ಸಿ.ವಿ.ರಾಮನ್‌ ನಗರದಲ್ಲಿ ಮಹದೇವಪ್ಪ ಪ್ರಚಾರ?


Team Udayavani, Dec 30, 2017, 6:35 AM IST

HC-Mahadevappa.jpg

ಬೆಂಗಳೂರು: ಟಿ. ನರಸೀಪುರದಲ್ಲಿ ಮಗನಿಗೆ ಅವಕಾಶ ಮಾಡಿಕೊಡಲು ಬೆಂಗಳೂರಿನ ಸಿ.ವಿ. ರಾಮನ್‌ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಶುಕ್ರವಾರ ಸಿ.ವಿ. ರಾಮನ್‌ ನಗರದ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಮಹದೇವಪ್ಪ ಬೆಂಗಳೂರಿನಲ್ಲಿ ಸ್ಪರ್ಧಿಸಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮಹದೇವಪ್ಪ ಜನವರಿ 2 ರಂದು ಅಧಿಕೃತವಾಗಿ ಸಿ.ವಿ. ರಾಮನ್‌ ನಗರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಾವೇ ಅಭ್ಯರ್ಥಿ ಎನ್ನುವುದನ್ನು ಕ್ಷೇತ್ರದ ಜನತೆಗೆ ಬಿಂಬಿಸುವ ಸಾಧ್ಯತೆ ಇದೆ.

ಶುಕ್ರವಾರ ಮಹದೇವಪ್ಪ ಸರ್ಕಾರಿ ನಿವಾಸದಲ್ಲಿ  ಸಿ.ವಿ. ರಾಮನ್‌ ನಗರದ ಕಾರ್ಯಕರ್ತರೊಂದಿಗಿನ ಸಭೆಯ ನಂತರ ಟಿ. ನರಸೀಪುರ ಕ್ಷೇತ್ರದ ಕಾರ್ಯಕರ್ತರೂ ಮಹದೇವಪ್ಪ ನಿವಾಸಕ್ಕೆ ಆಗಮಿಸಿ ಕ್ಷೇತ್ರ ತೊರೆಯದಂತೆ ಮನವಿ ಮಾಡಿಕೊಂಡರು. ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಮಹದೇವಪ್ಪ, ನಾನು ರಾಜ್ಯ ಮಟ್ಟದ ನಾಯಕ. ನನಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ನಾನು ಸಿ.ವಿ. ರಾಮನ್‌ ನಗರದಲ್ಲಿ ಸ್ಪರ್ಧಿಸುವ ಬಗ್ಗೆ ಹೈ ಕಮಾಂಡ್‌ ನಿರ್ಧಾರ ಮಾಡಲಿದೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ. ಹೀಗಾಗಿ ಎಲ್ಲಾ ಕ್ಷೇತ್ರಗಳು ನಮಗೆ ಮುಖ್ಯ ಎಂದರು ಸಿ.ವಿ. ರಾಮನ್‌ ನಗರದಲ್ಲಿ ಫ್ಲೆಕ್ಸ್‌ಗಳ ಗೊಂದಲವಿಲ್ಲ. ಮೊದಲಿನಿಂದಲೂ ಎಲ್ಲಾ ಕ್ಷೇತ್ರಗಳಲ್ಲಿಯೂ ನನ್ನ ಫ್ಲೆಕ್ಸ್‌ಗಳನ್ನು ಹಾಕುತ್ತಾರೆ. ಹಾಗಂತ ಎಲ್ಲ ಕಡೆ ಸ್ಪರ್ಧಿಸುತ್ತೇನೆ ಎಂದು ಅರ್ಥವಲ್ಲಾ. ಸಿ.ವಿ. ರಾಮನ್‌ ನಗರದಲ್ಲಿಯೂ ಪಕ್ಷ ಹಾಗೂ ಸರ್ಕಾರದ ಕೆಲಸಗಳು ನಡೆಯಲಿವೆ. ಬರುವ ದಿನಗಳಲ್ಲಿ ಅಲ್ಲಿಗೂ ಹೋಗುತ್ತೇನೆ ಎಂದು ಹೇಳಿದರು.

2013 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಪಿ. ರಮೇಶ್‌ ಕೂಡ ಸಿ.ವಿ. ರಾಮನ್‌ ನಗರದ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಮಹದೇವಪ್ಪ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣ

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಪರಿಷತ್‌ ಚುನಾವಣೆ: ಭವಿಷ್ಯದ ಲೆಕ್ಕಾಚಾರ ನಿರತ ಎಚ್‌ಡಿಕೆ

ಮನೆಯಲ್ಲೇ ನಿಗಾ;  ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

ಮನೆಯಲ್ಲೇ ನಿಗಾ; ವಿದೇಶದಿಂದ ಬಂದವರಿಗೆ ಸೋಂಕು ಪರೀಕ್ಷೆ ಕಡ್ಡಾಯ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

“ಹಣಕಾಸು ಇಲ್ಲದಿದ್ದರೆ ಹೊಸ ತಾಲೂಕು ರದ್ದುಪಡಿಸಿಬಿಡಿ’: ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

“ಹಣಕಾಸು ಇಲ್ಲದಿದ್ದರೆ ಹೊಸ ತಾಲೂಕು ರದ್ದುಪಡಿಸಿಬಿಡಿ’: ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

3 ತಿಂಗಳಲ್ಲ; 3 ದಿನಕ್ಕೊಮ್ಮೆ ಬಿಡುಗಡೆ!ಪರಿಹಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಚಿವ ಅಶೋಕ್‌

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.