ಪ್ರಯಾಣದ ಪ್ರಯಾಸ ತಗ್ಗಿಸಲಿದೆಯೇ ಹಾಲ್ಟ್ ಸ್ಟೇಷನ್‌?


Team Udayavani, Sep 21, 2020, 12:17 PM IST

bng-tdy-1

ಕೇವಲ 45 ನಿಮಿಷಗಳಲ್ಲಿ ನಗರದ ಹೃದಯಭಾಗದಿಂದ ಪ್ರಯಾಣಿಕರನ್ನು ದೂರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಬಾಗಿಲಿಗೆ ಕೊಂಡೊಯ್ಯುವ ಅತ್ಯಂತ ಅಗ್ಗದ ಮಾರ್ಗವೊಂದು ತೆರೆದುಕೊಳ್ಳುತ್ತಿದೆ. ಕೆಐಎಎಲ್ ‌ಬಳಿ ಹಾಲ್ಟ್ ಸ್ಟೇಷನ್‌ ನಿರ್ಮಾಣದಬೆನ್ನಲ್ಲೇ ನಗರವಾಸಿಗಳ ಹಲವು ನಿರೀಕ್ಷೆಗಳು ಗರಿಗೆದರಿವೆ. ಅದರಲ್ಲಿ ನಗರವನ್ನು ತೀವ್ರವಾಗಿ ಕಾಡುತ್ತಿರುವ ವಾಹನಗಳ ದಟ್ಟಣೆ ತಗ್ಗುವಿಕೆಯೂಒಂದು. ಈ ಹಿನ್ನೆಲೆಯಲ್ಲಿ ಹಾಲ್ಟ್ ಸ್ಟೇಷನ್‌ ಅನ್ನು ಸಮಗ್ರ ದೃಷ್ಟಿಯಲ್ಲಿ ನೋಡುವ ಅಗತ್ಯವಿದೆ. ಸ್ಥಳೀಯ, ಹೊರವಲಯ, ಕೃಷಿ-ವಾಣಿಜ್ಯ, ಕೈಗಾರಿಕೆ ಈ ಎಲ್ಲ ವರ್ಗಗಳಿಗೂಸೌಲಭ್ಯ ಮುಕ್ತವಾದರೆ, ಉದ್ದೇಶವೂ ಸಾಕಾರಗೊಳ್ಳಲಿದೆ.

ಒಂದು ದಶಕದ ಹೋರಾಟದ ಫ‌ಲವಾಗಿ ಕೊನೆಗೂ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ್ತಿಲಲ್ಲಿ ರೈಲು ಬಂದು ನಿಲ್ಲಲು ವೇದಿಕೆ ಸಜ್ಜಾಗಿದೆ. ಇನ್ಮುಂದೆ ನಗರದ ಸಂಚಾರವ್ಯೂಹದಿಂದ ಹೊರಬಂದು, ಕೇವಲ 45 ನಿಮಿಷಗಳಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣತಲುಪುವ ದಿನಗಳು ದೂರ ಇಲ್ಲ. ಹೌದು, ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗುತ್ತಿರುವ ಹಾಲ್ಟ್ ಸ್ಟೇಷನ್‌ ಕಾಮಗಾರಿಅಕ್ಟೋಬರ್‌ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದ್ದು, ನಂತರ ಸಾರ್ವಜನಿಕ ಸೇವೆಗೂ ಮುಕ್ತವಾಗಲಿದೆ. ಇದರ ಬೆನ್ನಲ್ಲೇ ಉದ್ದೇಶಿತ ಸೌಲಭ್ಯವನ್ನು ದೂರದೃಷ್ಟಿಯಿಂದ ಸಮರ್ಪಕವಾಗಿ ಬಳಸಿಕೊಂಡರೆ, ರಸ್ತೆಗಳ ಮೇಲಿನ ವಾಹನಗಳ ಒತ್ತಡ ತಗ್ಗಿಸುವ ಮಾರ್ಗವಾಗಿಯೂ ರೂಪುಗೊಳ್ಳಲಿದೆ ಎಂಬ ಕೂಗುಕೇಳಿಬರುತ್ತಿದೆ. ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹಲವು ಯೋಜನೆಗಳು ರೂಪುಗೊಳ್ಳುತ್ತಿವೆ. ಅನುಷ್ಠಾನಕ್ಕಾಗಿ ಸರ್ಕಾರ ಹಣದ ಹೊಳೆಹರಿಸುತ್ತಿದೆ. ಇದರ ಭಾಗವಾಗಿ ಯಲಹಂಕ-ದೇವನಹಳ್ಳಿ ನಡುವಿನ ಮಾರ್ಗವನ್ನು ಆದ್ಯತೆ ಮೇರೆಗೆ ವಿದ್ಯುದ್ದೀಕರಣಗೊಳಿಸುವ ತುರ್ತು ಇದೆ. ಆ ಮೂಲಕ ನಗರದ ನಾನಾ ಭಾಗಗಳು ಹಾಗೂ ಉಪನಗರಗಳಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಸಾಧ್ಯ. ಆಗ, ಸಮಯ ಉಳಿತಾಯದ ಜತೆಗೆ ದಟ್ಟಣೆಯೂ ತಗ್ಗಲಿದೆ. ನಗರ ವ್ಯಾಪ್ತಿಯಲ್ಲೇ ಸುಮಾರು50ಕ್ಕೂ ಅಧಿಕ ರೈಲು ನಿಲ್ದಾಣಗಳಿವೆ. ಜತೆಗೆ ಹೊಸೂರು, ತುಮಕೂರು, ರಾಮನಗರ, ಮೈಸೂರು, ಬಂಗಾರಪೇಟೆ ಸೇರಿದಂತೆ ಸುತ್ತಲಿನ ಪ್ರದೇಶಗಳೂ ವಿದ್ಯುದ್ದೀಕರಣಗೊಂಡ ರೈಲು ಮಾರ್ಗಗಳಿವೆ. ಪ್ರಯಾಣಿಕರ ಬೇಡಿಕೆ ಬಗ್ಗೆ ಸಮೀಕ್ಷೆ ನಡೆಸಿ, ಆಯ್ದ ಭಾಗಗಳಿಂದ ನೇರವಾಗಿವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಿದೆ. ಇದರಿಂದ ಸ್ಥಳೀಯ ‌ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಈನಿಟ್ಟಿನಲ್ಲಿ ನೈರುತ್ಯ ರೈಲ್ವೆ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಸಿಟಿಜನ್‌ ಫಾರ್‌ ಸಿಟಿಜನ್‌ ಸಂಚಾಲಕ ರಾಜಕುಮಾರ್‌ ದುಗರ್‌ ಅಭಿಪ್ರಾಯಪಡುತ್ತಾರೆ.

ಯಲಹಂಕ-ದೇವನಹಳ್ಳಿ ಮಾರ್ಗ ವಿದ್ಯುದೀಕರಣಕ್ಕೆ ಈಗಾಗಲೇ ನೈರುತ್ಯ ರೈಲ್ವೆ ಮುಂದಾಗಿದೆ. ಜತೆಗೆ ಉದ್ದೇಶಿತ ಮಾರ್ಗವು ಸಿಂಗಲ್‌ ಟ್ರ್ಯಾಕ್‌ ಆಗಿದೆ. ಅಂದರೆ, ಒಂದು ರೈಲುಹೊರಟರೆ, ಅದು ನಿಗದಿತ ಸ್ಥಳ ತಲುಪುವವರೆಗೂ ಮತ್ತೂಂದು ರೈಲು ಹೊರಡುವುದಿಲ್ಲ. ಆದ್ದರಿಂದ ದೊಡ್ಡಜಾಲ ಹಾಲ್ಟ್ ಸ್ಟೇಷನ್‌ ಅನ್ನು ಕ್ರಾಸಿಂಗ್‌ ಸ್ಟೇಷನ್‌ ಆಗಿ ಮೇಲ್ದರ್ಜೆಗೇರಿಸಬೇಕು. ಇದಕ್ಕೆ ಕೇವಲ ಹತ್ತು ಕೋಟಿ ರೂ. ವೆಚ್ಚವಾಗಲಿದೆ. ಇದರಿಂದ ಹೆಚ್ಚು ರೈಲುಗಳ ಕಾರ್ಯಾಚರಣೆಗೆ ಅನುಕೂಲ ಆಗುತ್ತದೆ. ರಾಜ್ಯ ಸರ್ಕಾರ ಇದಕ್ಕೆ ಮನಸ್ಸು ಮಾಡಬೇಕು ಎಂದೂ ಅವರು ಒತ್ತಾಯಿಸುತ್ತಾರೆ. ತ್ವರಿತ ಗತಿಯಲ್ಲಿ ವಿದ್ಯುದೀಕರಣಗೊಳಿಸಿ, ಬೇರೆ ಬೇರೆ ಕಡೆಗಳಿಂದ ರೈಲು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕು. ಜನರಿಗೆ ಅಗ್ಗದ ಸೇವೆ ಜತೆಗೆ ಸಮಯ ಉಳಿತಾಯ, ವಾಯುಮಾಲಿನ್ಯವೂ ತಕ್ಕಮಟ್ಟಿಗೆ ತಗ್ಗಲಿದೆ’ ಎಂದು ನಗರ ರೈಲ್ವೆ ವಿಶ್ಲೇಷಕ ಸಂಜೀವ್‌ ದ್ಯಾಮಣ್ಣವರ ತಿಳಿಸುತ್ತಾರೆ. ಇನ್ನು ಸಾವಿರಾರು ರೂ. ಕೊಟ್ಟು ವಿಮಾನದಲ್ಲಿ ಬರುವ ಪ್ರಯಾಣಿಕರು ಚೌಕಾಸಿ ಮಾಡುವುದಿಲ್ಲ. ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ನಿಗದಿತ ಸ್ಥಳ ತಲುಪುವ ಧಾವಂತದಲ್ಲಿರುತ್ತಾರೆ. ರೈಲು ಆ ಪ್ರಯಾಣಿಕರನ್ನು ಟ್ಯಾಕ್ಸಿಗಳಿಗಿಂತ ತ್ವರಿತವಾಗಿ ತಲುಪಿಸುವಂತಾಗಬೇಕು. ಸದ್ಯದ ಹಾಲ್ಟ್ಸ್ಟೇಷನ್‌ನಿಂದ ಅದು ಸಾಧ್ಯವೇ ಎಂಬುದು ಪ್ರಶ್ನೆ. ಯಾಕೆಂದರೆ, ಇರುವುದು ಒಂದೇ ಟ್ರ್ಯಾಕ್‌. ಅದೂ ಡೀಸೆಲ್‌ ರೈಲು ಸಂಚಾರಕ್ಕೆ ಸೀಮಿತವಾಗಿದೆ. ಅಕಸ್ಮಾತ್‌ ಕೈಕೊಟ್ಟರೆ, ಪರ್ಯಾಯ ವ್ಯವಸ್ಥೆಯೂ ಪ್ರಯಾಣಿಕರಿಗೆ ಇರುವುದಿಲ್ಲ. ಈ ಸಮಸ್ಯೆ ನೈರುತ್ಯ ರೈಲ್ವೆ ತನ್ನ ಸೇವೆಗಳ ಮೂಲಕ ಬಗೆಹರಿಸಬೇಕಿದೆ ಎನ್ನುತ್ತಾರೆ ತಜ್ಞರು.

ದೊಡ್ಡ ವರ್ಗವನ್ನೂ ಸೆಳೆಯುವ ಅವಶ್ಯಕತೆ :  ಇದೇ ಸ್ಟೇಷನ್‌ಗೆ ಹೊಂದಿಕೊಂಡ ಎಡಬದಿಯಲ್ಲಿ ಕೇವಲ 300-400 ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ-7 ಹಾದು ಹೋಗಿದೆ. ಹೆದ್ದಾರಿಯಿಂದ ಆ ಕಡೆಗೆ ನಿವಾಸಿಗಳು, ಉದ್ಯಮಿಗಳು ಸೇರಿದಂತೆ ದೊಡ್ಡ ವರ್ಗವೇ ಇದೆ. ಅವರನ್ನು ಮಾತ್ರ ಈ ಸೌಲಭ್ಯದಿಂದ ದೂರ ಇಡಲಾಗಿದ್ದು, ಸುಸಜ್ಜಿತ ಸಂಪರ್ಕ ರಸ್ತೆಯನ್ನೂ ಕಲ್ಪಿಸಿಲ್ಲ. ಒಂದು ವೇಳೆ ಈ ವರ್ಗವನ್ನೂ ಸೆಳೆದರೆ, ರೈಲ್ವೆಗೆ ಹೆಚ್ಚಿನ ಆದಾಯ ಹರಿದುಬರುತ್ತದೆ. ಭವಿಷ್ಯದಲ್ಲಿ ಬ್ಯುಸಿನೆಸ್‌ ಪಾರ್ಕ್‌ ಬರಲಿದೆ. ಅಲ್ಲದೆ, ಅಭಿವೃದ್ಧಿ ಚಟುವಟಿಕೆ ಗಳು ವೇಗವಾಗಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಯೋಚಿಸುವುದು ಸೂಕ್ತ ಎಂದು ಸ್ಥಳೀಯ ನಿವಾಸಿ ಹಾಗೂ ಇಸ್ರೋ ನಿವೃತ್ತ ವಿಜ್ಞಾನಿ ಎಂ.ಸಿ. ನರ ಸಿಂಹಲು ತಿಳಿಸುತ್ತಾರೆ.

ಜತೆಗೆ ಸಂಚಾರದಟ್ಟಣೆ ಕಿರಿಕಿರಿಯಿಂದಾಗಿ ದೇವನಹಳ್ಳಿ ಸುತ್ತ ವಾಸಿಸುವ ಸಾವಿರಾರು ಜನ ಅನಿವಾರ್ಯವಾಗಿ ನಗರದಲ್ಲೇ ಮನೆಮಾಡಿದ್ದಾರೆ. ಈಗ ಹಾಲ್ಟ್ ಸ್ಟೇಷನ್‌ಗೆ ಪೂರಕವಾಗಿ ಮೂಲ ಸೌಕರ್ಯಗಳನ್ನೂ ಕಲ್ಪಿಸಿದರೆ, ಆ ವರ್ಗಕ್ಕೂ ಅನುಕೂಲವಿದೆ. ಇದರಿಂದ ಆರ್ಥಿಕವಾಗಿಯೂ ಉಳಿ  ತಾಯ ಆಗಲಿದೆ ಎಂದು ಮತ್ತೂಬ್ಬ ಸ್ಥಳೀಯ ನಿವಾಸಿ ಮಂಜುನಾಥ್‌ ಅಭಿಪ್ರಾಯಪಡುತ್ತಾರೆ.

ಫ್ರೀಕ್ವೆನ್ಸಿ ಹೆಚ್ಚಲು ಆಗಬೇಕು ಅಪ್‌ಗ್ರೇಡ್‌ : ಪ್ರಯಾಣಿಕರು ಮತ್ತು ಬಿಐಎಎಲ್‌ ಸಿಬ್ಬಂದಿಗೆ ಸಂಪೂರ್ಣ ಸೇವೆ ಲಭ್ಯವಾಗಲು ಹೆಚ್ಚು ರೈಲುಗಳ ಅವಶ್ಯಕತೆ ಇದೆ. ಇದಕ್ಕಾಗಿಯಾದರೂ ಮಾರ್ಗ ವಿದ್ಯುದ್ದೀಕರಣ ತ್ವರಿತವಾಗಿ ಆಗಲೇಬೇಕು. ಯಾಕೆಂದರೆ, ಒಂದು ರೈಲಿನಲ್ಲಿ ಉದಾಹರಣೆಗೆ ಎರಡು ಸಾವಿರ ಜನ ಸಂಚರಿಸಬಹುದು ಅಂದುಕೊಳ್ಳೋಣ. ಆದರೆ, ಹೆಚ್ಚು-ಕಡಿಮೆ ಒಂದೇ ಸಮಯಕ್ಕೆ ಇದಕ್ಕಿಂತ ಅಧಿಕ ಜನ ವಿಮಾನ ನಿಲ್ದಾಣಕ್ಕೆ ಬರಬೇಕಾಗಿರುತ್ತದೆ. ಆಗ, ಎಲ್ಲರೂ ಹೋಗಲು ಸಾಧ್ಯವಾಗದು. ವಿದ್ಯುದ್ದೀಕರಣದ ಜತೆಗೆ ಕ್ರಾಸಿಂಗ್‌  ಸ್ಟೇಷನ್‌ ನಿರ್ಮಿಸಿದರೆ, ರೈಲುಗಳ ಫ್ರಿಕ್ವೆನ್ಸಿ ಹೆಚ್ಚಿಸಬಹುದು. ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ತಜ್ಞರು ಹೇಳುತ್ತಾರೆ.

ಸ್ಥಳೀಯರಿಗೆ ಮರೀಚಿಕೆಯಾದ ಸೇವೆ : ಸದ್ಯಕ್ಕೆ ವಿಮಾನ ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಾತ್ರ ಈ ಮಾರ್ಗ ಮುಕ್ತವಾಗಿದೆ. ದೇವನಹಳ್ಳಿ ಸುತ್ತಲಿನ ನಿವಾಸಿಗಳು, ಐಟಿ ಉದ್ಯಮಿಗಳು, ಗ್ರಾಮಗಳ ಕೃಷಿ ಉತ್ಪನ್ನಗಳನ್ನು ನಗರಕ್ಕೆ ಸಾಗಿಸಲು ಅತ್ಯಂತ ಅಗ್ಗದ “ಸುಗಮ ಮಾರ್ಗ’ವೂಇದಾಗಲಿದೆ.ಈನಿಟ್ಟಿನಲ್ಲಿನೈರುತ್ಯರೈಲ್ವೆಮತ್ತು ರಾಜ್ಯ ಸರ್ಕಾರ ಗಮನಸೆಳೆಯಲು ಸ್ಥಳೀಯರು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್‌)ದಿಂದ ಕೇವಲ 4-5 ಕಿ.ಮೀ.ಅಂತರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಾಲ್ಟ್ ಸ್ಟೇಷನ್‌ ಇದೆ. ಇದರಬಲಬದಿಇರುವ ವಿಮಾನ ನಿಲ್ದಾಣದ ಟರ್ಮಿನಲ್‌ವರೆಗೆ ಹೊಸ ರಸ್ತೆ ನಿರ್ಮಿಸಲಾಗಿದೆ. ಹಾಲ್ಟ್ ಸ್ಟೇಷನ್‌ನಿಂದ ಟರ್ಮಿನಲ್‌ ತಲುಪಲು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಶೆಟಲ್‌ ಸೇವೆಗಳನ್ನೂ ಬಿಐಎಎಲ್‌ ಆರಂಭಿಸುವುದಾಗಿ ಪ್ರಕಟಿಸಿದೆ. ಈ ಎಲ್ಲ ವ್ಯವಸ್ಥೆಯಿಂದ ಬಿಐಎಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಸಿಬ್ಬಂದಿ ಹಾಗೂ ಲಕ್ಷಾಂತರ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯ ಆಗಲಿದೆ. ಸಂಚಾರದಟ್ಟಣೆ ಕಿರಿಕಿರಿಯೂ ಇರುವುದಿಲ್ಲ. ಬೆಳವಣಿಗೆ ದೃಷ್ಟಿಯಿಂದ ಇದು ಅತ್ಯಂತ ಸ್ವಾಗತಾರ್ಹ ಹೆಜ್ಜೆ ಎಂದು ಶ್ಲಾಘನೆ ವ್ಯಕ್ತವಾಗುತ್ತಿದೆ.

ಕಾಣದ ಕೈಗಳ ಪ್ರಭಾವ? :  ಉದ್ದೇಶಿತ ಹಾಲ್ಟ್ ಸ್ಟೇಷನ್‌ ಇದುವರೆಗೆ ಆಗದಿರಲು ಹಲವುಕಾಣದಕೈಗಳ ಪ್ರಭಾವವೂ ಇದೆ. ಒಂದು ವೇಳೆ ಈ ಯೋಜನೆಗೆ ಉತ್ತಮ ಸ್ಪಂದ‌ನೆ ದೊರೆತು, ಹೆಚ್ಚು ಜನ ರೈಲು ಮಾರ್ಗದ ಮೊರೆಹೋದರೆ ಈಗಾಗಲೇ ಇರುವ ವ್ಯವಸ್ಥೆಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಯೋಜನೆ ಯಶಸ್ಸಿಗೆ ಅಡ್ಡಗಾಲು ಹಾಕಲೂಬಹುದು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.

 

 -ವಿಜಯಕುಮಾರ್ ‌ಚಂದರಗಿ

ಟಾಪ್ ನ್ಯೂಸ್

ಚಿನ್ನದ ಬ್ರೇಸ್‌ಲೆಟ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬ್ಲೂ ಫ್ಲ್ಯಾಗ್ ಸಿಬಂದಿ

ಚಿನ್ನದ ಬ್ರೇಸ್‌ಲೆಟ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬ್ಲೂ ಫ್ಲ್ಯಾಗ್ ಸಿಬಂದಿ

ಗ್ರಾಚ್ಯುಟಿಗೆ ಒಪ್ಪಿಗೆ: ಧರಣಿ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

ಗ್ರಾಚ್ಯುಟಿಗೆ ಒಪ್ಪಿಗೆ: ಧರಣಿ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

ಶಾಲಾ ಮಕ್ಕಳ ಸಮವಸ್ತ್ರ: ಸರಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಶಾಲಾ ಮಕ್ಕಳ ಸಮವಸ್ತ್ರ: ಸರಕಾರದ ವಿರುದ್ಧ ಎಚ್‌ಡಿಕೆ ಕಿಡಿ

ರಾಜ್ಯ ಸರಕಾರದ ಕಮಿಷನ್‌ ಶೇ.80ಕ್ಕೆ: ಟ್ವೀಟ್‌ ಮೂಲಕ ಕುಟುಕಿದ ಕಾಂಗ್ರೆಸ್‌

ರಾಜ್ಯ ಸರಕಾರದ ಕಮಿಷನ್‌ ಶೇ.80ಕ್ಕೆ: ಟ್ವೀಟ್‌ ಮೂಲಕ ಕುಟುಕಿದ ಕಾಂಗ್ರೆಸ್‌

ಕೊಣಾಜೆ ಪೊಲೀಸರ ದಾಳಿ: 27 ಲಕ್ಷ ರೂ ಮೌಲ್ಯದ 111ಕೆ.ಜಿ. ಗಾಂಜಾ ವಶ, ಮೂವರ ಬಂಧನ

ಕೊಣಾಜೆ ಪೊಲೀಸರ ದಾಳಿ: 27 ಲಕ್ಷ ರೂ ಮೌಲ್ಯದ 111ಕೆ.ಜಿ. ಗಾಂಜಾ ವಶ, ಮೂವರ ಬಂಧನ

ಗ್ರಾಮ ಪಂಚಾಯತ್‌ ಚುನಾವಣೆ: ಚುನಾವಣ ಆಯೋಗದಿಂದ ವೇಳಾಪಟ್ಟಿ ಪ್ರಕಟ

ಗ್ರಾಮ ಪಂಚಾಯತ್‌ ಚುನಾವಣೆ: ಚುನಾವಣ ಆಯೋಗದಿಂದ ವೇಳಾಪಟ್ಟಿ ಪ್ರಕಟ

ಬೈಬಲ್‌ಗೆ ಬೆಂಕಿ ಹಚ್ಚಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರಗೈದ ಆರೋಪಿಯ ಬಂಧನ

ಬೈಬಲ್‌ಗೆ ಬೆಂಕಿ ಹಚ್ಚಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರಗೈದ ಆರೋಪಿಯ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-6

ವರ್ಷ ಕಳೆದರೂ ಮರುಜೀವ ಪಡೆಯದ 104 ಸಹಾಯವಾಣಿ

tdy-5

ಯುವತಿಗೆ ಮೊಬೈಲ್‌ ಸಂದೇಶ ಕಳುಹಿಸಿದ್ದಕ್ಕೆ ಯುವಕನ ಕೊಲೆ?

3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ: ಆರೋಪಿ ಬಂಧನ

3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ: ಆರೋಪಿ ಬಂಧನ

ವಿಧಾನಸೌಧ ವೀಕ್ಷಣೆಗೆ ಬಂದು ಸಾವನ್ನಪ್ಪಿದ ಯುವಕ

ವಿಧಾನಸೌಧ ವೀಕ್ಷಣೆಗೆ ಬಂದು ಸಾವನ್ನಪ್ಪಿದ ಯುವಕ

ದುಪ್ಟಟ್ಟು ಹಣ ಕೇಳಲಿರುವ ಬಿಬಿಎಂಪಿ

ದುಪ್ಟಟ್ಟು ಹಣ ಕೇಳಲಿರುವ ಬಿಬಿಎಂಪಿ

MUST WATCH

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಹೊಸ ಸೇರ್ಪಡೆ

ಚಿನ್ನದ ಬ್ರೇಸ್‌ಲೆಟ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬ್ಲೂ ಫ್ಲ್ಯಾಗ್ ಸಿಬಂದಿ

ಚಿನ್ನದ ಬ್ರೇಸ್‌ಲೆಟ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬ್ಲೂ ಫ್ಲ್ಯಾಗ್ ಸಿಬಂದಿ

ಗ್ರಾಚ್ಯುಟಿಗೆ ಒಪ್ಪಿಗೆ: ಧರಣಿ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

ಗ್ರಾಚ್ಯುಟಿಗೆ ಒಪ್ಪಿಗೆ: ಧರಣಿ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು

ಶಾಲಾ ಮಕ್ಕಳ ಸಮವಸ್ತ್ರ: ಸರಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಶಾಲಾ ಮಕ್ಕಳ ಸಮವಸ್ತ್ರ: ಸರಕಾರದ ವಿರುದ್ಧ ಎಚ್‌ಡಿಕೆ ಕಿಡಿ

ರಾಜ್ಯ ಸರಕಾರದ ಕಮಿಷನ್‌ ಶೇ.80ಕ್ಕೆ: ಟ್ವೀಟ್‌ ಮೂಲಕ ಕುಟುಕಿದ ಕಾಂಗ್ರೆಸ್‌

ರಾಜ್ಯ ಸರಕಾರದ ಕಮಿಷನ್‌ ಶೇ.80ಕ್ಕೆ: ಟ್ವೀಟ್‌ ಮೂಲಕ ಕುಟುಕಿದ ಕಾಂಗ್ರೆಸ್‌

ಕೊಣಾಜೆ ಪೊಲೀಸರ ದಾಳಿ: 27 ಲಕ್ಷ ರೂ ಮೌಲ್ಯದ 111ಕೆ.ಜಿ. ಗಾಂಜಾ ವಶ, ಮೂವರ ಬಂಧನ

ಕೊಣಾಜೆ ಪೊಲೀಸರ ದಾಳಿ: 27 ಲಕ್ಷ ರೂ ಮೌಲ್ಯದ 111ಕೆ.ಜಿ. ಗಾಂಜಾ ವಶ, ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.