ಬಾಲ್ಕನಿಲೂ ಬೆಳೆಸಿ ತರಹೇವಾರಿ ತರಕಾರಿ!


Team Udayavani, Feb 7, 2020, 10:50 AM IST

bng-tdy-1

ಸಾಂಧರ್ಬಿಕ ಚಿತ್ರ

ಬೆಂಗಳೂರು: ನಿಮ್ಮ ಮನೆ ಬಾಲ್ಕನಿಯಲ್ಲಿ ಕೇವಲ ಒಂದು ಮೀಟರ್‌ ಜಾಗ ಇದ್ದರೆ ಸಾಕು, ನೀವು ಈಗ 25 ಪ್ರಕಾರದ ತರಕಾರಿಗಳನ್ನು ಬೆಳೆಯಬಹುದು. ಎರಡೇ ಚದರ ಮೀಟರ್‌ ಜಾಗದಲ್ಲಿ 12 ಗಿಡಗಳ ಬೆಳೆ ಪಡೆಯಬಹುದು. 30×20 ಅಡಿ ಜಾಗದಲ್ಲಿ ನಿತ್ಯ ಒಂದು ಕುಟುಂಬಕ್ಕಾಗುವಷ್ಟು ತರಕಾರಿ ತೆಗೆಯಬಹುದು!

ಹೀಗೆ ನಗರದಲ್ಲಿರುವ ಹತ್ತಾರು ಪ್ರಕಾರದ ಮನೆ ಗಳ ತಾರಸಿ ಅಥವಾ ಬಾಲ್ಕನಿಗೆ ಹೊಂದುವ ವಿವಿಧ ಪ್ರಕಾರದ ತೋಟಗಾರಿಕೆ ಮಾದರಿಗಳನ್ನು ಇಲ್ಲಿನ ಹೆಸರಘಟ್ಟದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಕಾಣಬಹುದು. ಭಾರ ತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ (ಐಐಎಚ್‌ ಆರ್‌) ಈ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದು, ಬೆಂಗಳೂರಿಗರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ.

ಎಷ್ಟೋ ಜನರಿಗೆ ತಾರಸಿ ತೋಟಗಾರಿಕೆ ಮಾಡುವ ಮನಸ್ಸು ಇರುತ್ತದೆ. ಆದರೆ, ಜಾಗದ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಲಭ್ಯವಿರುವ ಜಾಗದಲ್ಲಿಯೇ ತಕ್ಕಮಟ್ಟಿಗೆ ತರಕಾರಿ ಬೆಳೆಯುವ ಹಲವಾರು ವಿನ್ಯಾಸಗಳನ್ನು ಮೇಳದಲ್ಲಿ ಪರಿಚಯಿಸಲಾಗಿದೆ. ಅವುಗಳ ಪೈಕಿ ಕೇವಲ 2 ಚದರ ಮೀಟರ್‌ ಅಳತೆಯ ಕಬ್ಬಿಣದ ಶೆಲ್ಫ್ ರೀತಿಯ ಮಾದರಿಯನ್ನು ರೂಪಿಸಲಾಗಿದೆ. ಇದರಲ್ಲಿ ನಾಲ್ಕು ಹಂತಗಳು ಬರಲಿದ್ದು, ಮೊದಲ ಹಂತದಲ್ಲಿ ಟೊಮೆಟೊ, ಬೀನ್ಸ್‌, ಬದನೆ ಕಾಯಿ, ಮೆಣಸಿನಕಾಯಿಯಂತಹ ಗಿಡಗಳನ್ನು ಬೆಳೆಯಬಹುದು. 2ನೇ ಹಂತದಲ್ಲಿ ಔಷಧೀಯ ಗಿಡಗಳು ಹಾಗೂ ಮೂರನೇ ಹಂತದಲ್ಲಿ ಸೊಪ್ಪು ಬೆಳೆಯಬಹುದು.

ಇದೆಲ್ಲದಕ್ಕೂ ನೀರು ಪೂರೈಸುವ 20 ಲೀ. ಸಾಮರ್ಥ್ಯದ ಟ್ಯಾಂಕ್‌ ಅನ್ನು ಕೊನೆಯ ಹಂತದಲ್ಲಿ ಅಳವಡಿಸಲಾಗಿರುತ್ತದೆ. ಇದರಲ್ಲಿ ಒಟ್ಟಾರೆ 12 ಕುಂಡಗಳನ್ನು ಇಡಬಹುದು. ಇದರ ಬೆಲೆ ಸ್ಟ್ರಕ್ಚರ್‌, ತರಕಾರಿ ಬೀಜ, ಗೊಬ್ಬರ, ನೀರಿನ ಟ್ಯಾಂಕ್‌ ಎಲ್ಲವೂ ಸೇರಿ 20 ಸಾವಿರ ರೂ. ಆಗುತ್ತದೆ ಎಂದು ಪ್ರಧಾನ ವಿಜ್ಞಾನಿ ಡಾ.ಸಿ. ಅಶ್ವಥ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

ಅದೇ ರೀತಿ, ಅಪಾರ್ಟ್‌ಮೆಂಟ್‌ಗಳ ಬಾಲ್ಕನಿಯಲ್ಲಿ ತುಂಬಾ ಕಡಿಮೆ ಜಾಗ ಇರುತ್ತದೆ. ಆದ್ದರಿಂದ 1×4 ಮೀಟರ್‌ ಅಳತೆಯಲ್ಲೇ ತರಕಾರಿ ಬೆಳೆಯುವ ವಿನ್ಯಾಸ ಸಿದ್ಧಪಡಿಸಲಾಗಿದೆ. ಇದರಲ್ಲಿ ಕೂಡ ಮೆಟ್ಟಿಲು ಮಾದರಿಯಲ್ಲಿ ಹಂತಗಳಿದ್ದು, ಔಷಧೀಯ ಗಿಡಗಳನ್ನೂ ಇಲ್ಲಿ ಬೆಳೆಯಬಹುದು. ಬದನೆಕಾಯಿ, ಟೊಮೆಟೊ, ಪುದೀನಾ, ತುಳಸಿ, ಮೆಣಸಿನಕಾಯಿ, ಗಣಿಕೆ ಸೊಪ್ಪು, ವನಗೊನೆ ಸೊಪ್ಪು, ಕೊತ್ತುಂಬರಿ, ಪಾಲಕ್‌ ಮತ್ತಿತರ ಸೊಪ್ಪು ಬೆಳೆಯಬಹುದು.

ಸೊಪ್ಪುಗಳೆಲ್ಲವೂ ತಿಂಗಳಲ್ಲಿ ಹಾಗೂ ಇತರೆ ತರಕಾರಿಗಳನ್ನು ಒಂದೂವರೆ ತಿಂಗಳಲ್ಲಿ ಇಳುವರಿ ಪಡೆಯಬಹುದು. ಆದರೆ, ಈ ಎರಡೂ ವಿನ್ಯಾಸಗಳಲ್ಲಿ ಬೆಳೆಯುವ ಬೆಳೆಗಳಿಗೆ ಸೂರ್ಯನ ಬೆಳಕು ಕಡ್ಡಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಪೂರ್ವ ಅಥವಾ ಪಶ್ಚಿಮ ಮುಖವಾಗಿ ಇವುಗಳನ್ನು ಇಡಬೇಕಾಗುತ್ತದೆ. ಚಿಕ್ಕ ಚಕ್ರಗಳನ್ನು ಅಳವಡಿಸಿದ್ದರಿಂದ, ಸುಲಭವಾಗಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಕೊಂಡೊಯ್ಯಬಹುದು ಎಂದು ಹೇಳಿದರು.

ತಾರಸಿ ತೋಟಗಾರಿಕೆ; ಮನೆಗೂ ತಂಪು : ತಾರಸಿಯಲ್ಲಿ 20×30 ಅಡಿ ಜಾಗ ಇದ್ದರೆ, ನಾಲ್ಕು ಜನರಿರುವ ಒಂದು ಕುಟುಂಬಕ್ಕೆ ಸಾಕಾಗುವಷ್ಟು ತರಕಾರಿಯನ್ನು ಅನಾಯಾಸವಾಗಿ ಬೆಳೆಯಬಹುದು. ಆದರೆ, ನೆರಳು ಪರದೆ ಇದ್ದರೆ ಉತ್ತಮ ಎಂದು ಡಾ.ಸಿ. ಅಶ್ವಥ್‌ ಸ್ಪಷ್ಟಪಡಿಸಿದರು. ನೆರಳು ಪರದೆಯಿಂದ ತರಕಾರಿಗಳಿಗೆ ಮಂಗಗಳ ಕಾಟ ಇರುವುದಿಲ್ಲ. ನೀರಿನ ಉಳಿತಾಯ ಆಗುತ್ತದೆ. ಶೇ. 20ರಷ್ಟು ಆವಿಯಾಗುವುದನ್ನು ತಪ್ಪಿಸಬಹುದು. ಚದರ ಮೀಟರ್‌ಗೆ ಎಲ್ಲ ಖರ್ಚು ಸೇರಿ 100 ರೂ. ಆಗುತ್ತದೆ. 50-60 ಸಾವಿರ ರೂ.ಗಳಲ್ಲಿ ಇದನ್ನು ನಿರ್ಮಿಸಬಹುದು. ಹೀಗೆ ತಾರಸಿ ತೋಟಗಾರಿಕೆಯಿಂದ ಮನೆಯೂ ತಂಪಾಗಿರುತ್ತದೆ. ತಾರಸಿ ನೆಲಕ್ಕೆ ಟೈಲ್ಸ್‌ ಕಲ್ಲುಗಳು ಇದ್ದರೆ ಒಳ್ಳೆಯದು. ಏಕೆಂದರೆ, ಗಿಡಗಳಿಗೆ ಪೂರೈಸುವ ನೀರು ಸೋರಿಕೆಯಾಗಿ, ತಾರಸಿಯಲ್ಲಿ ನಿಲ್ಲುವುದು ತಪ್ಪುತ್ತದೆ ಎಂದೂ ಮಾಹಿತಿ ನೀಡಿದರು.

ನಿರೀಕ್ಷೆ ಮೀರಿ ನೋಂದಣಿ! : ನಗರ ತೋಟಗಾರಿಕೆ ಕಾರ್ಯಾಗಾರಕ್ಕೆ ನಿರೀಕ್ಷೆ ಮೀರಿ ಸ್ಪಂದನೆ ದೊರಕಿದ್ದು, ಕಳೆದೆರಡು ದಿನಗಳಲ್ಲಿ 120 ಜನ ಈ ಕಾರ್ಯಾಗಾರಕ್ಕೆ ಹಾಜರಾಗಿ ಮಾಹಿತಿ ಪಡೆದಿದ್ದಾರೆ. ನಾವು ನಿತ್ಯ ತಲಾ 50 ಜನ ಬರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, 60 ಜನ ಬಂದಿದ್ದಾರೆ. ಬಹುತೇಕ ಎಲ್ಲರೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡವರಾಗಿದ್ದಾರೆ. ಹೀಗೆ ತರಬೇತಿ ಪಡೆದವರಿಗೆ 800 ಪುಟಗಳ ಮಾಹಿತಿವುಳ್ಳ ಪೆನ್‌ಡ್ರೈವ್‌ ನೀಡಲಾಗಿದ್ದು, ಕೊಕೊಪೀಟ್‌ ಚೀಲ ಮತ್ತು ಕಿಟ್‌ ವಿತರಿಸಲಾಗಿದೆ ಎಂದು ಪ್ರಧಾನ ವಿಜ್ಞಾನಿ ಡಾ.ಅಶ್ವಥ್‌ ತಿಳಿಸಿದರು.

ಆರ್ಕಿಡ್‌ಗೆ ಎಸಿ ಕೋಣೆ :  ಇನ್ನು ಆರ್ಕಿಡ್‌ ಮತ್ತು ಔಷಧೀಯ ಸಸ್ಯಗಳನ್ನು ಬೆಳೆಯಲಿಕ್ಕೂ ಸೌರಶಕ್ತಿ ಸಂಯೋಜಿತ ಮಾದರಿ ಬೆಳವಣಿಗೆ ಕೋಣೆ ರೂಪಿಸಲಾಗಿದೆ. ಇದರ ಕೆಳಭಾಗದಲ್ಲಿ ನೀರಿನ ಟ್ಯಾಂಕರ್‌ ಇರುತ್ತದೆ. ಮೇಲ್ಭಾಗದಲ್ಲಿ ಕೊಳವೆಗಳನ್ನು ಅಳವಡಿಸಿದ್ದು, ಅದರಿಂದ ಮಂಜಿನ ರೂಪದಲ್ಲಿ ನೀರಿನ ಪೂರೈಕೆ ಆಗುತ್ತದೆ. ಆರ್ಕಿಡ್‌ಗಳಿಗೆ ಶೇ. 80ರಷ್ಟು ಆದ್ರìತೆ ಇರಬೇಕಾಗುತ್ತದೆ. ಹಾಗಾಗಿ, ಈ ವ್ಯವಸ್ಥೆ ಮಾಡಲಾಗಿದೆ. ಇದರ ಬೆಲೆ ಎಲ್ಲವೂ ಸೇರಿ 25 ಸಾವಿರ ರೂ. ಆಗುತ್ತದೆ ಎಂದು ಡಾ.ಅಶ್ವಥ್‌ ವಿವರಿಸಿದರು.

ಪೋಷಕಾಂಶಗಳನ್ನು ಒದಗಿಸುವ ಫಿಲ್ಮ್ ತಂತ್ರಜ್ಞಾನ ಆಧಾರಿತ (ಎನ್‌ಟಿಎಫ್-ನ್ಯೂಟ್ರಿಯಂಟ್‌ ಫಿಲ್ಮ್ ಟೆಕ್ನಾಲಜಿ) ಮಾದರಿಯಲ್ಲೇ ಲಂಬ ಮತ್ತು ಅಗಲ ಮಾದರಿಗಳನ್ನೂ ಪರಿಚಯಿಸಲಾಗಿದೆ. ಇದು ಮಣ್ಣುರಹಿತವಾಗಿದ್ದು, ತೆಳುವಾದ ಫಿಲ್ಮ್ನಿಂದ ನೀರು ಮತ್ತು ಪೋಷಕಾಂಶಗಳ ಪೂರೈಕೆ ಆಗುತ್ತದೆ. ಇತರೆ ಬೆಳೆಗಳಿಗೆ ಹೋಲಿಸಿದರೆ, ಈ ತಂತ್ರಜ್ಞಾನದಲ್ಲಿ ಶೇ. 50ರಷ್ಟು ಹೆಚ್ಚು ಇಳುವರಿ ಬರುತ್ತದೆ. ಸೊಪ್ಪಿನ ತರಕಾರಿ ಇದರಲ್ಲಿ ಬೆಳೆಯಬಹುದು ಎಂದರು.

 

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.