿಗದಿರುವ ಕುರಿತು ಆ.31ರಂದು, “ಗ್ರಿಡ್‌ ಸಿದ್ಧವಾದರೂ ಸಿಗದ ಸೌರ ವಿದ್ಯುತ್‌’ ಎಂಬ ಶೀರ್ಷಿಕೆಯಡಿ “ಉದಯವಾಣಿ’ ವರದಿ ಪ್ರಕಟಿಸಿತ್ತು. ಈ ವೇಳೆ ಬೆಸ್ಕಾಂ ಅಧಿಕಾರಿಗಳು 15 ಕೆಲಸದ ದಿನಗಳಲ್ಲಿ (ವರ್ಕಿಂಗ್‌ ಡೇಸ್‌) ಬೆಂಗಳೂರು ವಿವಿಗೆ ರೂಫ್ ಟಾಪ್‌ ಸೋಲಾರ್‌ ಬಳಕೆಗೆ ಅನುಮತಿ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದಿನ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಯಾದ ಹಿನ್ನಲೆ ಅನುಮತಿ ನೀಡುವ ಕಾರ್ಯ ವೇಗ ಕಳದುಕೊಂಡಿತ್ತಾದರೂ, ನಂತರ ಸೆಪ್ಟೆಂಬರ್‌ನಲ್ಲಿ ನಡೆದ ಕೆಇಆರ್‌ಸಿ ಸಭೆಯಲ್ಲಿ ಬೆಂಗಳೂರು ವಿವಿ ಮತ್ತು ಜಿಕೆವಿಕೆ ಅವರಣದಲ್ಲಿನ ರೂಫ್ ಟಾಪ್‌ ಸೋಲಾರ್‌ ಬಳಕೆಗೆ ಅನುಮತಿ ನೀಡಿದೆ.

ರೂಫ್ ಟಾಪ್‌ ಸೋಲಾರ್‌ ಅಳವಡಿಸಿಕೊಂಡ ರಾಜ್ಯದ ಮೊದಲ ವಿವಿ ಎಂಬ ಖ್ಯಾತಿಗೆ ಬೆಂಗಳೂರು ವಿಶ್ವವಿದ್ಯಾಲಯ ಪಾತ್ರವಾಗಿದೆ. ವಿವಿ ಆವರಣವನ್ನು ಸಂಪೂರ್ಣವಾಗಿ ಸೋಲಾರ್‌ ಮತ್ತು ಗ್ರೀನ್‌ ಕ್ಯಾಂಪಸ್‌ ಮಾಡುವುದೇ ನಮ್ಮ ದ್ಯೆàಯ. ಉಳಿದಿರುವ 20 ಕಟ್ಟಡಗಳ ಮೇಲೂ ಸೋಲಾರ್‌ ಪ್ಯಾನಲ್‌ ಅಳವಡಿಸಿದರೆ ವಿವಿ ನಿರ್ವಹಣೆಗೆ ಬೇಕಿರುವ ಹಣ ಬೆಸ್ಕಾಂ ಮೂಲಕ ಸಿಗಲಿದೆ. ಬಳಕೆಗೆ ಸಿದ್ಧವಿದ್ದ ರೂಫ್ ಟಾಪ್‌ ಸೋಲಾರ್‌ ಬಳಸಲು ಅನುಮತಿ ಪಡೆಯುವ ಬೆಂಗಳೂರು ವಿವಿ ಪ್ರಯತ್ನಕ್ಕೆ ಉದಯವಾಣಿ ಧ್ವನಿಗೂಡಿಸಿದ್ದು, ವರದಿ ಪ್ರಕಟವಾದ ತಿಂಗಳೊಳಗೆ ಅನುಮತಿ ದೊರತಿರುವುದು ಸಂತಸ ತಂದಿದೆ.
-ಪ್ರೊ.ಕೆ.ಆರ್‌.ವೇಣುಗೋಪಾಲ್‌, ಬೆಂಗಳೂರು ವಿವಿ ಕುಲಪತಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.