ಹರಿದಾಸ ಸಂಪದ ಟ್ರಸ್ಟ್‌ನಿಂದ ಹರಿದಾಸ ಹಬ್ಬ 29ರಿಂದ

Team Udayavani, Apr 28, 2019, 3:00 AM IST

ಬೆಂಗಳೂರು: ಹರಿದಾಸ ಸಂಪದ ಟ್ರಸ್ಟ್‌ನ 18ನೇ ವರ್ಷದ ಉತ್ಸವದ ಅಂಗವಾಗಿ ಏ.29ರಿಂದ ಮೇ 4ರವರಗೆ ಕೆ.ಆರ್‌.ರಸ್ತೆಯ ಗಾಯನ ಸಮಾಜದಲ್ಲಿ “ಹರಿದಾಸ ಹಬ್ಬ’ ಹಮ್ಮಿಕೊಳ್ಳಲಾಗಿದೆ ಎಂದು ಹರಿದಾಸ ಸಂಪದ ಟ್ರಸ್ಟ್‌ ಕಾರ್ಯದರ್ಶಿ ಎಂ.ವಿ.ಮಧುಸೂದನ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.29ರಂದು ಪೇಜಾವರ ಅದೋಕ್ಷಜ ಮಠದ ಪೀಠಾದೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಕಾರ್ಯಕ್ರಮದ ಉದ್ಘಾಟನೆ ಹಾಗೂ ದಾಸಸಾಹಿತ್ಯ ದೀಪಕಾ (www.dasasahityadeepika.com) ವೆಬ್‌ಸೈಟ್‌ ಅನಾವರಣ ಮಾಡಲಿದ್ದಾರೆ. ಈ ಜಾಲತಾಣದಲ್ಲಿ ಆರು ಭಾಷೆಗಳಲ್ಲಿ ದಾಸರ ಕೀರ್ತನೆಗಳನ್ನು ಕೇಳಬಹುದು ಎಂದರು.

ಮೇ 3ರಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥರ ಅಧ್ಯಕ್ಷತೆಯಲ್ಲಿ “ದಾಸಪದಹಾರ’ ಗಾಯನ ಕಾರ್ಯಕ್ರಮ, ಮೇ 4ರಂದು ವಿ.ವಿ ಪ್ರಸನ್ನ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 4.30ಕ್ಕೆ ಗಾಂಧಿ ಬಜಾರ್‌ನಿಂದ ಕೆ.ಆರ್‌.ರಸ್ತೆಯ ಗಾಯನ ಸಮಾಜದವರೆಗೆ ದಾಸರ ಸಂಕೀರ್ತನೆ ನಡೆಯಲಿದೆ.

ಅನಂತಕುಲಕರ್ಣಿ, ಶಂಕರ ಶಾನುಭೋಗ ಅವರಿಂದ ದಾಸವಾಣಿ ಮತ್ತು ವೈ.ವಿ.ಗುಂಡುರಾವ್‌ ಅವರು ಹರಟೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಏಳು ದಿನಗಳ ಈ ಕಾರ್ಯಕ್ರಮದಲ್ಲಿ ದಾಸವಾಣಿ, ವಿಚಾರಗೋಷ್ಠಿ, ದಾಸಲಹರಿ, ದಾಸಕೀರ್ತನೆಗಳು ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ