ಕರಾವಳಿ, ಮಲೆನಾಡಲ್ಲಿ ಮಳೆ ಅಬ್ಬರ

Team Udayavani, Jun 30, 2018, 6:10 AM IST

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಶುಕ್ರವಾರವೂ ಮಳೆಯಾಗಿದ್ದು, ಉಡುಪಿ ಸಮೀಪದ ಕಾಕೊ¤àಟದಲ್ಲಿ ದೈವಸ್ಥಾನದ ಆವರಣ ಗೋಡೆ ಕುಸಿದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ.

ಈ ಮಧ್ಯೆ, ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಭೂಕುಸಿತ ಉಂಟಾದ ಕಾರಣ ಶುಕ್ರವಾರವೂ ವಾಹನ ಸಂಚಾರ ನಿಷೇಧಿಸಲಾಗಿತ್ತು.

ಇದೇ ವೇಳೆ, ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ ರಾಕ್‌ನಲ್ಲಿ ರಾಜ್ಯದಲ್ಲಿಯೇ ಅಧಿಕ, 13 ಸೆಂ.ಮೀ.ಮಳೆ ಸುರಿಯಿತು.

ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯ ವೇಳೆ ಮಳೆ ಸುರಿದು, ವಾಹನ ಸವಾರರು ಪರದಾಡುವಂತಾಯಿತು. ಈ ಮಧ್ಯೆ, ಕರಾವಳಿಯ ಹಲವೆಡೆ ಶುಕ್ರವಾರವೂ ಮಳೆಯಾಗಿದ್ದು, ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕಾಕೊ¤àಟದಲ್ಲಿ ದೈವಸ್ಥಾನದ ಆವರಣ ಗೋಡೆ ಕುಸಿದು ಬಿದ್ದು, ಸೇನಾಪುರಮನೆಯ ಧನ್ಯಾ ಕೆ.(22) ಎಂಬುವರು
ಮೃತಪಟ್ಟಿದ್ದಾರೆ. ಮನೆ ಸಮೀಪದಲ್ಲಿರುವ ಜಟ್ಟಿಗೇಶ್ವರ ದೈವಸ್ಥಾನದಿಂದ ಕಾಲುದಾರಿಯಲ್ಲಿ ಮರಳುತ್ತಿದ್ದಾಗ ಆವರಣದ ಗೋಡೆ ಕುಸಿದು ಬಿತ್ತು. ಕೆಂಪು ಕಲ್ಲುಗಳ ಅಡಿ ಸಿಲುಕಿದ್ದ ಧನ್ಯಾ ಮೇಲೆ ಮಳೆ ನೀರು ಹರಿದ ಕಾರಣ ಉಸಿರುಕಟ್ಟಿ ಮೃತಪಟ್ಟಿದ್ದಾರೆ.

ದಾರಿಯಲ್ಲಿ ಬರುತ್ತಿದ್ದ ಕಿರಿಮಂಜೇಶ್ವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬ ಇದನ್ನು ಗಮನಿಸಿ ಊರವರಿಗೆ ವಿಷಯ ತಿಳಿಸಿದ. ಸ್ಥಳೀಯರು ಬಂದು ಕಲ್ಲುಗಳನ್ನು ಸರಿಸಿ ನೋಡುವಷ್ಟರಲ್ಲಿ ಯುವತಿ ಮೃತಪಟ್ಟಿದ್ದಳು. ಮಂಗಳಗಂಗೋತ್ರಿಯಲ್ಲಿ ಅವರು ಸಂಖ್ಯಾಶಾಸ್ತ್ರದಲ್ಲಿ ಪ್ರಥಮ ವರ್ಷದ ಎಂಎಸ್‌ಸಿ ಓದುತ್ತಿದ್ದರು. ಭಾರೀ ಮಳೆ ಯಿಂದಾಗಿ ಬೈಂದೂರು ವಲಯದ ಹಳ್ಳಿಹೊಳೆ ಹಿ.ಪ್ರಾ. ಶಾಲೆ ಹಾಗೂ ಉಪ್ಪುಂದದ ಸರಕಾರಿ ಮಾದರಿ ಹಿ.ಪ್ರಾ.ಶಾಲೆಗಳಿಗೆ ಶುಕ್ರವಾರ ರಜೆ ನೀಡಲಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆಯೂ ಸಾಧಾರಣ ಮಳೆಯಾಗಿದೆ. ಈ ಮಧ್ಯೆ, ಶೃಂಗೇರಿ ತಾಲೂಕು ನೆಮ್ಮಾರ್‌ನಲ್ಲಿ ಕಾಣೆಯಾಗಿದ್ದ ವ್ಯಕ್ತಿಯನ್ನು ಹುಡುಕಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದವರು ಆಗಮಿಸಿದ್ದು,
ಶುಕ್ರವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರು.ಆದರೆ, ಮೃತದೇಹ ಪತ್ತೆಯಾಗಲಿಲ್ಲ. ಗುರುವಾರ ಸಂಜೆ ಜಮೀನಿಗೆ ಹೋಗಿದ್ದ ನೆಮ್ಮಾರ್‌ ಗ್ರಾಮದ ಉಮೇಶ್‌ ನಾಪತ್ತೆಯಾಗಿದ್ದು, ತುಂಗಾ ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂಬ ಶಂಕೆ ಮೂಡಿದೆ.

ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಉಂಟಾದ ಭೂಕುಸಿತದ ಪರಿಣಾಮ ಶುಕ್ರವಾರವೂ ಘನ ವಾಹನ ಹಾಗೂ ಬಸ್‌ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು. ತೀರ್ಥಹಳ್ಳಿ ಮಾರ್ಗವಾಗಿ ಉಡುಪಿ, ಮಂಗಳೂರಿಗೆ ತೆರಳುವ ಮಿನಿಬಸ್‌ ಸಂಚಾರ ನಿಷೇಧಿಸಲಾಗಿದೆ. ದುರಸ್ತಿ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಶನಿವಾರದಿಂದ ಬಸ್‌ ಸಂಚಾರಕ್ಕೆ
ಅವಕಾಶ ನೀಡಲಾಗುತ್ತದೆ. ಆದರೆ, ಇತರ ಘನ ವಾಹನಗಳಿಗೆ ಸಂಚಾರ ನಿರ್ಬಂಧವಿರಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಲವೆಡೆಯೂ ಮಳೆಯಾಗುತ್ತಿದ್ದು, ಹೊನ್ನಾವರ ತಾಲೂಕಿನ ಗುಂಡಬಾಳ ಹೊಳೆ ತುಂಬಿ ಹರಿಯುತ್ತಿದೆ. ಕಾರವಾರ ದಿಂದ ಭಟ್ಕಳ ಕಡಲತೀರದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿದ್ದು, ಸಾಂಪ್ರದಾಯಿಕ ಮೀನು ಗಾರರು ಕಡಲದಂಡೆ ಮೀನುಗಾರಿಕೆಗೆ ಇಳಿದಿಲ್ಲ. ಹಾಸನ ಜಿಲ್ಲೆಯ ಹಲವೆಡೆಯೂ ಮಳೆಯಾಗುತ್ತಿದ್ದು,
ಹೇಮಾವತಿ ಜಲಾಯಶಕ್ಕೆ ಒಳ ಹರಿವು ಮತ್ತೆ ಹೆಚ್ಚಾಗಿದೆ. ಶುಕ್ರವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 2907 ಅಡಿಗಳಿಗೆ ಏರಿದ್ದು, ಜಲಾಶಯ ಭರ್ತಿಯಾಗಲು ಇನ್ನು 16 ಅಡಿಗಳಷ್ಟೇ ಬಾಕಿ ಇದೆ. ಜಲಾಶಯಕ್ಕೆ ಶುಕ್ರವಾರ ಒಂದೇ ದಿನ 2 ಅಡಿಗಳಷ್ಟು ನೀರು ಹರಿದು ಬಂದಿದೆ. ಈ ಮಧ್ಯೆ, ಇನ್ನೆರಡು ದಿನ ಕರಾವಳಿಯ ಬಹುತೇಕ ಎಲ್ಲೆಡೆ, ಒಳನಾಡಿನ ಕೆಲವೆಡೆ ಉತ್ತಮ ಮಳೆಯಾಗಲಿದೆ.

ಕರಾವಳಿಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ