ರಿಯಲ್ ಕೊಡಿಸುವುದಾಗಿ ರೀಲ್ ಬಿಟ್ಟ

Team Udayavani, Jul 29, 2019, 8:05 AM IST

ಬೆಂಗಳೂರು: ಆಟೋ ಚಾಲಕನಿಗೆ ಸೌದಿ ಅರೆಬಿಯಾ ಕರೆನ್ಸಿ (ರಿಯಲ್) ಆಸೆ ತೋರಿಸಿದ ವಂಚಕ, ಕರೆನ್ಸಿ ಬದಲಿಗೆ ಖಾಲಿ ಪೇಪರ್‌ಗಳ ಬಂಡಲ್ ನೀಡಿ ಪರಾರಿಯಾದ ಘಟನೆ ಮಡಿವಾಳ ಪೊಲೀಸ್‌ ಠಾಣೆ ವ್ಯಾಪ್ಯಿಯಲ್ಲಿ ನಡೆದಿದೆ.

ಈ ಕುರಿತು ವಂಚನೆಗೊಳಗಾದ ಡಿ.ಜೆ.ಹಳ್ಳಿ ನಿವಾಸಿ, ಆಟೋ ಚಾಲಕ ಸೈಯದ್‌ ಮುಜೀದ್‌ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಜು.25ರಂದು ಮಡಿವಾಳಕ್ಕೆ ಹೋಗಬೇಕು ಎಂದು ಹೇಳಿದ ಗ್ರಾಹಕನೊಬ್ಬ ಶಿವಾಜಿನಗರದಲ್ಲಿ ಸೈಯದ್‌ ಮುಜೀದ್‌ ಆಟೋ ಹತ್ತಿದ್ದಾನೆ. ಬಳಿಕ ಮಾರ್ಗಮಧ್ಯೆ ತನ್ನ ಹೆಸರು ಮಹಮದ್‌ ಎಂದು ಹೇಳಿ ಪರಿಚಯಿಸಿಕೊಂಡು ತನ್ನ ಬಳಿ 5500 ಸೌದಿ ರಿಯಲ್ ಇದೆ. 1.80 ಲಕ್ಷ ರೂ. ನೀಡಿದರೆ ರಿಯಾಲ್ ನೀಡುತ್ತೇನೆ. ಯಾರಾದರೂ ತೆಗೆದುಕೊಳ್ಳುವವರಿದ್ದರೆ ತಿಳಿಸಿ ಎಂದು ಹೇಳಿ ಮೊಬೈಲ್ ನಂಬರ್‌ ವಿನಿಮಯ ಮಾಡಿಕೊಂಡು ತೆರಳಿದ್ದ.

ಜು.27ರಂದು ಮಧ್ಯಾಹ್ನ 3.30ರ ಸುಮಾರಿಗೆ ಮುಜೀದ್‌ ಅವರಿಗೆ ದೂರವಾಣಿ ಕರೆ ಮಾಡಿದ ಮಹಮದ್‌, ಮಡಿವಾಳ ಸಮೀಪ ಬಂದು 1.80 ಲಕ್ಷ ರೂ. ನೀಡಿದರೆ ರಿಯಲ್ ನೀಡುವುದಾಗಿ ತಿಳಿಸಿದ್ದಾನೆ. ಆತನ ಮಾತು ನಂಬಿದ ಸೈಯದ್‌, ತನ್ನ ಸ್ನೇಹಿತರ ಬಳಿ 1.80 ಲಕ್ಷ ರೂ. ಪಡೆದು ಅಲಿ ಎಂಬ ತನ್ನ ಸ್ನೇಹಿತನ ಜತೆ ಐದು ಗಂಟೆ ಸುಮಾರಿಗೆ ಮಡಿವಾಳದ ಸಿಲ್ಕ್ಬೋರ್ಡ್‌ ಬಳಿ ತೆರಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಇಬ್ಬರು ಬ್ಯಾಗ್‌ ಒಂದನ್ನು ನೀಡಿ, ‘ಇದರಲ್ಲಿ ಸೌದಿ ಕರೆನ್ಸಿ ಇದೆ’ ಎಂದು ಹೇಳಿ 1.80 ಲಕ್ಷ ರೂ. ಪಡೆದು ಅಲ್ಲಿಂದ ತೆರಳಿದ್ದಾನೆ.

ಮಹಮದ್‌ ಹೋದ ಬಳಿಕ ಬ್ಯಾಗ್‌ ತೆಗೆದ ಸೈಯದ್‌, ರಿಯಲ್ ನೋಟಿನ ಕೆಳಗೆ ಬಿಳಿ ಹಾಳೆಗಳನ್ನು ಇಟ್ಟು ಬಂಡಲ್ ಕಟ್ಟಿರುವುದನ್ನು ನೋಡಿ ಕಂಗಾಲಾಗಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿ ಸೈಯದ್‌ಗೆ ನೀಡಿರುವ ದೂರವಾಣಿ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ. ಸೈಯದ್‌ ಏಕೆ ಸೌದಿ ಕರೆನ್ಸಿ ಪಡೆದುಕೊಂಡ ಎಂಬುದೂ ತನಿಖೆಯಲ್ಲಿ ಗೊತ್ತಾಗಬೇಕಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿ ಮಾಹಿತಿ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಅಂಗನವಾಡಿ ದಾಖಲಾತಿ, ಮಕ್ಕಳ ಅಪೌಷ್ಠಿಕತೆಯ ನಿಖರ ಸಂಖ್ಯೆ, ಟಿ.ಟಿ ಚುಚ್ಚುಮದ್ದು ಸೇರಿ ವಿವಿಧ ಮಾಹಿತಿ ನೀಡಲು ಅನುಕೂಲವಾಗಲೆಂದು ಮಹಿಳಾ ಮತ್ತು ಮಕ್ಕಳ...

  • ಬೆಂಗಳೂರು: ಯೋಜನೆ ಇರುವುದು "ಡಬಲ್‌ ಡೆಕರ್‌'. ಆದರೆ, ಆಗುತ್ತಿರುವುದು ಟ್ರಿಪಲ್‌ ಡೆಕರ್‌! ಹೌದು, ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವೆ ರಸ್ತೆ ಕಂ ರೈಲು ಮಾರ್ಗ...

  • ಬೆಂಗಳೂರು: ಅಕ್ಟೋಬರ್‌ನಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾಕ್ಕೆ ದೇಶ-ವಿದೇಶಿಗರನ್ನು ಆಕರ್ಷಿಸಲು ಏಪ್ರಿಲ್‌ ತಿಂಗಳಿನಿಂದ ಸಿದ್ಧತೆ ಆರಂಭಿಸಲಾಗುವುದು ಎಂದು...

  • ಬೆಂಗಳೂರು: ನಗರದಲ್ಲಿ ವಾಸವಿರುವ ಮಂಗಳಮುಖೀಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ...

  • ಬೆಂಗಳೂರು: ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರುದಿನಗಳ ಕಾಲ "ಜುಂಬಾ' ನೃತ್ಯ ತರಬೇತಿ ನೀಡಿದ್ದು ಪೊಲೀಸ್‌ ಸಿಬ್ಬಂದಿ ಕುಣಿದು ಕುಪ್ಪಳಿಸಿರುವ ವಿಡಿಯೋ...

ಹೊಸ ಸೇರ್ಪಡೆ