ಶ್ರದ್ಧಾ ಭಕ್ತಿಯಿಂದ ಗುರು ಪೂರ್ಣಿಮೆ

Team Udayavani, Jul 17, 2019, 3:06 AM IST

ಬೆಂಗಳೂರು: ರಾಜಧಾನಿಯ ಮಂದಿರ ಮಠಗಳನ್ನು ಸೇರಿದಂತೆ ವಿವಿಧೆಡೆ ಶ್ರದ್ಧಾ – ಭಕ್ತಿಯಿಂದ ಮಂಗಳವಾರ ಗುರುಪೂರ್ಣಿಮೆ ಆಚರಿಸಲಾಯಿತು. ನಗರದ ಎಲ್ಲಾ ಸಾಯಿ ಬಾಬಾ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ವೇದ ಪಾಠಶಾಲೆಗಳು, ಯೋಗ ಕೇಂದ್ರಗಳು ಹಾಗೂ ಕೇಂದ್ರಗಳಲ್ಲಿ ಗುರುವಂದನೆ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಅರ್ಥ ಪೂರ್ಣವಾಗಿ ಗುರುಪೂರ್ಣಿಮೆ ನಡೆಯಿತು.

ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆಗಳ ಹಿನ್ನೆಲೆ ಭಕ್ತರು ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತು ದರ್ಶನ ಪಡೆದರು. ದಿನವಿಡೀ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು. ನಾಡಪ್ರಭು ಕೆಂಪೇಗೌಡ ಸ್ಟೇಡಿಯಂನಲ್ಲಿ ಮಲ್ಲೇಶ್ವರದ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ವತಿಯಿಂದ ಗುರು ಪೂರ್ಣಿಮೆ ಪ್ರಯುಕ್ತ ದತ್ತಾತ್ರೇಯ ಹೋಮ ನಡೆಯಿತು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠ ಹಾಗೂ ಗುರು ಜ್ಞಾನ ಕೇಂದ್ರ ಟ್ರಸ್ಟ್‌ ಸಹಯೋಗದಲ್ಲಿ ನಡೆದ 32ನೇ ಗುರು ಪೌರ್ಣಿಮಾ ಮಹೋತ್ಸವದಲ್ಲಿ ಬೆಳಗ್ಗೆಯಿಂದ ಅಭಿಷೇಕ, ಅಲಂಕಾರ ಮತ್ತು ಸತ್ಯನಾರಾಯಣ ಪೂಜೆ, ವ್ಯಾಸ ಪೂಜೆ ಮಾಡಲಾಯಿತು. ಬಳಿಕ ಹೋಮ – ಹವನ ಹಾಗೂ ಭಜನೆ ನಡೆದವು.

ಜೆ.ಪಿ.ನಗರದ ಶ್ರೀ ಸದ್ಗುರು ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪುಷ್ಪಾಭಿಷೇಕ ನಡೆಯಿತು ಬಳಿಕ ಸಂಜೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಲಗ್ಗೆರೆ ಹೊರ ವರ್ತುಲ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಆರತಿಯೊಂದಿಗೆ ಪೂಜೆ ಕೈಂಕರ್ಯಗಳು ನಡೆದವು. ಈ ವೇಳೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ದಿನವಿಡೀ ಉಷಾ ಕೀರ್ತನ, ವೇದಘೋಷ, ಭಜನೆ ನಡೆಯಿತು.

ಚಕ್ರವರ್ತಿ ಲೇಔಟ್‌ನಲ್ಲಿ ಶ್ರೀ ದತ್ತಗುರು ಸದಾನಂದ ಮಹಾರಾಜರ ಆಶ್ರಮದಲ್ಲಿ ಗಣಪತಿ ಮತ್ತು ದತ್ತಾತ್ರೇಯ ಮೂರ್ತಿಗಳಿಗೆ ಬೆಳಗ್ಗೆ ಅಭಿಷೇಕ ನಡೆಯಿತು. ನಂತರ ಸಾಯಿಬಾಬಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡೊಳ್ಳುಕುಣಿತ, ವೀರಗಾಸೆ, ಕೋಲಾಟ ಜೊತೆಯಾದವು. ಸಂಜೆ ಭಜನೆ, ಪ್ರಸಾದ ವಿನಿಯೋಗ ಮಾಡಲಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: "ನನ್ನ ಸಾವಿಗೆ ಪತಿ ಹಾಗೂ ಆತನ ದೊಡ್ಡಮ್ಮ ಕಾರಣ' ಕಾರಣ ಎಂದು ಸಹೋದರನ ಮೊಬೈಲ್‌ಗೆ ಸಂದೇಶ ಕಳುಹಿಸಿ ಹಿನ್ನೆಲೆ ಗಾಯಕಿ ಸುಶ್ಮಿತಾ (26) ಭಾನುವಾರ ತಡರಾತ್ರಿ...

  • ಬೆಂಗಳೂರು: ವಿಶ್ವದಾದ್ಯಂತ ಚೀನಾದ ಕೊರೊನಾ ವೈರಸ್‌ ಸದ್ದು ಮಾಡುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಅಷ್ಟೇ ಅಪಾಯಕಾರಿ ರೇಬಿಸ್‌ ಬಗ್ಗೆ...

  • ಬೆಂಗಳೂರು: ಯಕ್ಷಗಾನ ಹಾಗೂ ಮೂಡಲಪಾಯ ಕಲೆಯನ್ನು ಉಳಿಸಿ-ಬೆಳೆಸಿದವರು ಹಳ್ಳಿಗಾಡು ಪ್ರದೇಶಗಳಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅಂತಹವರ ಸೇವೆಯನ್ನು ನೆನೆಯುವ ಕಾರ್ಯಕ್ಕೆ...

  • ಬೆಂಗಳೂರು: ಚಲಿಸುತ್ತಿದ್ದ ಬಸ್‌ನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನನ್ನು ಸಂತ್ರಸ್ತೆಯ ಸಂಬಂಧಿಕರೇ...

  • ಬೆಂಗಳೂರು: ಆನಂದ ರಾವ್‌ ವೃತ್ತದಲ್ಲಿರುವ ವಿದ್ಯುತ್‌ ವಿತರಣಾ ಕೇಂದ್ರದ ಆವರಣದಲ್ಲೇ ಆಕಸ್ಮಿಕ ಬೆಂಕಿಯಿಂದ 20 ಎಂವಿಎ ಸಾಮರ್ಥ್ಯದ ಎರಡು ಟ್ರಾನ್ಸ್‌ಫಾರ್ಮರ್‌ಗಳು...

ಹೊಸ ಸೇರ್ಪಡೆ